BREAKING NEWS

ಕರ್ನಾಟಕದಲ್ಲಿಂದು 20 ಹೊಸ ಕೊವಿಡ್‌ ಪ್ರಕರಣ; ಇಬ್ಬರ ಸಾವು

ನೆರೆಯ ಕೇರಳದಲ್ಲಿ ಕೊವಿಡ್‌ ಹೊಸ ರೂಪಾಂತರ ಜೆಎನ್‌ 1 ಉಲ್ಬಣಗೊಳ್ಳುತ್ತಿದ್ದು, ಕರ್ನಾಟಕದಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆರೋಗ್ಯ ಇಲಾಖೆ ಹೊಸ ಮಾರ್ಗಸೂಚಿ ಹಾಗೂ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಿಗೆ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಸೂಚನೆಯನ್ನು ನೀಡಿದೆ.

ಇನ್ನು ಇಂದು ತುಮಕೂರು ಹಾಗೂ ಚಿಕ್ಕಮಗಳೂರುಕೊರೊನಾ ಕಾಣಿಸಿಕೊಂಡಿದ್ದು, ರಾಜ್ಯದಲ್ಲಿ ಇಂದು ( ಡಿಸೆಂಬರ್‌ 20 ) ಒಟ್ಟು 20 ಹೊಸ ಪ್ರಕರಣಗಳು ವರದಿಯಾಗಿವೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಂಚಿಕೊಂಡಿರುವ ವರದಿ ಪ್ರಕಾರ ಇಂದು 20 ಹೊಸ ಪ್ರಕರಣಗಳು ವರದಿಯಾಗಿದ್ದರೆ, 5 ಜನ ಡಿಸ್‌ಚಾರ್ಜ್‌ ಆಗಿದ್ದಾರೆ. ಸದ್ಯ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 92 ಇದ್ದು, ಕೊನೆಯ 24 ಗಂಟೆಗಳಲ್ಲಿ 808 ಟೆಸ್ಟ್‌ಗಳು ನಡೆದಿವೆ, 407 ಆರ್‌ಟಿಪಿಸಿಆರ್‌ ಟೆಸ್ಟ್‌ಗಳು ನಡೆದಿವೆ ಹಾಗೂ 401 ರ್ಯಾಟ್‌ ಟೆಸ್ಟ್‌ಗಳು ನಡೆದಿವೆ. ರಾಜ್ಯದಲ್ಲಿ ಪಾಸಿಟಿವಿಟಿ ದರ 2.47% ಇದೆ. ಇನ್ನು ರಾಜ್ಯದಲ್ಲಿ ಈವರೆಗೆ ಇಬ್ಬರು ಕೊವಿಡ್‌ನಿಂದಾಗಿ ಸಾವನ್ನಪ್ಪಿದ್ದಾರೆ.

ಒಟ್ಟು 92 ಸಕ್ರಿಯ ಪ್ರಕರಣಗಳ ಪೈಕಿ 72 ಸೋಂಕಿತರನ್ನು ಹೋಮ್‌ ಐಸೋಲೇಷನ್‌ ಮಾಡಲಾಗಿದ್ದು, 20 ಸೋಂಕಿತರನ್ನು ಆಸ್ಪತ್ರೆಗೆ ದಾಖಲು ಮಾಡಿಕೊಳ್ಳಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರ ಪೈಕಿ 7 ಸೋಂಕಿತರು ಐಸಿಯುನಲ್ಲಿದ್ದು, 17 ಸೋಂಕಿತರು ಸಾಮಾನ್ಯ ವಾರ್ಡ್‌ನಲ್ಲಿದ್ದಾರೆ.

andolana

Recent Posts

ಓದುಗರ ಪತ್ರ: ಫ್ಲೆಕ್ಸ್ ಹಾವಳಿಗೆ ಕಡಿವಾಣ ಹಾಕಿ

ಮೈಸೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಫ್ಲೆಕ್ಸ್ ಹಾವಳಿ ಮಿತಿ ಮೀರಿದ್ದು, ರಸ್ತೆ ಬದಿಯಲ್ಲಿ ಹಾಕಿರುವ ಬೃಹದಾಕಾರದ ಫ್ಲೆಕ್ಸ್‌ಗಳಿಂದಾಗಿ ಪ್ರತಿನಿತ್ಯ ರಸ್ತೆಯಲ್ಲಿ ಸಂಚರಿಸುವ…

40 mins ago

ಓದುಗರ ಪತ್ರ: ಪಾರದರ್ಶಕ ಆಡಳಿತಾತ್ಮಕ ವ್ಯವಸ್ಥೆ ಜಾರಿಯಾಗಲಿ

ಉತ್ತರ ಪ್ರದೇಶ ಸರ್ಕಾರವು ಆ ರಾಜ್ಯದ ಎಲ್ಲಾ ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರಿಗೆ ‘ಮಾನವ ಸಂಪದ್ ಪೋರ್ಟಲ್’ ಎಂಬ ಅಧಿಕೃತ…

42 mins ago

ಓದುಗರ ಪತ್ರ: ಕಸ ತೆರವುಗೊಳಿಸಿ

ಹುಣಸೂರು ತಾಲ್ಲೂಕಿನ ಎಮ್ಮೆಕೊಪ್ಪಲು ಗ್ರಾಮದಲ್ಲಿ ಗ್ರಾಪಂನವರು ಸಕಾಲಕ್ಕೆ ಕಸ ವಿಲೇವಾರಿ ಮಾಡದೇ ಇರುವುದರಿಂದ ಕಸದ ರಾಶಿಯೇ ಬಿದ್ದಿದ್ದು, ಸೊಳ್ಳೆ, ನೊಣಗಳ…

44 mins ago

ಓದುಗರ ಪತ್ರ: ಆರ್‌ಸಿಬಿ ತಂಡದಲ್ಲಿ ಕನ್ನಡಿಗರಿಗೆ ಪ್ರಾತಿನಿಧ್ಯ ನೀಡಿ

ಐಪಿಎಲ್ ಆವೃತ್ತಿಯು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿಯನ್ನು ಹೊಂದಿದೆ, ಈ ಆವೃತ್ತಿಯಲ್ಲಿ ನಾನಾ ರಾಜ್ಯಗಳ ಹೆಸರಿನಲ್ಲಿ ಹಲವು ತಂಡಗಳು ಸೆಣಸಾಡಲಿವೆ. ನಮ್ಮ…

46 mins ago

ಓದುಗರ ಪತ್ರ: ಕೋರ್ಟ್ ತೀರ್ಪು ಎಚ್ಚರಿಕೆ ಘಂಟೆಯಾಗಲಿ

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಹಂಪೆಯ ಸಾಣಾಪುರದ ಬಳಿ ೨೦೨೫ ಮಾರ್ಚಿನಲ್ಲಿ ಇಸ್ರೇಲ್ ಮಹಿಳೆಯ ಮೇಲೆ ಅತ್ಯಾಚಾರ ಮತ್ತು ವಿದೇಶಿಗನ…

48 mins ago

ಓದುಗರ ಪತ್ರ: ಕುಡಿಯುವ ನೀರು ಸರಬರಾಜು ಮಾಡಿ

ಮೈಸೂರು ತಾಲ್ಲೂಕು ಜಯಪುರ ಹೋಬಳಿಯ ಧನಗಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕರ್ನಾಟಕ ಗೃಹ ಮಂಡಳಿ (ಕೆಹೆಚ್‌ಬಿ) ಬಡಾವಣೆಗೆ ಕುಡಿಯುವ ನೀರು ಸರಬರಾಜು…

50 mins ago