ಹೊಸತು ಎಂಬುದು ನಿರಂತರ ಕ್ರಿಯಾಶೀಲತೆಗೆ ಸಂಬಂಧಪಟ್ಟದ್ದು, ಒಂದು ಪರಿಚಯವಾದರೆ ಮತ್ತೊಂದರ ಅವಿಷ್ಕಾರ ಆಗಲೇ ಬೇಕು. ಇದು ಆಧುನಿಕ ಜಗತ್ತಿನ ಅಭಿರುಚಿ, ಈ ಅಭಿರುಚಿ ನಿಂತ ನೀರಾಗಿರುವುದಿಲ್ಲ. ಸದಾ ಹೊಸದರೆಡೆಗಿನ ಸೆಳೆತ,ಆಕರ್ಷಣೆ ನಿರಂತರ ಪ್ರಯತ್ನಗಳಲ್ಲಿ ತೊಡಗುವಂತೆ ಮಾಡುತ್ತದೆ. ಶಿಲಾಯುಗದ ನಂತರ ನವ ನಾಗರಿಕ ಪ್ರಪಂಚದ ಮಸ್ತಿಷ್ಕಕಕ್ಕೆ ಹೊಳೆಯದೆ ಗೌಣವೆನಿಸಿದ್ದ ವಸ್ತುಗಳೆಲ್ಲ ಇವತ್ತಿನ ಕೌಶಲದ ನಾಜೂಕಿನ ಕೈಗಳಿಗೆ ಸಿಕ್ಕಿ ನವನವೀನ ರೂಪವನ್ನೇ ಪಡದುಕೊಳ್ಳುತ್ತಿವೆ. ಇಂತಹ ಕೌಶಲಗಳಲ್ಲಿ ಮಣ್ಣಿನ ‘ಟೆರ್ರಾಕೋಟಾ’ಕಲೆಯೂ ಒಂದು…!
ಅದರಲ್ಲೇನಿದೆ ಮಣ್ಣು…! ಇದು ಸಾಮಾನ್ಯ ಸಂದರ್ಭಗಳಲ್ಲೂ ಹೆಚ್ಚಾಗಿ ಹಳ್ಳಿಗರ ಬಾಯಿಂದ ಹೊರಡುವ ಗ್ರಾಮೀಣ ಸೊಗಡಿನ ಮಾತು.ತಿರುಳಿಲ್ಲದ್ದು,ಸಾರವಿಲ್ಲದ್ದು ಎಂಬುದೇ ಇದರ ಅರ್ಥ. ಆದರೆ ವಾಸ್ತವದಲ್ಲಿ ಮಣ್ಣಿನ ಒಡನಾಟವಿಲ್ಲದ ಮನುಷ್ಯನ ಬದುಕು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲದ್ದು. ಅದರ ಜತೆಗಿನ ಅವಿನಾಭಾವ ಸಂಬಂಧವೇ ಅಂಥದ್ದು.
ಮೈಸೂರಿನ ಕೆ.ಜಿ.ಕೊಪ್ಪಲಿನವರಾದ ನೀಲಿ ಲೋಹಿತ್ ಅವರು ಓದಿದ್ದು ಬಿಎ ಪದವಿ, ನಂತರ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದಿಂದ ಪತ್ರಿಕೋದ್ಯಮ ಡಿಪ್ಲೊಮಾ ಪಡೆದಿದ್ದಾರೆ. ಇವರಿಗೀಗ ೩೭ ವರ್ಷ. ಆದರೆ ಅವರ ಪರಿಕಲ್ಪನೆ ವಯಸ್ಸಿಗೂ ಮೀರಿದ್ದು.
ಅಮೆರಿಕಾದ ಕ್ಯಾಲಿಫೋರ್ನಿಯಾ, ಉಗಾಂಡ, ದೆಹಲಿ,ಹೈದರಾಬಾದ್, ತಮಿಳುನಾಡು, ಗುಜರಾತ್ ಹಾಗೂ ಕರ್ನಾಟಕದ ಎಲ್ಲ ಜಿಲ್ಲೆಗಳ ಗ್ರಾಹಕರಿಗೆ ಇವರು ಮಣ್ಣಿನಿಂದ ತಯಾರಿಸಿದ ಮೂಗುತಿ,ಕಿವಿಯೋಲೆ, ಬೈತಲೆಬೊಟ್ಟು,ವಿವಿಧ ಮಾದರಿಯ ಕತ್ತಿನ ಸರಗಳು, ತೋಳ್ಬಂದಿ, ಸೊಂಟದಪಟ್ಟಿ, ಕಾಲ್ಗೆಜ್ಜೆ,ಜಡೆಬಿಲ್ಲೆ ಮುಂತಾದ ಮಣ್ಣಿನ ಆಭರಣಗಳು ತಲುಪಿ, ಜನಪ್ರಿಯತೆ ಗಳಿಸಿವೆ.
2017 ರ ಆರಂಭದಲ್ಲಿ ಶೂನ್ಯದಿಂದಲೇ ಆರಂಭವಾದ ಮಣ್ಣಿನ ಆಭರಣಗಳ ಕುಟೀರ 2019ರ ಸೆಪ್ಟಂಬರ್‌ನಲ್ಲಿ ‘ನೀಲಿಕಲಾ ಕ್ರಿಯೇಷನ್ಸ್ ’ ರೂಪ ತಾಳಿತು. ಕೊರೊನಾ ಸಂದರ್ಭದಲ್ಲಿ 9 ವರ್ಷದಿಂದ 60 ವರ್ಷದ ವರೆಗಿನ ಗೃಹಿಣಿಯರೂ ಆನ್‌ಲೈನ್ ತರಗತಿಯಲ್ಲಿ ಮಣ್ಣಿನ ಆಭರಣಗಳ ತಯಾರಿಕೆ ಕೌಶಲದ ಬಗ್ಗೆ ಕಲಿತಿದ್ದಾರೆ.ಸಾಕಷ್ಟು ಹೋರಾಟದ ನಂತರ ಕಳೆದ ವರ್ಷ ಕುವೆಂಪುನಗರ ಎಸ್‌ಬಿಐ ಶಾಖೆಯಿಂದ ಆರ್ಥಿಕ ನೆರವು ಸಿಕ್ಕಿದೆ. ಮರುಪಾವತಿಯೂ ಆಗುತ್ತಿದೆ. ಸಾಲಕೊಡುವಾಗ ಖಾತರಿಯ ಬಗ್ಗೆ ಹಿಂದೆಮುಂದೆ ನೋಡಿದ್ದ ಬ್ಯಾಂಕ್ ಅಧಿಕಾರಿಗಳು ನಿರಾಳರಾಗಿದ್ದಾರೆ.ನೀಲಿ ಕಲಾ ಅಕಾಡೆಮಿಯಲ್ಲಿ ತರಬೇತಿ ಪಡೆಯಲಿಚ್ಚಿಸುವವರು ಮೊಬೈಲ್ ಸಂಖ್ಯೆ : 7676960671 ಇಲ್ಲಿ ಸಂಪರ್ಕಿಸಬಹುದು. ವೆಬ್‌ಸೈಟ್: www.Neelikala.com
8 ಮಂದಿಗೆ ಉದ್ಯೋಗ ಕೊಟ್ಟಿದ್ದೇನೆ. ಈ ಕೆಲಸದಲ್ಲಿ ‘ಕ್ರಿಯೇಟಿವಿಟಿ’ ಬಹಳ ಮುಖ್ಯ. ಅದೇ ಬಂಡವಾಳ, ಸದಾ ಹೊಸತರ ಬಗ್ಗೆ ಯೋಚಿಸುತ್ತಿರಬೇಕು, ಜನರೂ ಸಹ ಹೊಸ ಹೊಸ ವಿನ್ಯಾಸಗಳನ್ನು ಬಯಸುತ್ತಾರೆ. ಅದಕ್ಕೆ ನಾನೂ ಹೊಂದಿಕೊಂಡಿದ್ದೇನೆ. 5 ವರ್ಷಗಳ ಪರಿಶ್ರಮದ ನಂತರ ಸ್ಪಷ್ಟತೆ,ನೆಮ್ಮದಿ ಎರಡೂ ಸಿಕ್ಕಿದೆ.
-ನೀಲಿ ಲೋಹಿತ್.
————————-
ಇಂಟ್ರಾ :
ಹೊಸತು ಎಂಬುದು ನಿರಂತರ ಕ್ರಿಯಾಶೀಲತೆಗೆ ಸಂಬಂಧಪಟ್ಟದ್ದು, ಒಂದು ಪರಿಚಯವಾದರೆ ಮತ್ತೊಂದರ ಅವಿಷ್ಕಾರ ಆಗಲೇ ಬೇಕು. ಇದು ಆಧುನಿಕ ಜಗತ್ತಿನ ಅಭಿರುಚಿ, ಈ ಅಭಿರುಚಿ ನಿಂತ ನೀರಾಗಿರುವುದಿಲ್ಲ. ಸದಾ ಹೊಸದರೆಡೆಗಿನ ಸೆಳೆತ,ಆಕರ್ಷಣೆ ನಿರಂತರ ಪ್ರಯತ್ನಗಳಲ್ಲಿ ತೊಡಗುವಂತೆ ಮಾಡುತ್ತದೆ. ಶಿಲಾಯುಗದ ನಂತರ ನವ ನಾಗರಿಕ ಪ್ರಪಂಚದ ಮಸ್ತಿಷ್ಕಕಕ್ಕೆ ಹೊಳೆಯದೆ ಗೌಣವೆನಿಸಿದ್ದ ವಸ್ತುಗಳೆಲ್ಲ ಇವತ್ತಿನ ಕೌಶಲದ ನಾಜೂಕಿನ ಕೈಗಳಿಗೆ ಸಿಕ್ಕಿ ನವನವೀನ ರೂಪವನ್ನೇ ಪಡೆದುಕೊಳ್ಳುತ್ತಿವೆ. ಇಂತಹ ಕೌಶಲಗಳಲ್ಲಿ ಮಣ್ಣಿನ ‘ಟೆರ್ರಾಕೋಟಾ’ಕಲೆಯೂ ಒಂದು…!
ಕಳೆದ ವರ್ಷ ಬಿಡುಗಡೆಯಾಗಿ, ಇಡೀ ಭಾರತೀಯ ಚಿತ್ರರಂಗದ ಬಾಕ್ಸ್ ಆಫೀಸ್ ದಾಖಲೆಗಳನ್ನು ಪುಡಿ ಮಾಡಿದ ‘ಪುಷ್ಪ 2’ ಚಿತ್ರದ ನಂತರ…
ಹನೂರು: ಶುಕ್ರವಾರ ತಡರಾತ್ರಿ ಸಿಡಿಲು ಬಡಿದು ಮನೆಯ ಮೇಲ್ಛಾವಣಿ ಸಂಪೂರ್ಣ ಹಾನಿಯಾಗಿರುವ ಘಟನೆ ತಾಲ್ಲೂಕಿನ ಶಾಗ್ಯ ಗ್ರಾಮದಲ್ಲಿ ಸಂಭವಿಸಿದೆ. ಗ್ರಾಮದ…
ಮೈಸೂರು: 5 ಸಾವಿರ ಎಕರೆ ಜಾಗದ ವಿಚಾರಕ್ಕೆ ಚಾ. ನಗರ ಡಿಸಿಗೆ ರಾಜಮಾತೆ ಪ್ರಮೋದದೇವಿ ಒಡೆಯರ್ ಪತ್ರ ಬರೆದಿದ್ದ ವಿಚಾರ.…
ಮೈಸೂರು: ರಾಜ್ಯದಲ್ಲಿ ಇತ್ಯಾರ್ಥವಾಗಿರುವ ಅತ್ಯಾಚಾರ ಪ್ರಕರಣಗಳ ಲಿಸ್ಟ್ ಕೊಡಿ ಎಂದ ವಿದ್ಯಾರ್ಥಿನಿ. ಮಹಿಳೆಯ ದಿನಾಚರಣೆ ಕಾರ್ಯಕ್ರಮದಲ್ಲಿ ವೇದಿಕೆ ಹತ್ತಿ ಪ್ರಶ್ನಿಸಿದ…
ಹೊಸದಿಲ್ಲಿ : ಮೊಬೈಲ್‌ನಿಂದ ಹಣ ಪಾವತಿ ಮಾಡುವ ಯುಪಿಐ ಸೇವೆಯಲ್ಲಿ ಶನಿವಾರ ಬೆಳಿಗ್ಗೆಯಿಂದಲೇ ದೇಶಾದ್ಯಂತ ವ್ಯತ್ಯಯ ಕಂಡು ಬಂದಿದೆ. ಇದರಿಂದ…
ಮೈಸೂರು: ಪೊಲೀಸ್ ಠಾಣೆಗಳು ಮಹಿಳೆಯರಿಗೆ ತವರು ಮನೆ ಇದ್ದಂತೆ. ಪೊಲೀಸ್ ಠಾಣೆ ಬಗ್ಗೆ ಭಯ ಪಡಬೇಡಿ. ರಾಜ್ಯ ಮಹಿಳಾ ಆಯೋಗದ…