ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನೂತನವಾಗಿ ಆಯ್ಕೆಯಾಗಿರುವ 17 ಮಂದಿ ಸೋಮವಾರ (ಜೂನ್.24) ಪ್ರಮಾಣವಚನ ಸ್ವೀಕರಿಸಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ನೂತನ ಶಾಸಕರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಶಿಕ್ಷಕರು ಮತ್ತು ಪದವೀಧರ ಕ್ಷೇತ್ರದಿಂದ ಆಯ್ಕೆಯಾದ 17 ಮಂದಿ ಪ್ರಮಾಣವಚನ ಪಡೆದರು.
ವೇದಿಕೆ ಕಾರ್ಯಕ್ರಮಕ್ಕು ಮುನ್ನಾ ಸಿಎಂ ಸಿದ್ದರಾಮಯ್ಯ ಅವರು ನೂತನವಾಗಿ ಆಯ್ಕೆಯಾದವರಿಗೆ ಶುಭ ಕೋರಿದರು. ಇವರಿಗೆ ಜತೆಯಾಗಿ ಸಭಾಪತಿ ಬಸವರಾಜ ಹೊರಟ್ಟಿ, ಕಾನೂನು ಸಚಿವ ಎಚ್.ಕೆ ಪಾಟೀಲ್ ಸಾಥ್ ನೀಡಿದರು.
ಕಾಂಗ್ರಸ್ ಹಾಗೂ ಬಿಜೆಪಿ ಸದಸ್ಯರು ದೇವರ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಆದರೆ ಕಾಂಗ್ರೆಸ್‌ನ ಬಿಲ್ಕೀಸ್ ಬಾನು ಅಲ್ಲಾ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದರೇ, ಜಯದೇವ್ ಗುತ್ತೇದಾರ್ ಬುದ್ಧ, ಬಸವ ಹಾಗೂ ಅಂಬೇಡ್ಕರ್ ಹೆಸರಿನಲ್ಲಿ ಪ್ರಮಾನವಚನ ಸ್ವೀಕರಿಸಿದರು.
ಸಿಎಂ ಕಾಲಿಗೆರಗಿದ ಸಿಟಿ ರವಿ: ಪರಿಷತ್ ಸದಸ್ಯನಾಗಿ ಪ್ರಮಾಣವಚನ ಸ್ವೀಕರಿಸಿದ ಸಿಟಿ ರವಿ ಬಳಿಕ ಸಿಎಂ ಸಿದ್ದರಾಮಯ್ಯ ಅವರ ಕಾಲಿಗೆ ನಮಸ್ಕರಿಸಿದರು. ಈ ವೇಳೆ ಸಿಟಿ ರವಿ ಬೆನ್ನುತಟ್ಟಿ, ಕಿವಿ ಹಿಂಡಿ ನಗು ಮೊಗದಿಂದಲೇ ಬೀಳ್ಕೊಟ್ಟರು.
ಪ್ರಮಾಣ ವಚನ ಸ್ವೀಕರಿಸಿದವರು: ಬೋಸರಾಜ್, ಯತೀಂದ್ರ ಸಿದ್ದರಾಮಯ್ಯ (ಕಾಂಗ್ರೆಸ್), ಗೋಂವಿದರಾಜು (ಕಾಂಗ್ರೆಸ್), ಐವಾನ್ ಡಿಸೋಜಾ (ಕಾಂಗ್ರೆಸ್), ಜವರಾಯಿ ಗೌಡ (ಜೆಡಿಎಸ್), ಎಂ.ಜಿ ಮೂಳೆ (ಬಿಜೆಪಿ), ಸಿಟಿ ರವಿ (ಬಿಜೆಪಿ), ರವಿಕುಮಾರ್ (ಬಿಜೆಪಿ), ವಸಂತ್ ಕುಮಾರ್ (ಕಾಂಗ್ರೆಸ್), ಡಾ. ಚಂದ್ರಶೇಖರ್ ಪಾಟೀಲ್ (ಕಾಂಗ್ರೆಸ್), ಜಯದೇವ್ ಗುತ್ತೇದಾರ್ (ಕಾಂಗ್ರೆಸ್), ಬಿಲ್ಕಿಸ್ ಬಾನು (ಕಾಂಗ್ರೆಸ್)
' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…
ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…
ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಮಂಡ್ಯ ನಗರದಲ್ಲಿನ ವಿದ್ಯುತ್ ದೀಪಾಲಂಕಾರಕ್ಕೆ ಕೃಷಿ ಸಚಿವರು ಹಾಗೂ…
ಕೇರಳ ಮೂಲದ ಮಾಸ್ಟರ್ ಮೈಂಡ್ ಸೇರಿದಂತೆ 12 ಆರೋಪಿಗಳ ಬಂಧನ; ಮತ್ತೊಂದು ಮೋಸದ ಜಾಲ ಬಯಲಿಗೆಳೆದ ಕೊಡಗು ಜಿಲ್ಲಾ ಪೊಲೀಸರು…
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಜನವರಿ…
ಮಂಡ್ಯ: ೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆ ಗುರುವಾರ ಸಂಜೆ ನಗರಕ್ಕೆ…