ಆಂದೋಲನ ಪುರವಣಿ

ಯುವ ಡಾಟ್‌ ಕಾಂ : ಮಾಡೆಲಿಂಗ್ ಲೋಕದಿಂದ ‘ಸಿನಿಮಾ ಲೋಕಕ್ಕೆ’ ಕಾಲಿಟ್ಟ ಕೊಡಗಿನ ಬೆಡಗಿ

-ಕೆ.ಎಂ ಇಸ್ಮಾಯಿಲ್ ಕಂಡಕರೆ

ಮಾಡೆಲಿಂಗ್ ಲೋಕದಿಂದ ಚಿತ್ರರಂಗಕ್ಕೆ ಕಾಲಿಡುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅವರ ಪಟ್ಟಿಗೆ ಇದೀಗ ‘ಫ್ಲಾಟ್ ನಂಬರ್ 09’ ಸಿನಿವಾದ ಮೂಲಕ ಸ್ಯಾಂಡಲ್‌ವುಡ್‌ಗೆ ಪ್ರವೇಶ ಗಿಟ್ಟಿಸಿ ಸಿನಿಮಾ  ಲೋಕದಲ್ಲಿ ಯಶಸ್ಸಿನತ್ತ ಕೊಡಗಿನ ಬೆಡಗಿ ಹಾಗೂ ಮಾಡೆಲ್ ತೇಜಸ್ವಿನಿ ಶರಾ ಜರ್ನಿ ಆರಂಭಿಸಿದ್ದಾರೆ.
ಮಡಿಕೇರಿ ನಿವಾಸಿಗಳಾದ ಪ್ರಸನ್ನ ಭಟ್ ಹಾಗೂ ಸಂಗೀತಾ ಪ್ರಸನ್ನ ಅವರ ಪುತ್ರಿ ಫ್ಲಾಟ್ ನಂಬರ್ 09 ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

ಈ ಸಿನಿಮಾ ಡಿಸೆಂಬರ್ 2 ರಿಂದ ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ.
ಸಿನಿಮಾ ಕ್ಷೇತ್ರದಲ್ಲಿ ಕೊಡಗಿನ ಪ್ರತಿಭೆಗಳಾದ ಪೂಜಾ, ಸೌತ್ ಇಂಡಿಯಾ ಸಿನಿ ಲೋಕದಲ್ಲಿ ಬ್ರ್ಯಾಂಡ್ ನಟಿಯಾಗಿ ಮಿಂಚುತ್ತಿರುವ ರಶ್ಮಿಕಾ ಮಂದಣ್ಣ ಬೆಳ್ಳಿ ಪರದೆಯಲ್ಲಿ ಮಿಂಚಿದವರಾಗಿದ್ದಾರೆ.
ಇದೀಗ ಅವರ ಸಾಲಿಗೆ ಮಾಡೆಲಿಂಗ್ ಲೋಕದ ಬೆಡಗಿ ‘ತೇಜಸ್ವಿನಿ ಶರ್ಮಾ’ ಸೇರ್ಪಡೆಯಾಗಿದ್ದಾರೆ.
ಕೊಡವ ಭಾಷೆಯ ‘ಕೊಡಗರ ಸಿಪಾಯಿ’ ಸಿನಿಮಾದಲ್ಲಿ ನಾಯಕಿಯಾಗಿ ತನ್ನ ನಟನೆಯ ಮೂಲಕ ಎಲ್ಲರ ಮನಗೆದ್ದ ತೇಜಸ್ವಿನಿ ಶರ್ಮಾ, ಕಿಶೋರ್ ಶರ್ಮಾ ನಿರ್ದೇಶನದಲ್ಲಿ ಮೂಡಿ ಬಂದಿರುವ ಫ್ಲಾಟ್ ನಂಬರ್ 09 ಸಿನಿಮಾದಲ್ಲಿ ಕಮಾಲ್ ಮಾಡಿದ್ದಾರೆ. ಕ್ರೈಮ್‌ ಬೇಸ್ಡ್ ಸಿನಿಮಾದಲ್ಲಿ ನಾಯಕಿಯಾಗಿರುವ ತೇಜಸ್ವಿನಿ ಶರ್ಮಾ ಅವರ ಸುತ್ತಲೂ ಇಡೀ ಕಥೆ ಸುತ್ತುತ್ತೆ.
ಹಾಗೂ ಮಹಿಳಾ ಪ್ರಧಾನ ಸಿನಿಮಾ ಕೂಡ ಇದಾಗಿದೆ.ಸಿನಿಮಾದಲ್ಲಿ ನಟರುಗಳಾದ ಸ್ಕಂದ, ಚಂದುಗೌಡ ಅಭಿನಯಿಸಿದ್ದಾರೆ.



ವರ್ಲ್ಡ್ ಸೂಪರ್ ಮಾಡೆಲ್ ಪಟ್ಟಕ್ಕಾಗಿ ಪಣ:

ವರ್ಲ್ಡ್ ಸೂಪರ್ ಮಾಡೆಲ್ ಸೌತ್ ಏಷ್ಯಾ ಎಂಬ ಹೆಗ್ಗಳಿಕೆ ಕೊಡಗಿನ ಹುಡುಗಿ ಭಾಜನರಾಗಿದ್ದಾಳೆ.
ಮಾಡೆಲಿಂಗ್ ಲೋಕದಿಂದ ಸಿನಿಮಾ ಲೋಕಕ್ಕೆ ಪಾದಾರ್ಪಣೆ ಮಾಡಿರುವ ತೇಜಸ್ವಿನಿ ಶರ್ಮಾ, ಇದೀಗ ವರ್ಲ್ಡ್ ಸೂಪರ್ ಮಾಡೆಲ್ ಪಟ್ಟವನ್ನು ಪಡೆಯಲು ಪಣತೊಟ್ಟಿದ್ದಾರೆ.
ಇಂಜಿನಿಯರಿಂಗ್ ಪದವಿ ಮುಗಿಸಿ ಕಂಪೆನಿಯೊಂದರಲ್ಲಿ ಕೆಲಸ ಮಾಡಿಕೊಂಡೆ ತೇಜಸ್ವಿನಿ ಬಣ್ಣದ ಲೋಕದಲ್ಲಿ ಹಲವಾರು ಅವಕಾಶಗಳನ್ನು ಗಿಟ್ಟಿಸಿ ಯಶಸ್ಸು ಕಂಡಿದ್ದಾರೆ.
ಆಸ್ಟ್ರೇಲಿಯಾ ಮೂಲದ ವರ್ಲ್ಡ್ ಸೂಪರ್ ಮಾಡೆಲ್ ಕಂಪೆನಿ ಚೀನಾದಲ್ಲಿ 2023 ಮೇ 21 ರಿಂದ 28 ರವರೆಗೆ ಆಯೋಜನೆ ಮಾಡಿರುವ ಅಂತಾರಾಷ್ಟ್ರೀಯ ಮಟ್ಟದ ಮಾಡೆಲ್ ಸ್ಪರ್ಧೆಯಲ್ಲಿ ಕೊಡಗಿನ ಮಡಿಕೇರಿಯ ತೇಜಸ್ವಿನಿ ಶರ್ಮಾ ಪಾಲ್ಗೊಳ್ಳಲಿದ್ದಾರೆ.



ಏಷ್ಯಾದ ಏಳು ರಾಷ್ಟ್ರಗಳ ಪ್ರತಿನಿಧಿಯಾಗಿ ಭಾಗವಹಿಸಲಿರುವ ತೇಜಸ್ವಿ:

10 ನೇ ವಾರ್ಷಿಕ ಸೂಪರ್ ಮಾಡೆಲ್ ಪ್ರೊಡೆಕ್ಷನ್ ಮತ್ತು ಇಂಟರ್ ನ್ಯಾಷನಲ್ ಫ್ಯಾಷನ್ ವೀಕ್ 2023 ಮೇ ತಿಂಗಳಲ್ಲಿ ಆಯೋಜನೆ ಮಾಡಿರುವ ವರ್ಲ್ಡ್ ಮಾಡೆಲಿಂಗ್ ಸ್ಪರ್ಧೆ ಚೀನಾದ ಮಖಾಪ್ ನಲ್ಲಿ ನಡೆಯಲಿದೆ.
ತೇಜಸ್ವಿನಿ ಶರ್ಮಾ ಭಾರತವನ್ನು ಪ್ರತಿನಿಧಿಸಲಿದ್ದಾರೆ. ವಿಶೇಷವೆಂದರೆ ತೇಜಸ್ವಿನಿ ಶರ್ಮಾ ಏಷ್ಯಾದ ಏಳು ರಾಷ್ಟ್ರಗಳ ಪ್ರತಿನಿಧಿಯಾಗಿ ಮಾಡೆಲಿಂಗ್ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವುದು, ಕೊಡಗಿನ ಜನತೆಗೆ ಹೆಮ್ಮೆಯಾಗಿದೆ.
ಹಲವಾರು ಮಾಡೆಲಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಅನುಭವ ಹೊಂದಿರುವ ತೇಜಸ್ವಿನಿ ಶರ್ಮಾ, ವರ್ಲ್ಡ್ ಸೂಪರ್ ಮಾಡೆಲ್ ಸ್ಪರ್ಧೆಯಲ್ಲಿ ಗೆದ್ದು ಬರುವ ವಿಶ್ವಾಸದಲ್ಲಿದ್ದಾರೆ.
40 ದೇಶದ ಪ್ರತಿನಿಧಿಗಳು ಈ  ಮಾಡೆಲಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದು, 17 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ.


ಕಾಲೇಜಿನ ಪ್ರೋಗ್ರಾಮ್‌ಗಳಲ್ಲಿ ಆಸಕ್ತಿ:
ತೇಜಸ್ವಿನಿ ಶರ್ವಾ ಅವರ ತಂದೆ ಪ್ರಸನ್ನ ಭಟ್ ರಂಗಭೂಮಿಯಲ್ಲಿದ್ದವರು.ಮಗಳು ಕೂಡ ಇದೇ ಕ್ಷೇತ್ರವನ್ನು ಆಯ್ಕೆ ಮಾಡಿ ಯಶಸ್ಸು ಕಂಡಿದ್ದಾಳೆ.
ತೇಜಸ್ವಿನಿ ಶರ್ಮಾ ತನ್ನ ಪ್ರಾಥಮಿಕ ಶಿಕ್ಷಣವನ್ನು ಮಡಿಕೇರಿಯಲ್ಲಿ ಹಾಗೂ ಕಾಲೇಜು ಶಿಕ್ಷಣವನ್ನು ಮೈಸೂರಿನಲ್ಲಿ ಪೂರೈಸಿದರು.ಕಾಲೇಜು ಶಿಕ್ಷಣ ಪಡೆಯುವಾಗಲೇ ಕಲ್ಚರಲ್ ಪ್ರೋಗ್ರಾಮ್‌ಗಳಲ್ಲಿ ತೇಜಸ್ವಿನಿ ಅವರದ್ದು ಎತ್ತಿದ ಕೈ.
ವಸ್ತ್ರ ಸೂಪರ್ ಮಾಡೆಲ್ ಏಷ್ಯಾ – 2017 ಪ್ರಶಸ್ತಿ ಗೆದ್ದ ನಂತರ ತೇಜಸ್ವಿನಿ ಶರ್ಮಾ ಅವರನ್ನು ಅವಕಾಶಗಳು ಹುಡುಕಿ ಬರತೊಡಗಿದವು. ಮಾಡೆಲಿಂಗ್ ಲೋಕದಿಂದ ‘ಸಿನಿಮಾ ಲೋಕಕ್ಕೆ ಕಾಲಿಟ್ಟು ಯಶಸ್ಸು ಕಾಣುತ್ತಿರುವ ತೇಜಸ್ವಿನಿ ಶರ್ಮಾ ಅವರಿಗೆ ಬೆಳ್ಳಿ ಪರದೆಯಲ್ಲಿ ಮತ್ತಷ್ಟು ಅವಕಾಶ ಸಿಗಲಿ ಎಂದು ಹಾರೈಸೋಣ.

ಕುಟುಂಬ ಹಾಗೂ ಕೊಡಗಿನವರ ಬೆಂಬಲದಿಂದ ಸಿನಿಮಾ ಹಾಗೂ ಮಾಡೆಲಿಂಗ್ ಲೋಕದಲ್ಲಿ ಯಶಸ್ಸು ಸಾಧ್ಯವಾಗಿದೆ. ಬದ್ಧತೆ, ಪರಿಶ್ರಮ, ಸಾಧಿಸಬೇಕೆಂಬ ಹಂಬಲ ಇದ್ದರೆ ಖಂಡಿತ ಯಶಸ್ಸು ಕಾಣುತ್ತೇವೆ.
ನನ್ನ ಮೊದಲ ಸಿನಿಮಾ ‘ಫ್ಲಾಟ್ ನಂಬರ್ 09’ ರಾಜ್ಯದಲ್ಲಿ ಯಶಸ್ವಿ ಪ್ರದರ್ಶನ ಕಂಡಿದೆ. ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನನ್ನನ್ನು ಮಾಡೆಲ್ ಆಗಿ ರೂಪಿಸಿದ ಬೆಂಗಳೂರಿನ ಫ್ಯಾಶನ್ ಎಬಿಸಿಡಿ ಸಂಸ್ಥೆಯನ್ನು ಮರೆಯಲಾಗದು.

ತೇಜಸ್ವಿನಿ ಶರ್ಮಾ, ಮಾಡೆಲ್ ಹಾಗೂ ನಟಿ.

andolanait

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

2 mins ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

30 mins ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

2 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

2 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

3 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

4 hours ago