BREAKING NEWS

ಮಾಜಿ ಸೇನಾಧಿಕಾರಿಗೆ 2 ಕೋಟಿ ರೂ. ಪರಿಹಾರ ನೀಡಿ: ಹೈಕೋರ್ಟ್ ಆದೇಶ

ನವದೆಹಲಿ: ಮಾನನಷ್ಟ ಮೊಕದ್ದಮೆಯಲ್ಲಿ ಭಾರತೀಯ ಸೇನೆಯ ನಿವೃತ್ತ ಅಧಿಕಾರಿ ಮೇಜರ್ ಜನರಲ್ ಎಂಎಸ್ ಅಹ್ಲುವಾಲಿಯಾ ಅವರಿಗೆ 2 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಪತ್ರಕರ್ತರಾದ ತರುಣ್ ತೇಜ್‌ಪಾಲ್, ಅನಿರುದ್ಧ್ ಬೆಹ್ಲ್, ಮ್ಯಾಥ್ಯೂ ಸ್ಯಾಮ್ಯುಯೆಲ್ ಮತ್ತು ತೆಹೆಲ್ಕಾ ಡಾಟ್ ಕಾಮ್‌ಗೆ ದೆಹಲಿ ಹೈಕೋರ್ಟ್ ಆದೇಶಿಸಿದೆ.

2001ರಲ್ಲಿ ತೆಹಲ್ಕಾ ಕುಟುಕು ಕಾರ್ಯಾಚರಣೆ ನಡೆದಿತ್ತು. ಈ ವೇಳೆ ಅಹ್ಲುವಾಲಿಯಾ ರಕ್ಷಣಾ ವ್ಯವಹಾರಗಳಲ್ಲಿ ಭ್ರಷ್ಟಾಚಾರ ಮಾಡುತ್ತಿದ್ದಾರೆ ಎಂದು ಹೇಳಿತ್ತು. ಭ್ರಷ್ಟಾಚಾರದ ಗಂಭೀರ ಆರೋಪಗಳಿಂದ ಸಾರ್ವಜನಿಕರ ದೃಷ್ಟಿಯಲ್ಲಿ ತನ್ನ ಘನತೆ ಕಳೆದುಕೊಂಡಿರುವುದು ಮಾತ್ರವಲ್ಲದೆ ಅವರ ಚಾರಿತ್ರ್ಯಕ್ಕೂ ಕಳಂಕ ಉಂಟಾಗಿದ್ದು ಫಿರ್ಯಾದಿಯ ಪ್ರತಿಷ್ಠೆಗೆ ಧಕ್ಕೆಯಾಗಿದೆ ಎಂದು ಹೇಳಿ ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ಅವರ ಪೀಠ ಈ ಆದೇಶ ನೀಡಿದೆ.

ಮೇಜರ್ ಜನರಲ್ ಎಂಎಸ್ ಅಹ್ಲುವಾಲಿಯಾ ಅವರು ಸಲ್ಲಿಸಿದ್ದ ಮೊಕದ್ದಮೆಯನ್ನು ಪುರಸ್ಕರಿಸಿದ್ದ ದೆಹಲಿ ಹೈಕೋರ್ಟ್ ನ ನ್ಯಾಯಮೂರ್ತಿ ನೀನಾ ಬನ್ಸಲ್ ಕೃಷ್ಣ ಅವರು, ಭಾರತೀಯ ಸೇನಾ ಅಧಿಕಾರಿಗೆ ಮಾನಹಾನಿ ಮಾಡಿದ್ದಕ್ಕಾಗಿ ತರುಣ್ ತೇಜ್‌ಪಾಲ್ ಮತ್ತು ಇಬ್ಬರು ಪತ್ರಕರ್ತರಾದ ಅನಿರುದ್ಧ್ ಬೆಹ್ಲ್ ಮತ್ತು ಮ್ಯಾಥ್ಯೂ ಸ್ಯಾಮ್ಯುಯೆಲ್ ಅವರು 2 ಕೋಟಿ ರೂಪಾಯಿ ಪರಿಹಾರವನ್ನು ನೀಡಬೇಕೆಂದು ಆದೇಶಿಸಿದೆ.

ಈ ಮೊತ್ತವನ್ನು ಸುದ್ದಿ ಪೋರ್ಟಲ್ Tehelka.com, ಅದರ ಮಾಲೀಕ ಕಂಪನಿ M/s ಬಫಲೋ ಕಮ್ಯುನಿಕೇಷನ್ಸ್, ಅದರ ಮಾಲೀಕರಾದ ತರುಣ್ ತೇಜ್ಪಾಲ್ ಮತ್ತು ಅನಿರುದ್ಧ್ ಬೆಹ್ಲ್ ಮತ್ತು ಮ್ಯಾಥ್ಯೂ ಸ್ಯಾಮ್ಯುಯೆಲ್ ಪಾವತಿಸಬೇಕಿದೆ.

ಪ್ರಾಮಾಣಿಕ ಸೇನಾಧಿಕಾರಿಯ ಪ್ರತಿಷ್ಠೆಗೆ ಧಕ್ಕೆ ಉಂಡು ಮಾಡಿರುವ ಮತ್ತೊಂದು ದೊಡ್ಡ ಪ್ರಕರಣ ಇಲ್ಲ. ಇನ್ನು ಘಟನೆ ನಡೆದು 23 ವರ್ಷಗಳ ನಂತರ ಕ್ಷಮೆಯಾಚಿಸುವುದು ಅಸಮರ್ಪಕ ಮಾತ್ರವಲ್ಲದೆ ಅಸಂಬದ್ಧವಾಗಿದೆ ಎಂದು ನ್ಯಾಯಾಲಯ ಹೇಳಿದೆ.

2001ರಲ್ಲಿ ನ್ಯೂಸ್ ಪೋರ್ಟಲ್‌ನಿಂದ ಉದ್ದೇಶಿತ ಕುಟುಕು ಕಾರ್ಯಾಚರಣೆ ಬಿಡುಗಡೆ ಮಾಡಲಾಗಿತ್ತು. ಆದಾಗ್ಯೂ, ನ್ಯೂಸ್ ಪೋರ್ಟಲ್‌ನೊಂದಿಗೆ ಒಪ್ಪಂದ ಮಾಡಿಕೊಂಡ ನಂತರ ಪ್ರಶ್ನಾರ್ಹ ಸುದ್ದಿಯನ್ನು ಪ್ರಸಾರ ಮಾಡಿದ ಝೀ ಟೆಲಿಫಿಲ್ಮ್ ಲಿಮಿಟೆಡ್ ಮತ್ತು ಅದರ ಅಧಿಕಾರಿಗಳ ಕಡೆಯಿಂದ ಫಿರ್ಯಾದುದಾರರು ಯಾವುದೇ ಮಾನನಷ್ಟ ಕೃತ್ಯವನ್ನು ಸಾಬೀತುಪಡಿಸಲು ಸಾಧ್ಯವಾಗಲಿಲ್ಲ ಎಂದು ನ್ಯಾಯಾಲಯ ಗಮನಿಸಿದೆ.

ನ್ಯೂಸ್ ಪೋರ್ಟಲ್  2001ರ ಮಾರ್ಚ್ 13ರಂದು ಹೊಸ ರಕ್ಷಣಾ ಸಾಧನಗಳ ಆಮದುಗೆ ಸಂಬಂಧಿಸಿದ ರಕ್ಷಣಾ ವ್ಯವಹಾರಗಳಲ್ಲಿ ಭ್ರಷ್ಟಾಚಾರವನ್ನು ಆರೋಪಿಸುವ ಕುಟುಕು ಕಾರ್ಯಾಚರಣೆ ಕಾರ್ಯಕ್ರಮವನ್ನು ಪ್ರಕಟಿಸಿತು. ‘ಆಪರೇಷನ್ ವೆಸ್ಟ್ ಎಂಡ್’ ಸುದ್ದಿಯಲ್ಲಿ ತನಗೆ ಮಾನಹಾನಿ ಮಾಡಲಾಗಿದೆ ಎಂದು ವಕೀಲ ಚೇತನ್ ಆನಂದ್ ಮೂಲಕ ಫಿರ್ಯಾದಿ ಹೇಳಿಕೊಂಡಿದ್ದರು. ಅದನ್ನು ತಪ್ಪಾಗಿ ಪ್ರಸಾರ ಮಾಡಲಾಗಿದ್ದು, ಲಂಚ ಪಡೆದಿದ್ದಾರೆ ಎಂದು ವರದಿಯಾಗಿತ್ತು.

andolanait

Recent Posts

ನೇಪಾಳದಲ್ಲಿ ಮತ್ತೆ ಪ್ರವಾಹ, ಭೂಕುಸಿತ

ಕಠ್ಮಂಡು: ನೇಪಾಳದಲ್ಲಿ ಮತ್ತೆ ಪ್ರವಾಹ, ಭೂಕುಸಿತದ ಆರ್ಭಟ ಮುಂದುವರಿದಿದ್ದು, ಕೇವಲ 8 ಸೆಕೆಂಡ್‌ಗಳಲ್ಲಿ ಪರ್ವತವೇ ಕುಸಿದು ಬಿದ್ದಿದೆ! ವಿವಿಧೆಡೆ ಸಂಭವಿಸಿದ…

14 hours ago

ಕಾಡುಹಂದಿ ದಾಳಿ: ರೈತನಿಗೆ ಗಂಭೀರ ಗಾಯ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಪಳನಿಮೇಡ್ ಗ್ರಾಮದಲ್ಲಿ ರೈತನ ಮೇಲೆ ಕಾಡುಹಂದಿ ದಾಳಿ ಮಾಡಿದ್ದು,…

15 hours ago

ಶೀಘ್ರದಲ್ಲೇ ಅಕ್ರಮ ಸೈಟ್‌ಗಳ ಪಟ್ಟಿ ಬಿಡುಗಡೆ: ಸಚಿವ ಯತೀಂದ್ರ ಸಿದ್ದರಾಮಯ್ಯ

ಮೈಸೂರು: ಮುಡಾ 50:50 ಸೈಟ್‌ ವಿಚಾರದಲ್ಲಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಮಹತ್ವದ ಮಾಹಿತಿ ನೀಡಿದ್ದಾರೆ. ಶೀಘ್ರದಲ್ಲೇ ಅಕ್ರಮ ಸೈಟ್‌ಗಳ…

16 hours ago

ಮೈಸೂರು ದಸರಾ ಉದ್ಘಾಟನೆ ಆಹ್ವಾನ ತಿರಸ್ಕರಿಸಿಲ್ಲ: ಗವಿಸಿದ್ಧೇಶ್ವರ ಶ್ರೀಗಳಿಂದ ಸ್ಪಷ್ಟನೆ

ಕೊಪ್ಪಳ: ಮೈಸೂರು ದಸರಾ ಉದ್ಘಾಟನೆ ಕುರಿತು ಹರಿದಾಡುತ್ತಿದ್ದ ವದಂತಿಗಳಿಗೆ ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿ ತೆರೆ ಎಳೆದಿದ್ದಾರೆ. ಮೈಸೂರು ದಸರಾ ಉದ್ಘಾಟನೆಗೆ…

17 hours ago

ಬ್ಯಾಂಕ್‌ ಗ್ರಾಹಕರಿಗೆ ಗುಡ್‌ನ್ಯೂಸ್‌: ಇಂದಿನಿಂದ 3 ದಿನ ಕರೆ ನೀಡಿದ್ದ ಬ್ಯಾಂಕ್‌ ಮುಷ್ಕರ ಮುಂದೂಡಿಕೆ

ನವದೆಹಲಿ: ಬ್ಯಾಂಕ್‌ ಗ್ರಾಹಕರಿಗೆ ಯಾವುದೇ ಆತಂಕ ಬೇಡ. ಇಂದಿನಿಂದ ನಡೆಯಬೇಕಿದ್ದ 3 ದಿನಗಳ ಬ್ಯಾಂಕ್‌ ಮುಷ್ಕರ ಮುಂದೂಡಿಕೆಯಾಗಿದೆ. ಬ್ಯಾಂಕ್‌ ಸೇವೆಗಳಲ್ಲಿ…

18 hours ago

ಎಸ್‌ಐಆರ್: ಜನಾಗ್ರಹಕ್ಕೆ ದೊರೆಯಲಿ ಮನ್ನಣೆ

ಪ್ರಜಾತಂತ್ರ ವ್ಯವಸ್ಥೆಯ ಭಾರತದಲ್ಲಿ ಪ್ರತಿ ಐದು ವರ್ಷಗಳಿಗೊಮ್ಮೆ ಸಂಸತ್ತು ಮತ್ತು ವಿಧಾನಸಭೆಗಳಿಗೆ ಮುಕ್ತ ಮತ್ತು ನಿಷ್ಪಕ್ಷಪಾತ ಚುನಾವಣೆಯನ್ನು ನಡೆಸುವ ಮೂಲಕ…

22 hours ago