BREAKING NEWS

ಕರ್ನಾಟಕದ ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್ ಹಾಗೂ ಕುಡಿಯುವ ನೀರಿನ ಘೋಷಣೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ನಾವೆಲ್ಲರೂ ಕನ್ನಡ ಭಾಷೆಯಲ್ಲೇ ವ್ಯವಹರಿಸುತ್ತೇವೆ. ಕನ್ನಡ ಬಿಟ್ಟು ಬೇರೆ ಭಾಷೆಯಲ್ಲಿ ವ್ಯವಹರಿಸಲ್ಲ ಎಂದು ಪ್ರತಿಜ್ಞೆ ಮಾಡಬೇಕಾದ ಪರಿಸ್ಥಿತಿ ಇದೆ. ಭಾಷೆ, ನೆಲ, ಸಂಸ್ಕೃತಿಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕಾಗದ್ದು ಅಗತ್ಯ. ಇದು ನನ್ನ ತಾಯಿ ನಾಡು, ಕನ್ನಡ ನನ್ನ ತಾಯಿ ಭಾಷೆ ಈ ನೆಲದಲ್ಲಿ ಹುಟ್ಟಿದ್ದೇನೆ, ಅದರ ಋಣ ತೀರಿಸಬೇಕಾದರೆ ಕನ್ನಡ ನೆಲ ಭಾಷೆ ಸಂಸ್ಕೃತಿಯನ್ನು ಎತ್ತಿ ಹಿಡಿಯಬೇಕಾಗ ಕೆಲಸ ಮಾಡಬೇಕಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಕಂಠೀರವ ಮೈದಾನದಲ್ಲಿ ಬುಧವಾರ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ತಮಿಳು, ಮಲಯಾಳಂ, ತೆಲುವು ಭಾಷೆ ಮಾತನಾಡಿ ಬದುಕು ನಡೆಸಬಹುದಾದ ಪರಿಸ್ಥಿತಿ ಇದೆ. ಆದರೆ ಬೇರೆ ರಾಜ್ಯಗಳಲ್ಲಿ ಈ ಪರಿಸ್ಥಿತಿ ಇಲ್ಲ ಎಂದರು.

ಉಚಿತ ವಿದ್ಯುತ್ ಹಾಗೂ ಕುಡಿಯುವ ನೀರಿನ ಘೋಷಣೆ

ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಇಂದಿನಿಂದ ಉಚಿತ ವಿದ್ಯುತ್ ಹಾಗೂ ಕುಡಿಯುವ ನೀರನ್ನು ಕೊಡಲಾಗುವುದು ಎಂದು ಸಿಎಂ ಇದೇ ಸಂದರ್ಭದಲ್ಲಿ ಘೋಷಣೆ ಮಾಡಿದರು. ಶಿಕ್ಷಣ ಇಲಾಖೆಯ ಮನವಿಯ ಮೇರೆಗೆ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಈ ಘೋಷಣೆಯನ್ನು ಸಿಎಂ ಮಾಡಿದರು.

ಸರ್ಕಾರದ ಆಡಳಿತ ಕನ್ನಡ ಭಾಷೆಯಲ್ಲೇ ಆಗಬೇಕು. ಕೇಂದ್ರದ ಜೊತೆಗೆ ವ್ಯವಹರಿಸಬೇಕಾದ ಸಂದರ್ಭದಲ್ಲಿ ಇಂಗ್ಲಿಷ್ ಭಾಷೆ ಬಳಸಬೇಕು. ಆಡಳಿತ ಪರಿಣಾಮಕಾರಿಯಾಗಿ ಜನರನ್ನು ತಲುಪಬೇಕಾದರೆ ಕನ್ನಡ ಭಾಷೆಯನ್ನೇ ಬಳಸಬೇಕು. ಅಧಿಕಾರಿಗಳು ಮತ್ತು ರಾಜಕಾರಣಿಗಳು ಕನ್ನಡದಲ್ಲೇ ವ್ಯವಹರಿಸಬೇಕು ಎಂದು ಹೇಳಿದರು.

ಮೈಸೂರು ರಾಜ್ಯಕ್ಕೆ ದೇವರಾಜ್ ಅರಸು ಅವರು ಕರ್ನಾಟಕ ಎಂದು ನಾಮಕರಣ ಮಾಡಿದರು. ಇವತ್ತಿಗೆ 50 ವರ್ಷ ತುಂಬಿದೆ. ಇದರ ಸವಿ ನೆನಪಿಗಾಗಿ ರಾಜ್ಯದಲ್ಲಿ 1 ವರ್ಷ ಕರ್ನಾಟಕ ಸಂಭ್ರಮ 50 ಎಂಬ ಹೆಸರಿನ ಮೂಲಕ ನಮ್ಮ ಸಾಹಿತ್ಯ, ಜಾನಪತ, ಕಲೆ, ಸಂಸ್ಕತಿ, ಸಂಪ್ರದಾಯವನ್ನು ಇಡೀ ವರ್ಷ ರಾಜ್ಯದ ಉದ್ದಗಲಕ್ಕೆ ತಿಳಿಸುವ ಕೆಲಸ ಮಾಡಲಿದ್ದೇವೆ ಎಂದರು. ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ ಎಂಬ ಘೋಷಾ ವಾಕ್ಯದೊಂದಿಗೆ ರಾಜ್ಯಾದ್ಯಂತ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.

ಹಿಂದಿನ ಸರ್ಕಾರ ಮಾಡದೆ ಇದ್ದ ಕಾರಣಕ್ಕಾಗಿ ಆಯವ್ಯಯ ಭಾಷಣದಲ್ಲಿ ಕರ್ನಾಟಕ ಸಂಭ್ರಮ ವರ್ಷ ಆಚರಣೆಯ ಘೋಷಣೆ ಮಾಡಿದ್ದೆ. ಜನರನ್ನು ಜಾಗೃತಿಗೊಳಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.

ಕೇಂದ್ರಕ್ಕೆ ಪತ್ರ

ಕೇಂದ್ರ ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ಮಾತ್ರ ಪರೀಕ್ಷೆ ನಡೆಸುತ್ತಿದೆ. ನಮ್ಮ ಮಕ್ಕಳಿಗೆ ತಿಳಿದಿರುವ ಭಾಷೆಯಲ್ಲಿ ಪರೀಕ್ಷೆ ಮಾಡಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರಕ್ಕೆ ಪತ್ರವನ್ನು ಬರೆಯುತ್ತೇನೆ ಎಂದರು.

ಕಲಿಕೆ ಕನ್ನಡ ಮಾಧ್ಯಮದ ಮೂಲಕ ಆಗಬೇಕು. ಆದರೆ ಇತ್ತೀಚೆಗೆ ಸರ್ಕಾರಿ ಶಾಲೆಗಳಿಗೆ ಬರುವ ವಿದ್ಯಾರ್ಥಿಗಳು ಕಡಿಮೆಯಾಗಿ ಖಾಸಗಿ ಇಂಗ್ಲಿಷ್ ಶಾಲೆಗಳಿಗೆ ಹೋಗುವ ಸಂಖ್ಯೆ ಹೆಚ್ಚಾಗುತ್ತಿದೆ. ಇದು ಅಪಾಯಕಾರಿ ನಡೆ. ಕನ್ನಡದಲ್ಲಿ ಓದಿದರೆ ಉದ್ಯೋಗ ಸಿಗುವುದಿಲ್ಲ ಎಂಬ ತಪ್ಪು ಕಲ್ಪನೆ ಸರಿಯಲ್ಲ ಎಂದರು.

ರಾಜ್ಯದ ಅನೇನ ಜನ ವಿಜ್ಞಾನಿಗಳು ಕನ್ನಡದಲ್ಲೇ ಓದಿ ದೊಡ್ಡ ಸಾಧನೆ ಮಾಡಿದ್ದಾರೆ. ಇಂಗ್ಲಿಷ್ ಮಾಧ್ಯಮದಲ್ಲೇ ಓದಬೇಕು ಎಂಬುವುದು ತಪ್ಪು ಕಲ್ಪನೆ. ಪೋಷಕರಿಗೆ ಮಕ್ಕಳು ಯಾವ ಭಾಷೆಯಲ್ಲಿ ಕಲಿಯಬೇಕು ಎಂದುನಿರ್ಧರಿಸುವ ಹಕ್ಕು ಇದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಇದರಿಂದ ನಮ್ಮ ಪ್ರಯತ್ನಕ್ಕೆ ಹಿನ್ನಡೆಯಾಗಿದೆ ಎಂದರು.

andolanait

Recent Posts

ಸ್ಲೀವ್‌ಲೆಸ್‌, ಹರಿದ ಜೀನ್ಸ್‌ ಹಾಕುವ ಸರ್ಕಾರಿ ನೌಕರರೇ ಹುಷಾರ್.. : ರಾಜ್ಯ ಸರ್ಕಾರದ ಎಚ್ಚರಿಕೆ

ಬೆಂಗಳೂರು : ರಾಜ್ಯ ಸರ್ಕಾರಿ ನೌಕರರು ಕಚೇರಿಗೆ ಬರುವಾಗ ಯೋಗ್ಯ ಸೂಕ್ತ ಬಟ್ಟೆ ಧರಿಸಿಕೊಂಡು ಬರದಿದ್ದರೆ ಸೂಕ್ತ ಕ್ರಮ ಎದುರಿಸಬೇಕಾಗುತ್ತದೆ…

7 mins ago

ಮೈಸೂರು ವಿಶ್ವವಿದ್ಯಾನಿಲಯ ; ಅನಧಿಕೃತ ವಿವಿಧ ವಿದ್ಯಾರ್ಥಿ ಸಂಘಟನೆಗಳ ಪ್ರವೇಶಕ್ಕೆ ನಿರ್ಬಂಧ

ಮೈಸೂರು : ವಿದ್ಯಾರ್ಥಿಗಳಿಗೆ ಉತ್ತಮ ಶೈಕ್ಷಣಿಕ ವಾತಾವರಣವನ್ನು ಸೃಷ್ಟಿಸುವ ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಿಕೆ ಹಾಗೂ ವಿ.ವಿ ಕ್ಯಾಂಪಸ್‌ಗೆ ಅನಧಿಕೃತ…

11 mins ago

ವಿಶೇಷ ಚೇತನರಿಗೆ ಉದ್ಯೋಗಾವಕಾಶ ಕಲ್ಪಿಸಲು ಸರ್ಕಾರ ಬದ್ಧ

ಬೆಂಗಳೂರು : ವಿಶೇಷ ಚೇತನರ ಬಗ್ಗೆ ಯಾರೂ ಕನಿಷ್ಠ ಭಾವನೆ ಹೊಂದಬೇಕಾಗಿಲ್ಲ. ಅವರಿಗೆ ದೇವರು ವಿಶೇಷವಾದ ಶಕ್ತಿಯನ್ನು ಕೊಟ್ಟಿರುತ್ತಾನೆ. ಹೀಗಾಗಿ…

16 mins ago

ಸಿಎಂ ಹಾಗೂ ಡಿಸಿಎಂ ಒಪ್ಪಂದದ ಬಗ್ಗೆ ಗೊತ್ತಿಲ್ಲ, ಹೈಕಮಾಂಡ್‌ ನಿರ್ಧಾರಕ್ಕೆ ಎಲ್ಲರೂ ಬದ್ಧ: ಡಾ. ಶರಣಪ್ರಕಾಶ್‌ ಪಾಟೀಲ್‌

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷದಲ್ಲಾಗಲಿ ಅಥವಾ ಸರ್ಕಾರದಲ್ಲಾಗಲಿ ಯಾವುದೇ ಗೊಂದಲಗಳಿಲ್ಲ. ಸರ್ಕಾರ ಸುಭದ್ರವಾಗಿದೆ. ಸಮರ್ಥ ಆಡಳಿತ ನಡೆಸುತ್ತಿದೆ ಎಂದು ವೈದ್ಯಕೀಯ…

2 hours ago

ರಾಷ್ಟ್ರಮಟ್ಟದಲ್ಲಿ ನದಿಗಳ ಜೋಡಣೆಗೆ ಪ್ರಕ್ರಿಯೆ ಆರಂಭ: ಡಿಸಿಎಂ ಡಿಕೆಶಿಗೆ ಕೇಂದ್ರ ಸರ್ಕಾರ ಆಹ್ವಾನ

ಬೆಂಗಳೂರು: ಕೇಂದ್ರ ಸರ್ಕಾರ ಬಹುದಿನಗಳ ಬೇಡಿಕೆಯಂತೆ ರಾಷ್ಟ್ರಮಟ್ಟದಲ್ಲಿ ನದಿಗಳ ಜೋಡಣೆಗೆ ಪ್ರಕ್ರಿಯೆ ಆರಂಭಿಸಿದ್ದು, ಅದರ ಕುರಿತಂತೆ ಚರ್ಚಿಸಲು ವಿವಿಧ ರಾಜ್ಯಗಳ…

2 hours ago

ಸಚಿವ ಎಚ್.ಕೆ.ಪಾಟೀಲ್‌ಗೆ ಜೀವ ಬೆದರಿಕೆ ಪ್ರಕರಣ: ಆರೋಪಿ ಅರೆಸ್ಟ್‌

ಬೆಂಗಳೂರು: ಸಚಿವ ಎಚ್.ಕೆ.ಪಾಟೀಲ್‌ಗೆ ಜೀವ ಬೆದರಿಕೆ ಹಾಕಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಚಿವ ಎಚ್.ಕೆ.ಪಾಟೀಲ್‌ ಅವರಿಗೆ ಫೇಸ್‌ಬುಕ್‌ನಲ್ಲಿ ಜೀವ ಬೆದರಿಕೆ…

2 hours ago