ಯುವ ಡಾಟ್ ಕಾಂ

ಕೇದಾರಕಂಠ ಶಿಖರ ಏರಿದ ಬಾಲಕಿ ಶನಾಯ

ಮಂಜು ಕೋಟೆ

ಸಾಹಸಕ್ಕೆ ವಯಸ್ಸಿನ ಅಂತರವಿಲ್ಲ. ವಯಸ್ಸಿನ ಅಡ್ಡಿಯೂ ಇಲ್ಲ ಎಂಬುದನ್ನು ಶನಾಯ ಎಂಬ ೮ ವರ್ಷದ ಬಾಲಕಿ ಸಾಬೀತು ಮಾಡಿ ತೋರಿಸಿದ್ದಾಳೆ. ತನ್ನ ಈ ಪುಟ್ಟ ವಯಸ್ಸಿಗೆ ಕಠಿಣವಾದ ಕೇದಾರಕಂಠ ಚಾರಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಹೊಸ ಸಾಧನೆ ಮೆರೆದಿದ್ದಾಳೆ.

ಮೈಸೂರಿನ ಎಕ್ಸೆಲ್ ಪಬ್ಲಿಕ್ ಶಾಲೆಯಲ್ಲಿ ೩ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಶನಾಯ ಆನಂದ್ ಮತ್ತು ಭಾನುಮತಿ ದಂಪತಿಯ ಒಬ್ಬಳೇ ಮಗಳು. ಕುಮಾರ ಪರ್ವತ ಏರಿ ಅನುಭವ ಹೊಂದಿದ್ದ ಶನಾಯ ನಂತರ ಉತ್ತರಾಖಂಡದ ಗೋವಿಂದ ವನ್ಯಜೀವಿ ಅಭ ಯಾರಣ್ಯದಲ್ಲಿರುವ ಜನಪ್ರಿಯವಾದ ಹಾಗೂ ಕಠಿಣ ವಾದ ಚಾರಣ ತಾಣಗಳಲ್ಲಿ ಒಂದಾದ, ಸುಮಾರು ೩,೮೫೦ ಮೀ. (೧೨,೫೦೦ ಅಡಿಗಳು) ಎತ್ತರವಿರುವ ಕೇದಾರಕಂಠ ಶಿಖರವನ್ನು ಏರುವ ಮೂಲಕ ತನ್ನ ಅಚಲ ನಿರ್ಣಯವನ್ನು ಸಾಧಿಸಿ ತೋರಿಸಿದ್ದಾಳೆ.

ಉತ್ತರಾಖಂಡದ ಈ ಶಿಖರವು ಚಳಿಗಾಲದಲ್ಲಿ ಹಿಮದಿಂದ ಆವೃತವಾಗುವುದರಿಂದ ಇದರ ರಮ ಣೀಯ ಸೌಂದರ್ಯಕ್ಕೆ ಮನಸೋಲದವರಿಲ್ಲ. ಇದರ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಚಳಿಗಾಲ ದಲ್ಲಿಯೇ ಹೆಚ್ಚು ಚಾರಣ ಪ್ರಿಯರು ಇಲ್ಲಿಗೆ ಬರುತ್ತಾರೆ. ಮೇಲೆ ಮೇಲೆ ಏರುತ್ತಾ ಹೋದಂತೆ ಕೊರೆಯುವ ಚಳಿ ಉಸಿರಾಟಕ್ಕೆ ತೊಂದರೆಯನ್ನುಂಟು ಮಾಡಬಹುದು. ಇಂತಹ ಕಠಿಣವಾದ ಕೇದಾರಕಂಠ ಚಾರಣವನ್ನು ಶನಾಯ ಯಶಸ್ವಿಯಾಗಿ ಪೂರ್ಣಗೊಳಿಸಿರುವುದು ಆಕೆಯ ಶಾಲೆಯ ವರು ಹಾಗೂ ಪೋಷಕರು ಹೆಮ್ಮೆ ಪಡುವಂತೆ ಮಾಡಿದೆ.

ದಟ್ಟವಾದ ಪೈನ್ ಕಾಡುಗಳು, ವಿಶಾಲವಾದ ಹುಲ್ಲು ಗಾವಲು, ಎಲ್ಲದಕ್ಕಿಂತ ಹೆಚ್ಚಾಗಿ ದಟ್ಟವಾದ ಹಿಮ ಮತ್ತು ಕೊರೆಯುವ ಚಳಿಯ ನಡುವೆ ಕೇದಾರ ಕಂಠ ಪರ್ವತವನ್ನೇರುವುದು ಸವಾಲಿನ ಕೆಲಸವೇ ಸರಿ.

ಇಂತಹ ಸವಾಲನ್ನು ಸ್ವೀಕರಿಸಿದ ಶನಾಯ ಮಂಜಿನಿಂದ ಆವೃತವಾದ ಹಾದಿಯಲ್ಲಿ ಸಾಗುವ ದೃಢನಿಶ್ಚಯ ಮಾಡಿ ಕೊನೆಗೂ ಶಿಖರವನ್ನೇರಿ ಸಾಧನೆ ಮಾಡಿದ್ದಾಳೆ. ದಾರಿಯುದ್ದಕ್ಕೂ, ಸ್ವರ್ಗರೋಹಿಣಿ, ಕಪ್ಪು ಶಿಖರ ಮತ್ತು ಬಂದರ್ಪೂಂಚ್‌ನಂತಹ ಹಿಮಾಲಯ ಶಿಖರಗಳ ಮೋಡಿ ಮಾಡುವ ದೃಶ್ಯಗಳನ್ನು ಕಣ್ತುಂಬಿಕೊಂಡು ಮುಂದೆ ಮತ್ತಷ್ಟು ಶಿಖರಗಳನ್ನೇರುವ ಪಣ ತೊಟ್ಟಿದ್ದಾಳೆ ಎಂಬುದು ಅವರ ಪೋಷಕರು ಮಾತು.

ಕೇದಾರಕಂಠ ಚಾರಣವೇನು ಒಂದು ದಿನದಲ್ಲಿ ಪೂರ್ಣಗೊಳ್ಳುವ ಚಾರಣವಲ್ಲ. ಸತತ ಆರು ದಿನಗಳು ನಡೆದು ಬೆಟ್ಟ, ಶಿಖರಗಳನ್ನು ಏರಿ ಗುರಿ ಮುಟ್ಟಬೇಕು. ಈ ಚಾರಣವು ಸಂಕ್ರಿಯ ಸುಂದರವಾದ ಹಳ್ಳಿಯಿಂದ ಪ್ರಾರಂಭವಾಗಿ, ಜುದಾ ಕಾ ತಲಾಬ್ ಮತ್ತು ಕೇದಾರ ಕಾಂತ ಬೇಸ್ ಕ್ಯಾಂಪ್‌ನಂತಹ ಸುಂದರವಾದ ಶಿಬಿರ ತಾಣಗಳ ಮೂಲಕ ಸಾಗಿ ಕೇದಾರಕಂಠ ಶಿಖರದಲ್ಲಿ ಕೊನೆಗೊಳ್ಳುತ್ತದೆ.

ತನ್ನ ಪೋಷಕರ ಅಪಾರ ಬೆಂಬಲ, ಶಿಕ್ಷಕರು, ಸ್ನೇಹಿತರ ಪ್ರೋತ್ಸಾಹ ನಾನು ಈ ಕೊರೆಯುವ ಚಳಿಯನ್ನು ಎದುರಿಸಿ ಸವಾಲಿನ ಈ ಭೂಪ್ರದೇಶವನ್ನು ಏರಿ, ಅಂತಿಮವಾಗಿ ಶಿಖರದ ಮೇಲೆ ನಿಲ್ಲಲು ಕಾರಣವಾಯಿತು ಎಂಬುದು ಶನಾಯಳ ಮಾತು.

ಶನಾಯಳ ಈ ಸಾಧನೆ ಯುವ ಸಾಹಸಿಗರು ಹಾಗೂ ಅನೇಕ ಚಾರಣಿಗರಿಗೆ ಸ್ಛೂರ್ತಿಯಾಗಿದೆ. ಕನಸುಗಳನ್ನು ಬೆನ್ನಟ್ಟುವಾಗ ಯಾವುದೇ ವಯಸ್ಸು, ಸಮಸ್ಯೆಗಳು ನಮಗೆ ಕಾಣುವುದಿಲ್ಲ ಎಂಬುದಕ್ಕೆ ಶನಾಯ ಸಾಕ್ಷಿಯಾಗಿದ್ದಾಳೆ.

ಮುಂದಿನ ದಿನಗಳಲ್ಲಿ ಮತ್ತಷ್ಟು ಸಾಧನೆ ಮಾಡುವ, ಇನ್ನಷ್ಟು ಕಠಿಣವಾದ ಶಿಖರಗಳನ್ನೇರುವ ಕನಸು ಹೊತ್ತಿದ್ದಾಳೆ. ಇವಳ ಧೈರ್ಯ, ಆತ್ಮವಿಶ್ವಾಸ ಹಾಗೂ ಕಠಿಣ ಪರಿಶ್ರಮವನ್ನು ಕಂಡು ಪೋಷಕರೂ ಅವಳಿಗೆ ಬೆಂಬಲವಾಗಿ ನಿಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಆಂದೋಲನ ಡೆಸ್ಕ್

Recent Posts

ಚಿರತೆಗಳು ಕಾಣಿಸಿಕೊಳ್ಳುವಿಕೆ: ಮೈಸೂರಿನ ಅಭಿವೃದ್ಧಿಯ ಮತ್ತೊಂದು ಮುಖ

ಮೈಸೂರು ನಗರವು ತನ್ನ ಸಾಂಸ್ಕೃತಿಕ ಪರಂಪರೆ, ಹಸಿರು ಪರಿಸರ ಮತ್ತು ಸುಸ್ಥಿರ ಜೀವನಶೈಲಿಗಾಗಿ ಬಹಳ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ…

6 mins ago

ಮಾನವ ಹಕ್ಕುಗಳನ್ನು ಪೋಷಿಸುವ ಸಾಮಾಜಿಕ ನ್ಯಾಯದ ಪರಿಕಲ್ಪನೆ

ಯಾವುದೋ ಒಂದು ಹಕ್ಕು ಹೆಚ್ಚಿನ ಆದ್ಯತೆ ಹೊಂದಲು ಸಾಧ್ಯವೇ? ಕೆಲವು ಹಕ್ಕುಗಳು ಹೆಚ್ಚು ಮುಖ್ಯವಾಗುವವೇ? ಒಂದು ರೀತಿಯ ಹಕ್ಕಿನಿಂದ ಇನ್ನೊಂದು…

31 mins ago

ಅವೈಜ್ಞಾನಿಕ ಚರಂಡಿ ಕಾಮಗಾರಿಯಿಂದ ಕಿರಿಕಿರಿ

ಮನೆ ಮುಂಭಾಗ ತ್ಯಾಜ್ಯ ನೀರು ನಿಂತು ಗಬ್ಬುನಾರುತ್ತಿರುವ ಚರಂಡಿ ; ಸಾಂಕ್ರಾಮಿಕ ರೋಗ ಹರಡುವ ಭೀತಿ, ಚುನಾವಣೆ ಬಹಿಷ್ಕಾರಕ್ಕೆ ಸ್ಥಳೀಯರ…

58 mins ago

ಅಂಗನವಾಡಿಗಳಿಗೆ ೬ ತಿಂಗಳಿಂದ ಬಾರದ ಮೊಟ್ಟೆ ಹಣ!

ಚಾಮರಾಜನಗರ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ತಾಲ್ಲೂಕಿನ ಅಂಗನವಾಡಿ ಕೇಂದ್ರಗಳಿಗೆ ಕೋಳಿಮೊಟ್ಟೆ ವಿತರಣೆಗಾಗಿ ನೀಡಲಾಗುವ ಅನುದಾನ ಕಳೆದ ೬ತಿಂಗಳಿಂದ…

3 hours ago

‘ತ್ಯಾಜ್ಯ ಸಂಸ್ಕರಣೆ, ವಿಲೇವಾರಿಗೆ ಕ್ರಮಕೈಗೊಳ್ಳಬೇಕು’

ಗುತ್ತಲು ಕೆರೆ, ಕಾಳೇನಹಳ್ಳಿ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಜಿಲ್ಲಾಧಿಕಾರಿ ಡಾ.ಕುಮಾರ ಭೇಟಿ ಮಂಡ್ಯ: ನಗರದ ಗುತ್ತಲು ಕೆರೆಗೆ ತ್ಯಾಜ್ಯ…

4 hours ago

ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿಗೆ ಪರದಾಟ

ಪ್ರಶಾಂತ್ ಎಸ್. ಆರು ತಿಂಗಳಿನಿಂದ ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತ ನೀರಿನ ಘಟಕ ನಿರ್ವಹಣೆ ಮಾಡುವಲ್ಲಿ ಕೆಎಸ್‌ಆರ್‌ಟಿಸಿ ವಿಫಲ…

4 hours ago