ನಾಗೇಶ್ ಕಾಲೂರು
ಒಂದು ಕಾಲದ ಆ ಸುಂದರ ಮಳೆಗಾಲ ಇಂದು ಕೊಡಗಿಗೆ ಮಾತ್ರವಲ್ಲ ಇಡೀ ಪಶ್ಚಿಮ ಘಟ್ಟ ಶ್ರೇಣಿಯಲ್ಲಿರುವವರಿಗೆ ದುಸ್ವಪ್ನ ಎಂಬಂತಾಗಿದೆ. ಅದ್ಯಾವ ಬುದ್ಧಿವಂತನಿಗೆ ಬೆಟ್ಟಗಳ ಮೇಲೆ ಇಂಗು ಗುಂಡಿ ತೋಡುವ ಐಡಿಯಾ ಹೊಳೆಯಿತೋ ಗೊತ್ತಿಲ್ಲ! ಕಾವೇರಿಯ ಜಲಮೂಲದ ಬಳಿ ಭೂಕುಸಿತವಾಗಿ ಕೆಲವರು ಭೂಸಮಾಧಿಯಾಗಬೇಕಾಯಿತು. ಭಾಗಮಂಡಲ, ತೋರ ಸೇರಿದಂತೆ, ಸಾಧಾರಣವಾಗಿ ಜಲಾನಯನ ಪ್ರದೇಶಗಳಲ್ಲೇ ಹೆಚ್ಚಾಗಿ ಭೂಕುಸಿತ ಸಂಭವಿಸುತ್ತಲೇ ಇದೆ.
ಸುಮಾರು ೪೬೦ ಕೋಟಿ ವರ್ಷಕ್ಕೆ ಮುನ್ನ ‘ಭೂಮಿ’ ಎಂಬ ಈ ಕೂಸು ಹುಟ್ಟುವ ಮುನ್ನ ಅದೊಂದು ಅನಿಲದ ಮುದ್ದೆಯಾಗುತ್ತಂತೆ. ನಂತರ ನಿರಂತರ ಮಳೆ. ಮೊದಲು ನೆಲ, ನಂತರ ಪಾಚಿ- ಮರಗಿಡ, ಜೀವಿಗಳ ಸೃಷ್ಟಿ ನಂತರ ಮಂಗನಿಂದ ಮಾನವ. ಪ್ರಾಯಶಃ ಈ ಭೂಮಂಡಲದ ಅವಸಾನಕ್ಕೆ ಅಂದೇ ಬೀಜಾಂಕುರವಾಗಿರಬೇಕು.ಹಾಗೆ ನೋಡುವುದಾದರೆ ಇಡೀ ಬ್ರಹ್ಮಾಂಡ ಕ್ಷಣ ಕ್ಷಣಕ್ಕೂ ಬದಲಾವಣೆಗೆ ಪಕ್ಕಾಗುವ ಬಗೆ ವಿಸ್ಮಯವೇ ಹೌದು. ಒಂದೇ ಭೂಭಾಗವಾಗಿದ್ದ ಈ ನೆಲ ನಿಧಾನಕ್ಕೆ ಖಂಡಗಳಾದದ್ದು, ಆ ಖಂಡಗಳ ಬೇರ್ಪಡುವಿಕೆಗೆ ನೆಲ ಅದುರುತ್ತಾ ಭೂಕಂಪನಗಳಾಗುವುದು, ಸಾಗರ ತಳದಲ್ಲಿದ್ದ ಹಿಮಾಲಯದಂಥ ಭೂಭಾಗ ಈ ಪ್ರಕ್ರಿೆುಂಗಳಿಂದಾಗಿ ಪರ್ವತವಾದದ್ದು. ದ್ವಾರಕೆಯಂಥ ಭೂಭಾಗವನ್ನು ಸಮುದ್ರ ಆಪೋಶನ ಮಾಡಿದ್ದು, ಉಲ್ಕಾಪಾತವೇ ಮೊದಲಾದ ಕಾರಣಗಳಿಂದ ಸೌರಮಂಡಲದಲ್ಲಾಗುವ ಬದಲಾವಣೆ ಹೀಗೆ ಪ್ರಾಕೃತಿಕವಾಗಿ ಈ ಭೂಮಿ ಬದಲಾವಣೆಗೆ ಒಡ್ಡಿಕೊಳ್ಳುತ್ತಲೇ ಇರುತ್ತದೆ.
ಆದರೆ ಈ ಭೂಗ್ರಹಕ್ಕೆ ಮಾನವನಿಂದಲೇ ಹೆಚ್ಚು ಹಾನಿಯಾಗಿದ್ದು ಎಂಬುದು ನಮ್ಮ ಕಣ್ಣೆದುರಿಗಿರುವ ಸತ್ಯ. ಕೆಲವು ವರ್ಷಗಳಂದೀಚೆಗೆ ಈ ನೆಲಜಲದ ಶೋಷಣೆ ಅವ್ಯಾಹತ ನಡೆದೇ ಇದೆ. ಪರಿಸರದ ಮೇಲಾಗುತ್ತಿರುವ ಮಾನವ ಹಸ್ತಕ್ಷೇಪ ಮುಖ್ಯವಾಗಿ ಜನಸಂಖ್ಯಾ ಹೆಚ್ಚಳದಿಂದ ಮೊದಲಾಗಿದೆ.
ಪರಿಸರ ಸಂರಕ್ಷಣೆ ಮತ್ತು ಅಭಿವೃದ್ಧಿ ತದ್ವಿರುದ್ಧ ದಿಕ್ಕಿನಲ್ಲಿ ಸಾಗುವ ಕ್ರಿಯೆ, ಪರಿಸರ ಸಂರಕ್ಷಣೆ ಎಂಬ ಪದ ವನ ಮಹೋತ್ಸವಕ್ಕೆ ಮಾತ್ರ ಮೀಸಲಾಗಿ ಅರ್ಥ ಕಳೆದುಕೊಂಡಾಗಿದೆ. ಭೂ ಪುನಶ್ಚೇತನ, ಅರಣ್ಯೀಕರಣ ಎಂಬ ಕಣ್ಕಟ್ಟಿನ ನಾಟಕಗಳು ಜನರ ತೆರಿಗೆ ಹಣ ನುಂಗುವ ಹೊಸ ದಾರಿಗಳಷ್ಟೇ. ಅಭಿವದ್ಧಿ ಎಂಬ ಸುರಂಗ ಮಾರ್ಗಕ್ಕೆ ನುಗ್ಗಿದ ನಂತರ ಹಿಂದಿರುಗುವ ದಾರಿ ಇಲ್ಲ. ಈ ‘ಅಭಿವೃದ್ಧಿ’ ಅರಣ್ಯಗಳನ್ನು ಕಬಳಿಸಿಯಾಗಿದೆ. ಜಲಮೂಲಗಳ ಹುಟ್ಟಡಗಿಸಿಯಾಗಿದೆ. ಕಾರ್ಖಾನೆ, ವಾಹನ, ಶೀತಲೀಕರಣ ವ್ಯವಸ್ಥೆಗಳಿಂದ ವಾಯುಮಂಡಲಗಳನ್ನು ಹದಗೆಡಿಸಿಯಾಗಿದೆ. ಅಷ್ಟು ಸಾಲದೆಂಬಂತೆ ಅಭಿವೃದ್ಧಿಯ ಹೆಸರಲ್ಲಿ ಖಗೋಳ ಮಂಡಲಕ್ಕೂ ಕಸ ಚೆಲ್ಲಿಯಾಗಿದೆ. ಪರಿಣಾಮ ನಮ್ಮ ಕಣ್ಣೆದುರೇ ಇದೆ. ಓಜೋನ್ ಪದರ ಛಿದ್ರವಾಗಿ ಭೂಮಿಗೆ ವಿಕಿರಣ ಸೂಸತೊಡಗಿದೆ. ಭೂಮಿಯ ಉಷ್ಣತೆ ಏರತೊಡಗಿದೆ.
ಇದೆಲ್ಲದರ ಪರಿಣಾಮವೇ ಇಂದಿನ ಹವಾಮಾನ ಬದಲಾವಣೆ ಮತ್ತು ಪ್ರಕೃತಿ ವಿಕೋಪ!
ಹಿಂದೆ ನಮ್ಮ ಕೊಡಗು ಪಂಜೆ ಮಂಗೇಶರಾಯರ ಹಾಡಿಗೆ ಅನುಗುಣವಾಗಿ ಭೂರಮೆಯ ತಾಣವೇ ಆಗಿತ್ತು. ದಟ್ಟ ಕಾಡು, ತಲೆೆುಂತ್ತಿ ನಿಂತ ಹಸಿರು ಗುಡ್ಡಗಳು. ಜೂನ್ ಮೊದಲ ವಾರದಲ್ಲಿ ನಿಗದಿತ ಸಮಯಕ್ಕೆ ಶುರುವಾಗುವ ಮಳೆಗಾಲ. ಒಂದೆರಡು ತಿಂಗಳು ನಿರಂತರವಾಗಿ ಸುರಿಯುವ ಜಡಿಮಳೆ, ಮೈದುಂಬಿ ಹರಿಯುವ ಹಳ್ಳಕೊಳ್ಳಗಳು. ಕೊಡಗಿನಾದ್ಯಂತ ಸ್ವಚ್ಛ ಕನ್ನಡಿಗಳಂತೆ ನಳನಳಿಸುವ ಭತ್ತದ ಗದ್ದೆಗಳು. ನವೆಂಬರ್‌ನಿಂದ ಜನವರಿವರೆಗೆ ಚಳಿ, ಮಂಜಿನ ಹೊದಿಕೆ, ಬೇಸಿಗೆ ಬಂತೆಂದರೆ ೨೫, ೨೬ ಡಿಗ್ರಿ ಗರಿಷ್ಠ ತಾಪಮಾನ. ಕೊಡಗೆಂದರೆ ದಕ್ಷಿಣ ಕಾಶ್ಮೀರವೆಂಬ ಅನ್ವರ್ಥ ನಾಮ..!
ಆದರೆ ಈಗ ಅದೆಲ್ಲ ಒಂದು ಸುಂದರ ಕನಸು, ಅಷ್ಟೇ!
ಕೆಲವು ವರ್ಷಗಳ ಹಿಂದೆ, ಪ್ರವಾಸೋದ್ಯಮ ಎಂಬ ಪರಿಕಲ್ಪನೆ ಯಾವಾಗ ಮೈದಾಳಿತೋ ಅಲ್ಲಿಂದ ಪಶ್ಚಿಮ ಘಟ್ಟಗಳ ಮೇಲೆ ಮಾನವ ಹಸ್ತಕ್ಷೇಪ ಮೊದಲಾಯಿತೆನ್ನಬೇಕು. ಕೊಡಗಿನಂಥ ಬೆಟ್ಟಗುಡ್ಡಗಳ ಸೂಕ್ಷತ್ಮ ಪ್ರದೇಶದಲ್ಲಿ ರಾಕ್ಷಸ ಯಂತ್ರಗಳಿಂದ ಅಗೆತ ಮೊದಲಾಯಿತು. ಗುಡ್ಡದ ಕಲ್ಲುಗಳ ಗಣಿಗಾರಿಕೆಗಾಗಿ ಭೂಮಿೊಂಳಗೆ ಅಗಾಧ ಪ್ರಮಾಣದ ಸ್ಛೋಟಕಗಳನ್ನು ಹುದುಗಿಸಿ ಸಿಡಿಸುವಾಗ ಕೊಡಗಿನ ಒಡಲು ಕಂಪಿಸಿತೊಡಗಿತು. ಕೆಲವು ಸ್ಛೋಟಗಳನ್ನು ಪರಿಕ್ಷೀಸಿದ್ದರೆ, ಅವು ರಿಕ್ಟರ್ ಮಾಪಕದಲ್ಲಿ ೩.೫ಕ್ಕಿಂತಲೂ ಹೆಚ್ಚಿನ ಪ್ರಮಾಣ ತೋರಿಸುತ್ತಿದ್ದವೇನೋ. ಸೂಕ್ಷತ್ಮಭೂಪದರಗಳು ಹಾನಿಯಾಗಲು ಇದರ ಕೊಡುಗೆ ಸಾಕಷ್ಟಿದೆ. ಕೊಡಗು ಭೂಕಂಪನ ವಲಯದಲ್ಲಿಲ್ಲ ಎಂಬ ನಂಬಿಕೆ ಕುಸಿದದ್ದು ೨೦೧೮ರಲ್ಲಿ. ಆ ವರ್ಷ ಜುಲೈ ತಿಂಗಳಲ್ಲಿ ಸಂಭವಿಸಿದ ಭೂಕಂಪನದ ಪ್ರಮಾಣ ಎಷ್ಟಿತ್ತೆಂದು ಅಳೆಯುವ ಯಂತ್ರಗಳೂ ಇರಲಿಲ್ಲ. ಸರ್ಕಾರ ಇದರ ಪರಿಣಾಮಗಳನ್ನು ಜನರಿಗೆ ತಿಳಿಸಲೂ ಇಲ್ಲ. ಭೂಪದರಗಳ ವ್ಯತ್ಯಯದ ಪರಿಣಾಮ, ಮಳೆಗಾಲದಲ್ಲಿ ಬೆಟ್ಟದ ಕಿಬ್ಬಿಗಳಿಂದ ಉದ್ಭವಿಸುವ ಜಲಬುಗ್ಗೆಗಳಿಗೆ ಉಸಿರುಗಟ್ಟಿತು. ಇದೇ ವೇಳೆಗೆ ಭರ್ತಿಯಾಗಿದ್ದ ಹಾರಂಗಿ ಜಲಾಶಯ, ಆ ಜಲಾನಯನ ಪ್ರದೇಶಕ್ಕೆ ಕಂಟಕವಾಯಿತು. ಜಲಾಶಯಕ್ಕೆ ಹರಿದು ಹೋಗಬೇಕಾಗಿದ್ದ ಹಳ್ಳ ಕೊಳ್ಳಗಳು ಹಿಮ್ಮುಖ ಒತ್ತಡ ತಾಳಲಾರದೆ ಭೂಮಿೊಂಳಗಿನ ಜಲನಾಳಗಳು ಒಳಗಿನಿಂದಲೇ ಬಾಂಬ್ ಸಿಡಿದಂತೆ ಸ್ಛೋಟಿಸಿದ ಪರಿಣಾಮ, ಆಯಾಯ ಜಲಪಾತಗಳ ಇಕ್ಕೆಲ ಬೆಟ್ಟ ಗುಡ್ಡಗಳಲ್ಲಿ ಭೂಕುಸಿತ ಸಂಭವಿಸಿ ಜೀವಹಾನಿ, ಆಸ್ತಿಪಾಸ್ತಿ ಹಾನಿ ಸಂಭವಿಸುವಂತಾಯಿತು.
ನಾವು ಇತಿಹಾಸದಿಂದ ಪಾಠ ಕಲಿತ ಯಾವ ಉದಾಹರಣೆಯೂ ಇಲ್ಲ. ಸಂತೆ ಹೊತ್ತಿಗೆ ಮೂರು ಮೊಳ ನೇಯ್ದರಾಯಿತು. ಮತ್ತೆ ಯಥಾಪ್ರಕಾರ ಕಥೆ!
ಅಂದಿನ ಆ ಸುಂದರ ಮಳೆಗಾಲ ಕೊಡಗಿಗೆ ಮಾತ್ರವಲ್ಲ ಇಡೀ ಪಶ್ಚಿಮ ಘಟ್ಟ ಶ್ರೇಣಿಯಲ್ಲಿರುವವರಿಗೆ ದುಸ್ವಪ್ನ ಎಂಬಂತಾಗಿದೆ. ಅದ್ಯಾವ ಬುದ್ಧಿವಂತನಿಗೆ ಬೆಟ್ಟಗಳ ಮೇಲೆ ಇಂಗು ಗುಂಡಿ ತೋಡುವ ಐಡಿಯಾ ಹೊಳೆಯಿತೋ! ಕಾವೇರಿಯ ಜಲಮೂಲದ ಬಳಿೆುೀಂ ಭೂಕುಸಿತವಾಗಿ ಕೆಲವರು ಭೂಸಮಾಧಿಯಾಗಬೇಕಾಯಿತು. ಭಾಗಮಂಡಲ, ತೋರ ಸೇರಿದಂತೆ, ಸಾಧಾರಣವಾಗಿ ಜಲಾನಯನ ಪ್ರದೇಶಗಳಲ್ಲೇ ಹೆಚ್ಚಾಗಿ ಭೂಕುಸಿತ ಸಂಭವಿಸುತ್ತಲೇ ಇದೆ.
ಕೊಡಗಿನ ಈ ಪ್ರಾಕೃತಿಕ ವಿಕೋಪಗಳಿಗೆ ಕಾರಣಗಳನ್ನು ಪಟ್ಟಿ ಮಾಡಿ ತೋರಿಸಿದರೂ ಶಾಶ್ವತ ಪರಿಹಾರಕ್ಕೆ ಮನಸು ಮಾಡುವವರಿಲ್ಲ.
ಮರಳು ಗಣಿಗಾರಿಕೆ: ನಗರಗಳಲ್ಲಿ ಕಾಂಕ್ರೀಟಿಕರಣ ಅಧಿಕವಾಗಿ ಮರಳಿಗೆ ಬೆಲೆ ಬಂತು. ಅಧಿಕೃತ, ಅನಧಿಕೃತ ಮರಳು ಬಗೆತ ಶುರುವಾಯ್ತು. ನದಿಪಾತ್ರದ ದಂಡೆಗಳನ್ನು ಗಟ್ಟಿಯಾಗಿ ಹಿಡಿದಿಟ್ಟಿರುತ್ತಿದ್ದ ಮರಳು ದಿಬ್ಬಗಳು ಕರಗಿ ದಂಡೆಗಳು ಶಿಥಿಲವಾಗಿ ಭೂಕುಸಿತಗಳಿಗೆ ದಾರಿ ಮಾಡಿತು.
ಹಾಳು ಬಿದ್ದ ಭತ್ತದ ಗದ್ದೆಗಳು: ವನ್ಯಜೀವಿಗಳ ಹಾವಳಿ, ಅತಿಯಾದ ದಿನಗೂಲಿ ಭತ್ತದ ಗದ್ದೆಗಳು ಹಾಳು ಬೀಳತೊಡಗಿದವು. ಸರ್ಕಾರ ಕೊಡುವ ಪುಕ್ಸಟ್ಟೆ ಅಕ್ಕಿ ಕೂಡ ಗದ್ದೆ ಹಾಳು ಬೀಳಲು ಕಾರಣ. ತತ್ಪರಿಣಾಮ ವರ್ಷದ ಆರು ತಿಂಗಳು ಕೊಡಗಿನ ಅಂತರ್ಜಲ ಮಟ್ಟವನ್ನು ಸರಿದೂಗಿಸುತ್ತಿದ್ದ ಗದ್ದೆಗಳು ತಮ್ಮ ಕ್ರಿೆುಂ ನಿಲ್ಲಿಸಿದವು. ಕೊಡಗಿನ ಜಲಪಾತಳಿ ಏರುಪೇರಾಗಲು ಇದು ಕೂಡ ಕಾರಣ.
ಕಾಡು ನಾಶ: ಮಾವು, ಧೂಪ ಮುಂತಾದ ಆಳವಾಗಿ ಬೇರೂರುವ ಕೆಲವು ಮರಗಳನ್ನು ಮರಗಳ್ಳರ ಲಾಬಿಗೆ ಮಣಿದ ಸರ್ಕಾರಗಳು ಕಡಿಯಲು ಅನುಮತಿಸಿದ ಪರಿಣಾಮ ಮಣ್ಣನ್ನು ಹಿಡಿದಿಟ್ಟಿದ್ದ ಈ ಮರಗಳು ನಾಶವಾಗಿ ಭೂಮಿಯ ಮೇಲ್ಮಣ್ಣು ಕೊಚ್ಚೆಣೆಯಾಗಿ ಭೂಕುಸಿತಗಳಿಗೆ ದಾರಿ ಮಾಡಿಕೊಟ್ಟಂತಾಯಿತು. ನೈಸರ್ಗಿಕ ಅರಣ್ಯವನ್ನು ಕಡಿದು ಅಲ್ಲಿ ತೇಗ ಮುಂತಾದ ಮರಗಳನ್ನು ನೆಟ್ಟು, ವಾಣಿಜ್ಯೀಕರಣ ಮಾಡಲಾಯಿತು. ಪ್ರಾಣಿ ಪಕ್ಷಿಗಳ ಹೊಟ್ಟೆ ತುಂಬಿಸದ ಅಕೇಶಿಯಾ, ಸುಖಾಬುಲ್ ಮರಗಳು ನೆಡುತೋಪುಗಳಲ್ಲಿ ರಾರಾಜಿಸಿದವು. ಅರಣ್ಯೀಕರಣ ಎಂಬ ನಾಟಕದಲ್ಲಿ ಕೋಟ್ಯಂತರ ರೂಪಾಯಿಗಳು ಯಾರ್ಯಾರದೋ ಕಿಸೆಗಳಲ್ಲಿ ನಕ್ಕವು. ಬೆಟ್ಟದ ನೆತ್ತಿಯಲ್ಲಿ ನೈಸರ್ಗಿಕವಾಗಿ ಹುಟ್ಟಿ ಬೆಳೆಯುವ ಗರಿಕೆ, ಹುಲ್ಲು, ಕುರುಚಲು ಕಾಡುಗಳೇ ಅಂತರ್ಜಲ ಮಾಡುತ್ತವೆಂಬ ಸಾಮಾನ್ಯ ಜ್ಞಾನವೂ ಇಲ್ಲದ ಬುದ್ಧಿವಂತರು ಆ ಪ್ರದೇಶಕ್ಕೆ ಪೂರಕವಲ್ಲದ ಎತ್ತರ ಜಾತಿಯ ಮರಗಳ ನೆಡುತೋಪು ಮಾಡತೊಡಗಿದ್ದಾರೆ. ಕಾಡಿನ ಬೆಲೆ ಬಾಳುವ ಮರಗಳನ್ನು ಭ್ರಷ್ಟ ಅಧಿಕಾರಿ, ನಾಯಕರು ಕಡಿಸಿ ತಿಂದು ತೇಗಿ ಮರದ ಬುಡ ಕಾಣಬಾರದು ಎಂದು ‘ಕಾಡಿನ ಬೆಂಕಿ’ ನಾಟಕವಾಡುವುದು ಎಲ್ಲರಿಗೂ ಗೊತ್ತೇ ಇದೆ. ‘‘ರಸ್ತೆ ಅಗಲೀಕರಣಕ್ಕೆ ಕಾಡು ಕಡಿ, ಮಂತ್ರಿಮಾಗಧರು ಕೊಡಗಿಗೆ ಬರುವಾಗ ದಾರಿ ಬದಿಯ ಕಾಡು ಕಡಿ’’ ಇದು ನಿರಂತರ ಪ್ರಕ್ರಿೆುಂ!
ವನ್ಯಜೀವಿ- ಮಾನವ ಸಂಘರ್ಷ: ಪ್ರಾಣಿಗಳ ವಾಸದ ಜಾಗದ ನಿರಂತರ ಒತ್ತುವರಿ ಬೇರೆ ಬೇರೆ ಕಾರಣಕ್ಕಾಗಿ ನಡೆದೇ ಇದೆ. ಆ ಪ್ರಾಣಿಗಳು ನಾಡಿಗೆ ಬರದೆ ಇನ್ನೇನಾಗುತ್ತೆ? ಆನೆ, ಹುಲಿ, ಕಡೆ ಮುಂತಾದ ಪ್ರಾಣಿಗಳಿಗೆ ಇರಲು ಕಾಡಿಲ್ಲ. ಇದ್ದ ಕಾಡಿನಲ್ಲಿ ಆಹಾರವಿಲ್ಲ; ಹಾಗಾಗಿೆುೀಂ ಇಂದು ಭತ್ತದ ಗದ್ದೆಗಳು ಪಾಳು ಬೀಳುವಂತಾಗಿದ್ದು.
ಹರಳು ಕಲ್ಲು ದಂಧೆ: ಮೀಸಲು ಅರಣ್ಯಗಳಲ್ಲಿ ಕೋಟ್ಯಂತರ ರೂಪಾಯಿಗಳ ಕೆಂಪು ಕಲ್ಲುಗಳ ನಿಕ್ಷೇಪವಿದೆ(ರೂಬಿ) ಕೆಲವಾರು ವರ್ಷಗಳಿಂದ ಈ ನಿಕ್ಷೇಪಗಳಿಗೆ ಕೇಡುಗಾಲ ಬಂದಿದೆ. ಪಟ್ಟಭದ್ರ ಕುಳಗಳು ಅಧಿಕಾರಿಗಳ ಕುಮ್ಮಕ್ಕಿನಿಂದ ನೆಲ ಬಗೆಯುತ್ತಲೇ ಇದ್ದಾರೆ. ಇಂಥ ನೂರಾರು ನಿಕ್ಷೇಪ ಬಾವಿಗಳು ಬಾ್ಂತೆುರೆದುಕೊಂಡು ಮಳೆಗಾದಲ್ಲಿ ನೀರು ತುಂಬಿಸಿಕೊಂಡು ಭೂಪದರಗಳ ಘರ್ಷಣೆಗೆ ದಾರಿ ಮಾಡುಕೊಡುತ್ತಿವೆ. ಪ್ರಭಾವಿಗಳು ಕೈಜೋಡಿಸಿದ್ದಾರೆಂಬ ವದಂತಿಗಳಿವೆ. ಈ ನಿಕ್ಷೇಪ ಬಾವಿಗಳು ಕೂಡ ಭೂಕಂಪನಕ್ಕೆ ಕಾರಣವಾಗುತ್ತಿವೆ ಎಂಬ ಮಾತಿದೆ.
ರಾಸಾಯನಿಕ ಗೊಬ್ಬರ, ಕೀಟನಾಶಕ, ಕಳೆನಾಶಕಗಳು: ಕೆಲಸಗಾರರ ಮಿತಿಮೀರಿದ ಸಂಬಳ ಬೆಳೆಗಾರರನ್ನು ಹೆಚ್ಚು, ಬೆಳೆ ತೆೆುಂಗಲೇಬೇಕಾದ ಅನಿವಾರ್ಯತೆಗೆ ಸಿಲುಕಿಸಿದೆ ಎಂಬುದು ಸತ್ಯ. ಹೀಗಾಗಿ ಬೆಳೆಗಾರರು ರಾಸಾಯನಿಕ ಗೊಬ್ಬರ, ಕೀಟನಾಶಕ, ಕಳೆನಾಶಕಗಳ ಮೊರೆ ಹೋಗುತ್ತಿದ್ದಾರೆ. ಸಾವಯವ ಗೊಬ್ಬರಕ್ಕಿಂತ ರಾಸಾಯನಿಕ ಸುರಿದರೆ ಹೆಚ್ಚು ಬಾಚಿಕೊಳ್ಳಬಹುದು. ರಥವನ್ನು ಸರಿದೂಗಿಸಬಹುದು ಎಂಬ ೋಂಚನೆ. ಆದರೆ, ಇದರ ದೀರ್ಘಕಾಲಿಕ ಪರಿಣಾಮ ಘೋರ. ಬೆಳೆದ ಬೆಳೆ ವಿಷಯಮವಾಗುವುದು ಮಣ್ಣಿನ ರಚನೆ ಹಾಳಾಗುತ್ತಿರುವುದು ಸಾಮಾನ್ಯ. ಅದರೊಂದಿಗೆ ಕಳೆ ಕೊಚ್ಚುವ ಬದಲು ಕಳೆನಾಶಕದ ಬಳಕೆ..! ಈ ಕಳೆನಾಶಕಗಳು ಕಳೆಯನ್ನು ಬೇರು ಸಮೇತ ಕೊಲ್ಲುತ್ತವೆ. ಆರು ಇಂಚುಗಳ ಆಳದವರೆಗಿರುವ ಮೇಲ್ಮಣ್ಣನ್ನು ಸರ್ವನಾಶ ಮಾಡುತ್ತವೆ. ಎರೆಹುಳುಗಳು, ಉಪೋಂಗಿ ಕೀಟಗಳು, ಮಣ್ಣಿನ ಸ್ಥಿತಿಸ್ಥಾಪಕ ಗುಣವನ್ನು ಕಾಯ್ದಿಟ್ಟಿರುವ ಬ್ಯಾಕ್ಟಿರಿಯಾಗಳು, ಎಲ್ಲವೂ ಹರೋಹರ..! ಮಣ್ಣು ಮಿದುವಾಗಿ ಸಾಧಾರಣ ಮಳೆಯಾದರೂ ಹಳ್ಳದ ಕಡೆಗೆ ಕೊಚ್ಚಿಹೋಗುತ್ತದೆ. ಮಣ್ಣು, ನೀರನ್ನು ಇಂಗಿಸುವ, ಹಿಡಿದಿಟ್ಟುಕೊಳ್ಳುವ ಶಕ್ತಿ ಕಳಕೊಂಡು ಭೂಕುಸಿತಕ್ಕೆ ದಾರಿ ಮಾಡಿಕೊಡುತ್ತಿದೆ.
ಬೆಟ್ಟಗಳ ನೆತ್ತಿ ಸವರಿ ಕಟ್ಟಡ ಕಟ್ಟುವುದು: ಪ್ರವಾಸೋದ್ಯಮ ಎಂಬ ಪರಿಕಲ್ಪನೆ ಬಂದ ಮೇಲೆ ‘ವ್ಯೆ ಪಾಯಿಂಟ್ ಇದೆ ಬನ್ನಿ’ ಎಂದು ಸ್ವಾಗತಿಸುವ ಪರಿಪಾಠ. ಕೊಡಗಿನ ಎಲ್ಲಾ ಹಸಿರು ಬೆಟ್ಟಗಳ ಮೇಲೂ ಕಟ್ಟಡಗಳು..! ಬೆಟ್ಟಗಳು ಪ್ರಕೃತಿಯ ಕೊಡುಗೆ. ಇದರ ಮೇಲಿನ ಹುಲ್ಲು, ಗರಿಕೆ ರೋಮ ರಂಧ್ರಗಳಂತೆ ನೀರನ್ನು ಹೀರಿ ಅಂತರ್ಜಲವಾಗಿಸುತ್ತಿದ್ದವು.
ರಾಕ್ಷಸ ಯಂತ್ರಗಳು: ಬಹುಪಥ ರಸ್ತೆ, ಮನೆಯ ಪಾಯ ಅಗೆತ, ರಸ್ತೆಯ ಬದಿಯ ಚರಂಡಿ ಸರಿಪಡಿಸುವಿಕೆ, ರಸ್ತೆಗಳಲ್ಲಿ ಒಳಚರಂಡಿ ಕೆಲಸ, ಕೆರೆ, ಇಂಗುಗುಡಿ ಹೀಗೆ ಪ್ರತಿೊಂಂದಕ್ಕೂ ಬೇಕು ರಾಕ್ಷಸ ಯಂತ್ರಗಳು. ಈ ಯಂತ್ರಗಳು ಭೂಮಿಯನ್ನು ಗಡಗಡನೆ ಅದುರಿಸುತ್ತಾ ಸಡಿಲಗೊಳಿಸುತ್ತವೆ. ರಸ್ತೆ ಬದಿಯ ದಿಣ್ಣೆಗಳನ್ನು ಲಂಬವಾಗಿ ಕತ್ತರಿಸುವುದರಿಂದ ಎತ್ತರದ ಭಾಗ ಶಕ್ತಿ ಕಳಕೊಂಡು ಮರಗಳ ಸಮೇತ ರಸ್ತೆಗೆ ಕುಸಿಯುವುದು ಸಾಮಾನ್ಯವಾಗಿದೆ.
ನಗರ ಪ್ರದೇಶಗಳ ವಿಸ್ತರಣೆ, ಕಾಂಕ್ರೀಟಿಕರಣ: ಮಳೆನೀರಿನ ಬಹುಪಾಲು ಹರಿದು ಹೋಗುತ್ತದೆ. ಶೇ.೨೦ರಷ್ಟು ನೆಲದೊಳಗೆ ಇಂಗುತ್ತದೆ. ನಗರ ಪ್ರದೇಶಗಳಲ್ಲಿ ನೀರು ಇಂಗುವುದೇ ಇಲ್ಲ. ಹಾಗಾಗಿ ಭೂಮಿಯ ಸಹಜ ಸ್ಥಿತಿ ಏರುಪೇರಾಗುತ್ತದೆ. ಈ ನಗರಗಳಿಗೆ ನೀರೊದಗಿಸಲು ಮಿತಿ ಮೀರಿದ ಕೊಳವೆ ಬಾವಿಗಳು. ಇವು ಅಂತರ್ಜಲದ ನಾಶಕ್ಕೆ ತಮ್ಮ ಕಾಣಿಕೆ ನೀಡುತ್ತಲೇ ಇವೆ.
ಈ ವರ್ಷ ಕೊಡಗಿನ ನೆಲ ಮತ್ತೆ ಭೂಕಂಪನದಿಂದ ಅದುರಿದೆ. ಕೆಲವು ಕಡೆ ಭೂಕುಸಿತಗಳಾಗುತ್ತಿವೆ. ಕೊಡಗಿನ ಭೌಗೋಳಿಕ ರಚನೆಯನ್ನೇ ಅಧ್ಯಯನ ಮಾಡದ ವಿಜ್ಞಾನಿಗಳು ತಾವು ಹೇಳಿದ್ದೇ ಪರಮ ಸತ್ಯವೆಂದು ತಿಪ್ಪೆ ಸಾರಿಸುತ್ತಾರೆ.
ಮಳೆಗಾಲ ಬಂತೆಂದರೆ ಕೊಡಗಿನ ನಿವಾಸಿಗಳು ನಿದ್ದೆ ಮಾಡದೆ ಭಯದಲ್ಲೇ ಬದುಕುವ ಪರಿಸ್ಥಿತಿ ಮುಂದುವರಿದೇ ಇದೆ!
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…