ಮೂಲ : ಪೂಜ ಹರೀಶ್‌, ಮೈಸೂರು ಅನುವಾದ: ಎನ್.ನರಸಿಂಹಸ್ವಾಮಿ, ನಾಗಮಂಗಲ

ಜೀವನ ಒಂದು ಸೈಕಲ್ ಸವಾರಿಯಂತೆ, ಆಯ ತಪ್ಪದಿರಲು ಮುಂದೆ ಹೋಗಲೇಬೇಕು – ಅಲ್ಬರ್ಟ್ ಐನ್‌ಸ್ಟೀನ್‌

ಜೀವನ ಚಕ್ರದಲ್ಲಿ ಸಾಕಷ್ಟು ಸೈಕಲ್ ಹೊಡೆದು ಒಂದು ಹಂತಕ್ಕೆ ಬಂದಾಗ ನಿಜವಾದ ಸೈಕಲ್ ಹೊಡೆಯುವ ಹವ್ಯಾಸ ಶುರುವಾಯಿತು. ಮೊದ- ಮೊದಲು ಮೈಸೂರಿನ ಗಲ್ಲಿಗಳಿಂದ ಶುರುವಾದದ್ದು, ನಂತರ ಸಮಾನ ಮನಸ್ಕ ಹವ್ಯಾಸಿ ಸೈಕಲ್ ಪ್ರಿಯರ ಸಂಪರ್ಕದಿಂದ ಹೈ-ವೇ ವರೆಗೂ ಬಂದಿತು. ನಮ್ಮ ಹತ್ತು ಜನರ ಹವ್ಯಾಸಿ ತಂಡಕ್ಕೆ ‘ರಾಯಲ್ ರೈಡರ್ಸ್ ಮೈಸೂರ್ (ಆರ್‌ ಆ‌ ಎಮ್)” ಎಂದು ಹೆಸರಿಟ್ಟು ಹುರಿದುಂಬಿಸಿದವರು ನಮ್ಮ ಟೀಮಿನ ಕ್ಯಾಪ್ಟನ್ ವಿನಯಸಿಂಗ್.

ಆರೋಗ್ಯಭಾಗ್ಯವನು ಮನಕೆತನುಗೆಂತಂತೆ!

ಹಾರಯಿಸುವೊಡೆ ಹಲವು ಸರಳನೀತಿಗಳ!!

ಧಾರಯಿಸು ನೆನಸಿನಲಿ ನುಡಿಯಲ್ಲಿ ನಡತೆಯಲಿ!

ಪಾರಾಗು ಸುಳಿಯಿಂದ – ಮಂಕುತಿಮ್ಮ!!

ದೇಹಾರೋಗ್ಯವನ್ನು ಕಾಪಾಡಿಕೊಳ್ಳಲು ಕೆಲವು ಸರಳ ನೀತಿಗಳನ್ನು ಪಾಲಿಸುವಂತೆ, ಕೆಲವು ಸರಳ ಸೂತ್ರಗಳನ್ನು ಪಾಲಿಸುವುದರಿಂದ ಮನದ ಆರೋಗ್ಯವನ್ನೂ ಕಾಪಾಡಬಹುದೆನ್ನುವಂತೆ ಈ ಸೈಕಲ್ ಹವ್ಯಾಸವು ನಮ್ಮೆಲ್ಲರ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಮತ್ತಷ್ಟು ಚೆನ್ನಾಗಿಸಿತು.

ಮೈಸೂರಿನ ದೊಡ್ಡ ದೊಡ್ಡ ರಸ್ತೆಗಳು, ಸುತ್ತಮುತ್ತಲಿನ ಕಡಿದಾದ ಬೆಟ್ಟ – ಗುಡ್ಡಗಳು, ಅಲ್ಲಿನ ಪ್ರಾಕೃತಿಕ ಸೌಂದರ್ಯ ನಮ್ಮ ಈ ಪ್ರಯತ್ನಕ್ಕೆ ಉಘ ಎಂದು ಉತ್ತೇಜಿಸಿದವು. ದಿನ ಕಳೆದಂತೆ ಊಟ, ಮಡಿಕೇರಿ, ಗೋವಾ ಮುಂತಾದ ಕಡೆಗಳಿಗೆ ನಮ್ಮ ತಂಡದವರು ಸೈಕಲ್ ತುಳಿದೆವು. ಅಭ್ಯಾಸ ಹೆಚ್ಚಿದಂತೆ ಸೈಕಲ್ ಸವಾರಿಗೆ ನಮ್ಮ ದೇಹವೂ ಹೆಚ್ಚು ಸಹಿಷ್ಣುವಾಗಿ ಮತ್ತಷ್ಟು ಸಹಕರಿಸಲಾರಂಭಿಸಿತು. ಇದು ಕ್ರಿ.ಶ. 2021ರಲ್ಲಿ ಮನಾಲಿ – ಲೇಹ್ -ಕರ್ಡುಂಗಲವನ್ನು ಹಿಮಾಲಯದ ತಪ್ಪಲಿನಲ್ಲಿ 17,900 ಅಡಿಗಳ ಎತ್ತರದಲ್ಲಿ ಸೈಕಲ್ ಹೊಡೆಯುವ ಸಾಹಸಕ್ಕೆ ನಾಂದಿಯಾಯಿತು. ನಲವತ್ತು – ಐವತ್ತರ ಆಸುಪಾಸಿನ ವಯಸ್ಕರೆಲ್ಲ ಹದಿಹರಯದವರಾಗಿ ಮುಂದಿನ ಸಾಹಸಕ್ಕೆ ಎದುರು ನೋಡುತ್ತಿದ್ದೆವು.

ಇದರ ಮಧ್ಯದಲ್ಲೇ ನನಗೆ ಮಹಾರಾಷ್ಟ್ರದ ಕೆಲವರು ಜಗತ್ತಿನಲ್ಲೇ ಹೈಯೆಸ್ಟ್ ಮೊಟಾರಬಲ್ (ವಿಶ್ವದ ಎತ್ತರದ ಸುಸಜ್ಜಿತ ರಸ್ತೆಯಿರುವ) ಜಾಗ ಉಂಲಿಂಗ್ಲಾ ಗೆ ಸೈಕಲಿಂಗ್ ಮಾಡಿದ್ದರೆಂಬ ಒಂದು ಅಂಕಣ ಕಣ್ಣಿಗೆ ಬಿತ್ತು. ಹಿಮಾಲಯವು ಮತ್ತೊಮ್ಮೆ ರಾ…ರಾ.. ಎಂದು ಕರೆದ ಹಾಗಾಯಿತು. ನಮ್ಮ ತಂಡದ ಮುಂದೆ ಈ ಪ್ರಸ್ತಾಪ ಇಟ್ಟಾಗ ಒಕ್ಕೊರಲಿನ ಒಪ್ಪಿಗೆ ದೊರಕಿತು. ಜೊತೆಗೆ ಅದರೊಟ್ಟಿಗೆ ಬರುವ ಸವಾಲುಗಳ ಪಟ್ಟಿಯೂ ಆಯಿತು.

‘ಉಂಲಿಂಗ್ಲಾ’: ಉಂಲಿಂಗ್ಲಾ ಅಥವಾ ಉಂಬುಂಗ್ಲಾ ಎಂದು ಕರೆಯಲ್ಪಡುವ ಈ ಪ್ರದೇಶ ಭಾರತದ ಲಡಾಖ್‌ನಲ್ಲಿ ಕೊಯುಲಂಗ ಮತ್ತು ಸಿಂಧು ನದಿಯ ಮಧ್ಯದಲ್ಲಿರುವ ಪರ್ವತ ಶ್ರೇಣಿ. ಎವರೆಸ್ಟ್ ತಪ್ಪಲಿನ ಕ್ಯಾಂಪ್‌ ಗಿಂತ ಸ್ವಲ್ಪ ಎತ್ತರದಲ್ಲೇ ಅನ್ನಬಹುದಾದಷ್ಟು ಅಂದರೆ 19,024 ಅಡಿ ಎತ್ತರದಲ್ಲಿದೆ. ಇಲ್ಲಿ ಸೈಕಲಿಂಗ್ ಮಾಡುವುದು ಕೇವಲ ನಮ್ಮ ದೇಹದ ಸಹಿಷ್ಣುತೆ ಮತ್ತು ದೃಢತೆಯ ಪರೀಕ್ಷೆಯಾಗಿರಲಿಲ್ಲ. ಜೊತೆಗೆ ಬಿಟ್ಟೂ ಬಿಡದ ಸೂರ್ಯ, ಗಾಳಿಯ ಒತ್ತಡದ ಏರುಪೇರು, ಸತತವಾದ ಕಡಿದಾದ ಪ್ರದೇಶ, ಡಾಂಬರಿಲ್ಲದ ಕಚ್ಚಾ ರಸ್ತೆಗಳು ಸಹ ನಮಗೆ ಸವಾಲಾಗಿದ್ದವು. ಇದನ್ನೆಲ್ಲಾ ಮನಗಂಡು ನಮ್ಮ ಟೀಮಿನ ಕಪ್ತಾನ ನಮ್ಮನ್ನು ನಾಲ್ಕು ತಿಂಗಳ ಕಠಿಣ ತರಬೇತಿಗೆ ಒಡ್ಡಿದರು. ಜೀವನದ ಬೇರೆ ಬೇರೆ ಸ್ತರದಿಂದ ಬಂದಿದ್ದ ತಂಡದಲ್ಲಿ ಡಾಕ್ಟರು, ವ್ಯಾಪಾರಸ್ಥರು, ಮಹಿಳೆಯರು, ವರ್ತಕರು, ಪುರಶ್ರೇಷ್ಠಿಗಳೂ ಇದ್ದುದರಿಂದ ಎಲ್ಲರಿಗೂ ಆಗತಕ್ಕಂತಹ ಸಮಯ ಹೊಂದಿಸುವುದು ಕಠಿಣವಾದರೂ ಎಲ್ಲರ ಗಮ್ಯ.

ಹಿಮಾಲಯದಷ್ಟೆತ್ತರದಲ್ಲಿದ್ದದ್ದು ಯಾವುದೇ ಸಮಸ್ಯೆಯಾಗದೆ ಬೆಳ್ಳಂಬೆಳಿಗ್ಗೆ 4.30 ರಿಂದ ತರಬೇತಿಗೆ ಸೇರುತ್ತಿದ್ದೆವು. ಚಾಮುಂಡಿಬೆಟ್ಟವನ್ನು ತಿರುತಿರುಗಿ ಹತ್ತಿಳಿದು, ನಂದಿಬೆಟ್ಟ, ಊಟಿ ಎಂದು ನಮ್ಮ ದಿನಚರಿಯನ್ನು ಬಿಗಿಗೊಳಿಸಿದೆವು. ಎಲ್ಲರ ಪ್ರಯತ್ನಗಳು ಅಮೋಘವಾಗಿ ನಡೆಯುತ್ತಿದ್ದರೂ ಸಹ ಮನದ ಮೂಲೆಯಲ್ಲಿ ಅಳುಕೊಂದಿತ್ತು. ಜಗತ್ತಿನ ಅತ್ಯುತ್ತಮ ಸೈಕಲಿಂಗ್ ರಸ್ತೆಗಳು ನಾವು ಇನ್ನೂ ಸವೆಯದ್ದೇ ಆಗಿರುತ್ತದೆಯಂತೆ.!

ಇಷ್ಟೆಲ್ಲಾ ತಯಾರಿಯೊಂದಿಗೆ, ಹನುಮನ ಸಾಗರೋಲ್ಲಂಘನದ ಉತ್ಸಾಹ ದಿಂದ ಅವನಷ್ಟೇ ಅಳುಕಿನಿಂದ ನಾವುಗಳು ಸಹ ಹೊರಟೆವು. ಸುಮಾರು 11,500 ಅಡಿಗಳೆತ್ತರದಲ್ಲಿ ಬೀಡುಬಿಟ್ಟೆವು. ಅಲ್ಲಿಯ ಹವಾಮಾನಕ್ಕೆ, ಉಸಿರಾಟಕ್ಕೆ ಮೈ – ಮನಗಳು ಒಗ್ಗಲು ಅಲ್ಲೇ ಮೂರು ದಿನ ಕಳೆದೆವು. ಎಲ್ಲರ ಮನದಲ್ಲೂ ದುಗುಡ, ಸಂತಸದ ಜೊತೆಗೆ ಈ ಮುಂಚೆ 2021ರ ಮನಾಲಿ ಪರ್ವತ ಶ್ರೇಣಿಗಳ ಸೈಕ್ಲಿಂಗ್ ಅನುಭವ ಹೃದಯವನ್ನು ಬೆಚ್ಚಗಿಟ್ಟರೂ ಸಹ ಹೊರಗಿನ ವಾತಾವರಣದ ಚಳಿ ದೇಹವನ್ನಾವರಿಸಿತ್ತು.

ನಮ್ಮ ಸೈಕ್ಲಿಂಗ್‌ನ ಮೊದಲ ದಿನ ಆಗಸ್ಟ್ 19, ಲೇಹ್ – ಹೈಮಿಯ ರಸ್ತೆಯಲ್ಲಿ 82 ಕಿ.ಮೀ.ಯನ್ನು ಕ್ರಮಿಸಿದೆವು. ಅಂತ್ಯ ಕಾಣದ ಏರಿಳಿತದ ರಸ್ತೆಗಳು, ಹಸಿರು ಸೀರೆ ಉಟ್ಟ ಭೂಮಿ ಒಂದು ಕಡೆಯಾದರೆ ಮರಳು ದಿಬ್ಬಣ ಮತ್ತೊಂದೆಡೆ. ದೂರದಲ್ಲಿ ಕಾಣುವ ಪರ್ವತದ ಸಾಲು, ನೀಲಾಕಾಶ, ಶಾಂತವಾಗಿ ನಮ್ಮ ಪಕ್ಕದಲ್ಲೇ ತಂಡದ ಸದಸ್ಯೆಯಾಗಿ ಹರಿಯುತ್ತಿದ್ದ ಸಿಂಧುನದಿ, ಪ್ರತಿ ಏರಿನಲ್ಲೂ ಕಾಲುಗಳು ಪದ ಹಾಡಲಾರಂಭಿಸಿದರೂ ಪ್ರಕೃತಿಯ ಮಡಿಲು, ಒಂದು ಸಣ್ಣ ತಣ್ಣನೆಯ ಗಾಳಿ ನೋವನ್ನು ಹಾಗೇ ಮರೆಸಿ ಮುಂದೆ ಕಾಣುತ್ತಿದ್ದ ಸೌಂದರ್ಯದೆಡೆಗೆ ನಮ್ಮನ್ನು ನೂಕುತ್ತಿದ್ದವು.

ನಂತರದ ದಿನಗಳಲ್ಲಿ ನಾವು ಹೈಮಿಯ- ಚುಮತಂಗ್, ಚುಮತಂಗ್ -ನ್ಯೂಮ್, ನ್ಯೂಮ್- ಹಾನೆ, ಹಾಸ್ಟೆ- ಚುಸುಂಲೆ, ಚುಸುಂಲೆ- ಉಂಲಿಂಗ್ಲಾವರೆಗೂ 340 ಕಿ.ಮೀ. ಕ್ರಮಿಸಿ ತಲುಪಿದೆವು. ಹೊಳೆಯುವ ಸೂರ್ಯ ಭೂಮಿಗೆ ಬಂಗಾರದ ಹೊದಿಕೆ ಹೊಡೆದಿದ್ದು, ತಣ್ಣನೆಯ ಗಾಳಿ ಬಹುಶಃ ನಮ್ಮ ದಾರಿಯನ್ನು ಸುಗಮಗೊಳಿಸಿತ್ತು. ಹ್ಯಾಪಿನೆಸ್ ಈಸ್ ಎಲಾಂಗ್‌ಬೈಕೈಡ್…

ನಮ್ಮ ಈ ಪರ್ಯಟನದಲ್ಲಿ ದಾರಿಯಲ್ಲಿ ಸಿಕ್ಕಹಳ್ಳಿ – ಸಣ್ಣ ಊರುಗಳಲ್ಲಿ ಉಳಿಯುತ್ತಿದ್ದೆವು. ಈ ಮಾರ್ಗವು ವಿವಿಧ ಪ್ರಾಣಿ – ಪಕ್ಷಿಗಳ ತಾಣ. ಅಲ್ಲಿನ ಜನರು, ಅವರ ಆತಿಥ್ಯ, ಆಚಾರ – ವಿಚಾರಗಳು ನಮ್ಮನ್ನು ಮಂತ್ರ ಮುಗ್ಧರ ನ್ನಾಗಿಸಿದವು. ಸಮಯವು ಕಳೆದದ್ದೇ ತಿಳಿಯಲಿಲ್ಲ. ದಾರಿಯುದ್ದಕ್ಕೂ ನಾವು, ಟಿಬೇಟಿಯನ್ ಕಾಡುಗತ್ತೆ (ಲಡಾಕಿ ಭಾಷೆಯಲ್ಲಿ ಕಿಯಾಂಗ್) ಕಂಡೆವು. ಇದು ಆಫ್ರಿಕಾ ಮತ್ತು ಏಷ್ಯಾ ಕತ್ತೆಗಳಲ್ಲಿ ದೊಡ್ಡದಾಗಿ ಕಾಣುವ ತಳಿ, ಜೊತೆಗೆ ಗಂಡು – ಹೆಣ್ಣುಗಳಲ್ಲಿ ಗುರುತಿಸಲಾಗದಷ್ಟು ಸಾಮ್ಯತೆ. ಟಿಬೆಟಿಯನ್ ತೋಳಗಳು, ಹಿಮಾಲಯದ ಜಿಂಕೆಗಳು, ನೀಲಿಕುರಿ, ದೊಡ್ಡ ಸಂಖ್ಯೆಯಲ್ಲಿ ಮರ್ಮೋಟ್ ಎಂದು ಕರೆಯಲ್ಪಡುವ ದೈತ್ಯ ಅಳಿಲುಗಳು ಇತ್ಯಾದಿ ಕಂಡೆವು. ನಾವು ಕ್ರಮಿಸಿದ ಹಾದಿ ಹಿಮಚಿರತೆಗಳಿಗೆ ಪ್ರಸಿದ್ದ.

11,562 ಅಡಿಗಳಿಂದ19,034 ಅಡಿಗಳವರೆಗಿನ ಎತ್ತರವನ್ನು ಕ್ರಮಿಸುವಾಗನಾವು ಕೆಲವು ಮಿಲಿಟರಿ ಕ್ಯಾಂಪ್‌ಗಳನ್ನು ಹಾದುಹೋದೆವು. ಆ ಚಳಿಯಲ್ಲಿ, ವಾತಾವರಣದಲ್ಲಿ ದೇಶ ಸೇವೆಗೆ ತಮ್ಮನ್ನೇ ಮುಡಿಪಾಗಿಟ್ಟಿರುವ ಸೈನಿಕರನ್ನು ಕಂಡು ಹೆಮ್ಮೆಯಿಂದ ಮನತುಂಬಿ ಬಂತು. ಪರ್ವತದ ತುದಿಯಲ್ಲಿ ಬಾನೆತ್ತರಕ್ಕೆ ಹಾರುತ್ತಿದ್ದ ನಮ್ಮ ಬಾವುಟವನ್ನು ಕಂಡು ರೋಮಾಂಚನಗೊಂಡೆವು. ಮೈಸೂರಿನ ವುಡ್‌ ಲ್ಯಾಂಡ್ ಹೋಟೆಲ್ ಮಾಲೀಕರಾದ ಕೃಷ್ಣರಾವ್ ಅವರು ಮೊದಲು ಶುರು ಮಾಡಿದ ಮಸಾಲೆದೋಸೆಯನ್ನು ಸುಮಾರು ಹದಿನೈದು ಸಾವಿರದಡಿ ಎತ್ತರದಲ್ಲಿ ತಿಂದದ್ದು ಅದರ ಸವಿಯನ್ನು ಮತ್ತೂ ಹೆಚ್ಚಿಸಿತು. ಭಾರತದಲ್ಲಿ ಎರಡನೇ ಎತ್ತರದ ಪ್ರದೇಶದಲ್ಲಿರುವ ಖಗೋಳ ವೀಕ್ಷಣಾಲಯವನ್ನು ‘ಹಾಲೆ ಯಲ್ಲಿರುವ ಮೌಂಟ್ ಸರಸ್ವತಿಯಲ್ಲಿ ಕಂಡೆವು. ನಮ್ಮ ಸೈಕ್ಲಿಂಗ್ ಪರ್ಯಟನ ಕಡೆಯ ಎರಡು ದಿನಗಳೂ ಸವಾಲಿನದ್ದಾಗಿತ್ತು. ಸುಮಾರು 45 ಕಿ.ಮೀ. ಮಣ್ಣು ಮತ್ತು ಕಲ್ಲಿನ ದಾರಿಯಲ್ಲಿ ಸಿಗುವ ಸಣ್ಣ ಅಂತರದಲ್ಲೇ ಸೈಕಲ್ ಓಡಿಸುವುದು, ಮುಂದಿನ ಹಾದಿಯ ಮೇಲೆ ಕಣ್ಣಿದ್ದರೂ ಸುತ್ತ – ಮುತ್ತಲಿನ ಪ್ರಕೃತಿಯನ್ನೂ ಗಮನಿಸುವುದು ರೋಮಾಂಚನಕಾರಿಯಾಗಿತ್ತು. 17,422 ಅಡಿಗಳಲ್ಲಿರುವ ನುರ್ಬುಲಾ ಟಾಪ್ ಗೆ ತಲುಪಲು ಸ್ವಲ್ಪ ಹೆಚ್ಚೇ ಸಮಯ ತೆಗೆದುಕೊಂಡೆವು. ಇದು ಜನಸಾಮಾನ್ಯರಿಂದ ದೂರವಿರುವ ಸ್ಥಳ. ಎತ್ತರದ ಸ್ಥಳ ಪರಿಣಾಮಗಳು ದೇಹದ ಮೇಲಾದರೂ ಒಬ್ಬರಿಗೊಬ್ಬರು ನೆರವಾಗಿ ಮುಂದುವರಿದೆವು.

ನಮ್ಮ ಪರ್ಯಟನದ ಕಡೆಯ ದಿನ 27 ಕಿ.ಮೀ. ಕ್ರಮಿಸಿ ಚುಸುಂಲೆಯಿಂದ ಉಂಲಿಂಗ್ಲಾಗೆ ಹೊರಟೆವು. ಎಂದಿನಂತೆ ಸ್ವಲ್ಪ ಹೆಚ್ಚೇ ದೇವರನ್ನು ಪ್ರಾರ್ಥಿಸಿ ಹೊರಟೆವು. ಕಡೆಯ ಹತ್ತು ಕಿ.ಮೀ.ಗಳಲ್ಲಿ ಆಮ್ಲಜನಕದ ಒತ್ತಡ ಅತಿಕಡಿಮೆಯಾಯಿತು. ರಸ್ತೆಗಳ ಇಳಿಜಾರು 15-20% ಹೆಚ್ಚಾಯಿತು. ಕಡಿಮೆ ಗಾಳಿ, ಹೆಚ್ಚಿದ ಸೂರ್ಯನ ಆರ್ಭಟ ನಮ್ಮ ಅನುಭವಿ ತಂಡಕ್ಕೂ ಸಾಕಷ್ಟು ಬೆವರಿಳಿಸಿತು. ದಾರಿಯಲ್ಲಿ ಕಂಡ ಮತ್ತೊಂದು ಬೈಕರ್‌ಗಳ ದೊಡ್ಡ ತಂಡ ನಮ್ಮನ್ನು ಚೀರಿ ಹುರಿದುಂಬಿಸಿತು. ನಮ್ಮೆಲ್ಲರ ಬಹುದಿನಗಳ ತಪಸ್ಸು ಫಲಿಸಿ, ಕನಸುನನಸಾಯಿತು. ನಮ್ಮ ಪೂರ್ವನಿರ್ಧರಿತ ಗಮ್ಯ ಸೇರಿದಾಗ ಎಲ್ಲರಲ್ಲೂ ತಡೆಯಲಾರದಷ್ಟು ಸಂತಸ ಒಬ್ಬರನ್ನೊಬ್ಬರು ಆಲಂಗಿಸಿ, ಕೈಕುಲುಕಿ ಸಂತಸವಿನಿಮಯ ಮಾಡಿಕೊಂಡೆವು. ಎಲ್ಲರ ಕಣ್ಣಂಚಿನಲ್ಲಿ ಆನಂದಬಾಷ್ಪ! ಇದು ನಮ್ಮ ಜೀವನದ ಅಮೂಲ್ಯ ಕ್ಷಣಗಳು.

ಪ್ರಪಂಚದ ಎತ್ತರದ ಮೋಟಾರಬಲ್ ಪರ್ವತವನ್ನು ಸೈಕಲ್‌ನಲ್ಲೇರಿದ ಮೈಸೂರಿನ ಮೊದಲ ತಂಡ ನಮ್ಮದು!!!

ನಮ್ಮ ಈ ಪರ್ಯಟನೆಯ ದಾರಿಯಲ್ಲಿ ಸಿಕ್ಕಹಳ್ಳಿ – ಸಣ್ಣ ಊರುಗಳಲ್ಲಿ ಉಳಿಯುತ್ತಿದ್ದೆವು. ಈ ಮಾರ್ಗವು ವಿವಿಧ ಪ್ರಾಣಿ – ಪಕ್ಷಿಗಳ ತಾಣ. ಅಲ್ಲಿನ ಜನರು, ಅವರ ಆತಿಥ್ಯ, ಆಚಾರ – ವಿಚಾರಗಳು ನಮ್ಮನ್ನು ಮಂತ್ರ ಮುಗ್ಧರನ್ನಾಗಿಸಿದವು. ಸಮಯವು ಕಳೆದದ್ದೇ ತಿಳಿಯಲಿಲ್ಲ. ದಾರಿಯುದ್ದಕ್ಕೂ ನಾವು, ಟಿಬೇಟಿಯನ್ ಕಾಡುಗತ್ತೆ (ಲಡಾಕಿ ಭಾಷೆಯಲ್ಲಿ ಕಿಯಾಂಗ್) ಕಂಡೆವು. ಇದು ಆಫ್ರಿಕಾ ಮತ್ತು ಏಷ್ಯಾ ಕತ್ತೆಗಳಲ್ಲಿ ದೊಡ್ಡದಾಗಿ ಕಾಣುವ ತಳಿ, ಜೊತೆಗೆ ಗಂಡು – ಹೆಣ್ಣುಗಳಲ್ಲಿ ಗುರುತಿಸಲಾಗದಷ್ಟು ಸಾಮ್ಯತೆ. ಟಿಬೆಟಿಯನ್ ತೋಳಗಳು, ಹಿಮಾಲಯದ ಜಿಂಕೆಗಳು, ನೀಲಿಕುರಿ, ದೊಡ್ಡ ಸಂಖ್ಯೆಯಲ್ಲಿ ಮರ್ಮೋಟ್ ಎಂದು ಕರೆಯಲ್ಪಡುವ ದೈತ್ಯ ಅಳಿಲುಗಳು ಇತ್ಯಾದಿ ಕಂಡೆವು. ನಾವು ಕ್ರಮಿಸಿದ ಹಾದಿ ಹಿಮಚಿರತೆಗಳಿಗೆ ಪ್ರಸಿದ್ದ.

 

 

ಆಂದೋಲನ ಡೆಸ್ಕ್

Recent Posts

ಮೈಸೂರಿನಲ್ಲಿ ಮಾಗಿ ಉತ್ಸವ: ಸಂಗೀತದ ಹೊನಲು ಹರಿಸಿದ ವಿಜಯ್‌ ಪ್ರಕಾಶ್‌

ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್‌ ಪ್ರಕಾಶ್‌ ಅವರು…

2 hours ago

ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ

ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…

2 hours ago

ರೈತರಿಗೆ ಮತ್ತೊಂದು ಸಂಕಷ್ಟ: ಈ ಬಾರಿ ಮಾವಿನ ಇಳುವರಿ ಭಾರೀ ಇಳಿಕೆ

ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…

3 hours ago

ಬಂಡೀಪುರದಲ್ಲಿ ಮತ್ತೊಂದು ಕಾಡಾನೆ ಸಾವು

ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…

3 hours ago

ಪ್ರಮುಖ ಆಕರ್ಷಣೀಯ ಕೇಂದ್ರವಾಗಿ ಹೊರಹೊಮ್ಮಿದ ಅಯೋಧ್ಯೆ ರಾಮಮಂದಿರ

ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್‌ ಒನ್‌ ಪಟ್ಟ ಪಡೆದಿದೆ. ಈ ಮೂಲಕ ಈಗ…

3 hours ago

ಪ್ರವಾಸಿಗರಿಗೆ ಬಿಗ್‌ ಶಾಕ್: ನಂದಿಗಿರಿಧಾಮದಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್‌

ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್‌ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್‌ ಶಾಕ್‌ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…

3 hours ago