ಆಂದೋಲನ ಪುರವಣಿ

ಯುವ ಡಾಟ್‌ ಕಾಮ್‌: ಕ್ರೀಡಾಪಟುಗಳನ್ನು ‘ಕಾಡುವ’ ಗಾಯವೆಂಬೋ ಪೆಡಂಭೂತ

ರಾಷ್ಟ್ರೀಯ ಕ್ರೀಡಾ ದಿನ ಇಂದು

‘ಟೆಂಪಲ್‌ರನ್’ ಮೊಬೈಲ್‌ನಲ್ಲಿ ಆಡುವ ಗೇಮ್ ಆ್ಯಪ್. ಅಬಾಲವೃದ್ಧರ ತನಕವೂ ಇದರ ‘ಹುಚ್ಚು’ ಇದೆ. ಈ ಗೇಮ್‌ನಲ್ಲಿ ಮುಂದೆ ಒಬ್ಬ ಓಡುತ್ತಿರುತ್ತಾನೆ. ಅವನನ್ನು ಹಿಡಿಯಲು ಹಿಂದೊಬ್ಬ ಧಾವಿಸಿ ಬರುತ್ತಾನೆ. ಮುಂದಿನ ಓಟಗಾರನಿಗೆ ಅಲ್ಲಲ್ಲಿ ಅಡ ತಡೆಗಳಿರುತ್ತವೆ ಹಾಗೇಯೇ ಮಧ್ಯೆ-ಮಧ್ಯೆ ‘ಗಿಫ್ಟ್’ಗಳು ಕೂಡಾ ದೊರಕುತ್ತವೆ. ಇವೆಲ್ಲ ಸಿಕ್ಕರೂ ಆತ ಸಮಾಧಾನ ಪಟ್ಟುಕೊಳ್ಳುವಂತಿಲ್ಲ. ಹಿಂದಿನವ ಆತನ ಬೆನ್ನತ್ತಿ ಬರುವುದನ್ನೂ ಬಿಡುವುದೇ ಇಲ್ಲ..

ಈ ಗೇಮ್ ಅನ್ನೇ ನಮ್ಮ ಕ್ರೀಡಾಪಟುಗಳಿಗೆ ರೂಪಕವಾಗಿ ತಗೆದುಕೊಳ್ಳಬಹುದು. ಮುಂದೆ ಓಡುತ್ತಿರುವವ ಆಟಗಾರನಾದರೇ ಹಿಂದೆ ಬೆನ್ನತ್ತಿರುವವ ‘ಗಾಯ’ಎಂಬೋ ಬ್ರಹ್ಮ ರಾಕ್ಷಸ ಎಂದುಕೊಳ್ಳಬಹುದು. ಎಷ್ಟೇ ಹುಷಾರಾಗಿದ್ದರೂ ಕೂಡ ಈ ಬ್ರಹ್ಮರಾಕ್ಷಸ ಎತ್ತಲಿಂದಾದರೂ ಧುತ್ತೆಂದು ಬಂದು ಕಣ್ಣ ಮುಂದೆ ಕ್ಷಣಾರ್ಧದಲ್ಲಿ ಕಾಣಿಸಿಕೊಳ್ಳುತ್ತಾನೆ. ಕಾಣಿಸಿಕೊಂಡವನೂ ಸುಮ್ಮನೆ ಹೋಗುವುದಿಲ್ಲ. ಆಟಗಾರರ ಭವಿಷ್ಯವನ್ನೇ ನಾಶ ಮಾಡುತ್ತಾನೆ.

ಭಾರತದಲ್ಲಿ ಅನೇಕ ಕ್ರೀಡಾಪಟುಗಳನ್ನು ‘ಗಾಯ’ ಇನ್ನಿಲ್ಲದಂತೆ ಕಾಡಿದೆ. ಕೆಲವರು ಇದರ ವಿರುದ್ಧ ಹೋರಾಡಿ ಮತ್ತೆ ಅಂಗಳಕ್ಕೆ ಬಂದರೂ ಮೊದಲಿನ ಪ್ರದರ್ಶನ ನೀಡಲು ಆಗದೇ ಒದ್ದಾಡಿದ್ದಾರೆ. ಇನ್ನೂ ಕೆಲವರಂತೂ ಇದರಿಂದ ರೋಸಿ ಹೋಗಿ ನಿವೃತ್ತಿಯಾದ ಉದಾಹರಣೆಗಳಿವೆ.

ಒಲಂಪಿಕ್ ಕ್ರೀಡಾಕೂಟದಲ್ಲಿ ಜಾವೆಲಿನ್ ಎಸೆತದಲ್ಲಿ ಚಿನ್ನದ ಗೆರೆ ದಾಟಿದ ಹುಡುಗ ನೀರಜ್ ಚೋಪ್ರಾ ಗಾಯಗೊಂಡ ಕಾರಣ ಕಾಮನ್‌ವೆಲ್ತ್ ಗೇಮ್ ತಪ್ಪಿಸಿಕೊಂಡರು. ಚಿನ್ನದ ಭರವಸೆ ಇಟ್ಟಿದ್ದ ಲಕ್ಷಾಂತರ ಭಾರತೀಯರು ಮಮ್ಮುಲ ಮರುಗಿದರು. ಕ್ರಿಕೆಟ್ ದೇವರು ಸಚಿನ್ ಅವರನ್ನು ಬೆನ್ನುಹುರಿ ಸಮಸ್ಯೆ ‘ಬೇತಾಳ’ನಂತೆ ನೇತು ಹಾಕಿಕೊಂಡಿತ್ತು. ಅದಕ್ಕೆ ಸೂಕ್ತ ಚಿಕಿತ್ಸೆ ಪಡೆದು ಮತ್ತೆ ‘ಪಿಚ್’ಗೆ ಬಂದರೂ ಮೊದಲು ಹೊಡೆಯುತ್ತಿದ್ದ ‘ಶಾಟ್ಸ್’ಗಳು ಬತ್ತಳಿಕೆಯಿಂದ ಕಾಣೆಯಾಗಿದ್ದವು. ಬ್ಯಾಟಿನ ಭಾರವೂ ಕಡಿಮೆಯಾಗಿತ್ತು. ಕರ್ನಾಟಕದ ಪ್ರತಿಭಾನ್ವಿತ ಕ್ರಿಕೆಟ್ ಆಟಗಾರ ವಿಜಯ ಭಾರದ್ವಾಜ್ ಆಡಿದ ಮೊದಲ ಅಂತಾರಾಷ್ಟ್ರೀಯ ಸರಣಿಯಲ್ಲಿ ಸರಣಿ ಪುರುಷೋತ್ತಮ ಪ್ರಶಸ್ತಿ ಪಡೆದುಕೊಂಡರು. ಗಾಯಾಳುವಾದರು ಮತ್ತೆ ಇಂಡಿಯಾ ಟೀಮ್ ಪ್ರತಿನಿಧಿಸಲೇ ಇಲ್ಲ.

ಚಿಕಿತ್ಸೆಯೊಂದಿಗೆ ಮನಸ್ಥೈರ್ಯ ತುಂಬಬೇಕು
ಕ್ರೀಡಾಪಟುಗಳು ಗಾಯಗೊಂಡ ಸಮಯದಲ್ಲಿ ಅವರಿಗೆ ಉತ್ತಮ ಚಿಕಿತ್ಸೆ ನೀಡುವುದು ಎಷ್ಟು ಮುಖ್ಯವೋ ಅವರಿಗೆ ಮನಸ್ಥೈರ್ಯ ತುಂಬುದು ಅಷ್ಟೇ ಮುಖ್ಯ ಎನ್ನುತ್ತಾರೆ ಡಾ.ವಿಜಯ ಸ್ಯಾಮುವೆಲ್.

ಜೆಎಸ್‌ಎಸ್ ಫಿಜಿಯೋಥೆರಪಿ ಕಾಲೇಜಿನ ಕ್ರೀಡಾ ವಿಜ್ಞಾನದ ಮುಖ್ಯಸ್ಥರಾಗಿರುವ ಡಾ.ವಿಜಯ್ ಅವರು ಇಲ್ಲಿವರೆಗೆ ನೂರಾರು ಕ್ರೀಡಾಪಟುಗಳಿಗೆ ಚಿಕಿತ್ಸೆ ನೀಡಿದ್ದಾರೆ. ಅವರಿಗೆ ಕೌನ್ಸಿಲಿಂಗ್ ಕೂಡಾ ಮಾಡಿದ್ದಾರೆ. ಅವರ ಅನುಭವದ ಪ್ರಕಾರ, ಗಾಯಗೊಂಡ ಸಮಯದಲ್ಲಿ ಮಾನಸಿಕ ಗೊಂದಲದಿಂದಾಗಿ ಕ್ರೀಡಾಪಟುಗಳು ಕುಗ್ಗಿ ಹೋಗಿರುತ್ತಾರೆ. ಭವಿಷ್ಯವೇನು ಎನ್ನುವ ಚಿಂತೆಯೂ ಮನಸ್ಸಿನಲ್ಲಿ ಓಡಾಡುತ್ತಿರುತ್ತದೆ. ಅಂತಹ ಸಮಯದಲ್ಲಿ ಅವರಿಗೆ ಸೂಕ್ತ ಆಪ್ತ ಸಮಾಲೋಚನೆ ನಡೆಸಿ, ಧೈರ್ಯ ತುಂಬಿದರೆ ಅವರು ಗಾಯವನ್ನು ಮರೆತು ಮೊದಲಿನ ಮಟ್ಟದಲ್ಲೇ ಪ್ರದರ್ಶನ ನೀಡುತ್ತಾರೆ ಎನ್ನುವುದಾಗಿದೆ.

ತಂತ್ರಜ್ಞಾನ ಬೆಳವಣಿಗೆಯಾಗಿರುವುದರಿಂದ ಗಾಯಗೊಂಡ ಕ್ರೀಡಾಪಟುಗಳನ್ನು ಪುನಶ್ಚೇತನಗೊಳಿಸುವ ಕ್ರಮವು ಮೊದಲಿಗಿಂತ ಹೆಚ್ಚು ಉತ್ತಮಗೊಂಡಿದೆ.ಮಾಂಸಖಂಡ, ಮೀನಖಂಡಗಳ ಸಾಮರ್ಥ್ಯವನ್ನು ನಿಖರವಾಗಿ ಅಳೆಯುವ ಉಪಕರಣಗಳು ಲಭ್ಯವಿರುವುದರಿಂದ ಕ್ರೀಡಾಳುಗಳಿಗೆ ಸೂಕ್ತ ಚಿಕಿತ್ಸೆ ದೊರೆತು ಮೊದಲಿನಂತೆ ಅವರು ಮೈದಾನಕ್ಕೆ ಧುಮುಕಬಹುದು ಎಂದರು.

ಇತ್ತೀಚೆಗೆ ನಡೆದ ಘಟನೆಯೊಂದನ್ನು ನೆನಪು ಮಾಡಿಕೊಂಡ ಸ್ಯಾಮುವೆಲ್ ಅವರು, ವಾಲಿಬಾಲ್ ಆಟಗಾರನೊಬ್ಬ ಗಾಯಗೊಂಡು ಆಸ್ಪತ್ರೆಗೆ ಬಂದ ಸಮಯದಲ್ಲಿ ತುಂಬ ಗಾಬರಿಯಾಗಿದ್ದರು. ಅವರಿಗೆ ಧೈರ್ಯ ತುಂಬಿ, ನೀವು ಮೊದಲಿನಂತೆ ಉತ್ತಮವಾಗಿ ಆಟವಾಡುತ್ತೀರಿ ಎಂದು ಭರವಸೆ ನೀಡಿ, ಚಿಕಿತ್ಸೆ ಮಾಡಲಾಯಿತು. ಅತಿ ಬೇಗನೆ ಚೇತರಿಸಿಕೊಂಡ ಅವರು, ಮತ್ತೆ ಮೈದಾನಕ್ಕೆ ಇಳಿದು ಉತ್ತಮವಾಗಿ ಆಟವಾಡಿ ತಮ್ಮ ತಂಡಕ್ಕೆ ಕಪ್ ಗೆದ್ದುಕೊಟ್ಟರು ಎಂದು ತಿಳಿಸಿದರು.

andolana

Recent Posts

ತಿ.‌ ನರಸೀಪುರ: ಬೈಕ್ ಡಿಕ್ಕಿ ಚಿರತೆ ಸಾವು

ತಿ. ನರಸೀಪುರ: ತಾಲೂಕಿನ ಬನ್ನೂರು ಹೋಬಳಿಯ ಬಸವನಹಳ್ಳಿ ಗ್ರಾಮದ ಸಮೀಪದ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ…

6 hours ago

ತಿರುಪತಿ ಲಡ್ಡು: ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ

ಅಮರಾವತಿ: ಜಗತ್‌ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…

8 hours ago

ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್‌ ಖಾನ್‌ ತಂದೆಗೆ ಜೀವ ಬೆದರಿಕೆ: ಮಹಿಳೆ ಸೇರಿ ಇಬ್ಬರ ಬಂಧನ

ಮುಂಬೈ:‌ ಬಾಲಿವುಡ್‌ನ ಭಾಯಿಜಾನ್ ಸಲ್ಮಾನ್‌ ಖಾನ್‌ ಅವರ ತಂದೆಗೆ ಬುರ್ಖಾ ಧರಿಸಿದ್ದ ಮಹಿಳೆ ಹಾಗೂ ಇನ್ನೊರ್ವ ವ್ಯಕ್ತಿ ಜೀವ ಬೆದರಿಕೆ…

8 hours ago

ಶಾಸಕ ಮುನಿರತ್ನಗೆ ಜಾಮೀನು: ಅತ್ಯಾಚಾರ ಪ್ರಕರಣದಲ್ಲಿ ಮತ್ತೆ ಬಂಧನ ಸಾಧ್ಯತೆ

ಬೆಂಗಳೂರು: ಗುತ್ತಿಗೆದಾರರೊಬ್ಬರಿಗೆ ಜಾತಿನಿಂದನೆ ಹಾಗೂ ಪ್ರಾಣ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ…

9 hours ago

ನುಡಿ ಹಬ್ಬಕ್ಕೆ ಆಹ್ವಾನಿಸಲು ಸಿದ್ಧವಾಗಿದೆ ಕನ್ನಡ ರಥ

ಮಂಡ್ಯ: ಜಿಲ್ಲೆಯಲ್ಲಿ ಡಿಸೆಂಬರ್ 20, 21, 22 ರಂದು ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ…

10 hours ago

ಬಸ್‌ನಲ್ಲಿ ಪ್ರಯಾಣ: ಮಹಿಳೆಯರಿಂದ ಶಕ್ತಿಯೋಜನೆಯ ಅಭಿಪ್ರಾಯ ಪಡೆದ ಪುಷ್ಪ ಅಮರನಾಥ್‌

ಮೈಸೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಶಕ್ತಿಯೋಜನೆ ಫಲಾನುಭವಿಗಳ ಅಭಿಪ್ರಾಯ ಸಂಗ್ರಹಿಸಲು ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆಯಾದ ಡಾ…

10 hours ago