ಆಂದೋಲನ ಪುರವಣಿ

ಸರ್ಕಾರಿ ಶಾಲೆಯಲ್ಲಿ ರೊಬೋ ಪಾಠ

ಮಹೇಂದ್ರ ಹಸಗೂಲಿ

ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ಮೂಲ ಸೌಕರ್ಯಗಳಿಲ್ಲ ಎನ್ನುವ ಮಾತುಗಳು ಮಾಮೂಲು. ಇದಕ್ಕೆ ಅಲ್ಲೊಂದು ಇಲ್ಲೊಂದು ಅಪವಾದಗಳೂ ಉಂಟು. ಅದೇ ರೀತಿ ಇಲ್ಲೊಂದು ಪ್ರೌಢಶಾಲೆ ಅಗತ್ಯ ಮೂಲ ಸೌಲಭ್ಯ, ಅತ್ಯಾಧುನಿಕ ವಿಜ್ಞಾನ ಪ್ರಯೋಗಾಲಯಗಳನ್ನು ಒಳಗೊಂಡು ನಿಜವಾದ ಮಾದರಿ ಶಾಲೆಯಾಗಿದೆ. ಆ ಮೂಲಕ ದಕ್ಷಿಣ ಭಾರತ ಮಟ್ಟದಲ್ಲಿಯೇ ಗುಂಡ್ಲುಪೇಟೆ ತಾಲ್ಲೂಕಿನ ಬೇಗೂರು ಸರ್ಕಾರಿ ಪ್ರೌಢಶಾಲೆ ಗುರುತಿಸಿಕೊಂಡಿದೆ. ಇದರ ಹಿಂದಿನ ಪ್ರೇರಕ ಶಕ್ತಿ ಸಚಿವ ವಿ.ಸೋಮಣ್ಣ ಅಭಿಮಾನಿಗಳು.

ಹೌದು, ರಾಜಕಾರಣಿಗಳು, ನಟರು, ದೊಡ್ಡ ದೊಡ್ಡ ವ್ಯಕ್ತಿಗಳ ಅಭಿಮಾನಿಗಳು ಅವರ ಹುಟ್ಟುಹಬ್ಬ, ವಿಶೇಷ ದಿನಗಳ ಆಚರಣೆಗೆ ಬೇರೆ ಬೇರೆ ದಾರಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ವಿ.ಸೋಮಣ್ಣ ಅಭಿಮಾನಿಗಳು ಅವರ ಹುಟ್ಟುಹಬ್ಬ ಆಚರಣೆಯನ್ನು ನೆಪವಾಗಿಸಿಕೊಂಡು ಬೇಗೂರು ಸರ್ಕಾರಿ ಶಾಲೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಅದೂ ಕೂಡ ವೈಜ್ಞಾನಿಕ ದೃಷ್ಟಿಕೋನವನ್ನು ಇಟ್ಟುಕೊಂಡು.

ಪ್ರೌಢಶಾಲೆಯಲ್ಲಿ ೨೨೫ ಮತ್ತು ಪಿಯುಸಿ ಕಾಲೇಜಿನಲ್ಲಿ ೩೮೦ ವಿದ್ಯಾರ್ಥಿಗಳನ್ನು ಒಳಗೊಂಡಿರುವ ಶಾಲೆ ಈ ಭಾಗದ ಪ್ರಮುಖ ಶೈಕ್ಷಣಿಕ ಕೇಂದ್ರ. ಈ ಹಿಂದೆ ಮೈಸೂರು ಮಹಾರಾಜರು ವಿಶ್ರಾಂತಿ ಗೃಹ ನಿರ್ಮಾಣ ಮಾಡಿಕೊಂಡಿದ್ದರು. ೧೯೬೨ ರಲ್ಲಿ ಮಹಾರಾಜರಿಂದ ಬಾಡಿಗೆಗೆ ಕಟ್ಟಡವನ್ನು ಪಡೆದು ಆರಂಭವಾದ ಶಾಲೆ ೧೯೬೪ ರಲ್ಲಿ ಅಧಿಕೃತವಾಗಿ ತಾಲ್ಲೂಕು ಬೋರ್ಡ್ ಶಾಲೆಯಾಗಿ ನೋಂದಣಿಯಾಯಿತು.

ಪ್ರಯೋಗಾಲಯದ ವಿಶೇಷತೆಗಳು:

ಹುಮನಾಯ್ಡ್ ರೋಬೋಟ್ ಒಳಗೊಂಡಿರುವ ಪ್ರಯೋಗಾಲಯದಲ್ಲಿ ಲೊಕೊಮೊಟಿವ್‌ಗಳಿಂದ ಹಿಡಿದು ವಿಂಡ್‌ಮಿಲ್‌ವರೆಗೆ ೫೦೦ಕ್ಕೂ ಹೆಚ್ಚು ಮಾದರಿಗಳನ್ನು ತಯಾರಿಸಲು ಸಹಾಯ ಮಾಡುವ ರೋಬೋಟಿಕ್ ಕಿಟ್ ಇಲ್ಲಿದೆ. ವಿವಿಧ ಶಾಲೆಗಳನ್ನು ಏಕ ಕಾಲದಲ್ಲಿ ಸಂಪರ್ಕಿಸಿ, ಆನ್‌ಲೈನ್ ಮೂಲಕ ಕ್ಲಾಸ್ ನಡೆಸಲು ಸಹಕಾರಿಯಾಗಿದೆ. ಇದರ ಜೊತೆಗೆ ಪಠ್ಯಕ್ಕೆ ಸಂಬಂಧಿಸಿದಂತೆ ಇರುವ ಪ್ರಯೋಗಗಳು, ಪ್ರಮೇಯಗಳಿಗೂ ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ಉತ್ತರ ಒದಗಿಸುವ ವ್ಯವಸ್ಥೆ ಮಾಡಲಾಗಿದೆ.

ವಿದ್ಯಾರ್ಥಿಗಳಿಗೆ ಆಗುವ ಪ್ರಯೋಜನಗಳು

*ವಿದ್ಯಾರ್ಥಿಗಳಿಗೆ ಇರುವ ಕುತೂಹಲಗಳಿಗೆ ವೈಜ್ಞಾನಿಕವಾದ ಉತ್ತರ ಸಿಗುತ್ತದೆ.

* ರೋಬೋಟ್, ರೋಬೋಟಿಕ್ ಕಿಟ್‌ಗಳ ಪರಿಚಯದಿಂದ ಆಧುನಿಕ ಜಗತ್ತಿನ ಓಟದ ಬಗ್ಗೆ ವಿದ್ಯಾರ್ಥಿಗಳಿಗೆ ಕಿರು ಪರಿಚಯವಾಗಲಿದೆ.

* ತಂತ್ರಜ್ಞಾನದ ಬಳಕೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡುತ್ತದೆ.

* ಕನೆಕ್ಟಿಂಗ್ ಸ್ಕೂಲ್ ಪರಿಕಲ್ಪನೆಯಿಂದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಪಡೆಯಲು ಸಹಾಯ ಮಾಡುತ್ತದೆ.

* ಸಂಪನ್ಮೂಲ ವ್ಯಕ್ತಿಗಳು ಒಂದೇ ಕೇಂದ್ರದಿಂದ, ಒಂದೇ ಬಾರಿಗೆ ಹೆಚ್ಚಿನ ವಿದ್ಯಾರ್ಥಿಗಳನ್ನು ತಲುಪಬಹುದಾಗಿದೆ.

* ವಿದ್ಯಾರ್ಥಿಗಳಲ್ಲಿ ಥಿಯರಿಯ ಜೊತೆಗೆ ಪ್ರಾಯೋಗಿಕ ಶಿಕ್ಷಣವೂ ದೊರೆಯುವುದರಿಂದ ಬೇಗ ವಿಷಯದ ಗ್ರಹಿಕೆ ಸಾಧ್ಯವಾಗುತ್ತದೆ.

ಮೂರು ಕಲ್ಪನೆಗಳು

ಲ್ಯಾಬ್ ಅನ್ನು ವಿಶೇಷವಾಗಿ ಮೂರು ಕಲ್ಪನೆಗಳನ್ನು ಇಟ್ಟುಕೊಂಡು ರಚನೆ ಮಾಡಲಾಗಿದೆ.

  1. ಅದರಲ್ಲಿ ಮೊದಲನೆಯದು ಸಿಲಬಸ್ ಓರಿಯಂಟೆಡ್. ಇದರ ಅನ್ವಯ ಲ್ಯಾಬರೇಟರಿ ಪಠ್ಯಕ್ರಮದ ಅನುಗುಣವಾಗಿ ಎಲ್ಲ ಪ್ರೋಂಗಾಲಯದ ಸಾಮಗ್ರಿಗಳ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಮಕ್ಕಳು ಪರೀಕ್ಷೆ ಎದುರಿಸುವುದು, ಉತ್ತಮ ಅಂಕಗಳನ್ನು ಗಳಿಸುವುದು ಸಾಧ್ಯವಾಗುತ್ತದೆ.
  2. ಎರಡನೇಯದ್ದು, ರೋಬೋಟ್ ಮತ್ತು ರೋಬೋಟಿಕ್ ಪರಿಕರಗಳ ಅಳವಡಿಕೆ. ಜಪಾನ್ ನಿಂದ ತರಿಸಿರುವ ಈ ವಿಶೇಷ ರೋಬೋಟ್ ಮಕ್ಕಳು ಕೇಳುವ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡುತ್ತದೆ. ಅಲ್ಲದೇ ವಿಜ್ಞಾನದ ವಿವಿಧ ಮಾದರಿಗಳನ್ನು ತಯಾರಿಸಲು ಇದು ವಿದ್ಯಾರ್ಥಿಗಳಿಗೆ ನೆರವು ನೀಡಲಿದೆ.
  3. ಮೂರನೇ ಪರಿಕಲ್ಪನೆ ಡಿಜಿಟಲ್ ಕನೆಕ್ಷನ್. ಗ್ರಾಮೀಣ ಭಾಗದಲ್ಲಿ ಶಿಕ್ಷಕರ ಕೊರತೆ ಇದೆ. ಇದರ ನಿವಾರಣೆಗಾಗಿ ಬೇಗೂರು ಶಾಲೆಯನ್ನು ಕೇಂದ್ರವಾಗಿಸಿಕೊಂಡು ಬೇರೆ ಶಾಲೆಗಳಲ್ಲಿ ಪ್ರೊಜೆಕ್ಟರ್, ಸ್ಪೀಕರ್ ಬಳಸಿ ಅಲ್ಲಿನ ಮಕ್ಕಳಿಗೆ ಪಾಠ ಮಾಡುವುದು, ವಿಶೇಷ ತರಬೇತಿ ನೀಡುವುದಾಗಿದೆ.

ನಮ್ಮ ಕಾಲೇಜಿಗೆ ವಿಜ್ಞಾನ ರೋಬೋಟಿಕ್ ಲ್ಯಾಬ್ ಬಂದಿರುವುದು ಸಂತೋಷದ ವಿಷಯ. ಇದರಿಂದ ನಮಗೆ ಪ್ರೋಂಗಗಳನ್ನು ಮಾಡಲು ಸಾಧ್ಯವಾಗಲಿದೆ. ಇದನ್ನು ಸದುಪೋಂಗ ಪಡಿಸಿಕೊಂಡು ದ್ವಿತೀಯ ಪಿಯುಸಿ ಸಿಇಟಿ, ನೀಟ್ ಪರೀಕ್ಷೆಗಳಲ್ಲಿ ಉತ್ತಮ ರ್ಯಾಂಕ್ ಪಡೆಯಲು ಪ್ರಯತ್ನಿಸುತ್ತೇವೆ. ಪ್ರತಿೊಂಂದು ವಿಷಯವನ್ನೂ ಪ್ರಾೋಂಗಿಕವಾಗಿ ಮಾಡಿ ಕಲಿತುಕೊಳ್ಳುವ ಅವಕಾಶ ದೊರೆತಿದೆ. -ಬಸವಸಿರಿ ಎಚ್.ಎಲ್., ಪ್ರಥಮ ಪಿಯುಸಿ ವಿದ್ಯಾರ್ಥಿನಿ, ಬೇಗೂರು

ನಮ್ಮ ಕಾಲೇಜಿನ ರೋಬೋಟಿಕ್ ಲ್ಯಾಬ್ ವರ್ಣರಂಜಿತವಾಗಿದೆ. ಆಕರ್ಶಕ ಹಾಗೂ ವಿಜ್ಞಾನದ ಬಗ್ಗೆ ಆಸಕ್ತಿ ಹೆಚ್ಚಿಸಿದೆ. ಅವಶ್ಯಕವಾದ ವಿಜ್ಞಾನ ಮಾದರಿಗಳು ಇವೆ. ನಮ್ಮ ಸಂಶಯಗಳಿಗೆ ಉತ್ತರ ನೀಡುವ ರೋಬೋಟ್, ವರ್ಚುವಲ್ ತರಗತಿಗೆ ಅನುಕೂಲವಾಗುವ ಪ್ರೊಜೆಕ್ಟರ್‌ಗಳು, ಇಂಟರ್‌ನೆಟ್ ಸೌಲಭ್ಯ ಇದ್ದು, ವಿಜ್ಞಾನವನ್ನು ಕಲಿಯಲು ಸಹಾಯಕವಾಗಿದೆ. ನಾವು ಖಂಡಿತವಾಗಿ ಇದರ ಸದುಪೋಂಗ ಪಡೆದುಕೊಳ್ಳುತ್ತೇವೆ. – ಲಿಂಗರಾಜು ಸಿ.ಪಿ. ವಿಜ್ಞಾನ ವಿಭಾಗದ ವಿದ್ಯಾರ್ಥಿ,

ಸರ್ಕಾರಿ ಶಾಲೆಯಲ್ಲಿ ವಿಜ್ಞಾನ ರೋಬೋಟಿಕ್ ಲ್ಯಾಬ್ ನಿರ್ಮಾಣದಿಂದ ನಮ್ಮ ಮಕ್ಕಳು ತುಂಬಾ ಸಂತೋಷದಿಂದ ಇದ್ದಾರೆ. ಅವರು ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ ತೋರುತ್ತಿದ್ದು ಶಾಲೆ ಕಾಲೇಜಿಗೆ ಹೋಗುವುದಕ್ಕೆ ತುಂಬಾ ಉತ್ಸುಕರಾಗಿದ್ದಾರೆ. -ಎಚ್.ಎಸ್. ಲೋಕೇಶ್ ಹೊರೆಯಾಲ ಪೋಷಕರು.

ಇತ್ತೀಚಿನ ದಿನಗಳಲ್ಲಿ ಎಲ್ಲರೂ ನಾಯಕರನ್ನು ಮೆಚ್ಚಿಸಲು ಲಕ್ಷಾಂತರ ರೂ. ಹಣ ಖರ್ಚು ಮಾಡುತ್ತಾರೆ. ಒಂದು ದಿನದ ಕಾರ್ಯಕ್ರಮ ಮಾಡಿ ಖುಷಿ ಪಡಿಸಲು ಹವಣಿಸುತ್ತಾರೆ. ಆದರೆ ವಿ. ಸೋಮಣ್ಣ ಅಭಿಮಾನಿಗಳು ಗ್ರಾಮೀಣ ಮಟ್ಟದ ಮಕ್ಕಳ ಶಿಕ್ಷಣಕ್ಕೆ ನೆರವಾಗಬೇಕು ಎಂಬ ಉದ್ದೇಶದಿಂದ ಈ ಕಾರ್ಯ ಮಾಡಿದ್ದಾರೆ. ಸೋಮಣ್ಣ ಅವರ ಜನಪರ ಕೆಲಸಕ್ಕೆ ಹೆಗಲು ಕೊಡುವ ಕೆಲಸ ಅಭಿಮಾನಿಗಳಿಂದ ಆಗಿದೆ. – ಆಲನಹಳ್ಳಿ ಮಹದೇವಸ್ವಾಮಿ, ಮಾಜಿ ಅಧ್ಯಕ್ಷರು ಮಲೆ ಮಹದೇಶ್ವರ ಬೆಟ್ಟದ ಧರ್ಮದರ್ಶಿ ಮಂಡಳಿ

ವಿ. ಸೋಮಣ್ಣ ಅಭಿಮಾನಿಗಳು ಬಂದು ನನ್ನನ್ನು ಶಾಲೆಗೆ ಏನು ಮಾಡಬಹುದು ಎಂದು ಸಲಹೆ ಕೇಳಿದರು. ಆಗ ಸರ್ಕಾರಿ ಶಾಲೆ ಮಕ್ಕಳಿಗೆ ಹೊಸ ಮಾದರಿಯ ತಂತ್ರಜ್ಞಾನದ ಪರಿಚಯ ಅಷ್ಟಾಗಿ ಇರುವುದಿಲ್ಲ. ಹೀಗಾಗಿ ಅವರಿಗೆ ಹೊಸ ಬಗೆಯ ಅಧ್ಯಯನಕ್ಕೆ ಅವಕಾಶ ಮಾಡಿಕೊಡಬೇಕು ಎನ್ನುವುದಕ್ಕಾಗಿ ವಿಜ್ಞಾನ ಪ್ರಯೋಗಾಲಯ ಸಲಹೆ ಮಾಡಿದೆ. ಶಿಕ್ಷಕರಿಗೆ ಮತ್ತು ಮಕ್ಕಳಿಗೆ ಇದರಿಂದ ತುಂಬಾ ಅನುಕೂಲ ಆಗಿದೆ. – ಗಿರೀಶ್ ಬಾಗ, ಶಿಕ್ಷಣ ತಜ್ಞರು, ಮೈಸೂರು

 

andolana

Recent Posts

ವಿಶೇಷ ಚೇತನ ಮಕ್ಕಳು ಸಮಾಜಕ್ಕೆ ಶಾಪವಲ್ಲ, ವರ; ದೀಪಕ್‌ ಅಭಿಮತ

' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…

45 mins ago

ಸಕ್ಕರೆ ನಗರಿ ಅಂದ ಹೆಚ್ಚಿಸಿದ ದೀಪಾಲಂಕಾರ

ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್‌ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…

57 mins ago

ಮಂಡ್ಯ ಸಮ್ಮೇಳನ | ನಗರ ದೀಪಾಲಂಕಾರಕ್ಕೆ ಸಚಿವ ಚಲುವರಾಯಸ್ವಾಮಿ ಚಾಲನೆ

ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಮಂಡ್ಯ ನಗರದಲ್ಲಿನ ವಿದ್ಯುತ್ ದೀಪಾಲಂಕಾರಕ್ಕೆ ಕೃಷಿ ಸಚಿವರು ಹಾಗೂ…

1 hour ago

ನಕಲಿ ಚಿನ್ನಾಭರಣ ಅಡವಿಟ್ಟು ಬರೋಬ್ಬರಿ 34 ಲಕ್ಷ ರೂ. ವಂಚನೆ..!

ಕೇರಳ ಮೂಲದ ಮಾಸ್ಟರ್ ಮೈಂಡ್ ಸೇರಿದಂತೆ 12 ಆರೋಪಿಗಳ ಬಂಧನ; ಮತ್ತೊಂದು ಮೋಸದ ಜಾಲ ಬಯಲಿಗೆಳೆದ ಕೊಡಗು ಜಿಲ್ಲಾ ಪೊಲೀಸರು…

2 hours ago

ಮುಡಾ ಪ್ರಕರಣ | ಸಿಬಿಐ ತನಿಖೆ ಕೋರಿ ಸಲ್ಲಿಸಿದ್ದ ಅರ್ಜಿ ಜ.15ಕ್ಕೆ ಮುಂದೂಡಿಕೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್‌ ಜನವರಿ…

2 hours ago

ಸಮ್ಮೇಳನಕ್ಕೆ ಕ್ಷಣಗಣನೆ | ಸಮ್ಮೇಳನ ಸರ್ವಾಧ್ಯಕ್ಷ ಗೊ.ರು ಚನ್ನಬಸಪ್ಪಗೆ ಆತ್ಮೀಯ ಸ್ವಾಗತ

ಮಂಡ್ಯ: ೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆ ಗುರುವಾರ ಸಂಜೆ ನಗರಕ್ಕೆ…

2 hours ago