ಸಕ್ಕರೆ ನಾಡಿನ ಡಾ. ಮಾದೇಶ್ ಹಾಡಿಗೆ ಎಲ್ಲರ ಮೆಚ್ಚುಗೆ; ಮಂಡ್ಯದ ಯೇಸುದಾಸ್ ಎಂದೇ ಖ್ಯಾತಿ
ಮಂಡ್ಯದ ಡಾ. ಮಾದೇಶ್ ಎಂದರೆ ಎಲ್ಲರಿಗೂ ಪರಿಚಿತ. ವೃತ್ತಿಯಲ್ಲಿ ಡಾಕ್ಟರ್ ಆಗಿರುವ ಇವರು ಪ್ರವೃತ್ತಿಯಲ್ಲಿ ಒಳ್ಳೆಯ ಹಾಡುಗಾರ. ಕೆ.ಜೆ. ಯೇಸುದಾಸ್ ಶೈಲಿಯಲ್ಲಿಯೇ ಹಾಡುವ ಇವರು ಜಿಲ್ಲೆಯಾದ್ಯಂತ ಅಭಿನವ ಯೇಸುದಾಸ್ ಎಂದೇ ಪ್ರಸಿದ್ಧಿ. ಮಲೆ ಮಹದೇಶ್ವರ-ಮಂಟೇಸ್ವಾಮಿ ಕಥನ ಕಾವ್ಯಗಳ ಜನಪದ ಗಾಯನದ ಮೂಲಕ ಗಾಯನ ಕ್ಷೇತ್ರ ಪ್ರವೇಶಿಸಿದ ಮಾದೇಶ್, ಯೇಸುದಾಸ್ ಹಾಡಿರುವ ಕನ್ನಡ, ತಮಿಳು, ತೆಲಗು, ಹಿಂದಿ ಭಾಷೆಗಳ ಚಲನಚಿತ್ರ ಗೀತೆಗಳನ್ನು ಹಾಡಿ ಮನೆ ಮಾತಾಗಿದ್ದಾರೆ. ‘ಮಂಡ್ಯದ ಯೇಸುದಾಸ್’ ಎಂದೇ ಮನೆಮಾತಾಗಿರುವ ಡಾ.ಮಾದೇಶ್, ಪ್ರತಿವರ್ಷ ತಮ್ಮ ನಾಯಕತ್ವದಲ್ಲಿ ಜಿಲ್ಲಾ ಗಾಯಕರ ಟ್ರಸ್ಟ್ ವತಿಯಿಂದ ಯೇಸುದಾಸ್ ಹುಟ್ಟುಹಬ್ಬದ ಅಂಗವಾಗಿ ‘ಗಾಯನ ಯಾನ’ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದು, ಜಿಲ್ಲೆಯ ಹಲವಾರು ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುತ್ತಿದ್ದಾರೆ.
ಯುವಕರಿಗೆ ಹೆಚ್ಚಿನ ಪ್ರೋತ್ಸಾಹಜಿಲ್ಲಾ ಗಾಯಕರ ಟ್ರಸ್ಟ್ ಅಧ್ಯಕ್ಷರಾಗಿ ಕಲಾವಿದರನ್ನು, ಅದರಲ್ಲೂ ಗ್ರಾಮೀಣ ಕಲಾವಿದರನ್ನು ಪ್ರೋತ್ಸಾಹಿಸುತ್ತಿದ್ದಾರೆ ಮಾದೇಶ್. ಭಾವಗೀತೆ, ಚಲನಚಿತ್ರ ಗೀತೆ, ಭಕ್ತಿಗೀತೆ ಕಾರ್ಯಕ್ರಮಗಳ ಆಯೋಜಕರು ಕೂಡ ಹೌದು. ಸಾಹಿತ್ಯ, ಕಲೆ, ಜಾನಪದ, ಸಿನಿಮಾ, ರಂಗಭೂಮಿ, ರಾಜಕೀಯ, ವೈಚಾರಿಕ, ಪ್ರಗತಿಪರ ಚಳವಳಿಗೆ ಹೆಸರಾದ ಮಂಡ್ಯದಲ್ಲಿ ಗಾಯನ ಕ್ಷೇತ್ರವನ್ನೂ ಗಟ್ಟಿಕೊಳಿಸುತ್ತಿದ್ದಾರೆ ಇವರು.ಯೇಸುದಾಸ್‌ರಿಂದ ಮೆಚ್ಚುಗೆ
ಸ್ವತಃ ಯೇಸುದಾಸ್ ಅವರೇ, ಮಾದೇಶ್ ಅವರ ಪ್ರತಿಭೆಯನ್ನು ಗುರುತಿಸಿ ಬೆನ್ನುತಟ್ಟಿದ್ದಾರೆ. ಯೇಸುದಾಸ್ ಅವರು ಪ್ರತಿವರ್ಷ ತಮ್ಮ ಹುಟ್ಟು ಹಬ್ಬವನ್ನು ಕೊಲ್ಲೂರು ಮೂಕಾಂಬಿಕಾ ದೇವಾಲಯದಲ್ಲಿ ಆಚರಿಸಿಕೊಳ್ಳುತ್ತಾರೆ. ಅಲ್ಲಿಗೆ ಡಾ.ಮಾದೇಶ್ ಅವರು ಭೇಟಿ ನೀಡಿ ಅಭಿನಂದಿಸುತ್ತಾ ಬಂದಿದ್ದಾರೆ.ಒಂದೂವರೆ ದಶಕದಿಂದ ಜಿಲ್ಲೆಯಲ್ಲಿ ಸೇವೆ
ಈ ಹಿಂದೆ ಬೆಂಗಳೂರಿನ ಕೆಂಪೇಗೌಡ ಆಸ್ಪತ್ರೆಯಲ್ಲಿ ಎಆರ್‌ಟಿ ಮೆಡಿಕಲ್ ಆಫೀಸರ್ ಆಗಿ ಸೇವೆ ಸಲ್ಲಿಸಿದ್ದ ಡಾ.ಮಾದೇಶ್, ೧೫ ವರ್ಷದಿಂದ ತನ್ನ ತವರು ಜಿಲ್ಲೆ, ಮಂಡ್ಯದ ಎಸ್.ಡಿ. ಜಯರಾಂ ಆಸ್ಪತ್ರೆಯ ಆಡಳಿತ ವೈದ್ಯರಾಗಿದ್ದಾರೆ. ವೃತ್ತಿಯ ಜಂಜಾಟದ ನಡುವೆಯೂ ಅವರ ಗಾಯನ ಸುಧೆಗೆ ಧಣಿವಿಲ್ಲ.ಹಾಡುತ್ತಲೇ ಬೆಳೆದ ಪ್ರತಿಭೆ
ಡಾ. ಮಾದೇಶ್ ಯಾವುದೇ ಸಂಗೀತದಹಿನ್ನೆಲೆ ಉಳ್ಳವರಲ್ಲ. ಎಲ್ಲಿಯೂ ಹೋಗಿ ಸಂಗೀತ ಅಭ್ಯಾಸ ಮಾಡಿದವರಲ್ಲ. ಆದರೆ ಬಾಲ್ಯದಿಂದಲೇ ತಮ್ಮ ಸುತ್ತಲೂ ಕೇಳುತ್ತಿದ್ದ ಜನಪದ ಹಾಡುಗಳು, ತಂದೆ, ತಾಯಿ ಮತ್ತು ಬಂಧುಗಳು ಹಾಡುತ್ತಿದ್ದ ಹಾಡುಗಳನ್ನು ಗುನುಗುತ್ತಲೇ ಬೆಳೆದವರು,ಗಾಯನ ಕಲಿತವರು.ಜಿಲ್ಲಾ ಮಟ್ಟದಲ್ಲಿ ಹಲವು ಪ್ರಶಸ್ತಿಮಾದೇಶ್ ಅವರಿಗೆ ಜಿಲ್ಲಾಮಟ್ಟದ ಕನ್ನಡ ರಾಜ್ಯೋತ್ಸವ, ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಸೇರಿದಂತೆ ಮಂಡ್ಯದ ಪ್ರತಿಷ್ಠಿತ ಸಂಘಸಂಸ್ಥೆಗಳು ಕೊಡಮಾಡುವ ಹತ್ತು ಹಲವು ಪ್ರಶಸ್ತಿಗಳು ದೊರಕಿವೆ. ಒಂದು ಕಡೆ ವೃತ್ತಿ ಜೀವನದಲ್ಲಿಯೂ ಏಳಿಗೆ ಸಾಧಿಸುತ್ತಾ, ಪ್ರವೃತ್ತಿಯನ್ನೂ ಮುಂದುವರಿಸಿರುವ ಇವರು ಉಚಿತ ರಕ್ತದಾನ, ಆರೋಗ್ಯ ತಪಾಸಣೆ ಶಿಬಿರ, ಹಲವಾರು ಪ್ರಗತಿಪರ, ಜನಪರ ಕಾರ್ಯಕ್ರಮಗಳು ಮತ್ತು ಜಿಲ್ಲೆಯ ಎಲ್ಲ ಕಲಾವಿದರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ.
ವಿದ್ಯಾರ್ಥಿಯಾಗಿದ್ದಾಗಲೇ ಹಲವು ಕಾರ್ಯಕ್ರಮಗಳಲ್ಲಿ ಹಾಡಿ ಪ್ರಶಸ್ತಿಗಳನ್ನು ಪಡೆಯುತ್ತಿದ್ದೆ. ವೈದ್ಯ ವಿದ್ಯಾರ್ಥಿಯಾಗಿದ್ದಾಗ ಚಾಮರಾಜನಗರದಲ್ಲಿ ಆಯೋಜಿಸಿದ್ದ ಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆ. ಅಲ್ಲಿಗೆ ಖ್ಯಾತ ಸಂಗೀತ ನಿರ್ದೇಶಕ ವಿ.ಮನೋಹರ್ ತೀರ್ಪುಗಾರರಾಗಿ ಬಂದಿದ್ದರು. ಅಲ್ಲಿ ಅವರು ನನ್ನ ಬೆನ್ನುತಟ್ಟಿ ಪ್ರೋತ್ಸಾಹ ನೀಡಿದ್ದರು. ಹಾಡುವುದು ನನಗೆ ಸಂತೋಷ ಕೊಡುತ್ತದೆ. ಹೀಗೆ ವೃತ್ತಿಯ ನಡುವೆ ಪ್ರವೃತ್ತಿಯನ್ನು ಮುಂದುವರಿಸಿಕೊಂಡು ಬರುತ್ತಿದ್ದೇನೆ.
-ಡಾ.ಮಾದೇಶ್.
ನಾಳೆಯಿಂದ ಬಿಜೆಪಿ ಪ್ರತಿಭಟನೆ: ಸಂಸದರ ಮಾಹಿತಿ ಮೈಸೂರು : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕುರಿತ ಅವಹೇಳನಕಾರಿ ವೀಡಿಯೋ ಮಾಡಿದವರ…
ಬೆಳಗಾವಿ : ಮುಂದಿನ ಮಾರ್ಚ್‌ನಿಂದ ಎರಡೂವರೆ ಸಾವಿರ ಮೆಗಾ ವ್ಯಾಟ್ ಸೌರಶಕ್ತಿ ವಿದ್ಯುತ್ ಸೇರ್ಪಡೆಯಾಗುತ್ತಿದ್ದು, ಗೃಹ ಬಳಕೆ ಹಾಗೂ ಕೈಗಾರಿಕೆಗಳಿಗೆ…
ಬೆಳಗಾವಿ : ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಕೈದಿಗಳಿಗೆ ರಾಜ್ಯಾಥಿತ್ಯ ಸೌಲಭ್ಯಗಳು ಸಿಗುತ್ತಿರುವ ಬಗ್ಗೆ ವಿಧಾನಪರಿಷತ್‌ನಲ್ಲಿ ಪ್ರಸ್ತಾಪವಾಯಿತು. ಶೂನ್ಯವೇಳೆಯಲ್ಲಿ ಸದಸ್ಯ ಧನಂಜಯ್…
ಬೆಂಗಳೂರು : ನಟ ದರ್ಶನ್ ಅವರ ಅನುಪಸ್ಥಿತಿಯಲ್ಲಿ ದಿ ಡೆವಿಲ್ ಸಿನಿಮಾ ಬಿಡುಗಡೆ ಮಾಡಲಾಗಿದೆ. ಈ ಸಿನಿಮಾವನ್ನು ಅಭಿಮಾನಿಗಳು, ದರ್ಶನ್…
ಬೆಳಗಾವಿ : ರಾಜ್ಯದಲ್ಲಿ ಹೊಸ ಶಾಲಾ ಕೊಠಡಿಗಳ ನಿರ್ಮಾಣಕ್ಕೆ 360 ಕೋಟಿ ರೂ. ಬಿಡುಗಡೆ ಮಾಡಲಾಗುವುದು ಎಂದು ಶಾಲಾ ಶಿಕ್ಷಣ…
ಬೆಳಗಾವಿ : ರಾಜ್ಯದಲ್ಲಿ ಹೊಸ ತಾಲ್ಲೂಕುಗಳಲ್ಲಿ ಸದ್ಯಕ್ಕೆ ತಾಲ್ಲೂಕು ಮಟ್ಟದ ಆಸ್ಪತ್ರೆಗಳ ಮಂಜೂರಾತಿ ಇಲ್ಲ ಎಂದು ಆರೋಗ್ಯ ಮತ್ತು ಕುಟುಂಬ…