– ಡಾ. ಬಿ.ಡಿ. ಸತ್ಯನಾರಾಯಣ,
ಚರ್ಮ ಮತ್ತು ಲೈಂಗಿಕ ರೋಗಗಳ ತಜ್ಞರು, ಮೈಸೂರು
ಕಾಂಡೈಲೋಮಾ ಅಕ್ಯುಮಿನೇಟಾ ಅಥವಾ ವೆನೆರಿಯಲ್ ವಾಟರ್ರ್ ಒಂದು ಲೈಂಗಿಕ ಕಾಯಿಲೆಯಾಗಿದ್ದು, ಹ್ಯೂಮನ್ ಫ್ಯಾಪಿಲೋಮ ವೈರಸ್ ಜಾತಿಯ ಕೆಲವು ತಳಿಗಳು ಈ ರೋಗಕ್ಕೆ ಕಾರಣವಾಗಿವೆ. ಇದೇ ಜಾತಿಯ ಕೆಲವು ವೈರಾಣುಗಳಿಂದ ಮಕ್ಕಳಲ್ಲಿ ಕಾಮನ್ ವಾರ್ಟ್ (ಸಾಮಾನ್ಯ ಗುಳ್ಳೆಗಳು) ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ಅನೈತಿಕ ಚಟುವಟಿಕೆಯಲ್ಲಿ ಪಾಲ್ಗೊಂಡವರು, ವೇಶ್ಯೆಯರು, ಅಸುರಕ್ಷಿತ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುವವರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಈ ರೋಗ ಕಾಣಿಸಿಕೊಳ್ಳುತ್ತದೆ.
ಪ್ರಾರಂಭದಲ್ಲಿ ರೋಗಾಣು ಶರೀರವನ್ನು ಹೊಕ್ಕಿದ ಜಾಗದಲ್ಲಿ ೩ ರಿಂದ ೮ ವಾರಗಳ ಒಳಗೆ ರೋಗದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಲೈಂಗಿಕ ಅಂಗ, ಮೂತ್ರಧ್ವಾರ, ಮಲಧ್ವಾರದ ಅಕ್ಕಪಕ್ಕದಲ್ಲಿ ಒರಟಾದ ಸಣ್ಣ ಸಣ್ಣ ವಾರ್ಟ್‌ಗಳು (ಗುಳ್ಳೆಗಳು) ಕಾಣಿಸಿಕೊಳ್ಳುತ್ತವೆ. ಇವುಗಳು ಯಾರುವೇ ರೀತಿಯ ನೋವು ಉಂಟು ಮಾಡುವುದಿಲ್ಲ. ಹಾಗೆಂದು ಇವುಗಳನ್ನು ನಿರ್ಲಕ್ಷ್ಯ ಮಾಡಿದರೆ ಗುಳ್ಳೆಗಳ ಗಾತ್ರ ನಿಧಾನವಾಗಿ ಹೆಚ್ಚಾಗುತ್ತಾ ಹೋಗುತ್ತದೆ. ನಂತರ ಸಣ್ಣ ಸಣ್ಣ ಗುಳ್ಳೆಗಳು ಕೂಡಿಕೊಂಡು ಗೋಲಿಯಷ್ಟು ಗಾತ್ರಕ್ಕೆ ತಿರುಗುತ್ತವೆ. ಕೆಲವರಲ್ಲಿ ಟೆನ್ನಿಸ್ ಬಾಲ್‌ನಷ್ಟು ದಪ್ಪಕ್ಕೆ ತಿರುಗಿದ ಉದಾಹರಣೆಗಳೂ ಇವೆ.
ಪ್ರಾರಂಭಿಕ ಹಂತದಲ್ಲೇ ಇವುಗಳನ್ನು ಗುರುತಿಸಿ ಸೂಕ್ತ ಚಿಕಿತ್ಸೆ ತೆಗೆದುಕೊಂಡರೆ ಅಪಾಯ ಇಲ್ಲ. ಇಲ್ಲದೇ ಇದ್ದರೆ ಇದು ಮುಂದೆ ಕ್ಯಾನ್ಸರ್‌ಗೆ ತಿರುಗಿ ಪ್ರಾಣಕ್ಕೂ ಅಪಾಯ ತರಬಹುದು.
ಗುಳ್ಳೆಗಳು ಒಂದೆರಡು ಸೆ.ಮೀ. ನಷ್ಟು ಸಣ್ಣದಿರುವಾಗಲೇ ಪೋಡೋಫಿಲನ್ ಕಾಟರಿ ಶಸ್ತ್ರಚಿಕಿತ್ಸೆ ಅಥವಾ ಕ್ರಯೋತಿರಿಪಿಯಿಂದ ಇವುಗಳನ್ನು ಗುಣಪಡಿಸಬಹುದು.
ನಂಜನಗೂಡು: 5 ಸಾವಿರ ರೂ ಸಾಲ ಪಾವತಿಗಾಗಿ ಮಾನಸಿಕವಾಗಿ ಕಿರುಕುಳ ನೀಡಿದ ವ್ಯಕ್ತಿ ಮನೆ ಮುಂದೆ ಸೆಲ್ಫಿ ವಿಡಿಯೋ ಮಾಡಿ…
ಮಂಡ್ಯ: ಡಿವೈಡರ್‌ಗೆ ಡಿಕ್ಕಿ ಹೊಡೆದ ಕಾರು ಪಲ್ಟಿಯಾಗಿ ಬಿದ್ದ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿರುವ ಧಾರುಣ ಘಟನೆ ಮಂಡ್ಯದಲ್ಲಿ ನಡೆದಿದೆ.…
ಬೆಂಗಳೂರು: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಬೆಳಗಿನ ಜಾವ ದಟ್ಟವಾದ ಮಂಜು ಕವಿದ ವಾತಾವರಣ ಇರಲಿದೆ.…
ಕೊಳ್ಳೇಗಾಲ: ಮೇಯಲು ಬಿಟ್ಟಿದ್ದ ಮೇಕೆಗಳು ಯೂರಿಯಾ ಗೊಬ್ಬರ ತಿಂದು ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಜಾಗೇರಿ ಹಳೆ…
ಚಾಮರಾಜನಗರ: ಪಾದಾಚಾರಿಗಳ ಮೇಲೆ ಏಕಾಏಕಿ ಹುಚ್ಚುನಾಯಿ ದಾಳಿ ನಡೆಸಿದ ಪರಿಣಾಮ 7 ಮಂದಿ ಗಾಯಗೊಂಡಿರುವ ಘಟನೆ ಯಳಂದೂರು ಪಟ್ಟಣದಲ್ಲಿ ನಡೆದಿದೆ.…
ಮಡಿಕೇರಿ: ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಮ್ಮ ವಸ್ತುಗಳು ಏನೇ ಇದ್ದರೂ ಅಫಿಡವಿಟ್‌ನಲ್ಲಿ ತೋರಿಸಿದ್ದರೆ ಯಾವುದೇ ಸಮಸ್ಯೆ ಆಗಲ್ಲ. ಈ ಹಿಂದೆ…