BREAKING NEWS

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಮತ್ತೊಂದು ಅಪಘಾತ: ಒರ್ವ ಸಾವು

ರಾಮನಗರ: ವೇಗವಾಗಿ ಬಂದ ಕಾರು ಡಿವೈಡರ್‌ ಗೆ ಡಿಕ್ಕಿ ಹೊಡೆದ ಪರಿಣಾಮ ಒಬ್ಬ ಸಾವಿಗೀಡಾಗಿ ಮೂರು ಮಂದಿ ಗಾಯಗೊಂಡಿರುವ ಘಟನೆ ಚನ್ನಪಟ್ಟಣ ತಾಲೂಕಿನ ಮುದುಗೆರೆ ಗ್ರಾಮದ ಸಮೀಪ ಇರುವ ಚಾಮುಂಡೇಶ್ವರಿ ಆಸ್ಪತ್ರೆ ಮುಂಭಾಗದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೈವೇ ನಲ್ಲಿ ಸಂಭವಿಸಿದೆ.

ಮಂಜೇಶ್ (28) ಮೃತ ದುರ್ದೈವಿ. ಈತ ಮದ್ದೂರು ತಾಲೂಕಿನ ಡಣಾಯಕನ ಪುರ ಗ್ರಾಮದ ನಿವಾಸಿ.

ಮೈಸೂರು ಕಡೆಯಿಂದ ಬರುತ್ತಿದ್ದ ಟಾಟಾ ಇಂಡಿಕಾ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಮಧ್ಯೆ ಅಳವಡಿಸಲಾಗಿರುವ ಡಿವೈಡರ್‌ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದ್ದು ಕಾರು ಚಾಲನೆ ಮಾಡುತ್ತಿದ್ದ ಮಂಜೇಶ್ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಇನ್ನು ಗಾಯಗೊಂಡಿರುವವರನ್ನು ಚಾಮುಂಡೇಶ್ವರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಸಂಚಾರ ವ್ಯತ್ಯಯ: ರಸ್ತೆ ಅಪಘಾತದ ಹಿನ್ನೆಲೆಯಲ್ಲಿ ಬೆಂ-ಮೈ ಹೆದ್ದಾರಿಯಲ್ಲಿ ಕೆಲಕಾಲ ಸಂಚಾರ ವ್ಯತ್ಯಯ ಉಂಟಾಗಿತ್ತು. ಭಾನುವಾರವಾಗಿರುವ ಕಾರಣ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಹೆಚ್ಚಾಗಿತ್ತು. ಅಪಘಾತದಿಂದಾಗಿ ಕೆಲಕಾಲ ಟ್ರಾಫಿಕ್‌ಜಾಮ್ ಆಗಿ ಪ್ರಯಾಣಿಕರು ಪರದಾಡುವಂತಾಗಿತ್ತು.
ಸ್ಥಳಕ್ಕೆ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷ ಕೃಷ್ಣ ಮತ್ತು ಸಿಬ್ಬಂದಿ ತೆರಳಿ ಸಂಚಾರ ಸುಗಮ ಗೊಳಿಸಿದರು. ಈ ಸಂಬಂಧ ಚನ್ನಪಟ್ಟಣ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
andolanait

Recent Posts

ಉಕ್ರೇನ್‌ ರೈಲು ನಿಲ್ದಾಣದ ಮೇಲೆ ರಷ್ಯಾ ಡ್ರೋನ್‌ ದಾಳಿ: 14 ಮಂದಿ ಸಾವು!

ಕೈವ್:‌ ರೈಲಿಗಾಗಿ ಕಾಯುತ್ತಿದ್ದ ಪ್ರಯಾಣಿಕರ ಮೇಲೆ ಮಾರಕ ಡ್ರೋನ್‌ ದಾಳಿ ನಡೆದಿದೆ. ಉಕ್ರೇನ್‌ನ ಡ್ನಿಪ್ರೊ ನಗರದ ಮುಖ್ಯ ರೈಲು ನಿಲ್ದಾಣದ ಮೇಲೆ…

4 mins ago

ಚಳಿಗಾಲ ಶುರು: ಕರ್ನಾಟಕದ ಗಾಳಿಯ ಗುಣಮಟ್ಟದಲ್ಲಿ ಕೊಂಚ ಇಳಿಕೆ!

ಬೆಂಗಳೂರು: ಚಳಿಗಾಲ ಆರಂಭವಾಗುತ್ತಿದ್ದಂತೆ ಕರ್ನಾಟಕದ ಪ್ರಮುಖ ನಗರಗಳಲ್ಲಿ ಗಾಳಿಯ ಗುಣಮಟ್ಟದ ಬಗ್ಗೆ ಮತ್ತೆ ಚರ್ಚೆ ಶುರುವಾಗಿದೆ. ಬೆಂಗಳೂರಿನಲ್ಲಿ ಒಟ್ಟಾರೆ ವಾಯು ಗುಣಮಟ್ಟ…

7 mins ago

ಹಾಲಿನ ದರ ಏರಿಕೆ ಬೆನ್ನಲ್ಲೇ ಬಸ್‌ ಪ್ರಯಾಣವೂ ದುಬಾರಿಯಾಗುತ್ತಾ?

ಬೆಂಗಳೂರು: ನಂದಿನಿ ಹಾಲಿನ ದರ ಏರಿಕೆ ಬೆನ್ನಲ್ಲೇ ರಾಜ್ಯದಲ್ಲಿ ಸರ್ಕಾರಿ ಬಸ್‌ ಟಿಕೆಟ್‌ ದರವೂ ಹೆಚ್ಚಾಗುವ ಸಾಧ್ಯತೆ ಎದುರಾಗಿದೆ. ಅಕ್ಟೋಬರ್‌ 29ರಂದು…

12 mins ago

ಅರ್ನಬ್ ಬೆನ್ನಲ್ಲೇ ಮತ್ತೊಂದು ಆತಂಕ: ಬಂಗಾಳಕೊಲ್ಲಿಯಲ್ಲಿ ಮತ್ತೆ ವಾಯುಭಾರ ಕುಸಿತ!

ನವದೆಹಲಿ: ಅರ್ನಬ್ ಚಂಡಮಾರುತದ ಅಬ್ಬರ ತಗ್ಗುತ್ತಿರುವ ಬೆನ್ನಲ್ಲೇ ಬಂಗಾಳಕೊಲ್ಲಿಯಲ್ಲಿ ಹೊಸ ಹವಾಮಾನ ವ್ಯವಸ್ಥೆ ರೂಪುಗೊಂಡಿದೆ. ದಕ್ಷಿಣ ಅಂಡಮಾನ್ ಸಮುದ್ರ ಹಾಗೂ…

18 mins ago

ಓದುಗರ ಪತ್ರ: ಶಿಕ್ಷಕರ ‘ಮೂಲ’ ಕರ್ತವ್ಯಕ್ಕೆ ಆದ್ಯತೆ ನೀಡಿ

ಪ್ರತಿವರ್ಷ ಸೆಪ್ಟೆಂಬರ್ ಐದನೇ ತಾರೀಕು ಶಿಕ್ಷಕರನ್ನು ಹೊಗಳಲು ಇರುವ ದಿನ ಎಂದು ಕರೆಯಬಹುದು. ಆ ದಿನ ದೇಶದ ಎಲ್ಲೆಡೆ ತುಂಬಾನೆ…

20 mins ago

ಓದುಗರ ಪತ್ರ: ಮೈಸೂರು ರಾಜರ ಕೊಡುಗೆ ಮರೆಯುವಂತಿಲ್ಲ

ಮೈಸೂರು ರಾಜಮನೆತನವು ರಾಜ್ಯದ ಅಭಿವೃದ್ಧಿ, ಶಿಕ್ಷಣ, ಆರೋಗ್ಯ, ನೀರಾವರಿ, ಕೈಗಾರಿಕೆ ಹಾಗೂ ಸಾಮಾಜಿಕ ಕ್ಷೇತ್ರಗಳಿಗೆ ನೀಡಿದ ಕೊಡುಗೆ ಇತಿಹಾಸದ ಪುಟಗಳಲ್ಲಿ…

22 mins ago