Sound mind in a sound body ಸ್ವಸ್ಥ ಶರೀರದಲ್ಲಿ ಸ್ವಸ್ಥ ಮನಸ್ಸು ನೆಲೆಸಿರುತ್ತದೆ. ಯೋಗದ ಸಾಧನೆಯ ಮಹತ್ವ ಮತ್ತು ಮಹೋನ್ನತಿಯ ಅರಿವಿದ್ದರೂ ಅದು ನಮ್ಮ ಜೀವನದ ಒಂದು ಪದ್ಧತಿ ಎಂದು ಒಪ್ಪಿಕೊಳ್ಳುವಲ್ಲಿ ನಾವು ಹಿಂದೆ ಬಿದ್ದಿದ್ದೇವೆಯೇ? ಯೋಗ ಬರಿಯ ನಮ್ಮ ಉದರ ಕರಗಿಸುವ ವ್ಯಾಯಾಮವಷ್ಟೇ ಆಗದೆ, ಅದು ನಮ್ಮೆಲ್ಲರ ಬದುಕು ಬದಲಿಸುವ ಜೀವನಮೌಲ್ಯವಾದರೆ ಯೋಗದ ಆಚರಣೆಯನ್ನು ನೋಡುವ ದೃಷ್ಟಿಕೋನವೇ ಬದಲಾಗುತ್ತದೆ. ಯೋಗ ಒಂದು ಪದ, ಅದೇ ವಾಕ್ಯವು ಕೂಡ. ಅದಕ್ಕಿದೆ ವಿಶಾಲ ಅರ್ಥ. ಅದೊಂದು ಬದುಕುವ ರೀತಿ, ಅದೊಂದು ಪಯಣ, ಅದೊಂದು ಮಾರ್ಗ. ನಮ್ಮ ಆರೋಗ್ಯವನ್ನು ಸಮತೋಲನದಲ್ಲಿಟ್ಟುಕೊಳ್ಳಲು ಯೋಗ ತುಂಬಾ ಮುಖ್ಯವಾಗುತ್ತದೆ.
ನಮ್ಮ ದೈನಂದಿನ ಜೀವನದಲ್ಲಿ ಯೋಗ ಮತ್ತು ವ್ಯಾಯಾಮದ ಪ್ರಾಮುಖ್ಯತೆ ಎಂಬ ವ್ಯವಸ್ಥೆಯೊಂದಿಗೆ ಆಸನಗಳು ಮತ್ತು ಪ್ರಾಣಾಯಾಮವನ್ನು ಎಂಟು ಹಂತದಲ್ಲಿ ಸಮನಾಗಿ ವಿಂಗಡಿಸಲಾಗಿದೆ. ಯಮ, ನಿಯಮ, ಪ್ರಾಣಾಯಾಮ, ಆಸನ, ಪ್ರತ್ಯಾಹಾರ, ಧಾರಣ, ಧ್ಯಾನ ಮತ್ತು ಸಮಾಧಿ. ಬುದ್ಧಿಯು ಜ್ಞಾನದಿಂದ ಶುದ್ಧಗೊಳ್ಳುತ್ತದೆ. ಯೋಗಾಭ್ಯಾಸದಿಂದ ಜ್ಞಾನದೀಪ್ತಿಯು ಪರಿಶುದ್ಧತೆಯನ್ನು ಪಡೆಯುತ್ತದೆ.
ಪ್ರತಿನಿತ್ಯ ನಾವು ಮಾಡುವ ಸೂರ್ಯ ನಮಸ್ಕಾರ; ಸೂರ್ಯನ ಜೀವ ನೀಡುವ ಶಕ್ತಿಗೆ ಗೌರವ ಸಲ್ಲಿಸುವ ಯೋಗ ಭಂಗಿಗಳ ಸುಂದರ ಅನುಕ್ರಮವಾಗಿದೆ. ಸುಂದರವಾದ ಸೂರ್ಯೋದಯದಂತೆ ಸೂರ್ಯ ನಮಸ್ಕಾರವು ದೇಹ, ಮನಸ್ಸು ಮತ್ತು ಚೈತನ್ಯವನ್ನು ಅದರ ಲಯಬದ್ಧ ಹರಿವಿನಿಂದ ಜಾಗೃತಗೊಳಿಸುತ್ತದೆ. ಈ ದೈವಿಕ ಅನುಕ್ರಮದಲ್ಲಿನ ಪ್ರತಿಯೊಂದು ಭಂಗಿಯೂ ಕ್ಯಾನ್ವಸ್ ಮೇಲಿನ ಬ್ರಷ್ ಸ್ಟ್ರೋಕ್‌ನಂತೆ ಶಕ್ತಿ, ಶಾಂತತೆ ಮತ್ತು ಸಮತೋಲನವನ್ನು ಚಿತ್ರಿಸುತ್ತದೆ. ಸೂರ್ಯ ನಮಸ್ಕಾರ ಕೇವಲ ವ್ಯಾಯಾಮವಲ್ಲ. ಇದು ನಮ್ಮೆಲ್ಲರನ್ನೂ ಪೋಷಿಸುವ ಜೀವಶಕ್ತಿಗೆ ಕೃತಜ್ಞತೆಯ ಅಭಿವ್ಯಕ್ತಿಯಾಗಿದೆ. ಸೂರ್ಯನ ಆ ಎಳೆ ಬಿಸಿಲಿನ ಕಿರಣಗಳು ನಮ್ಮ ದೇಹಕ್ಕೆ ಚೈತನ್ಯ ಮತ್ತು ಕಾಂತಿಯನ್ನು ತುಂಬುವವು. ಇದು ಒಂದು ಅತ್ಯುತ್ತಮ cardio ವ್ಯಾಯಾಮ ಕೂಡ ಆಗಿದೆ. ಹೆಚ್ಚಿನ ತೂಕ ಇಳಿಸಿಕೊಳ್ಳಲು ಇದು ಒಂದು ಉತ್ತಮ ವ್ಯಾಯಾಮ. ಜಠರಗಳ ಹಾಗೂ ಕರುಳಿನ ಪ್ರದೇಶಕ್ಕೆ ರಕ್ತ ಪರಿಚಲನೆಯನ್ನು ಹೆಚ್ಚಿಸುವ ಮೂಲಕ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
ಥೈರಾಯ್ಡ್ ಸಮಸ್ಯೆ: ಇದು ದೀರ್ಘಕಾಲಿಕ ಸಮಸ್ಯೆಯಾಗಿದ್ದು ಚಿಕಿತ್ಸೆ ಹಾಗೂ ಔಷಧಗಳ ಜೊತೆಗೆ ಜೀವನಶೈಲಿಯ ಬದಲಾವಣೆಯನ್ನು ಬೇಡುತ್ತದೆ. ಥೈರಾಯ್ಡ್ ಸಂಬಂಧಿತ ಮಾನಸಿಕ ಸಮಸ್ಯೆಗಳ ನಿರ್ವಹಣೆಗೆ ಸಹಾಯ ಮಾಡಿದರೂ; ಬಾಧಿತ ವ್ಯಕ್ತಿಯ ಭಾವುಕ ಏರುಪೇರುಗಳನ್ನು ಎದುರಿಸುತ್ತಿರುವುದನ್ನು ನಾವು ನೋಡಿದ್ದೇವೆ. ಇಂತಹ ಸಂದರ್ಭದಲ್ಲಿ ಅವರು ‘ಓಂಕಾರ’ ‘ ಉಚ್ಛಾರಣೆ ಕೆಲವು ನಿಮಿಷದವರೆಗೆ ಸಹಾಯಕವಾಗುತ್ತದೆ, ಜೊತೆಗೆ ಸರ್ವಾಂಗಾಸನ, ವಿಪರೀತ ಕರ್ಣಿ, ಮತ್ಸ್ಯಾಯನ, ಹಲಾಸನದ ಕ್ರಮವಾದ ಅಭ್ಯಾಸ ಥೈರಾಯ್ಡ್ ಸಮಸ್ಯೆಗೆ ಸಹಾಯಕಾರಿ. ಜೀವನ ಎಂದರೆ ಒಂದು ಸುಂದರ ಆರೋಗ್ಯಕರವಾದ ಬದುಕು. ಅರಿಷಡ್ವರ್ಗಗಳನ್ನು ತೊರೆದು, ನಾವೇ ಹಾಕಿಕೊಂಡಿರುವ ಸಂಕೋಲೆಯಿಂದ ಬಿಡುಗಡೆ ಪಡೆಯಲು, ಸಂತೃಪ್ತಿಯ ಬಾಳು ಬಾಳಲು ಯೋಗವು ದಾರಿದೀಪದಂತೆ ತೋರುತ್ತದೆ.
ಪ್ರಕೃತಿಯು ನಿಯಮಿಸಿದ ನಿಯಮಗಳನ್ನು ನಮ್ಮ ಧಾವಂತದ ಬದುಕಿಗೆ ಬಲಿಕೊಟ್ಟಿದ್ದೇವೆ. ಸರಳವಾಗಿ ಹೇಳಬೇಕೆಂದರೆ ನಾವುಗಳು ಬೆಳೆಯನ್ನು ಕಿತ್ತು ಕಳೆಯನ್ನು ಪೋಷಿಸುತ್ತಿದ್ದೇವೆ. ಪ್ರಕ್ಷುಬ್ಧವಾದ ಮನಸ್ಸನ್ನು ಶಾಂತಗೊಳಿಸುವ ಬದಲು ಅದನ್ನು ಇನ್ನೂ ಪ್ರಚೋದಿಸುತ್ತಿದ್ದೇವೆ. ಇಂದಿನ ಇಂತಹ ಅನೇಕ ಸಮಸ್ಯೆಗಳಿಗೆ ಶತಮಾನದ ಹಿಂದೆಯೇ ಯೋಗವೇ ಜೀವನ ಎಂಬುದೇ ಉತ್ತರವಾಗಿದೆ. ಯೋಗವು ಕಾಲಾತೀತ. ಅದಕ್ಕೆ ಭೇದವಿಲ್ಲ. ತನ್ನಡಿಯಲ್ಲಿ ವಿಶ್ರಮಿಸುವವರಿಗೆಲ್ಲರಿಗೂ ಯೋಗವೆಂಬ ಹೆಮ್ಮರ ಒಂದೇ ರೀತಿಯ ನೆರಳು, ಹಣ್ಣುಗಳನ್ನು ಕೊಡುತ್ತದೆ. ಯೋಗವನ್ನು ನಾವು ಅನುಸರಿಸಬೇಕಾದರೆ ಅದೊಂದು ಪ್ರೇರಣೆಯಾಗಬೇಕಲ್ಲವೆ? ನಮ್ಮ ದೈಹಿಕ, ಮಾನಸಿಕ ಆರೋಗ್ಯ ಉತ್ತಮವಾದೊಡನೆ ಸಾಮಾಜಿಕ ಸ್ವಾಸ್ಥ್ಯವು ತಾನಾಗಿಯೇ ಉತ್ತಮಗೊಳ್ಳುತ್ತದೆ. ಅಂತೆಯೇ ತನ್ನ ಮೂಲಕ ಮನುಕುಲದ ಶ್ರೇಯಸ್ಸಿಗೆ ನೆರವಾಗುವ ಯೋಗ ಮಾರ್ಗದಲ್ಲಿ ನಾವೆಲ್ಲರೂ ನಡೆದರೆ ಉತ್ತಮ ಜೀವನ ನಮ್ಮದಾಗಬಹುದಲ್ಲವೇ?
ಸಾಮಾನ್ಯವಾಗಿ ರೋಗರುಜಿನಗಳಿಂದ ಮುಕ್ತವಾಗಿರುವುದನ್ನು ಆರೋಗ್ಯವೆಂದು ಭಾವಿಸುತ್ತೇವೆ. ಆದರೆ, ಮಾನಸಿಕ ಆರೋಗ್ಯವೂ ಅಷ್ಟೇ ಪ್ರಮುಖವಾದದ್ದು. ಯೋಗವು ದೇಹದೊಡನೆ ಕಾರ್ಯ ನಿರ್ವಹಿಸುವುದಲ್ಲದೆ, ಆತ್ಮವನ್ನು ಸಾಕ್ಷಾತ್ಕರಿಸಿಕೊಳ್ಳುವ ಬೌದ್ಧಿಕತೆಯನ್ನೂ ವೃದ್ಧಿಸುತ್ತದೆ. ಈ ದೇಹವನ್ನು ಮನಸ್ಸು ಮತ್ತು ಆತ್ಮಗಳೊಡನೆ ಬೆಸೆದು ಜೀವನದ ಅಂತಿಮ ಗುರಿಯಾದ ಆತ್ಮಸಾಕ್ಷಾತ್ಕಾರವನ್ನು ಸಿದ್ಧಿಸಿಕೊಳ್ಳಲು ಯೋಗ ನೆರವಾಗುತ್ತದೆ. ದಿನದ ೨೪ ಗಂಟೆಗಳಲ್ಲಿ ಕೇವಲ ಅರ್ಧಗಂಟೆಯನ್ನು ಯೋಗಕ್ಕಾಗಿ ಮೀಸಲಿಟ್ಟರೆ ಸಾಕು, ನಮ್ಮ ದೇಹ ಮತ್ತು ಮನಸ್ಸಿಗೆ ಸಂತೋಷ ಹಾಗೂ ಶಕ್ತಿಯನ್ನು ನೀಡುತ್ತದೆ. ಮಾನಸಿಕ ನೆಮ್ಮದಿಯೊಂದಿಗೆ ದೇಹಕ್ಕೆ ಹೊಸ ಉಲ್ಲಾಸವನ್ನು ನೀಡುವ ಯೋಗ ಹಲವಾರು ರೋಗಗಳನ್ನು ದೂರವಿಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.
ಆರೋಗ್ಯವೇ ಸಂಪತ್ತು ಮತ್ತು ಮನಃಶಾಂತಿಯೇ ಆನಂದ. ಇದು ಯೋಗದ ಅತ್ಯಂತ ಪ್ರಮುಖ ನಂಬಿಕೆಗಳಲ್ಲಿ ಒಂದಾಗಿದೆ. ತೃಪ್ತ ಬದುಕಿಗೆ ಯೋಗ ಕೀಲಿ ಕೈ ಆಗಿದೆ. ಎಷ್ಟೇ ಸಮಯ ಆಗಿರಲಿ ಮಹಿಳೆಯರು ಸೂರ್ಯ ನಮಸ್ಕಾರದ ಅಭ್ಯಾಸ ಮಾಡಲೇಬೇಕು. ಇದರ ಮೂಲಕ ಮಹಿಳೆಯರ ದೇಹದಲ್ಲಿ ಸ್ರವಿಸುವ ಹಾರ್ಮೋನ್‌ಗಳು ಸೂಕ್ತ ಪ್ರಮಾಣದಲ್ಲಿ ದೊರಕುವುದರ ಮೂಲಕ ಅನೇಕ ರೋಗಗಳಿಗೆ ಇದು ರಾಮ ಬಾಣ. ಹಾಗಾಗಿ ಆಂತರಿಕವಾಗಿಯೂ ಹಾರ್ಮೋನ್ ನಿಯಂತ್ರಣ ಸುಲಭ ಸಾಧ್ಯವಾಗುತ್ತದೆ.
ಹಾಗಾಗಿ ನಮ್ಮೆಲ್ಲರ ಬದುಕಿನಲ್ಲಿ ಒಂದು Change over ಬೇಕು ಎಂತಾದಲ್ಲಿ ಖಂಡಿತ ಯೋಗಾಭ್ಯಾಸ ಉತ್ತಮ ಆಯ್ಕೆಯಾಗಿದೆ. ಏಳು ಮೆಲ್ಲೆಗೆ ತೂಕದವರೆಲ್ಲರೂ ಏಳು ಮಲ್ಲಿಗೆ ತೂಕದವರಾಗೋಣ.
– ಟಿ.ಎನ್.ವೀಣಾ ಶ್ರೀಕಾಂತ್, ಯೋಗ ಶಿಕ್ಷಕಿ
ಮಂಡ್ಯ: ಉಪಟಳ ನೀಡುತ್ತಿದ್ದ ಚಿರತೆ ಬೋನಿಗೆ ಬಿದ್ದಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರಿನ ದೊಡ್ಡಹೊಸಗಾವಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಚೆನ್ನಮ್ಮ…
ರಾಜ್‌ಘಾಟ್‌ಗೆ ಭೇಟಿ ನೀಡಿದ ವ್ಲಾಡಿಮಿರ್ ಪುಟಿನ್, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಸಮಾಧಿಗೆ ಗೌರವ ನಮನ ಸಲ್ಲಿಸಿದರು. ದೆಹಲಿಯಲ್ಲಿ ರಾಷ್ಟ್ರಪತಿ…
ಬೆಂಗಳೂರು: ರಾಜ್ಯದ ಹಲವೆಡೆ ಒಣಹವೆ ಇದ್ದರೆ ಮತ್ತೆ ಕೆಲವೆಡೆ ಮಂಜು, ಮೋಡ ಕವಿದ ವಾತಾವರಣ ಮುಂದುವರೆದಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ…
ಹಾಸನ: ನಾಪತ್ತೆಯಾಗಿದ್ದ ಗರ್ಭಿಣಿ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದೆ. ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಹೊನ್ನವಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು,…
ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದಲ್ಲಿ ರಸ್ತೆ ನಿರ್ಮಾಣ ಕಾರ್ಯಕ್ಕಾಗಿ ಮರಗಳ ಮಾರಣ ಹೋಮ ನಡೆದಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಮಲೆ…
ಪ್ರತಿದಿನ ಬೆಳಗಿನ ಜಾವ ದಿನ ದಿನಪತ್ರಿಕೆಗಳನ್ನು ಬಹುತೇಕ ಮಕ್ಕಳೇ ವಿತರಿಸುತ್ತಿದ್ದಾರೆ. ಹವಾಮಾನ ವೈಪರೀತ್ಯದಿಂದ ವಿಪರೀತ ಚಳಿ ಇರುವುದರಿಂದ ಆರೋಗ್ಯದ ಮೇಲೆ…