ಬ್ಯಾಂಕ್‌ ಖಾತೆಗೆ ಬಯೋಮೆಟ್ರಿಕ್‌ ಲಾಕ್

ಆಧಾರ್ ಸಂಖ್ಯೆ ಬಳಸಿ ನಿಮ್ಮ ಬ್ಯಾಂಕ್ ಖಾತೆ ಹಣವನ್ನೆಲ್ಲ ಕ್ಷಣ ಮಾತ್ರದಲ್ಲಿ ದೋಚುವ ಡಿಜಿಟಲ್ ಹ್ಯಾಕರ್‌ಗಳು ಈಗ ಹೆಚ್ಚಾಗುತ್ತಿದ್ದಾರೆ.

ನಾವು ಆಧಾರ್ ಕಾರ್ಡ್ ಮಾಡಿಸುವಾಗ ಕಣ್ಣುಗಳ ಐರಿಸ್ ಗಳನ್ನು ಸೆರೆಹಿಡಿಯಲಾಗುತ್ತದೆ. ಹಾಗೂ ಕೈ ಬೆರಳುಗಳ ಗುರುತನ್ನೂ ಪಡಲಾಗುತ್ತದೆ. ಫೋಟೋ, ವೈಯಕ್ತಿಕ ವಿವರಗಳ ಜತೆಗೆ ಈ ಎಲ್ಲ ದೈಹಿಕ ಗುರುತುಗಳು ನಮ್ಮ ನಂಬರ್‌ನೊಂದಿಗೆ ಲಿಂಕ್ ಆಗಿರಲಿವೆ. ಇದರೊಂದಿಗೆ ಬ್ಯಾಂಕ್ ಖಾತೆ ಹೊಂದಿರುವವರೂ ತಮ್ಮ ಬ್ಯಾಂಕ್ ವ್ಯವಹಾರದ ಸಂಪೂರ್ಣ ಮಾಹಿತಿಯನ್ನು ಈ ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಮಾಡಿಸಿರುತ್ತೇವೆ. ಆದರೆ ಇತ್ತೀಚೆಗೆ ಈ ಡಿಜಿಟಿಲ್‌ ಅಭಿವೃದ್ಧಿಯನ್ನು ಬಳಸಿ ಕೊಂಡು ಅಕ್ರಮಗಳನ್ನು ಎಸಗುವ ಕಳ್ಳರೂ, ಕೆಟ್ಟವರೂ ಈ ಟೆಕ್ ಅಭಿವೃದ್ಧಿಯ ಲಾಭ ಪಡೆದು ಡಿಜಿಟಲ್ ಡಾಟಾ ಕದಿಯುವ ಹಾಗೂ ಬ್ಯಾಂಕ್ ಖಾತೆಗಳಲ್ಲಿನ ಹಣವನ್ನು ದೋಚುವ ಕಳ್ಳರು ಹೆಚ್ಚಾಗಿದ್ದಾರೆ. ಜಸ್ಟ್ ಆಧಾರ್ ನಂಬರ್ ಬಳಸಿಯೂ ಬ್ಯಾಂಕ್ ಖಾತೆಯಲ್ಲಿನ ಹಣವನ್ನು ಲೂಟಿ ಮಾಡಲು ಮುಂದಾಗುತ್ತಿದ್ದಾರೆ. ಆಧಾರ್ ಸಂಖ್ಯೆ ಇದ್ದರೆ ಸಾಕು, ಯಾವುದೇ ಒಟಿಪಿ ಪಡೆಯದೇ ಹ್ಯಾಕರ್‌ಗಳು ಹಣ ಕದಿಯಬಲ್ಲರು.

ಹೀಗೆ ಹಾಕರ್‌ಗಳು ಹಣ ಕದಿಯಬಾರದು, ಆಧಾರ್ ಬಳಕೆದಾರರ ಬ್ಯಾಂಕ್ ಖಾತೆಗೆ ಕನ್ನ ಹಾಕಬಾರದು, ಯಾವುದೇ ಡಾಟಾ ಕದಿಯಬಾರದು ಎಂದರೆ ‘ಬಯೋಮೆಟ್ರಿಕ್ ಲಾಕ್’ ಮಾಡುವುದು ಒಳ್ಳೆಯದು. ಹೀಗೆ ಮಾಡುವುದರಿಂದ ಯಾರೂ ನಿಮ್ಮ ಆಧಾರ್ ಅನ್ನು ಅನಧಿಕೃತವಾಗಿ ಬಳಕೆ ಮಾಡಲು ಸಾಧ್ಯವಾಗುವುದಿಲ್ಲ.

ನಿಮ್ಮ ವೈಯಕ್ತಿಕ ಡಾಟಾ ಹಾಗೂ ಬ್ಯಾಂಕ್ ಖಾತೆಯಲ್ಲಿನ ಹಣವನ್ನು ಕಾಪಾಡುವ ಸಲುವಾಗಿ ನಿಮ್ಮ ಆಧಾರ್ ‘ಬಯೋಮೆಟ್ರಿಕ್ ಲಾಕ್’ ಮಾಡಬೇಕಾಗುತ್ತದೆ.

ಬಯೋಮೆಟ್ರಿಕ್ ಲಾಕ್ ಆದರೆ ಏನೆಲ್ಲಾ ಆಗುತ್ತದೆ?
ಆಧಾರ್ ಹೊಂದಿರುವವರು ಮುಂದೆ ಯಾವುದೇ ಬಯೋಮೆಟ್ರಿಕ್ ಪ್ರಮಾಣೀಕರಣ ಮಾಡಲು ಸಾಧ್ಯವಾಗುವುದಿಲ್ಲ. ಉದಾಹರಣೆಗೆ ನೀವು ಪಡಿತರ, ರೇಷನ್ ತೆಗೆದುಕೊಳ್ಳಬೇಕಾದರೆ ನ್ಯಾಯಬೆಲೆ ಅಂಗಡಿಗಳಲ್ಲಿ ಈಗ ಬಯೋಮೆಟ್ರಿಕ್ ನೀಡಿ ರೇಷನ್ ಪಡೆಯುತ್ತಿದ್ದೀರಿ. ಒಂದು ವೇಳೆ ಬಯೋಮೆಟ್ರಿಕ್‌ ಲಾಕ್ ಆದರೆ ಈ ರೇಷನ್ ಪಡೆಯುವ ಸಂದರ್ಭದಲ್ಲಿ ನಿಮ್ಮ ಪ್ರಮಾಣೀಕರಣ ಆಗದೇ ಇರಬಹುದು. ಮತ್ತೆ ನೀವು ಈ ಆಧಾರ್ ಬಯೋಮೆಟ್ರಿಕ್‌ ಅನ್ನು ‘ಅನ್ ಲಾಕ್’ ಮಾಡಲೇಬೇಕಾಗುತ್ತದೆ. ನಿಮ್ಮ ಬಯೋಮೆಟ್ರಿಕ್ ಇಲ್ಲದೇ ಯಾವುದೇ ಆಧಾರ್ ದೃಢೀಕರಣ ಆಗದಿರಬಹುದು. ಬಯೋಮೆಟ್ರಿಕ್ ಲಾಕ್ ಆದರೆ ಹ್ಯಾಕರ್‌ಗಳು ನಿಮ್ಮ ಯಾವುದೇ ಮಾಹಿತಿಗಳು ಇದ್ದರೂ ಏನನ್ನೂ ಕದೀಯಲು ಸಾಧ್ಯವಿಲ್ಲ. ಆದ್ದರಿಂದ ನಮ್ಮ ಬ್ಯಾಂಕ್ ಖಾತೆ ಮತ್ತು ಹಣ ಹಾಗೂ ವೈಯಕ್ತಿಯ ಡಾಟಾಗಳ ಸುರಕ್ಷತೆಗಾಗಿ ಆಧಾರ್‌ ಬಯೋಮೆಟ್ರಿಕ್ ಲಾಕ್ ಮಾಡುವುದು ಅನಿವಾರ್ಯ.

andolana

Recent Posts

ವಿಶೇಷ ಚೇತನ ಮಕ್ಕಳು ಸಮಾಜಕ್ಕೆ ಶಾಪವಲ್ಲ, ವರ; ದೀಪಕ್‌ ಅಭಿಮತ

' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…

25 mins ago

ಸಕ್ಕರೆ ನಗರಿ ಅಂದ ಹೆಚ್ಚಿಸಿದ ದೀಪಾಲಂಕಾರ

ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್‌ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…

37 mins ago

ಮಂಡ್ಯ ಸಮ್ಮೇಳನ | ನಗರ ದೀಪಾಲಂಕಾರಕ್ಕೆ ಸಚಿವ ಚಲುವರಾಯಸ್ವಾಮಿ ಚಾಲನೆ

ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಮಂಡ್ಯ ನಗರದಲ್ಲಿನ ವಿದ್ಯುತ್ ದೀಪಾಲಂಕಾರಕ್ಕೆ ಕೃಷಿ ಸಚಿವರು ಹಾಗೂ…

48 mins ago

ನಕಲಿ ಚಿನ್ನಾಭರಣ ಅಡವಿಟ್ಟು ಬರೋಬ್ಬರಿ 34 ಲಕ್ಷ ರೂ. ವಂಚನೆ..!

ಕೇರಳ ಮೂಲದ ಮಾಸ್ಟರ್ ಮೈಂಡ್ ಸೇರಿದಂತೆ 12 ಆರೋಪಿಗಳ ಬಂಧನ; ಮತ್ತೊಂದು ಮೋಸದ ಜಾಲ ಬಯಲಿಗೆಳೆದ ಕೊಡಗು ಜಿಲ್ಲಾ ಪೊಲೀಸರು…

1 hour ago

ಮುಡಾ ಪ್ರಕರಣ | ಸಿಬಿಐ ತನಿಖೆ ಕೋರಿ ಸಲ್ಲಿಸಿದ್ದ ಅರ್ಜಿ ಜ.15ಕ್ಕೆ ಮುಂದೂಡಿಕೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್‌ ಜನವರಿ…

2 hours ago

ಸಮ್ಮೇಳನಕ್ಕೆ ಕ್ಷಣಗಣನೆ | ಸಮ್ಮೇಳನ ಸರ್ವಾಧ್ಯಕ್ಷ ಗೊ.ರು ಚನ್ನಬಸಪ್ಪಗೆ ಆತ್ಮೀಯ ಸ್ವಾಗತ

ಮಂಡ್ಯ: ೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆ ಗುರುವಾರ ಸಂಜೆ ನಗರಕ್ಕೆ…

2 hours ago