10ನೇ ಚಾಮರಾಜ ಒಡೆಯರ್ ಆಳ್ವಿಕೆಯಲ್ಲಿ ನಡೆದ ಪ್ರಸಂಗ
• ಧರ್ಮೇಂದ್ರ ಕುಮಾರ್ ಮೈಸೂರು
ಮೈಸೂರು ಸಂಸ್ಥಾನವನ್ನು ಭೀಕರ ಬರಗಾಲ ಕಾಡಿತ್ತು… ಶ್ರೀಮಂತರೊಬ್ಬರು ತಾವು ಸಂಗ್ರಹಿಸಿಟ್ಟಿದ್ದ ದವಸ ಧಾನ್ಯಗಳನ್ನು ಉಚಿತವಾಗಿ ಬಡವರಿಗೆ ಹಂಚಿದರು… ಅವರ ಮಾನವೀಯ ಕಾರ್ಯವನ್ನು ಮೆಚ್ಚಿದ ಮೈಸೂರು ಮಹಾರಾಜರು ‘ನಾನು ನಿಮಗೇನಾದರೂ ಉಡುಗೊರೆ ಕೊಡಬೇಕಲ್ಲ ಎನ್ನುತ್ತಾರೆ. ಅದಕ್ಕೆ ಮಹಾದಾನಿ ಏನು ಕೇಳಿದರು ಗೊತ್ತೇ… ಅದು ಊಹೆಗೆ ನಿಲುಕದ್ದು… ಆದರೆ, ಅವರ ಉದಾರ ಹೃದಯದ ವೈಶಾಲ್ಯತೆಯ ಪ್ರತೀಕವಾಗಿತ್ತು.
10ನೇ ಚಾಮರಾಜ ಒಡೆಯರ್ 1881ರಲ್ಲಿ ಮೈಸೂರು ಸಂಸ್ಥಾನದ ಮಹಾರಾಜರಾಗಿ ಅಧಿಕಾರ ಸ್ವೀಕಾರ ಮಾಡಿದ ಸಂದರ್ಭದಲ್ಲಿ ಉತ್ತರ ಭಾಗದಲ್ಲಿ ಬರಗಾಲ ತಾಂಡವವಾಡುತ್ತಿತ್ತು.
ಚಿತ್ರದುರ್ಗದ ಅತ್ಯಂತ ಶ್ರೀಮಂತ ಕಾಶಿ ಅಪ್ಪಣ್ಣ ಶೆಟ್ಟರ್ ಅವರು ತಮ್ಮಲ್ಲಿದ್ದ ನೂರಾರು ಗೋಡೌನ್ ಗಳಿಂದ ಚಿತ್ರದುರ್ಗದಾದ್ಯಂತ ಜನರಿಗೆ ದವಸ ಮತ್ತು ಧಾನ್ಯಗಳನ್ನು ಉಚಿತವಾಗಿ ಹಂಚುತ್ತಾರೆ.
ಒಬ್ಬ ಸಾಮಾನ್ಯ ಪ್ರಜೆ ತನ್ನಲ್ಲಿದ್ದ ಸಿರಿ ಸಂಪತ್ತನ್ನು ಬಡವರ ಕಷ್ಟಕ್ಕಾಗಿ ದಾನ ನೀಡಿದ ಎಂದು ಮಹಾರಾಜರಿಗೆ ತಿಳಿದಾಗ, ಕಾಶಿ ಅಪ್ಪಣ್ಣ ಶೆಟ್ಟರ್ ಅವರನ್ನು ನೋಡಬೇಕು ಎಂದು ಮೈಸೂರು ಸಂಸ್ಥಾನಕ್ಕೆ ಕರೆಸುತ್ತಾರೆ. ಸಂಸ್ಥಾನಕ್ಕೆ ಬಂದ ಅಪ್ಪಣ್ಣನವರಿಗೆ ಆದರಾತಿಥ್ಯ ನೀಡಿದ ಮಹಾರಾಜರು, ಇಂತಹ ಔದರ್ಯ ಮೆರೆದಿರುವ ನಿಮಗೆ ಏನು ಬೇಕು ಎಂದು ಕೇಳಿದಾಗ, ಕಾಶಿ ಅಪ್ಪಣ್ಣ ಅವರು ಕೈಮುಗಿದು ಮಹಾಸ್ವಾಮಿ ನನಗಾಗಿ ಏನೂ ಬೇಡ, ಆದರೆ ನಿಮ್ಮೊಡನೆ ಇರುವ ಒಂದು ಚಿತ್ರಪಟ
ಕಾಶಿ ಅಪ್ಪಣ್ಣ ಅವರು ಇರುವ ಚಿತ್ರಪಟ ಮಾಡಿಸಿಕೊಟ್ಟರೆ ಸಾಕು ಎಂದು ವಿನಮ್ರರಾಗಿ ಕೇಳುತ್ತಾರೆ. ಮಹಾರಾಜರು ಅರಮನೆ ಕಲಾವಿದರಿಗೆ ವರ್ಣಚಿತ್ರವನ್ನು ರಚಿಸಲು ಸೂಚಿಸುತ್ತಾರೆ. ಚಿನ್ನದ ಪದಕದೊಡನೆ ಚಿತ್ರಪಟವನ್ನೂ ಅಪ್ಪಣ್ಣ ಅವರಿಗೆ ನೀಡುತ್ತಾರೆ.
ಅವರ ನಂತರ ನಮ್ಮ ಕುಟುಂಬಸ್ಥರು ದಾನ-ಧರ್ಮಗಳ ಜೊತೆಗೆ ಟ್ರಸ್ಟ್ ಹಾಗೂ ದೇವಸ್ಥಾನವನ್ನು ನಿರ್ಮಾಣ ಮಾಡಿದ್ದೇವೆ ಎಂದು ಕಾಶಿ ಅಪ್ಪಣ್ಣ ಅವರ ಮರಿ ಮೊಮ್ಮಗ ಮನೋಹರ್ ತಿಳಿಸಿದ್ದಾರೆ.
ಚಿತ್ರದುರ್ಗದಲ್ಲಿ 1881ರಲ್ಲಿ ಬರಗಾಲ ಬಂದಾಗ ರಾಜ್ಯದ ಪರಿಸ್ಥಿತಿಯನ್ನು ಕಂಡು ಕಾಶಿ ಅಪ್ಪಣ್ಣ ಅವರು ಬಹಳ ಜನ ಬಡವರಿಗೆ ಹಸಿವು ತಣಿಸಲು ಹಗೇವುನಲ್ಲಿದ್ದ ಧಾನ್ಯವನ್ನು ಹೊರತೆಗೆದು ಹಂಚಿರುತ್ತಾರೆ. ಈ ವಿಷಯವನ್ನು ತಿಳಿದ 10ನೇ ಚಾಮರಾಜ ಒಡೆಯರು ಅವರು ಸನ್ಮಾನಿಸಲು ಇಚ್ಚಿಸಿದಾಗ, ಕಾಶಿ ಅಪ್ಪಣ್ಣ ಅವರು ನನಗೆ ಅದೆಲ್ಲ ಬೇಡ, ಕೇವಲ ಮಹಾರಾಜರ ಜೊತೆಯಲ್ಲಿರುವ ಒಂದು ಚಿತ್ರಪಟ ಸಾಕು ಎಂದಿದ್ದರಂತೆ.
ಹೊಸದಿಲ್ಲಿ: ಮಾಜಿ ಪ್ರಧಾನಿಗಳು ಹಾಗೂ ರಾಜ್ಯಸಭಾ ಸದಸ್ಯರಾದ ಹೆಚ್.ಡಿ. ದೇವೇಗೌಡರು ಶುಕ್ರವಾರ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ…
ವಿಧಾನಸಭೆ : ರಾಜ್ಯದಲ್ಲಿರುವ ಮಹಾನಗರಪಾಲಿಕೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರು, ಚಾಲಕರು, ಲೋಡರ್ ಗಳು, ತ್ಯಾಜ್ಯ ಸಂಗ್ರಹಕಾರರು ಸೇರಿದಂತೆ ಇನ್ನಿತರೆ…
ಮೈಸೂರು : ಕಲರ್ಸ್ ಕನ್ನಡ ವಾಹಿನಿಯ ‘ಗಿಚ್ಚಿ ಗಿಲಿಗಿಲಿ ಜೂನಿಯರ‍್ಸ್’ ರಿಯಾಲಿಟಿ ಷೋಗಾಗಿ ಡಿ.20 ರಂದು ಬೆಳಿಗ್ಗೆ 11 ಗಂಟೆಗೆ…
ಬೆಳಗಾವಿ : ಆರೋಗ್ಯ ಸೇವೆಯಿಂದ ವಂಚಿತರಾಗಿರುವ ಜನರಿಗೆ ಆರೋಗ್ಯ ಸೇತು-ಸಂಚಾರಿ ಆರೋಗ್ಯ ಘಟಕ ಯೋಜನೆ ನೆರವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ…
ಮೈಸೂರು : ಸಿನಿಮಾಗಳು ಮನರಂಜನೆಗಷ್ಟೇ ಸೀಮಿತವಾಗದೆ ಸಾಮಾಜಿಕ ಜವಾಬ್ದಾರಿಯುಳ್ಳ ಶಿಕ್ಷಣದ ಮಾಧ್ಯಮವಾಗಬೇಕು ಎಂದು ಖ್ಯಾತ ನಿರ್ದೇಶಕ ಬಿ.ಸುರೇಶ್ ಆಶಿಸಿದರು. ನಗರದ…
ಮೈಸೂರು : ಅಲ್ಪಸಂಖ್ಯಾತರ ಸಮುದಾಯ ವಾಸಿಸುವ ಸ್ಥಳಗಳಲ್ಲಿ ಬಾಲ್ಯ ವಿವಾಹ ಹಾಗೂ ಬಾಲಕಾರ್ಮಿಕ ಪದ್ಧತಿಗಳ ದುಷ್ಪರಿಣಾಮಗಳ ಕುರಿತು ಅರಿವು ಕಾರ್ಯಕ್ರಮಗಳನ್ನು…