BREAKING NEWS

ಸರಕು ಸಾಗಣೆಯಿಂದ ಮೈಸೂರು ರೈಲ್ವೆಗೆ ದಾಖಲೆಯ 877 ಕೋಟಿ ರೂ. ಆದಾಯ

ಮೈಸೂರು : ಮೈಸೂರು ರೈಲ್ವೆ ವಿಭಾಗವು 2023ರ ಮಾರ್ಚ್ 28ರವರೆಗೆ 9.378 ದಶಲಕ್ಷ ಟನ್‌ ಸರಕು ಸಾಗಣೆ ಮಾಡಿ 877 ಕೋಟಿ ರೂ. ಆದಾಯ ಗಳಿಸಿದೆ. ಇದು ಇಲ್ಲಿಯವರೆಗೆ ಮೈಸೂರು ವಿಭಾಗದಲ್ಲಿ ದಾಖಲಾದ ಅತ್ಯಧಿಕ ಸರಕು ಸಾಗಣೆ ಆದಾಯವಾಗಿದೆ.
ಇದು 2021-22ರಲ್ಲಿ ಒಟ್ಟು ಸರಕು ಸಾಗಣೆ ಆದಾಯಕ್ಕಿಂತ ಶೇ. 27.43ರಷ್ಟು ಮತ್ತು ಪ್ರಸಕ್ತ ಹಣಕಾಸು ವರ್ಷಕ್ಕೆ ನೈಋುತ್ಯ ರೈಲ್ವೆ ಪ್ರಧಾನ ಕಾರ್ಯಾಲಯ ನಿಗದಿಪಡಿಸಿದ ಗುರಿಗಿಂತ ಶೇ. 18.52 ಹೆಚ್ಚಾಗಿದೆ. ಪ್ರಸಕ್ತ ವರ್ಷದ ಸಂಪೂರ್ಣ ಗುರಿಯಾದ 739.99 ಕೋಟಿ ರೂ.ಗಳನ್ನು ವಿಭಾಗವು 329 ದಿನಗಳಲ್ಲಿಯೇ ಮೀರಿದೆ.
9.230 ದಶಲಕ್ಷ ಟನ್‌ಗಳಷ್ಟು ಇದ್ದ ಗುರಿಯನ್ನು ಮೀರಿಸಿ 9.378 ದಶಲಕ್ಷ ಟನ್‌ಗಳಷ್ಟು ಸರಕು ಸಾಗಿಸಲಾಗಿದ್ದು, ಇದು ಮೈಸೂರು ವಿಭಾಗದಲ್ಲಿ ದಾಖಲಾದ ಅತ್ಯಧಿಕ ಸರಕು ಸಾಗಣೆಯಾಗಿದೆ. ಭಾರತೀಯ ರೈಲ್ವೆಯ ‘ಹಂಗ್ರಿ ಫಾರ್‌ ಕಾರ್ಗೋ’ ಕರೆಗೆ ಓಗೊಟ್ಟ ಮೈಸೂರು ವಿಭಾಗ ಈ ಸಾಧನೆ ಮಾಡಿದೆ ಎಂದು ಪ್ರಕಟಣೆಯಲ್ಲಿ ರೈಲ್ವೆ ಮೈಸೂರು ವಿಭಾಗ ತಿಳಿಸಿದೆ.
ಪೆಟ್ರೋಲಿಯಂ ಉತ್ಪನ್ನಗಳ ಸಾಗಣೆಯಿಂದ ಬರುವ ಆದಾಯವು ಆರ್ಥಿಕ ವರ್ಷ 2022ರಲ್ಲಿ ಸಾಧಿಸಲಾಗಿದ್ದ 122 ಕೋಟಿ ರೂ.ಗಳಿಗೆ ಹೋಲಿಸಿದರೆ ಶೇ. 51ರಷ್ಟು ಹೆಚ್ಚಳವಾಗಿದ್ದು 185 ಕೋಟಿ ರೂ.ಗೆ ತಲುಪಿದೆ. ಇತರ ಸರಕುಗಳಾದ ಆಹಾರ ಧಾನ್ಯಗಳು, ಸಕ್ಕರೆ, ಸಿಮೆಂಟ್‌ ಮತ್ತು ದ್ವಿಚಕ್ರ ವಾಹನಗಳ ಆದಾಯ ಸಹ ದೊಡ್ಡ ಪ್ರಮಾಣದಲ್ಲಿ ಏರಿಕೆ ಕಂಡಿವೆ.

ಹಳಿ ದ್ವಿಗುಣಗೊಳಿಸುವಿಕೆ, ಮುಖ್ಯ ಮಾರ್ಗಗಳ ವಿದ್ಯುದೀಕರಣ, ಸರಕು ಸಾಗಣೆ ನಿರ್ವಹಣೆಯ ಟರ್ಮಿನಲ್‌ಗಳ ಉನ್ನತೀಕರಣ ಮತ್ತು ರೌಂಡ್‌-ದಿ-ಕ್ಲಾಕ್‌ ಲೋಡಿಂಗ್‌ನ ಸೌಲಭ್ಯದಂತಹ ನಿರ್ಣಯಗಳು ಮತ್ತು ಮೂಲಸೌಕರ್ಯ ಸಾಮರ್ಥ್ಯ-ನಿರ್ಮಾಣ ಯೋಜನೆಗಳ ತ್ವರಿತ ಕಾರ್ಯಗತಗೊಳಿಸುವಿಕೆ ಮುಂತಾದ ಕಾರಣಗಳಿಂದಾಗಿ ವಿಭಾಗವು ಸರಕು ಸಾಗಣೆಯ ಕಾರ್ಯಕ್ಷಮತೆಯನ್ನು ಮುಂಬರುವ ವರ್ಷಗಳಲ್ಲಿಯೂ ಮತ್ತಷ್ಟು ಮೇಲಕ್ಕೆ ಕೊಂಡೊಯ್ಯುವ ವಿಶ್ವಾಸವನ್ನು ವ್ಯಕ್ತಪಡಿಸಿದೆ.
ರೈಲ್ವೆಯು ಸಾರಿಗೆ ಕ್ಷೇತ್ರದಲ್ಲಿನ ತನ್ನ ಪಾಲನ್ನು ಹೆಚ್ಚಿಸಲು ದೇಶಾದ್ಯಂತ ಖನಿಜ ಜಿಲ್ಲೆಗಳನ್ನು ಗುರುತಿಸುತ್ತಿದೆ. ಹೀಗಾಗಿ ಮೈಸೂರು ವಿಭಾಗವು ಸದ್ಯದ ಭವಿಷ್ಯದಲ್ಲಿ ಸರಕು ಸಾಗಣೆಯ ವಿಭಾಗದಲ್ಲಿ ತನ್ನ ಪಾತ್ರವನ್ನು ವಿಸ್ತರಿಸಿಕೊಳ್ಳುವ ಹೊಸ್ತಿಲಲ್ಲಿದೆ. ಈ ದಾಖಲೆಯ ಸಹಕರಿಸಿದವರಿಗೆ ನೈರುತ್ಯ ರೈಲ್ವೆಯ ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಶಿಲ್ಪಿ ಅಗರ್ವಾಲ್‌ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

lokesh

Recent Posts

ಎಸ್‌ಎಸ್‌ಎಲ್‌ಸಿ ಫಲಿತಾಂಶ; ಕೊಡಗಿಗೆ 8ನೇ ಸ್ಥಾನ

ನವೀನ್ ಡಿಸೋಜ ಮಡಿಕೇರಿ: ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಕಳೆದ ಬಾರಿ ನಾಲ್ಕನೇ ಸ್ಥಾನದಲ್ಲಿದ್ದ ಕೊಡಗು ಈ ಬಾರಿ ೮ನೇ…

49 seconds ago

ಎಸ್‌ಎಸ್‌ಎಲ್‌ಸಿ: ಜಿಲ್ಲೆಗೆ ಕೋಟೆ ಪ್ರಥಮ ಸ್ಥಾನ

ಮಂಜು ಕೋಟೆ ದಾಖಲೆ ಸೃಷ್ಟಿಸಿದ ಫಲಿತಾಂಶ; ಕ್ಷೇತ್ರ ಶಿಕ್ಷಣಾಧಿಕಾರಿ, ವಿದ್ಯಾರ್ಥಿ ವೇದಶ್ರೀ ಅವರಿಗೆ ಶಾಸಕರಿಂದ ಸನ್ಮಾನ  ಎಚ್.ಡಿ.ಕೋಟೆ: ತಾಲ್ಲೂಕಿನ ಇತಿಹಾಸದಲ್ಲಿ…

6 mins ago

ಮೈಸೂರಿನ ಎಲ್ಲಾ ಕೆರೆಗಳ ಸರ್ವೆ ನಡೆಸಿ: ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು ಸೂಚನೆ

ಮೈಸೂರು: ಮೈಸೂರಿನ ಎಲ್ಲಾ ಕೆರೆಗಳ ಸರ್ವೆ ನಡೆಸಿ, ಒತ್ತುವರಿ ತೆರವುಗೊಳಿಸುವಂತೆ ಮೈಸೂರು ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು ಅವರು ಅಧಿಕಾರಿಗಳಿಗೆ ಸೂಚನೆ…

9 hours ago

ಚೀನಾದ ನಾಗರಿಕರಿಗೆ ಪ್ರವಾಸಿ ವೀಸಾ ಪುನರಾರಂಭಿಸಲು ಕೇಂದ್ರ ಸರ್ಕಾರ ಸಿದ್ಧತೆ

ನವದೆಹಲಿ: ಭಾರತ ಸರ್ಕಾರವು ಚೀನಾದ ನಾಗರಿಕರಿಗೆ ಪ್ರವಾಸಿ ವೀಸಾಗಳನ್ನು ಪುನರಾರಂಭಿಸಲು ಸಿದ್ಧತೆ ನಡೆಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಗಾಲ್ವಾನ್‌ ಕಣಿವೆಯಲ್ಲಿ…

9 hours ago

ಶರದ್‌ ಪವಾರ್‌ ಆಸ್ಪತ್ರೆಯಿಂದ ಡಿಸ್ಚಾರ್ಜ್‌

ಮುಂಬೈ: ಆರೋಗ್ಯ ಸಮಸ್ಯೆಯಿಂದ ಮುಂಬೈನ್‌ ಆಸ್ಪತ್ರೆಗೆ ದಾಖಲಾಗಿದ್ದ ಶರದ್‌ ಪವಾರ್‌ ಅವರನ್ನು ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಮಾಡಲಾಗಿದೆ. ಶರದ್‌ ಪವಾರ್‌…

9 hours ago