ಗಿರೀಶ್ ಹುಣಸೂರು
ಭಾರತದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರು, ಏಳಿ..ಎದ್ದೇಳಿ… ಗುರಿ ಮುಟ್ಟುವ ತನಕ ನಿಲ್ಲದಿರಿ … ಎಂದು ಕರೆ ಕೊಟ್ಟರೆ, ದೇಶದ ಭವಿಷ್ಯದ ಆಸ್ತಿಯಾಗಿರುವ ಯುವ ಜನತೆ ಸಣ್ಣ ಪುಟ್ಟ ಸಮಸ್ಯೆಗಳಿಗೂ ಆತ್ಮಹತ್ಯೆಯ ಹಾದಿ ಹಿಡಿದು, ಗುರಿ ಮುಟ್ಟುವ ಮುನ್ನವೇ ಸಾವಿನ ಮನೆಯ ಕದ ತಟ್ಟುತ್ತಿರುವುದು ಆತಂಕಕಾರಿ ಸಂಗತಿ. ಮಾನವ ಜನ್ಮ ದೊಡ್ಡದು, ಅದನ್ನು ಹಾಳು ಮಾಡಿಕೊಳ್ಳಬೇಡಿರಿ ಹುಚ್ಚಪ್ಪಗಳಿರಾ… ಎನ್ನುವ ದಾಸರ ವಾಣಿಯನ್ನೂ ಗಣನೆಗೆ ತೆಗೆದುಕೊಳ್ಳದೆ ಎಸ್‌ಎಸ್ ಎಲ್‌ಸಿ, ಪಿಯುಸಿಯಲ್ಲಿ ಫೆಲಾದ್ರೆ, ಪ್ರೇಮ ಭಗ್ನವಾದರೆ, ಬಯಸಿದ ಉದ್ಯೋಗ ಸಿಗದಿದ್ದರೆ, ಸಕಾಲಕ್ಕೆ ಮಳೆ ಕೈಕೊಟ್ಟು ಬೆಳೆ ಹಾಳಾದರೆ, ಸಾಲಬಾಧೆ, ಮದುವೆಗೆ ಹೆಣ್ಣು ಸಿಗದಿದ್ದರೆ, ಗಂಡ ಬೈದ ಎಂಬ ಕಾರಣಕ್ಕೆ…ಹೀಗೆ ಇತ್ತೀಚಿನ ವರ್ಷಗಳಲ್ಲಿ ಗಂಭೀರ ಕಾರಣಗಳೇ ಇಲ್ಲದೆ ಯುವ ಜನರು ಆತ್ಮಹತ್ಯೆಯ ಹಾದಿ ಹಿಡಿಯುತ್ತಿರುವುದು ಬದುಕಿ ಹೆಣಗುವುದಕ್ಕಿಂತ ಹೆಣವಾಗುವುದರಲ್ಲೇ ಯುವಜನರು ಸುಖ ಕಂಡುಕೊಳ್ಳುತ್ತಿದ್ದಾರಾ ಎನ್ನುವ ಪ್ರಶ್ನೆ ಮೂಡುವಂತೆ ಮಾಡಿದೆ.
ಆನೆ ಗಾತ್ರದ ಸಮಸ್ಯೆಯಾದರೂ ಇರುವೆ ಗಾತ್ರದ ಪರಿಹಾರ ಇದ್ದೇ ಇರುತ್ತದೆ ಎಂಬುದನ್ನು ಮನಗಾಣದ ಯುವಜನರು ಸಣ್ಣ ಸಮಸ್ಯೆಗೂ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅವರನ್ನೇ ನಂಬಿರುವ ಕುಟುಂಬದ ಸ್ಥಿತಿ ಏನಾಗಬೇಕು? ಅಷ್ಟಕ್ಕೂ ಜೀವನವನ್ನು ಕೊಣೆಗಾಣಿಸಿಕೊಳ್ಳುವುದು ಅಷ್ಟೊಂದು ಸುಲಭವೇ? ಇಷ್ಟಕ್ಕೂ ಯುವಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದೇಕೆ? ಇದಕ್ಕೆ ಪರಿಹಾರವೇ ಇಲ್ಲವೇ?
ಹಿಂದಿನ ಘಟನೆ ಇದು: ದಿನೇಶ್ (ಹೆಸರು ಬದಲಿಸಲಾಗಿದೆ). ಈತ ಹದಿನಾರು ವರ್ಷದ ಬಾಲಕ, ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ಫಲಿತಾಂಶಕ್ಕೆ ಎದುರು ನೋಡುತ್ತಿದ್ದ. ನಿರೀಕ್ಷೆಯಂತೆ ಮೇ ೨ರಂದು ಫಲಿತಾಂಶವೇನೋ ಪ್ರಕಟವಾಯಿತು. ಆದರೆ, ಆತ ಎರಡು ವಿಷಯಗಳಲ್ಲಿ ಪಾಸಾಗಲು ಅಗತ್ಯವಾದ ಅಂಕಗಳನ್ನು ಪಡೆದಿರಲಿಲ್ಲ. ಹೀಗಾಗಿ ಆತನ -ಲಿತಾಂಶವನ್ನು ಅಪೂರ್ಣ (ನಾಟ್ ಕಂಪ್ಲೀಟೆಡ್) ಎಂದು ತೋರಿಸಲಾಗಿತ್ತು. ಈ ರೀತಿ ಪಾಸಾಗದ, ಪಾಸಾದರೂ ಇನ್ನೂ ಹೆಚ್ಚು ಅಂಕ ಬಯಸುವ ವಿದ್ಯಾರ್ಥಿಗಳಿಗಾಗಿಯೇ ಸರ್ಕಾರ ಇನ್ನೂ ಎರಡು ಪರೀಕ್ಷೆಗಳನ್ನು ನಡೆಸುವ ಮೂಲಕ ಪಾಸು ಮಾಡಿಕೊಳ್ಳಲು ಅವಕಾಶವನ್ನು ನೀಡಿದೆ. ಆದರೆ, ಪಕ್ಕದ ಮನೆ ಹುಡುಗಿ ಪಾಸಾಗಿದೆ,
ನನ್ನ ಮಗ ಪಾಸಾಗಲಿಲ್ಲ ಎಂಬ ಕಾರಣಕ್ಕೆ ಮಗನನ್ನು ಹಿಡಿದು ದನಕ್ಕೆ ಬಡಿದಂತೆ ಬಡಿದು, ಊಟವನ್ನೂ ಕೊಡದೆ -ಲಾಗಿ ನನಗೆ ಅವಮಾನ ಮಾಡಿದೆ. ಒಂದಾ ಮನೆಯಲ್ಲಿ ನೀನಿರಬೇಕು? ಇಲ್ಲ ನಾನಿರಬೇಕು ಎಂದು ರಂಪಾಟ ಮಾಡಿದ ಬಾಲಕನ ತಾಯಿ ಮನೆ ಬಿಟ್ಟು ಹೋಗಿ, ಕೆಲಸದ ಮೇಲೆ ಹೊರ ರಾಜ್ಯಕ್ಕೆ ಹೋಗಿದ್ದ ಗಂಡ ಮತ್ತು ತನ್ನ ತಾಯಿಯ ಮನೆಯವರನ್ನೆಲ್ಲ ತುದಿಗಾಲಲ್ಲಿ ನಿಲ್ಲಿಸಿದ್ದ ಪ್ರಸಂಗ ಕೇಳಿದಾಗ ಪಾಸಾಗಿ ಅಂಕಪಟ್ಟಿ ಹಿಡಿದು ಬರುವುದೇ ಜೀವನವಾ? ಶಾಲೆಯಲ್ಲಿ -ಲಾದ ಹಲವರು ಜೀವನದಲ್ಲಿ ಪಾಸಾದ ನೈಜ ಉದಾಹರಣೆಗಳಿರುವಾಗ ಕೇವಲ ಸರ್ಟಿಫಿಕೇಟ್ ಶಿಕ್ಷಣಕ್ಕೆ ಹೀಗೇಕೆ ಜೋತು ಬೀಳುತ್ತಾರೆ ಎನಿಸುತ್ತದೆ. ಈ ಪ್ರಕರಣದಲ್ಲಿ ನನ್ನಿಂದಾಗಿ ಅಮ್ಮ ಮನೆ ಬಿಟ್ಟು ಹೋಗುವಂತಾಯಿತು ಎಂದು ಆ ಬಾಲಕ ಏನಾದರೂ ಹೆಚ್ಚುಕಮ್ಮಿ ಮಾಡಿಕೊಂಡಿದ್ದರೆ ಯಾರು ಹೊಣೆ?
ಪರೀಕ್ಷೆಯನ್ನು ಇನ್ನೊಮ್ಮೆ ಪಾಸು ಮಾಡಬಹುದು, ಹೋದ ಜೀವ ಮತ್ತೆ ಬರುತ್ತದೆಯೇ? ಎಂಬ ಪರಿಜ್ಞಾನ ಬೇಡವೇ. ಇನ್ನೂ ಕೆಲ ಪೋಷಕರು ಜೀವನದಲ್ಲಿ ತಾವೇನು ಆಗಲಿಲ್ಲವೋ ಅದನ್ನು ಮಕ್ಕಳು ಆಗಬೇಕೆಂದು ಬಯಸಿ, ಮಕ್ಕಳ ಮೇಲೆ ಇನ್ನಿಲ್ಲದ ಒತ್ತಡ ಹೇರಿ ಬಿಡುತ್ತಾರೆ. ಅಂತಿಮವಾಗಿ ಇದರ ಪರಿಣಾಮ ಮಾನಸಿಕವಾಗಿ ದುರ್ಬಲವಾಗುವ ಮಕ್ಕಳು ತಮ್ಮ ಮುಂದೆ ತಂದೆ-ತಾಯಿ ಇರಿಸಿರುವ ಸವಾಲನ್ನು ಎದುರಿಸಲಾಗದೆ ಆತ್ಮಹತ್ಯೆಗೆ ಶರಣಾಗಿ ಬಿಡುತ್ತಾರೆ.
ಇತ್ತೀಚಿನ ವರ್ಷಗಳಲ್ಲಿನ ಶೇಕಡಾವಾರು ಆತ್ಮಹತ್ಯೆ ಪ್ರಕರಣಗಳಲ್ಲಿ ದೇಶದಲ್ಲಿ ವಿದ್ಯಾರ್ಥಿಗಳ ಸಂಖ್ಯೆಯೇ ಹೆಚ್ಚಿರುವುದು ಸಮಾಜ ಎತ್ತ ಸಾಗುತ್ತಿದೆ ಎಂಬ ಆತಂಕವನ್ನು ಮೂಡಿಸುತ್ತದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯುರೋ ವರದಿಯಲ್ಲಿ ಒಟ್ಟಾರೆ ಆತ್ಮಹತ್ಯೆ ಪ್ರಮಾಣ ವಾರ್ಷಿಕ ಶೇ.೨ರಷ್ಟು ಹೆಚ್ಚಾಗಿದ್ದರೆ, ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ಶೇ.೪ರಷ್ಟು ಹೆಚ್ಚಾಗಿದೆ. ಇದು ರಾಷ್ಟ್ರೀಯ ಸರಾಸರಿಗಿಂತ ಎರಡು ಪಟ್ಟು ಹೆಚ್ಚಾಗಿರುವುದು ಕಂಡುಬರುತ್ತದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯುರೋ ವರದಿಯನ್ನು ಗಮನಿಸಿದರೆ ೨೦೨೨ರಲ್ಲಿ ದೇಶದಲ್ಲಿ ಒಟ್ಟು ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳಲ್ಲಿ ಶೇ.೫೩ರಷ್ಟು ಪುರುಷ ವಿದ್ಯಾರ್ಥಿಗಳಿದ್ದರೆ, ೨೦೨೧ ಮತ್ತು ೨೦೨೨ರ ಮಧ್ಯೆ ವಿದ್ಯಾರ್ಥಿಗಳ ಆತ್ಮಹತ್ಯೆಯಲ್ಲಿ ಶೇ.೬ರಷ್ಟು ಇಳಿಕೆ ಕಂಡುಬಂದಿದೆ. ಆದರೆ, ವಿದ್ಯಾರ್ಥಿನಿಯರ ಆತ್ಮಹತ್ಯೆ ಪ್ರಕರಣಗಳು ಶೇ.೭ರಷ್ಟು ಹೆಚ್ಚಾಗಿದೆ. ಈ ಅಂಕಿ ಅಂಶಗಳು ಸಮಾಜವನ್ನು ಬೆಚ್ಚಿ ಬೀಳಿಸಿದೆ.
ತಂತ್ರಜ್ಞಾನ ಬೆಳೆದಂತೆಲ್ಲ ಆತ್ಮಹತ್ಯೆ ಪ್ರಕರಣಗಳೂ ಹೆಚ್ಚುತ್ತಿವೆ. ಪುಟ್ಟ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಯಾವುದಾದರೊಂದು ಸಣ್ಣ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿಗೆ ಇಂದಿನ ಸಮಾಜ ತಲುಪಿರುವುದು ಸಾಮಾಜಿಕ ದುರಂತವೇ ಸರಿ. ಸವಾಲುಗಳ ನಡುವೆಯೇ ಬದುಕಬೇಕಾದದ್ದು ಅನಿವಾರ್ಯ ಎಂಬುದನ್ನು ಮನಗಂಡು ಬದುಕನ್ನು ಸಕಾರಾತ್ಮಕವಾಗಿ ತೆಗೆದುಕೊಂಡು ಮುಂದುವರಿಯುವುದೇ ಜೀವನ ಎಂಬುದನ್ನು ಅರಿಯಬೇಕಿದೆ.
” ಕಳೆದ ಒಂದು ದಶಕದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಮಾಣ ೬,೬೫೪ ರಿಂದ ೧೩,೦೪೪ಕ್ಕೆ ಏರಿಕೆಯಾಗಿದೆ. ಈ ಅವಧಿಯಲ್ಲಿ ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ರಾಜಸ್ಥಾನ ಹತ್ತನೇ ಸ್ಥಾನದಲ್ಲಿದೆ. ದೇಶದಲ್ಲಿ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಉತ್ತರ ಪ್ರದೇಶ ರಾಜ್ಯ ಅತಿ ಹೆಚ್ಚು ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಮಾಣವನ್ನು ಹೊಂದಿರುವ ೫ ರಾಜ್ಯಗಳಲ್ಲಿ ಒಂದಾಗಿದೆ. ೧೫ ರಿಂದ ೨೯ರ ನಡುವಿನ ವಯೋಮಾನದವರೇ ಹೆಚ್ಚಾಗಿ ಆತ್ಮಹತ್ಯೆಗೆ ಶರಣಾಗುತ್ತಿರುವವರು.”
” ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ ದತ್ತಾಂಶದ ಪ್ರಕಾರ ೨೦೦೩ರಲ್ಲಿ ೧,೧೦,೮೫೧ರಷ್ಟಿದ್ದ ಆತ್ಮಹತ್ಯೆಗಳ ಸಂಖ್ಯೆಯು ೨೦೧೩ರ ಹೊತ್ತಿಗೆ ೧,೩೪,೭೯೯ಕ್ಕೆ (ಶೇ.೨೧.೬) ಹೆಚ್ಚಳವಾಗಿದೆ. ೨೦೧೩ರಲ್ಲಿ ಕರ್ನಾಟಕದಲ್ಲಿ ಒಂದು ಲಕ್ಷ ಜನಸಂಖ್ಯೆಗೆ ಆತ್ಮಹತ್ಯಾ ದರ ೧೮.೫ರಷ್ಟಿದೆ.”
ಕೊಳ್ಳೇಗಾಲ: ಹಣ ದ್ವಿಗುಣಗೊಳಿಸಿಕೊಡುವುದಾಗಿ ಆಮಿಷ ಒಡ್ಡಿ, ಒಟ್ಟು ೨೮.೮೮ ಲಕ್ಷ ರೂ.ಗಳನ್ನು ವಂಚಿಸಿರುವ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಮಮತಾ…
ಯಳಂದೂರು:ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿರುವ ಸುವರ್ಣಾವತಿ ನದಿ ದಡಲ್ಲಿರುವ ಐತಿಹಾಸಿಕ ಚಾಮುಂಡೇಶ್ವರಿ ದೇಗುದಲ್ಲಿ ಗುರುವಾರ ರಾತ್ರಿ ಕಳ್ಳತನ ನಡೆದಿದ್ದು, ಲಕ್ಷಾಂತರ ರೂ.…
ನವದೆಹಲಿ: ದೇಶಾದ್ಯಂತ ಇಂಡಿಗೋ ವಿಮಾನದ ಹಾರಾಟದಲ್ಲಿ ಭಾರೀ ವ್ಯತ್ಯಯ ಉಂಟಾದ ಬೆನ್ನಲ್ಲೇ ಕೇಂದ್ರ ನಾಗರಿಕ ವಿಮಾನಯಾನ ನಿರ್ದೇಶನಾಲಯ ಪೈಲಟ್‌ಗಳ ರಜಾ…
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆಯಾಗಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ…
ನವದೆಹಲಿ: ಕಾಲಾತೀತ, ಮೌಲ್ಯಾಧರಿತ ಆದರ್ಶಗಳನ್ನು ಒಳಗೊಂಡಿರುವ ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು…
ನಂಜನಗೂಡು: ಸೋಲು, ಗೆಲುವಿಗಿಂತ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ಹೇಳಿದರು. ನಂಜನಗೂಡು ನಗರದ ಕಾಲೇಜೊಂದರಲ್ಲಿ ಆಯೋಜಿಸಿದ್ದ…