BREAKING NEWS

ರಜೆಯ ಮೇಲೆ ಮನೆಗೆ ತೆರಳಿದ್ದ ಸೈನಿಕನ ಅಪಹರಣ

ಕಾಶ್ಮೀರ : ರಜೆಯ ಮೇಲೆ ಮನೆಗೆ ತೆರಳಿದ್ದ 25 ವರ್ಷದ ಸೈನಿಕನನ್ನು ಅಪಹರಿಸಿರುವ ಘಟನೆ ಜಮ್ಮು-ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಅಚಾತಲ್ ಪ್ರದೇಶದ 25 ವರ್ಷದ ಯುವಕ ಜಾವಿದ್ ಅಹ್ಮದ್ ಎಂಬಾತನನ್ನು ಅಪಹರಿಸಿದ್ದು, ಶೋಧ ಕಾರ್ಯವನ್ನು ಸೈನಿಕರು ಮುಂದುವರೆಸಿದ್ದಾರೆ. ಪ್ರಸ್ತುತ ಜಮ್ಮು-ಕಾಶ್ಮೀರದ ಲಡಾಕ್‍ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಜಾವಿದ್ ಅಹಮ್ಮದ್‍ವಾನಿ ಅವರನ್ನು ಕಳೆದ ರಾತ್ರಿ ಅಪಹರಿಸಲಾಗಿದೆ. ಅವರ ಕಾರು ಪರನ್ ಹಳ್ಳಿಯಲ್ಲಿ ಪತ್ತೆಯಾಗಿದ್ದು, ಪೋಷಕರು ಆತಂಕಗೊಂಡಿದ್ದಾರೆ.

ಇದೀಗ ಭಯೋತ್ಪಾದಕರು ಅಪಹರಿಸಿರುವ ಸಾಧ್ಯತೆ ಇರುವುದರಿಂದ ಸ್ಥಳೀಯ ಪೊಲೀಸರು ಮತ್ತು ಸೇನಾಪಡೆ ಕಳೆದ ರಾತ್ರಿಯಿಂದಲೇ ಶೋಧ ಕಾರ್ಯ ಮುಂದುವರೆಸಿದ್ದು, ಇಡೀ ಪ್ರದೇಶವನ್ನು ಸುತ್ತುವರೆದಿದೆ.

ಮನೆಗೆ ದಿನಸಿ ಸಾಮಾನುಗಳನ್ನು ತರಲು ಚೌಲಾಗಾಮ್ ಎಂಬಲ್ಲಿಗೆ ತೆರಳಿದ್ದರು. ಬಹು ಸಮಯದ ನಂತರ ಮನೆಗೆ ಹಿಂತಿರುಗದೇ ಇದ್ದಾಗ ಗಾಬರಿಗೊಂಡ ಪೊಷಕರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಡುಕಲು ಪ್ರಾರಂಭಿಸಿದರು. ಕೊನೆಗೂ ಪತ್ತೆಯಾಗದ ಕಾರಣ ಪೊಲೀಸರಿಗೆ ದೂರು ನೀಡಿದ್ದಾರೆ.

ಶೋಧದ ವೇಳೆ ಪೆರನಲ್ ಗ್ರಾಮದ ಬಳಿ ಚಪ್ಪಲಿ ಮತ್ತು ರಕ್ತದ ಕಲೆಗಳು ಪತ್ತೆಯಾಗಿವೆ. ಇವು ಪೋಷಕರಿಗೆ ಆತಂಕ ಸೃಷ್ಟಿಸಿದೆ.
ಕಳೆದ ವರ್ಷ ನಿಷೇತ ಲಷ್ಕರ್-ಎ- ತೋಯ್ಬ ಸಂಘಟನೆಯು ಸಮೀರ್ ಅಹಮ್ಮದ್ ಮಲ್ಲ ಎಂಬ ಸೈನಿಕನನ್ನು ಅಪಹರಿಸಿ ಕೊಂದಿತ್ತು. ಸೈನಿಕರು ತೀವ್ರ ಶೋಧ ನಡೆಸಿದ ನಂತರ ಬುದ್ಗಾಂ ಜಿಲ್ಲೆಯ ತೋಟವೊಂದರಲ್ಲಿ ಶವ ಪತ್ತೆಯಾಗಿತ್ತು.
ಜಮ್ಮುಕಾಶ್ಮೀರದಲ್ಲಿ ಉಗ್ರರ ವಿರುದ್ಧ ಸಮರ ಸಾರಿರುವ ಸೇನಾಪಡೆಗಳನ್ನು ಗುರಿಯಾಗಿಟ್ಟುಕೊಂಡು ಭಯೋತ್ಪಾದಕರು ಆಗಾಗ್ಗೆ ಸೈನಿಕರನ್ನು ಅಪಹರಿಸುವುದು, ಅವರ ಮೇಲೆ ಹಲ್ಲೆ ನಡೆಸುವುದು ಮತ್ತಿತರ ಕಾನೂನು ಬಾಹಿರ ಕೃತ್ಯಗಳನ್ನು ನಡೆಸುತ್ತಲೇ ಇರುತ್ತಾರೆ.

lokesh

Recent Posts

ಮೈಸೂರು ಜನತೆಗೆ ನೀರಿನ ಕರ ಏರಿಕೆಯ ಬರೆ

ಹೆಚ್.ಎಸ್. ದಿನೇಶ್‌ಕುಮಾರ್ ಚುನಾಯಿತ ಪ್ರತಿನಿಧಿಗಳಿಲ್ಲದ ನಗರಪಾಲಿಕೆಯಲ್ಲಿ ಅಧಿಕಾರಿಗಳ ದರ್ಬಾರು ಮೈಸೂರು: ಜವಾಬ್ದಾರಿಯುತ ಹಾಗೂ ಜನರ ಪರ ಆಲೋಚಿಸುವ ಜನಪ್ರತಿನಿಧಿಗಳಿಲ್ಲದಿದ್ದಲ್ಲಿ ಏನೆಲ್ಲಾ…

2 mins ago

ಇಂದಿನಿಂದ ಸ್ವಯಂ ಗಣತಿ

ಮೊದಲ ಬಾರಿಗೆ ಸಂಪೂರ್ಣ ಡಿಜಿಟೆಲ್ ರೂಪದಲ್ಲಿ ಗಣತಿ ಮೊದಲ ಹಂತ ಏ.೧೫ರವರೆಗೆ; ಏ.೧೬ರಿಂದ ೨ನೇ ಹಂತ  ಬೆಂಗಳೂರು: ರಾಷ್ಟ್ರೀಯ ಜನಗಣತಿ…

9 mins ago

ನೀರಿನ ಶುಲ್ಕ ಶೇ.25 ಹೆಚ್ಚಳ

ಮೈಸೂರು: ಅಡುಗೆ ಅನಿಲ ಸಂಕಷ್ಟವನ್ನು ಎದುರಿಸುತ್ತಿರುವ ಜನತೆಗೆ ರಾಜ್ಯ ಸರ್ಕಾರ ನೀರಿನ ದರ ಹೆಚ್ಚಳದ ಶಾಕ್ ನೀಡಿದೆ. ಏ.೧ರಿಂದ ಜಾರಿಗೆ…

14 mins ago

ಕೆರೆಗೆ ಹಾರಿ ವ್ಯಕ್ತಿ ಆತ್ಮಹತ್ಯೆ

ಬೆಂಡರವಾಡಿ ಕೆರೆಗೆ ಹಾರಿ ಮಂಡ್ಯ ಜಿಲ್ಲೆಯ ವ್ಯಕ್ತಿ ಆತ್ಮಹತ್ಯೆ ಚಾಮರಾಜನಗರ: ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯೊಬ್ಬರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ…

10 hours ago

ಹೈದರಾಬಾದ್‌ನಲ್ಲಿರುವ ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಬಂಗಲೆಗೆ ಬೀಗ

ಹೈದರಾಬಾದ್:‌ ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಅವರ ಹೈದರಾಬಾದ್‌ನಲ್ಲಿ ಅವರ ಮನೆಗೆ ಅಧಿಕಾರಿಗಳು ಬೀಗ ಹಾಕಿದ್ದಾರೆ. 2016ರಲ್ಲಿ ನಿಧನರಾದ ಜಯಲಲಿತಾ…

13 hours ago