ನನ್ನ ಕೆಲಸದ ಕಾರ್ಯವೈಖರಿ ನೋಡಿ ಅವಧಿ ಮುಗಿದರೂ ಸರ್ಕಾರ ನನ್ನನ್ನು ಮುಂದುವರಿಸಿದೆ ಎಂದ ಅಡ್ಡಂಡ ಕಾರ್ಯಪ್ಪ
ಮೈಸೂರು: ಮೈಸೂರು ರಂಗಾಯಣದ ನಿರ್ದೇಶಕರಾಗಿ ಕಳೆದ ಮೂರು ವರ್ಷಗಳಲ್ಲಿ ರಂಗಾಯಣದಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡಿದ್ದೇನೆ. ನನ್ನ ಕೆಲಸದ ಕಾರ್ಯವೈಖರಿ ನೋಡಿ ಅವಧಿ ಮುಗಿದರೂ ಸರ್ಕಾರ ನನ್ನನ್ನು ಮುಂದುವರಿಸಿದೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ತಿಳಿಸಿದರು.
2019ರ ಡಿಸೆಂಬರ್‌ನಿಂದ 2022ರ ಡಿಸೆಂಬರ್ 27ಕ್ಕೆ ಮೂರು ವರ್ಷಗಳ ಅವಧಿ ಮುಗಿದಿದೆ. ಆದರೆ, ಸರ್ಕಾರದ ಆದೇಶದಲ್ಲಿ ಮೂರು ವರ್ಷಗಳ ಅವಧಿ ಉಲ್ಲೇಖಿಸಿಲ್ಲ. ಮುಂದಿನ ಆದೇಶದವರೆಗೆ ಅಧಿಕಾರ ಇರುತ್ತದೆ ಎನ್ನುವಂತೆ ಆದೇಶ ಹೊರಡಿಸಿರುವ ಕಾರಣ ಮುಂದುವರಿದಿದ್ದೇನೆ. ಇದರಲ್ಲಿ ಯಾವ ಗೊಂದಲ ಇಲ್ಲ ಎಂದು ಸ್ಪಷ್ಟಪಡಿಸಿದರು.
ಖ್ಯಾತ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಅವರ ಪರ್ವ ಕಾದಂಬರಿಯನ್ನು ರಂಗರೂಪಕ್ಕಿಳಿಸಿ ಯಶಸ್ವಿ ಪ್ರದರ್ಶನ ಮಾಡಲಾಗಿದೆ. ಡಾ.ಚಂದ್ರಶೇಖರ ಕಂಬಾರ ಅವರ ಕೃತಿಯ ನಾಟಕ ಪ್ರದರ್ಶನಕ್ಕೆ ಅನುಮತಿ ಪಡೆಯಬೇಕೆಂದು ಹೇಳಿರಲಿಲ್ಲ. ಅವರೂ ಈ ವಿಚಾರದಲ್ಲಿ ಯಾವ ಮಾತನ್ನೂ ಹೇಳಿಲ್ಲ. ಪೊಲೀಸ್ ಠಾಣೆಗೆ ದೂರುಕೊಟ್ಟಿರುವ ವಿಚಾರ ಗೊತ್ತಾಗಿದೆ. ಪೊಲೀಸರು ಕೇಳಿದಾಗ ಏನು ನಡೆದಿದೆ ಎಂಬುದನ್ನು ಹೇಳುತ್ತೇನೆ. ಕಂಬಾರರು ಹಿರಿಯರು. ಅವರ ಬಗ್ಗೆ ಅತೀವ ಗೌರವವಿದೆ. ನಾಟಕದಲ್ಲಿ ಎಲ್ಲಿಯೂ ಯಾರನ್ನು ಕೆಟ್ಟದಾಗಿ ಬಿಂಬಿಸಿಲ್ಲ ಎಂದು ನುಡಿದರು.
ಮಹಾದೇಶ್ ಎಂ ಗೌಡ ಹನೂರು: ತಮ್ಮ ಊರಿನಿಂದ ದೂರದಲ್ಲಿರುವ ಶಾಲಾ ಕಾಲೇಜುಗಳಿಗೆ ಹೋಗುವುದಕ್ಕೆ ಸಮರ್ಪಕವಾಗಿ ಬಸ್ ಸೌಲಭ್ಯ ಕಲ್ಪಿಸಲು ಕೋರಿ…
ಬಿ.ಎಸ್.ವಿನಯ್ ಮೊನ್ನೆ ಯಳಂದೂರಿನ ಬೀದಿಯಲ್ಲಿ ಸಾಗುತ್ತಿದ್ದಾಗ ಬಳೆಮಂಟಪದ ಮುಂದೆ ಪರಿಚಿತ ಹಿರಿಯರೊಬ್ಬರು ಎದುರಾದರು. ‘ಯಜಮಾನರೇ, ಕಾರ್ಯಕ್ರಮಕ್ಕೆ ಯಾಕೆ ಬರಲಿಲ್ಲ?’ ಕೇಳಿದರೆ…
ವಿನುತ ಕೋರಮಂಗಲ ನಮ್ಮ ಹಟ್ಟಿಯಿಂದ ನಾಲ್ಕೈದು ಕಿ.ಮೀ. ದೂರವಿರುವ ನಮ್ಮೂರಿನ ಕೆರೆಯ ಅಂಗಳಕ್ಕೆ ನಾವೇನು ನಡೆದುಕೊಂಡು ಹೋಗುತ್ತಿರಲಿಲ್ಲ. ಗಂಗೆ ಎಂದು…
ಅಕ್ಷತಾ ಖಾಲಿ ಹಾಳೆಯ ಒಂದೇ ಮಗ್ಗುಲಿನಲ್ಲಿ ಚಿತ್ತಿಲ್ಲದಂತೆ ಬರೆದು, ಪದ ಮಿತಿಯನ್ನು ಬೆರಳು ಲೆಕ್ಕದಲ್ಲಿ ಎಣಿಸಿ, ಪತ್ರಿಕೆಯ ವಿಳಾಸಕ್ಕೆ ಕಳುಹಿಸಿದ…
ಹನೂರು: ತಾಲೂಕಿನ ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯ ಮಲೆ ಮಹದೇಶ್ವರ ಅರಣ್ಯ ಪ್ರದೇಶ ವ್ಯಾಪ್ತಿಯ ಬಳಗುಡ್ಡ ಬಿಟ್ ವ್ಯಾಪ್ತಿಯಲ್ಲಿ ಏಕಕಾಲಕ್ಕೆ ಎರಡು…