ಅಂಕಣಗಳು

ಬಂಡೀಪುರ ಕೇವಲ ಅರಣ್ಯವಲ್ಲ ; ಜೀವ ವೈವಿಧ್ಯದ ಜೀವಾಳ

ಅಭಿಷೇಕ್ ಪಾಳ್ಯಗಾರ್, ಗುಂಡ್ಲುಪೇಟೆ

ಬಂಡೀಪುರದ ಜಂಗಲ್ ಎಂದರೆ ಕರ್ನಾಟಕದ ಹೆಮ್ಮೆ. ಇದು ನಾಡಿನ ನೈಸರ್ಗಿಕ ವೈಭವದ ಪ್ರತೀಕವಾಗಿದೆ. ಮನುಷ್ಯನ ಸ್ವಾರ್ಥ ಹಾಗೂ ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ನಿರಂತರ ಅರಣ್ಯ ನಾಶದಿಂದ ಈ ಅಪರೂಪದ ಅರಣ್ಯ ವ್ಯಾಪ್ತಿಗೆ ಅಪಾಯ ಎದುರಾಗುತ್ತಿದೆ. ಈ ಹಿನ್ನೆಲೆಯಲ್ಲಿ ‘ಬಂಡೀಪುರ ಉಳಿಸಿ’ ಅಭಿಯಾನ ಅತ್ಯಂತ ಮಹತ್ವಪೂರ್ಣವಾಗುತ್ತಿದೆ.

ಬಂಡೀಪುರದ ಪರಿಚಯ: ಬಂಡೀಪುರ ರಾಷ್ಟ್ರೀಯ ಉದ್ಯಾನವನವು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿದ್ದು, ಸುಮಾರು ೮೭೪ ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿದೆ. ಇದು ನೀಲಗಿರಿ ಜೈವಿಕ ವಲಯದ ಭಾಗವಾಗಿದ್ದು, ನೈಋತ್ಯ ಭಾರತದಲ್ಲಿ ಅತ್ಯಂತ ಪ್ರಮುಖವಾದ ಜೀವ ವೈವಿಧ್ಯ ಹಬ್ಬಿರುವ ಸ್ಥಳವಾಗಿದೆ. ಈ ಉದ್ಯಾನವನವು ಕಾವೇರಿ ನದಿಯ ಉಪನದಿಗಳಿಂದ ಪೋಷಿತವಾಗಿದೆ. ೧೯೭೪ರಲ್ಲಿ ಭಾರತ ಸರ್ಕಾರದ ‘ಪ್ರಾಜೆಕ್ಟ್ ಟೈಗರ್’ ಯೋಜನೆಯಡಿಯಲ್ಲಿ ಈ ಉದ್ಯಾನವನವನ್ನು ಹುಲಿ ಸಂರಕ್ಷಿತ ಪ್ರದೇಶವಾಗಿ ಘೋಷಿಸಲಾಗಿದೆ.

ಜೀವ ವೈವಿಧ್ಯ – ಪ್ರಕೃತಿಯ ಶ್ರೀಮಂತಿಕೆ: ಬಂಡೀಪುರದ ಅರಣ್ಯದಲ್ಲಿ ಹಲವಾರು ಮೃಗಜಾತಿಗಳು, ಪಕ್ಷಿಗಳು ಮತ್ತು ಸಸ್ಯಗಳು ಆಶ್ರಯ ಪಡೆದಿವೆ. ಇಲ್ಲಿ ಹುಲಿಗಳು, ಚಿರತೆಗಳು, ಆನೆಗಳು, ಜಿಂಕೆಗಳು, ಕಾಡೆಮ್ಮೆಗಳು, ಕರಡಿ ಮೊದಲಾದ ಮೃಗಜಾತಿಗಳು ಕಾಣಸಿಗುತ್ತವೆ. ಅಲ್ಲದೆ, ಇಲ್ಲಿನ ಅರಣ್ಯದಲ್ಲಿ ನೂರಾರು ಪ್ರಕಾರದ ಔಷಽಯ ಸಸ್ಯಗಳು ಕಂಡುಬರುತ್ತವೆ. ಸುಮಾರು ೩೦೦ಕ್ಕೂ ಹೆಚ್ಚು ಜಾತಿಯ ಪಕ್ಷಿಗಳು ಇಲ್ಲಿ ವಾಸಿಸುತ್ತವೆ.

ಇತ್ತೀಚಿನ ವರ್ಷಗಳಲ್ಲಿ ಮಾನವ ಚಟುವಟಿಕೆ ಬಂಡೀಪುರದ ಪರಿಸರಕ್ಕೆ ದೊಡ್ಡ ಹಾನಿಯನ್ನುಂಟು ಮಾಡಿದೆ. ಅರಣ್ಯ ನಾಶ, ಅಕ್ರಮ ಮರಳುಗಾರಿಕೆ, ಹೂ ತೋಟಗಾರಿಕೆ ವಿಸ್ತರಣೆ, ಪ್ರವಾಸೋದ್ಯಮದ ಅತಿದೊಡ್ಡಾಟ, ರಸ್ತೆ ನಿರ್ಮಾಣ ಇವು ಅರಣ್ಯದಲ್ಲಿಯೇ ಹವಾಮಾನ ಬದಲಾವಣೆಗೆ ಕಾರಣವಾಗಿದೆ.

ರಸ್ತೆ ಯೋಜನೆಗಳು: ರಾಷ್ಟ್ರೀಯ ಹೆದ್ದಾರಿ ೭೬೬ ಬಂಡೀಪುರದ ಮೂಲಕ ಹೋಗುತ್ತದೆ. ವಾಹನ ಸಂಚಾರದಿಂದ ಜಾನುವಾರುಗಳಿಗೆ ಅಪಾಯ ಎದುರಾಗಿದ್ದು, ಅರಣ್ಯದಲ್ಲಿ ಶಬ್ದ ಮಾಲಿನ್ಯ ಅರಣ್ಯ ಜೀವಿಗಳ ಸಾವಿಗೆ ಕಾರಣವಾಗುತ್ತಿದೆ.

ವನ್ಯಜೀವಿ ಬೇಟೆ: ಕೆಲವರು ಹಣಕ್ಕಾಗಿ ಹುಲಿ, ಚಿರತೆ, ಜಿಂಕೆ ಇತ್ಯಾದಿ ಮೃಗಗಳನ್ನು ಬೇಟೆ ಆಡುತ್ತಿದ್ದಾರೆ.

ಅತಿಯಾದ ಪ್ರವಾಸೋದ್ಯಮ: ನಿರ್ವಹಣೆಯ ಕೊರತೆಯಿಂದ ಪ್ರವಾಸೋದ್ಯಮ ಅರಣ್ಯ ಪರಿಸರದ ಮೇಲೆ ಒತ್ತಡವನ್ನುಂಟು ಮಾಡುತ್ತಿದೆ. ಬಂಡೀಪುರ ಉಳಿಸುವ ಅಗತ್ಯ: ಬಂಡೀಪುರ ಉಳಿಸುವುದರಿಂದಾಗಿ ಭಾರತೀಯ ಪರಿಸರ ವ್ಯವಸ್ಥೆಯ ಸಮತೋಲನ ಕಾಪಾಡುವುದರಲ್ಲಿ ಸಹ ನೆರವಾಗುತ್ತದೆ. ಇಲ್ಲಿನ ಅರಣ್ಯವು ನಾಡಿನ ಉಷ್ಣಮಾನ ಕಡಿಮೆ ಮಾಡುವುದಲ್ಲದೇ, ನದಿಗಳ ಉಗಮಸ್ಥಾನವಾಗಿದೆ.

‘ಬಂಡೀಪುರ ಉಳಿಸಿ’ ಅಭಿಯಾನ: ಸಂಸ್ಥೆಗಳು, ಪರಿಸರ ಕಾರ್ಯಕರ್ತರು ಮತ್ತು ಸ್ಥಳೀಯ ಜನತೆ ಸೇರಿಕೊಂಡು ಬಂಡೀಪುರ ಉಳಿಸಲು ಹಲವಾರು ಹೋರಾಟಗಳನ್ನು ನಡೆಸುತ್ತಿದ್ದಾರೆ. ಇದೀಗ ಬಂಡೀಪುರ ರಸ್ತೆಯಲ್ಲಿ ರಾತ್ರಿ ಸಂಚಾರ ನಿಷೇಧ ರದ್ದತಿ ವಿರೋಧಿಸಿ ಪ್ರತಿಭಟನೆಗಳು ಹೆಚ್ಚಾಗುತ್ತಿದ್ದು, ರಾತ್ರಿ ಸಂಚಾರ ನಿಷೇಧವನ್ನು ಸಡಿಲಿಸುವ ಅಥವಾ ನಿಷೇಧದಿಂದ ವಿನಾಯಿತಿ ಪಡೆದ ಕೇರಳ ರಾಜ್ಯ ಬಸ್‌ಗಳ ಸಂಖ್ಯೆಯನ್ನು ಹೆಚ್ಚಿಸುವ ಯಾವುದೇ ಕ್ರಮವನ್ನು ವಿರೋಧಿಸಲು ಕರ್ನಾಟಕದ ವನ್ಯಜೀವಿ ಕಾರ್ಯಕರ್ತರು ಮತ್ತು ಸ್ಥಳೀಯರು ಮೂಲೆಹೊಳೆ ಅರಣ್ಯ ಚೆಕ್‌ಪೋಸ್ಟ್‌ನಲ್ಲಿ ‘ಬಂಡೀಪುರವನ್ನು ಉಳಿಸಿ – ರಾತ್ರಿ ಸಂಚಾರ ಬೇಡ’ ಎಂಬ ಅಭಿಯಾನವನ್ನು ಪ್ರಾರಂಭಿಸಿದ್ದಾರೆ.

ಬಂಡೀಪುರ ಹುಲಿ ಮೀಸಲು ಪ್ರದೇಶದ ಮೂಲಕ ರಾತ್ರಿ ಸಂಚಾರಕ್ಕೆ ರಾಷ್ಟ್ರೀಯ ಹೆದ್ದಾರಿ ೭೬೬ಅನ್ನು ತೆರೆಯುವ ಬಗ್ಗೆ ಬಿಸಿ ಚರ್ಚೆ ನಡೆಯುತ್ತಿದೆ.ಆದರೆ ಬಂಡೀಪುರವು ಹುಲಿಗಳಿಗೆ ಅತಿಕ್ರಮಣ ರಹಿತ ಪ್ರದೇಶ ಮತ್ತ ನಿರ್ಣಾಯಕ ಆವಾಸಸ್ಥಾನವಾಗಿರುವುದರಿಂದ ಸುಪ್ರೀಂ ಕೋರ್ಟ್ ರಾತ್ರಿ ೯ ರಿಂದ ಬೆಳಿಗ್ಗೆ ೬ರವರೆಗೆ ವಾಹನಗಳ ಸಂಚಾರವನ್ನು ನಿಷೇಽಸಿದೆ. ಆದರೆ ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ತಮ್ಮ ಮತದಾರರಿಗೆ ನಿಷೇಧವನ್ನು ರದ್ದುಗೊಳಿಸುವುದಾಗಿ ಭರವಸೆ ನೀಡಿದ ನಂತರ, ಕರ್ನಾಟಕದ ಆಡಳಿತಾರೂಢ ಕಾಂಗ್ರೆಸ್ ನಿಷೇಧವನ್ನು ತೆಗೆದುಹಾಕುವ ಒತ್ತಡದಲ್ಲಿದೆ. ಆದಾಗ್ಯೂ, ೨೦೦೯ರಲ್ಲಿ ಸುಪ್ರೀಂ ಕೋರ್ಟ್ ಈ ನಿರ್ಬಂಧವನ್ನು ವಿಧಿಸಿತು.

ಈ ಮಾರ್ಗದ ಮೂಲಕ ಕಳ್ಳಸಾಗಣೆ ವ್ಯಾಪಕವಾಗಿ ನಡೆಯುತ್ತಿದ್ದು, ‘ಕರ್ನಾಟಕ ಸರ್ಕಾರವು ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯಬಾರದು ಎಂದು ನಾವು ಒತ್ತಾಯಿಸುತ್ತೇವೆ. ಇದು ಕಳ್ಳಸಾಗಣೆ ಮಾರ್ಗವಾಗಿದೆ ಎಂದು ಪರಿಗಣಿಸಿ ೨೦೦೯ರಲ್ಲಿ ಹೈಕೋರ್ಟ್ ಸಂಚಾರವನ್ನು ನಿಷೇಧಿಸಿತ್ತು. ಅಕ್ಟೋಬರ್ ೨೦೧೮ರಲ್ಲಿ, ರಾತ್ರಿ ಸಂಚಾರ ನಿಷೇಧವನ್ನು ವಿರೋಧಿಸಿ ಆ ಸಮಯದಲ್ಲಿ ಅನೇಕರು ಪ್ರತಿಭಟಿಸಿದ್ದರು. ಈಗ ಹೆಚ್ಚು ವಿದ್ಯಾರ್ಥಿಗಳು ಮತ್ತು ಯುವಕರು ಈ ಅಭಿಯಾನಕ್ಕೆ ಬೆಂಬಲ ನೀಡುತ್ತಿರುವುದು ಉತ್ಸಾಹದಾಯಕ ಸಂಗತಿ. ಬಂಡೀಪುರ ಉಳಿಸುವ ಕಾರ್ಯವು ಕೇವಲ ಅರಣ್ಯ ಇಲಾಖೆಯ ಕೆಲಸವಲ್ಲ. ಪ್ರತಿಯೊಬ್ಬ ನಾಗರಿಕನೂ ಈ ಜವಾಬ್ದಾರಿಯನ್ನು ಹೊರಬೇಕು.

ಬಂಡೀಪುರ ಎಂದರೆ ಕೇವಲ ಒಂದು ಅರಣ್ಯವಲ್ಲ. ಅದು ಜೀವವೈವಿಧ್ಯದ ಜೀವಾಳ. ನಾವು ಇಂದೇ ಜಾಗೃತರಾಗಿ ಹೆಜ್ಜೆ ಇಟ್ಟರೆ ನಾಳೆ ನಮ್ಮ ಮಕ್ಕಳು ಈ ನೈಸರ್ಗಿಕ ಸೌಂದರ್ಯವನ್ನು ಅನುಭವಿಸಬಹುದು. ಬಂಡೀಪುರ ಉಳಿಸುವುದರಿಂದ ಮಾನವತೆಗೆ ಮಾತ್ರವಲ್ಲ, ನೂರಾರು ಪ್ರಾಣಿಗಳಿಗೂ ಬದುಕು ನೀಡಿದಂತಾಗುತ್ತದೆ.

ಆಂದೋಲನ ಡೆಸ್ಕ್

Recent Posts

ಮುತ್ತತ್ತಿಯಲ್ಲಿ ಘೋರ ದುರಂತ: ಒಂದೇ ಕುಟುಂಬದ ನಾಲ್ವರು ಮಹಿಳೆಯರು ಸೇರಿ ಐವರು ನೀರುಪಾಲು

ಹಲಗೂರು: ಸಮೀಪದ ಪ್ರವಾಸಿ ತಾಣವಾದ ಮುತ್ತತ್ತಿಯ ಕಾವೇರಿ ನದಿಯಲ್ಲಿ ಸೆಲ್ಫಿ ತೆಗೆಯುವ ವೇಳೆ ಕಾಲು ಜಾರಿ ನೀರಿನ ಪ್ರಬಲ ಸೆಳೆತಕ್ಕೆ…

6 hours ago

ಚಾಮರಾಜನಗರ ನ್ಯಾಯಾಲಯಕ್ಕೆ ಹುಸಿ ಬಾಂಬ್ ಬೆದರಿಕೆ

ಚಾಮರಾಜನಗರ: ನಗರದ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಹುಸಿ ಬಾಂಬ್ ಬೆದರಿಕೆಯ ಇ-ಮೇಲ್ ಸಂದೇಶ ಬಂದ ಹಿನ್ನೆಲೆಯಲ್ಲಿ ಪೊಲೀಸರು,…

8 hours ago

ಬಿಆರ್‌ಟಿ ವ್ಯಾಪ್ತಿಯಲ್ಲಿ ಕಾಡಾನೆ ಕಳೇಬರ ಪತ್ತೆ

ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಪುಣಜನೂರು ವನ್ಯಜೀವಿ ವಲಯ ವ್ಯಾಪ್ತಿಯ ಕಾರೆಪಾಳ್ಯ ಗಸ್ತಿನ ಸಮೀಪ ಅರಣ್ಯ ಪ್ರದೇಶದಿಂದ ಸುಮಾರು…

8 hours ago

ತೊಟ್ಟಿಲುಶಾಸ್ತ್ರ, ಸಿದ್ದಪ್ಪಾಜಿ ಕಂಡಾಯೋತ್ಸವದಲ್ಲಿ ತಾರಾ, ಶಶಿಕುಮಾರ್ ಭಾಗಿ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ದೊಡ್ಡಾಲತ್ತೂರು ಗ್ರಾಮದ ಶ್ರೀ ಮಕ್ಕಳೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ…

9 hours ago

ಬೆಳೆಗೆ ಸಿಗದ ಬೆಲೆ: ಯುವ ರೈತ ಆತ್ಮಹತ್ಯೆ

ಕೆ.ಆರ್.ನಗರ: ತಂಬಾಕು ಬೆಳೆಗೆ ಸರಿಯಾಗಿ ಬೆಲೆ ಸಿಗದೇ ನಷ್ಟವಾದ ಹಿನ್ನೆಲೆಯಲ್ಲಿ ಮಾಡಿದ್ದ ಸಾಲ ತೀರಿಸಲಾಗದೆ ಮನನೊಂದು ರೈತರೊಬ್ಬರು ತಮ್ಮ ಜಮೀನಿನಲ್ಲಿ…

10 hours ago

ಮುಂದಿನ ಒಂದು ವಾರಗಳ ಕಾಲ ಭಾರೀ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಗಾಳಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಚಿಕ್ಕಮಗಳೂರು, ಹಾಸನ, ಶಿವಮೊಗ್ಗ,…

11 hours ago