ಯುವ ಡಾಟ್ ಕಾಂ

ಭಾರತೀಯ ಭೂ ಸೇನೆ: ಅಗ್ನಿವೀರರಿಗೆ ಆಹ್ವಾನ

ಕೆಲಸ ಬೇಕೇ ಕೆಲಸ

. ಹುದ್ದೆಗಳ ಸಂಖ್ಯೆ: 4 ವಿಭಾಗಗಳಲ್ಲಿ ಅಗತ್ಯಕ್ಕೆ ಅನುಗುಣವಾಗಿ ನೇಮಕ ಮಾಡಲಾಗುವುದು.

. ವಿದ್ಯಾರ್ಹತೆ: 8ನೇ ತರಗತಿ, 10ನೇ ತರಗತಿ ಮತ್ತು12ನೇ ತರಗತಿ.

. ವಯಸ್ಸಿನ ಅರ್ಹತೆಗಳು: ಕನಿಷ್ಠ 17 ವರ್ಷ 6 ತಿಂಗಳು ಆಗಿರಬೇಕು. ಗರಿಷ್ಠ 21 ವರ್ಷ ವಯಸ್ಸು ಮೀರಿರಬಾರದು.

. ಸೇವೆ ಅವಧಿ: 4 ವರ್ಷ

. ಅಗ್ನಿವೀರ್ ಕೆಟಗರಿವಾರು ವಿದ್ಯಾರ್ಹತೆಗಳ ವಿವರ:

ಅಗ್ನಿವೀರ್ (ಜನರಲ್ ಡ್ಯೂಟಿ): ಎಸ್ಎಸ್ಎಲ್‌ಸಿ ಶಿಕ್ಷಣವನ್ನು ಕನಿಷ್ಠ ಶೇ.45 ಅಂಕಗಳೊಂದಿಗೆ ಪಾಸು ಮಾಡಿರಬೇಕು. ಪ್ರತಿ ವಿಷಯದಲ್ಲಿ ಕನಿಷ್ಠ ಶೇ.33 ಅಂಕಗಳೊಂದಿಗೆ ಪಾಸ್ ಆಗಿರಬೇಕು. ಡ್ರೈವಿಂಗ್ ಲೈಸೆನ್ಸ್ ಇರುವವರಿಗೆ ಆದ್ಯತೆ ನೀಡಲಾಗುವುದು.

ಅಗ್ನಿವೀರ್ (ಟೆಕ್): ದ್ವಿತೀಯ ಪಿಯುಸಿ / 10+2 ಶಿಕ್ಷಣವನ್ನು ಭೌತಶಾಸ್ತ್ರ/ ರಸಾಯನಶಾಸ್ತ್ರ / ಗಣಿತ/ ಇಂಗ್ಲಿಷ್ ವಿಷಯಗಳಲ್ಲಿ ಓದಿ, ಶೇ.50 ಅಂಕಗಳೊಂದಿಗೆ ಪಾಸ್ ಆಗಿರಬೇಕು. ಪ್ರತಿ ವಿಷಯದಲ್ಲಿ ಕನಿಷ್ಠ ಶೇ.40 ಅಂಕಗಳೊಂದಿಗೆ ಪಾಸ್ ಆಗಿರಬೇಕು.

ಅಗ್ನಿವೀರ್ ಕ್ಲರ್ಕ್ / ಸ್ಟೋರ್ ಕೀಪರ್ ಟೆಕ್ನಿಕಲ್: ಪಿಯುಸಿ ಶಿಕ್ಷಣವನ್ನು ಯಾವುದೇ ವಿಷಯಗಳಲ್ಲಿಶೇ.60 ಅಂಕಗಳೊಂದಿಗೆ ಪಾಸ್ ಮಾಡಿರಬೇಕು. ಪ್ರತಿ ವಿಷಯದಲ್ಲಿ ಶೇ.50 ಅಂಕ ಪಡೆದಿರಬೇಕು.

ಅಗ್ನಿವೀರ್ ಟ್ರೇಡ್ಸ್‌ಮನ್‌: 10 ನೇ ತರಗತಿ ಪಾಸ್ ಮಾಡಿರಬೇಕು. ಪ್ರತಿ ವಿಷಯದಲ್ಲಿ ಶೇ.33 ಅಂಕ ಪಡೆದಿರಬೇಕು.

ಅಗ್ನಿವೀರ್ ಟ್ರೇಡ್ಸ್‌ಮನ್‌: 8ನೇ ತರಗತಿ ಪಾಸ್ ಮಾಡಿರಬೇಕು. ಪ್ರತಿ ವಿಷಯದಲ್ಲಿ ಶೇ.33 ಅಂಕ ಪಡೆದಿರಬೇಕು.

ಅಗ್ನಿವೀರ್ ಜನರಲ್ ಡ್ಯೂಟಿ – ಮಿಲಿಟರಿ ಪೊಲೀಸ್ ಪಡೆಯಲ್ಲಿ ಮಹಿಳಾ ಅಗ್ನಿವೀರರು:

ಎಸ್ಎಸ್ಎಲ್‌ಸಿ ಶಿಕ್ಷಣವನ್ನು ಕನಿಷ್ಠ ಶೇ.45 ಅಂಕಗಳೊಂದಿಗೆ ಪಾಸ್ ಮಾಡಿರಬೇಕು. ಪ್ರತಿ ವಿಷಯದಲ್ಲಿ ಶೇ.33 ಅಂಕ ಪಡೆದಿರಬೇಕು. ಲೈಟ್ ಮೋಟಾರ್ ವೆಹಿಕಲ್ ವಾಹನ ಚಾಲನ ಪರವಾನಗಿ (ಡಿಎಲ್) ಇರುವವರಿಗೆ ಆದ್ಯತೆ
ನೀಡಲಾಗುವುದು.

.ಇತರೆ ಅರ್ಹತೆಗಳು: ಎನ್‌ಸಿಸಿ ಕೋಟಾ, ಕ್ರೀಡಾ ಕೋಟಾಗಳಡಿ ಕೂಡ ಹುದ್ದೆಗಳು ಇರುತ್ತವೆ.

ಆಯ್ಕೆ ವಿಧಾನಗಳು: ಲಿಖಿತ ಪರೀಕ್ಷೆ, ದೈಹಿಕ ಸಾಮರ್ಥ್ಯ ಪರೀಕ್ಷೆ, ವೈದ್ಯಕೀಯ ಪರೀಕ್ಷೆ, ಸಹಿಷ್ಣುತೆ ಪರೀಕ್ಷೆ ಇರುತ್ತವೆ.

.ಭೂ ಸೇನೆ ಅಗ್ನಿವೀರರಿಗೆ ವೇತನ ಮತ್ತು ಭತ್ಯೆಗಳು
. 1ನೇ ವರ್ಷ: ರೂ. 30,000 ಜತೆಗೆ ಇತರೆ ಭತ್ಯೆಗಳು
. 2ವರ್ಷ: ರೂ. 33,000 ಜತೆಗೆ ಇತರೆ ಭತ್ಯೆಗಳು
.  3ನೇ ವರ್ಷ: ರೂ. 36,500 ಜತೆಗೆ ಇತರೆ ಭತ್ಯೆಗಳು
. 4ನೇ ವರ್ಷ: ರೂ. 40,000 ಜತೆಗೆ ಇತರೆ ಭತ್ಯೆಗಳು

. ಅರ್ಜಿ ಸಲ್ಲಿಸುವವರು https://joinindianarmy.nic.in ಗೆ ಭೇಟಿ ನೀಡಬಹುದು.
.ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ 12-03-2025
.ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10-04-2025

ಆಂದೋಲನ ಡೆಸ್ಕ್

Recent Posts

ರಂಗಾಯಣ | ಐದು ದಿನಗಳ ʼನಿರಂತರ ರಂಗ ಉತ್ಸವʼಕ್ಕೆ ತೆರೆ

ಮೈಸೂರು : ನಿರಂತರ ರಂಗ ತಂಡದ ‘ನಿರಂತರ ರಂಗ ಉತ್ಸವ-2025-26’ರ ಐದು ದಿನಗಳ ರಂಗೋತ್ಸವದ ಕೊನೆಯ ದಿನ ‘ಕೊಡಲ್ಲ ಅಂದ್ರೆ…

5 seconds ago

ಭೀಕರ ಸರಣಿ ಅಪಘಾತ : ಇಬ್ಬರು ಸಾವು, 20ಕ್ಕೂ ಹೆಚ್ಚು ವಾಹನ ಹಾನಿ

ಬೆಂಗಳೂರು : ನಗರದ ಹೊರವಲಯದ ಆನೇಕಲ್‌ನಲ್ಲಿ ಭಾನುವಾರ ಭೀಕರ ಸರಣಿ ಅಪಘಾತವಾಗಿದೆ. ವೇಗವಾಗಿ ನುಗ್ಗಿ ಬಂದ ಬೃಹತ್ ಕಂಟೈನರ್ ಲಾರಿಯೊಂದು…

12 mins ago

ವಿದ್ಯಾವಂತರಲ್ಲಿ ಹೆಚ್ಚುತ್ತಿರುವ ಮೌಢ್ಯತೆ, ಕಂದಾಚಾರ : ಸಿಎಂ ವಿಷಾದ

ಮಂಡ್ಯ : ಮೌಢ್ಯಗಳನ್ನು ಜನರು ತಿರಸ್ಕರಿಸಿ ಬಸವಾದಿ ಶರಣರು ತಿಳಿಸಿರುವುದನ್ನು ಪಾಲನೆ ಮಾಡಬೇಕು. ವಿದ್ಯಾವಂತರಲ್ಲಿ ಕಂದಾಚಾರ ಹಾಗೂ ಮೌಢ್ಯತೆ ಇರುವುದು…

16 mins ago

ವಸ್ತುಪ್ರದರ್ಶನದಲ್ಲಿ ಜನಾಕರ್ಷಿಸಿದ ಚಿತ್ರ ಸಂತೆ

ಮೈಸೂರು : ನಗರದ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಲಲಿತ ಕಲೆ ಮತ್ತು ಕರಕುಶಲ ಹಾಗೂ ಮಹಿಳಾ ಉದ್ದಿಮೆ ಉಪ…

19 mins ago

ಬಂಧನದ ಭೀತಿ ಎದುರಿಸುತ್ತಿರುವ ಬಿಜೆಪಿ ಶಾಸಕನಿಗೆ ಲುಕ್‌ಔಟ್‌ ನೋಟಿಸ್‌ ಜಾರಿ

ಬೆಂಗಳೂರು : ರೌಡಿಶೀಟರ್‌ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಬಿಜೆಪಿ ಶಾಸಕ ಬೈರತಿ ಬಸವರಾಜು, ಕಳೆದೆರಡು…

21 mins ago

ಸೀಸನಲ್‌ ಫ್ಲೂ ಹೆಚ್ಚಳ : ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ

ಬೆಂಗಳೂರು : ರಾಜ್ಯದಲ್ಲಿ ಸೀಸನಲ್ ಫ್ಲೂ ಹೆಚ್ಚಳ ಆಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಡಿಸೆಂಬರ್, ಜನವರಿಯಿಂದ…

23 mins ago