ಇಂದು ವಿಶ್ವ ಹೆಣ್ಣು ಮಕ್ಕಳ ದಿನ; ಮಗಳ ಬಗ್ಗೆ ನಟಿಯ ಮನದಾಳ
ಅಕ್ಷತಾ ಪಾಂಡವಪುರ, ರಂಗಭೂಮಿ ಕಲಾವಿದೆ
ಮಗಳು…
ಈ ಶಬ್ಧವೇ ಅದ್ಭುತ ಫೀಲಿಂಗ್..
ನನ್ನ ತಾಯಿಗೆ ಇಬ್ಬರು ಹೆಣ್ಣು ಮಕ್ಕಳು. ನಮಗೆ ಮೂರು ಹೆಣ್ಣು ಮಕ್ಕಳು. ಹಾಗಾಗಿ ನಮ್ಮದು ಹೆಣ್ಣು ಮಕ್ಕಳ ಪ್ರಪಂಚ! ಹೀಗಾಗಿ ಬದುಕೇ ನಮಗೆ ಶಕ್ತಿ ಕೊಟ್ಟಿತ್ತು. ಎಲ್ಲವನ್ನೂ ಎದುರಿಸುವ ಧೈರ್ಯ ಕೊಟ್ಟಿತ್ತು. ಅದೇ ಕಾರಣಕ್ಕೆ ನನಗೆ
ಮೊದಲಿನಿಂದಲೂ ಮಗಳೇ ಬೇಕು ಎನ್ನುವಾಸೆ. ಇದಕ್ಕೆ ತಕ್ಕಂತೆ ಬಂದ ಗಿಣಿ (ಮಗಳೇ) ಹುಟ್ಟಿದ್ದು ನನಗೆ ದೊಡ್ಡ ಪಾರಿತೋಷಕವೇ ಸರಿ. ನನ್ನ ತಂಗಿಗೂ ಇಬ್ಬರೂ ಹೆಣ್ಣು ಮಕ್ಕಳು. ಅದೂ ಖುಷಿಯೇ. ಆದರೆ ಗಂಡು ದಿಕ್ಕಿಲ್ಲದೇ ಸಮಾಜವನ್ನು ಎದುರಿಸಿದ ನನ್ನ ತಾಯಿಗೆ ಮಾತ್ರ ಈ ಬಗ್ಗೆ ಸ್ವಲ್ಪ ಬೇಜಾರ್.
ಗಿಣಿ ಬಂದ ಮೇಲಿನ ಸಂಭ್ರಮ
ಗಿಣಿ ಬಂದಮೇಲೆ ನನ್ನ ಬದುಕಿನ ರೀತಿೆುೀಂ ಬದಲಾಯಿತು. ಎಷ್ಟೋ ನೋವುಗಳ ಮಧ್ಯೆಯೂ, ಕೆಲಸಗಳ ಒತ್ತಡಗಳ ಮಧ್ಯೆಯೂ ಮಗಳನ್ನೊಮ್ಮೆ ನೋಡಿಬಿಟ್ರೆ ಸಮಾಧಾನ. ಇನ್ನೂ ಮುದ್ದಾಡಿ ಒಂದರ್ಧ ಗಂಟೆ ಕಳೆದುಬಿಟ್ರೆ ಎಲ್ಲವೂ ಮಾಯಾ.
ಹೆರಿಗೆ ದಿನ ಹತ್ತಿರವಾಗುತ್ತಿದ್ದಾಗ ‘ಅಕಸ್ಮಾತ್ ಗಂಡು ಮಗು ಹುಟ್ಟಿ ಬಿಟ್ರೆ’ ಎನ್ನುವ ಆತಂಕ ಹೆಚ್ಚಿತ್ತು. ದೇವರಿಗೆ ದೀಪ ಹಚ್ಚುವಾಗೆಲ್ಲಾ ಹೆಣ್ಣಾಗಲಿ ಎನ್ನುವ ಬೇಡಿಕೆಯೇ ನನ್ನದಾಗಿತ್ತು. ಅಷ್ಟರ ಮಟ್ಟಿಗೆ ಹೆಣ್ಣು ಮಗು ಬೇಕೇ ಬೇಕು ಎಂಬ ಬಯಕೆ. ಇದು ಚಿಗುರೊಡೆದದ್ದು ನನ್ನ ಬಾಲ್ಯದಿಂದಲೇ. ಹೆಣ್ಣು ಗೊಂಬೆಗಳ ಜೊತೆ ಆಟ, ಅದಕ್ಕೆ ಹೊಸ ಬಟ್ಟೆ ತಯಾರಿಸುವುದು, ತಲೆ ಬಾಚುವುದು, ಬಿಂದಿ ಇಡುವುದು, ಪೌಡರ್ ಹಾಕುವುದು… ಆಹಾ ! ಆಗಲೇ ನನಗೆ ಹೆಣ್ಣು ಮಗು ಹುಟ್ಲಪ್ಪ ಅಂತ ಅನ್ಕೊಳ್ತಿದ್ದಂತೂ ಸತ್ಯ.
ಡೆಲಿವರಿಯಾದ ತಕ್ಷಣ ‘ಮಗು ಎಂತಹುದು?’ ಎಂದು ಕೇಳಿದ್ದೆ. ಆದರೆ ನರ್ಸ್‌ಗಳು ಮಗುವನ್ನು ಸ್ವಚ್ಛ ಮಾಡಿ ಬಟ್ಟೆ ಸುತ್ತಿಕೊಂಡು ಮೊದಲು ಹೊರಗಡೆ ಇದ್ದವರಿಗೆ ತೋರಿಸಲು ಹೊರಟಿದ್ದರು. ನನಗೆ ಎಂಥ ಮಗು ಎಂದು ಹೇಳಲೂ ಇಲ್ಲ, ಮಗು ತೋರಿಸಲೂ ಇಲ್ಲ. ಸ್ವಲ್ಪ ಸಮಯದ ನಂತರ ಮಗುವನ್ನು ಒಳಗಡೆ ಕರ್ಕೊಂಡ್ ಬಂದಾಗ ಹೋ ಮಗುವನ್ನು ಅಮ್ಮನಿಗೆ ಇನ್ನೂ ತೋರಿಸಿಲ್ವಾ? ಮೊದಲು ಮಗು ತೋರಿಸಿ ಎಂಬ ಡಾಕ್ಟರ್ ಹೇಳಿದಾಗ ನರ್ಸ್‌ಗಳು ಮಗುವನ್ನು ನನ್ನ ಮುಂದೆ ಹಿಡಿದರು. ನಾನಾಗ ಮಗು ಮುಖವನ್ನು ನೋಡಲೇ ಇಲ್ಲ! ಕೆಳಗೆ ಸುತ್ತಿದ್ದ ಬಟ್ಟೆಯನ್ನು ಎತ್ತಿ ನೋಡಿ ನಿಟ್ಟುಸಿರು ಬಿಟ್ಟೆ. ಮತ್ತೆ ಆನಂದ ಭಾಷ್ಪ. ಬೇಡಿಕೆ ಫಲಿಸಿದ ಭಾವ. ಹೆಣ್ಣು ಮಗಳೇ ಹುಟ್ಟಿದಳು ಎಂಬ ಸಂತೋಷ. ಆ ಕ್ಷಣವನ್ನು ನಾನು ಎಂದಿಗೂ ಮರೆಯಲಾರೆ. ಆ ಕ್ಷಣವನ್ನು ‘ಹೆಣ್ಣು ಮಕ್ಕಳ ದಿನ’ದಂದು ಮತ್ತೇ ನೆನಪಿಸಿಕೊಳ್ಳುತ್ತಿದ್ದೇನೆ.
ಆಮೇಲೆ ಮಗಳು ಗಿಣಿ ಆದ್ಲು.. ನನ್ನ ಸೋಷಲ್ ಮೀಡಿಯಾಗಳ ಹ್ಯಾಶ್ ಟ್ಯಾಗ್‌ಗಿಣಿಮಗಳು ಅಂತ ಆಯ್ತು. ನನಗೆ ಮೊದಲಿನಿಂದಲೂ ಬಟ್ಟೆ ಬರೆ, ಒಡವೆ ವಸ್ತ್ರ ಗಳ ಬಗ್ಗೆ ಆಸಕ್ತಿ. ಎಲ್ಲಿಗೇ ಶಾಪಿಂಗ್‌ಗೆ ಹೋದ್ರು ನನ್ನ ಬಟ್ಟೆ ಬರೆ ಕಡೆ ನುಗ್ಗುತ್ತಾ ಇದ್ದೇ. ಈಗ ಶಾಪಿಂಗ್ ಮಾಲ್‌ಗೋ, ಮಾರ್ಕೆಟ್‌ಗೋ ಹೋದರೆ ಮೊದಲು ಹೋಗುವುದು ಮಕ್ಕಳ ಕೌಂಟರ್ ಕಡೆಗೆ. ಅದರಲ್ಲೂ ಹೆಣ್ಣು ಮಕ್ಕಳ ಕೌಂಟರ್ ಕಡೆಗೆ.
ಈಗ ನನ್ನ ಆಕೆಯ ಮಗಳ ಖುಷಿಗೆ, ಪ್ರೀತಿಗೆ, ರಕ್ಷಣೆಗೆ ಏನು ಬೇಕೋ ಅದೇ ಆಗಿದೆ. ನಾ ಬೇಜಾರಲ್ಲಿ ಇದ್ರೆ ಅವಳಿಗೆ ಹೇಗೆ ತಿಳಿಯುತ್ತೋ ಏನೋ, ತೊಡೆಮೇಲೆ ಕೂತು ಬಿಡ್ತಾಳೆ. ಏನಾದರು ತಿನ್ನಲು ಕೊಟ್ಟಿದ್ರೆ ನನಗೂ ತಿನ್ನಿಸ್ತಾಳೆ. ದಿನ ಬೆಳಿಗ್ಗೆ ಗಿಣಿಯೇ ನನ್ನನ್ನು ಎಬ್ಬಿಸುವುದು. ‘ಅಮ್ಮಗೆ ಸುಸ್ತು ಮಗಳೇ’ ಅಂದ್ರೆ ಆ ಮಾತಿಗೆ ಪ್ರತಿಕ್ರಿಯೆ ಎಂಬಂತೆ ರೂಮಿನಿಂದ ಹೊರಗೆ ಹೋಗಿ ಮನೆಯವರ ಜೊತೆ ಆಟವಾಡುತ್ತಾಳೆ. ಒಟ್ಟಿನಲ್ಲಿ ಮಗಳ ಬಗ್ಗೆ ಎಷ್ಟು ಬರೆದರೂ ಕಮ್ಮಿನೇ. ಲವ್ ಯೂ ಗಿಣಿಮಗಳೇ..
ಅಂದಹಾಗೆ ಅವಳ ಹೆಸರು ‘ಗಿಯ’.
`ಹೊಸ ತಲೆಮಾರಿನ ಸಾಹಿತ್ಯ' ಕುರಿತ ವಿಚಾರಗೋಷ್ಠಿಯಲ್ಲಿ ವಿಮರ್ಶಕ ವಿಕ್ರಂ ವಿಸಾಜಿ ಅಭಿಮತ • ಜಿ.ತಂಗಂ ಗೋಪಿನಾಥಂ ಮಂಡ್ಯ: ಹೊಸ ತಲೆಮಾರಿನ…
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…