ಆಂದೋಲನ ಪುರವಣಿ

ಯೋಗ ಕ್ಷೇಮ : ಕಿಡ್ನಿ ಆರೋಗ್ಯಕ್ಕೆ ಕಂಕಣ ತೊಡಿ

ಉತ್ತಮ ಜೀವನ ಕ್ರಮ, ಆಹಾರ ಪದ್ಧತಿಯೇ ಔಷಧ; ಪ್ರಾರಂಭದಲ್ಲಿಯೇ ಚಿಕಿತ್ಸೆ ಪಡೆಯಿರಿ

ಕಿಡ್ನಿಗೆ ಸಂಬಂಧಿಸಿದ ಸಮಸ್ಯೆಗಳು ಇಂದು ಸಾಮಾನ್ಯ ಎನ್ನುವ ಮಟ್ಟಕ್ಕೆ ಬಂದು ಮುಟ್ಟಿದೆ. ಆಧುನಿಕ ಜೀವನ ಶೈಲಿ, ನಮ್ಮ ಆಹಾರ ಪದ್ಧತಿಯಿಂದ ಹೆಚ್ಚಾಗಿ ಕಿಡ್ನಿ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಇದರ ಪರಿಹಾರಕ್ಕೆ ಸಾಕಷ್ಟು ಚಿಕಿತ್ಸೆಗಳು ಇವೆ. ಹೀಗಿದ್ದರೂ ಉತ್ತಮ ಜೀವನ ಕ್ರಮ, ಆಹಾರ ಪದ್ಧತಿಯಿಂದ ಕಿಡ್ನಿಯ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಬಹುದು.


ಡಾ. ವಿಪಿನ್ ಕಾವೇರಪ್ಪ, ನೆಪ್ರಾಲಜಿಸ್ಟ್ ಮಣಿಪಾಲ್ ಆಸ್ಪತ್ರೆ, ಮೈಸೂರು

ಭಾರತದಲ್ಲಿ ಸದ್ಯ ೨.೫ ಲಕ್ಷ ಮಂದಿ ಕಿಡ್ನಿಗೆ ಸಂಬಂಧಿಸಿದ ವಿವಿಧ ತೊಂದರೆಗಳಿಂದ ಬಳಲುತ್ತಿದ್ದಾರೆ ಎನ್ನುವ ಅಂದಾಜಿದೆ. ಇವರಲ್ಲಿ ಶೇ. ೧೦ ರಷ್ಟು ಮಂದಿ ಮಾತ್ರವೇ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಉಳಿದವರು ಹಲವಾರು ಕಾರಣಗಳಿಂದ ಚಿಕಿತ್ಸೆಯಿಂದ ದೂರವೇ ಉಳಿದಿದ್ದಾರೆ. ಅದಕ್ಕಿಂತ ಮುಖ್ಯವಾಗಿ ಇಂದು ಸಕ್ಕರೆ ಕಾಯಿಲೆ ಪ್ರಮಾಣ ಹೆಚ್ಚಾಗುತ್ತಿದ್ದು, ಇದು ಕಿಡ್ನಿ ಸಮಸ್ಯೆಗೂ ದಾರಿ ಮಾಡಿಕೊಡುತ್ತಿದೆ.

ಸಾಮಾನ್ಯವಾಗಿ ವಯಸ್ಸಾದವರಲ್ಲಿ ಕಿಡ್ನಿಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳತ್ತವೆ ಎನ್ನುತ್ತಾರೆ. ಇದು ತಪ್ಪು. ಇಂದಿನ ಆಹಾರ ಕ್ರಮ ಮತ್ತು ಜೀವನ ಶೈಲಿಯಿಂದಾಗಿ ಎಲ್ಲ ವಯಸ್ಸಿನವರಲ್ಲೂ ಕಿಡ್ನಿಗೆ ಸಂಬಂಧಿಸಿದ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಇವುಗಳನ್ನು ಪ್ರಮುಖವಾಗಿ ಎರಡು ವಿಧಗಳಲ್ಲಿ ವಿಂಗಡಿಬಹುದಾಗಿದ್ದು, ಒಂದು ಕ್ರಾನಿಕ್ ಕಿಡ್ನಿ ಡಿಸೀಸ್. ಮತ್ತೊಂದು ಎಕ್ಯೂಸ್ ಕಿಡ್ನಿ ಡಿಸೀಸ್



ಕ್ರಾನಿಕ್ ಡಿಸೀಸ್

ಶಾಸ್ವತವಾಗಿ ಕಿಡ್ನಿಯಲ್ಲಿ ಕಂಡು ಬರುವ ಸಮಸ್ಯೆಗಳನ್ನು ಕ್ರಾನಿಕ್ ಡಿಸೀಸ್ ಎಂದು ಗುರುತು ಮಾಡಲಾಗಿದೆ. ಇಂದು ದೇಶದಲ್ಲಿ ಈ ಸಮಸ್ಯೆ ಉಳ್ಳವರ ಸಂಖ್ಯೆ ಹೆಚ್ಚುತ್ತಿದೆ. ಬಿಪಿ, ಶುಗರ್ ಉಳ್ಳವರಲ್ಲಿ ಈ ಸಮಸ್ಯೆ ಸಾಮಾನ್ಯ ಎನ್ನುವಂತೆ ಆಗಿದೆ. ಪ್ರಾರಂಭಿಕ ಹಂತದಲ್ಲಿಯೇ ಇದನ್ನು ಗುರುತಿಸಿದರೆ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಅವಧಿ ಮೀರಿದರೆ ಸಮಸ್ಯೆ ಉಲ್ಬಣವಾಗುತ್ತದೆ. ಮುಂದೆ ಡಯಾಲಿಸಿಸ್‌ಗೆ ಒಳಗಾಗಬೇಕಾದ ಅನಿವಾರ್ಯತೆ ಉಂಟಾಗಬಹುದು.


Shot of a couple drinking glasses of water together at home

ಎಕ್ಯೂಸ್ ಡಿಸೀಸ್

ಈ ಬಗೆಯ ಸಮಸ್ಯೆಗಳನ್ನು ಇಂದು ಗುಣಪಡಿಸಿಕೊಳ್ಳಲು ಸಾಧ್ಯವಿದೆ. ಕೆಲವು ವೇಳೆ ಮಾತ್ರೆಗಳು ಇನ್ನೂ ಕೆಲವು ವೇಳೆ ಸಣ್ಣ ಆಪರೇಷನ್‌ಗಳಿಂದ ಎಕ್ಯೂಸ್ ಡಿಸೀಸ್‌ಗಳಿಗೆ ಪರಿಹಾರ ಸಿಕ್ಕುತ್ತದೆ. ಕಿಡ್ನಿ ಸ್ಟೋನ್ ಇಂದು ಸಾಮಾನ್ಯ ಸಮಸ್ಯೆ. ಇದನ್ನು ಪ್ರಾರಂಭಿಕ ಹಂತದಲ್ಲಿ ಮಾತ್ರೆಗಳಿಂದಲೇ ಗುಣಪಡಿಸಿಕೊಳ್ಳಬಹುದು. ಇದನ್ನೂ ಎಕ್ಯೂಸ್ ಡಿಸೀಸ್ ಪಟ್ಟಿಯಲ್ಲಿ ಸೇರಿಸಬಹುದು.


ಕಿಡ್ನಿ ಸಮಸ್ಯೆಗೆ ಪ್ರಮುಖ ಕಾರಣಗಳು

* ಶುಗರ್ ಇರುವವರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಿಡ್ನಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹೆಚ್ಚಿನ ಪ್ರಮಾಣದಲ್ಲಿ ಮಾತ್ರೆಗಳ ಸೇವನೆಯೂ ಇದಕ್ಕೆ ಕಾರಣ. ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವುದರಿಂದಲೂ ಹೀಗೆ ಆಗುತ್ತದೆ.

* ರಕ್ತದ ಒತ್ತಡದ ಏರಿಳಿತದಿಂದಲೂ ಕಿಡ್ನಿ ಆರೋಗ್ಯದ ಮೇಲೆ ಕೆಟ್ಟ ಪರಿಣಾಮಗಳು ಬೀರುವುದು ಉಂಟು.

* ಅಸಮರ್ಪಕ ಜೀವನ ಶೈಲಿ, ಆಹಾರ ಕ್ರಮ, ಸಮಯಕ್ಕೆ ಸರಿಯಾಗಿ ಆಹಾರ ಸೇವನೆ ಮಾಡದೇ ಇರುವುದು, ಒಂದೇ ಬಾರಿಗೆ ಹೆಚ್ಚು ಆಹಾರ ಸೇವನೆ ಮಾಡುವುದರಿಂದಲೂ ಕಿಡ್ನಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

* ಅಶುದ್ಧ ಕುಡಿಯುವ ನೀರಿನ ಸೇವನೆ, ಹೆಚ್ಚಿನ ಪ್ರಮಾಣದಲ್ಲಿ ಮಾತ್ರೆಗಳ ಸೇವನೆ, ಹೆಚ್ಚಾಗಿ ನೀರನ್ನು ಕುಡಿಯದೇ ಇರುವುದರಿಂದಲೂ ಕಿಡ್ನಿ ಕಾರ್ಯ ನಿರ್ವಹಣೆಯಲ್ಲಿ ತೊಡಕು ಉಂಟಾಗುತ್ತದೆ.


ಪ್ರಮುಖ ಲಕ್ಷಣಗಳು

* ಕಾಲಿನಲ್ಲಿ ಊತ ಬರುವುದು, ಚಿಕ್ಕ ವಯಸ್ಸಿನಲ್ಲಿಯೇ ಬಿಪಿ ಬರುವುದು, ಮುಖ ಊದಿಕೊಳ್ಳುವುದು.

* ಮೂತ್ರ ಮಾಡುವಾಗ ರಕ್ತ ಬರುವುದು, ನೊರೆ ಬರುವುದು. ಉರಿ ಕಾಣಿಸಿಕೊಳ್ಳುವುದು.

* ಸೊಂಟದ ಭಾಗದಲ್ಲಿ ನೋವು ಕಾಣಿಸಿಕೊಳ್ಳುವುದು. ಮೂತ್ರ ಮಾಡಿದಾಗಲೂ ನೋವು ಉಂಟಾಗುವುದು.


ಪರಿಹಾರ ಮಾರ್ಗಗಳು

ಮೊದಲೇ ಹೇಳಿದ ಹಾಗೆ ಉತ್ತಮ ಜೀವನ ಶೈಲಿ, ಆಹಾರ ಪದ್ಧತಿ, ನಿಗದಿತ ವ್ಯಾಯಾಮಗಳಿಂದ ಕಿಡ್ನಿ ಸಮಸ್ಯೆಯನ್ನು ದೂರ ಮಾಡಿಕೊಳ್ಳಬಹುದು.

* ಆಹಾರ ಸೇವನೆಯಲ್ಲಿ ಮಿತಿ ಇಟ್ಟುಕೊಳ್ಳಬೇಕು.

* ದಿನದಲ್ಲಿ ೩೦ ನಿಮಿಷ ವ್ಯಾಯಾಮ ಕಡ್ಡಾಯ.

*ಸ್ಮೋಕಿಂಗ್‌ನಿಂದ ದೂರ ಇರುವುದು ಕಡ್ಡಾಯ.

* ಬಿಪಿ, ಶುಗರ್ ಇರುವವರು ನಿಯಮಿತವಾಗಿ ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾಗಬೇಕು.

* ಕಿಡ್ನಿ ಸಮಸ್ಯೆಯ ಲಕ್ಷಣಗಳು ಕಾಣಿಸಿಕೊಂಡ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ ಅಗತ್ಯ ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ.

andolanait

Recent Posts

ಕನ್ನಡಿಗರಿಗೆ ಉದ್ಯೋಗ ನೀಡದ ಸಾಹಿತ್ಯ ಸಮ್ಮೇಳನ: ವಾಟಲ್‌ ನಾಗರಾಜ್‌ ಆಕ್ರೋಶ

ಮೈಸೂರು: ಸಕ್ಕರೆ ನಾಡು ಮಂಡ್ಯದಲ್ಲಿ ಇಂದಿನಿಂದ (ಡಿ.20) 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಶುರುವಾಗಿದೆ. ಆದರೆ ಈ ಸಮ್ಮೇಳನವನ್ನು ಯಾವ…

9 hours ago

ಹಾಸ್ಯ ಸಾಹಿತ್ಯ ಆಧುನಿಕ ಬದುಕಿಗೆ ಔಷಧಿ: ಪ್ರೊ.ಕರಿಯಪ್ಪ

ಮಂಡ್ಯ: ಹಾಸ್ಯ ಸಾಹಿತ್ಯ ಆಧುನಿಕ ಬದುಕಿನಗೆ ಔಷಧಿಯಾಗಿದೆ ಎಂದು ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಹೇಳಿದರು. 87ಅಖಿಲ ಭಾರತ ಕನ್ನಡ ಸಾಹಿತ್ಯ…

9 hours ago

ಸಿ & ಡಿ ಲ್ಯಾಂಡ್ ಸಮಸ್ಯೆ ಪರಿಹಾರಕ್ಕೆ ಉನ್ನತ ಮಟ್ಟದ ಸಮಿತಿ: ಯು.ಟಿ. ಖಾದರ್

ಮಡಿಕೇರಿ: ಸಿ ಮತ್ತು ಡಿ ಭೂಮಿಗೆ ಸಂಬಂಧಿಸಿದಂತೆ ಕಂದಾಯ ಸಚಿವರು ಉನ್ನತ ಮಟ್ಟದ ಸಮಿತಿ ರಚನೆಗೆ ಮುಂದಾಗಿದ್ದು, ಸಮಸ್ಯೆ ಪರಿಹಾರವಾಗಲಿ…

10 hours ago

ಸಿ.ಟಿ ರವಿ ಕೊಲೆಗೆ ಪೊಲೀಸರ ಸಂಚು: ಅಶೋಕ್‌ ಆರೋಪ

ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಕ್ಷೇಪಾರ್ಹ ಪದ ಬಳಸಿದ್ದಾರೆ ಎಂಬ ಆರೋಪದ ಮೇಲೆ ಎಂಎಲ್‌ಸಿ ಸಿ.ಟಿ.ರವಿಯವರನ್ನು ಪೊಲೀಸರೇ ಕೊಲೆ…

10 hours ago

ವಿರಾಜಪೇಟೆ | ಬಿಟ್ಟಂಗಾಲದಲ್ಲಿ ಚಿರತೆ ಬೆಕ್ಕು ಸಾವು

ವಿರಾಜಪೇಟೆ: ಗೋಣಿಕೊಪ್ಪ-ಕೇರಳ ಹೆದ್ದಾರಿಯ ಬಿಟ್ಟಂಗಾಲ ಆಟೋ ನಿಲ್ದಾಣದ ಬಳಿ ಚಿರತೆ ಬೆಕ್ಕೊಂದು ಅಪಘಾತಕೀಡಾಗಿ ಸಾವನಪ್ಪಿದ ಘಟನೆ ಶುಕ್ರವಾರ ರಾತ್ರಿ 9…

10 hours ago

ಮೈಸೂರಿನ ಫಾರ್ಮ್‌ಹೌಸ್‌ನಲ್ಲಿ ನಟ ದರ್ಶನ್‌ ವಾಸ್ತವ್ಯ

ಮೈಸೂರು: ನಟ ದರ್ಶನ್‌ ಅವರು ಮೈಸೂರಿನ ತಿ.ನರಸೀಪುರ ಮುಖ್ಯರಸ್ತೆಯಲ್ಲಿರುವ ಕೆಂಪಯ್ಯನಹುಂಡಿ ಬಳಿಯ ತಮ್ಮ ಫಾರ್ಮ್‌ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಶುಕ್ರವಾರ ಇಲ್ಲಿಗ…

10 hours ago