ಆಂದೋಲನ ಪುರವಣಿ

ಸಿನಿಮಾ ಉತ್ತರಕಾಂಡದ ಮೂಲಕ ರಮ್ಯಾ ಕಂಬ್ಯಾಕ್

ತಮ್ಮ ಹೊಸ ಚಿತ್ರ, ತಂಡದ ಕುರಿತು ನಿರ್ದೇಶಕ ರೋಹಿತ್ ಪದಕಿ ಮಾತುಕತೆ

-ಬಿ.ಎನ್.ಧನಂಜಯಗೌಡ

‘ರತ್ನನ್‌ಪ್ರಪಂಚ’ ಮೂಲಕ ಭರವಸೆ ಮೂಡಿಸಿರುವ ನಿರ್ದೇಶಕ ರೋಹಿತ್ ಪದಕಿ ಕೆ.ಆರ್.ಜಿ ಸಂಸ್ಥೆ ನಿರ್ಮಿಸುತ್ತಿರುವ ‘ಉತ್ತರಕಾಂಡ’ದ ನಾಯಕತ್ವ ವಹಿಸಿಕೊಂಡಿದ್ದಾರೆ. ವಿಶೇಷ ಎಂದರೆ ಈ ಸಿನಿಮಾದ ಮೂಲಕ ‘ಸ್ಯಾಂಡಲ್‌ವುಡ್ ಕ್ವೀನ್’ ರಮ್ಯಾ ಬೆಳ್ಳಿತೆರೆಗೆ ಕಮ್ ಬ್ಯಾಕ್ ಆಗುತ್ತಿರುವುದು. ನಟ ಡಾಲಿ ಧನಂಜಯ ನಾಯಕನಾಗಿ ನಟಿಸುತ್ತಿರುವ ಚಿತ್ರದ ಮಹೂರ್ತ ಭಾನುವಾರ ನೆರವೇರಿದ್ದು, ಸಿನಿಮಾ ಬಗ್ಗೆ ನಿರ್ದೇಶಕ ರೋಹಿತ್ ಪದಕಿ ಅವರು ಮಾತನಾಡಿದ್ದಾರೆ.

 ರಮ್ಯಾ ಅವರನ್ನು ಬೆಳ್ಳಿತೆರೆಗೆ ವಾಪಸ್ ಕರೆತರವಲ್ಲಿ ಹಿಂತಿರುಗಿಸುವಲ್ಲಿ ಯಶಸ್ವಿಯಾಗಿದ್ದೀರಿ, ಇದರ ಹಿಂದಿನ ಗುಟ್ಟೇನು?
‘ರತ್ನನ್ ಪ್ರಪಂಚ’ ಚಿತ್ರಕ್ಕೆ ನಾಯಕಿಯಾಗಲು ರಮ್ಯಾ ಅವರನ್ನು ಕೇಳಲಾಗಿತ್ತು. ಆದರೆ ಕೆಲವಾರು ಕಾರಣಗಳಿಂದ ಅವರು ಆಗ ಒಪ್ಪಿರಲಿಲ್ಲ. ಈಗ ಅವರು ಬೆಳ್ಳಿತೆರೆಗೆ ಹಿಂತಿರುಗಲು ಮನಸ್ಸು ಮಾಡಿದ್ದರು. ಅಲ್ಲದೇ, ಸಿನಿಮಾದ ಕಥೆ ಮತ್ತು ಅದರಲ್ಲಿನ ಅವರ ಪಾತ್ರ ಕೇಳಿ ನಟನೆಗೆ ಒಪ್ಪಿಕೊಂಡರು. ಈ ವಿಷಯವಾಗಿ ನನಗಂತೂ ತುಂಬಾ ಖುಷಿಯಾಗಿದೆ.

ಎಸ್.ಎಲ್. ಭೈರಪ್ಪ ಅವರ ‘ನಿರಾಕರಣೆ’ ಪ್ರೇರಣೆಯಿಂದ ರತ್ನನ್ ಪ್ರಪಂಚ ಆಯ್ತು, ‘ಉತ್ತರಕಾಂಡ’ವೂ ಅವರದ್ದೇ ಕಥೆಯಾ?
ಹೆಸರಷ್ಟೇ ‘ಉತ್ತರಕಾಂಡ’. ಕಥೆ ಮಾತ್ರ ಬೇರೆಯದ್ದು. ಉತ್ತರ ಕರ್ನಾಟಕದ ಅದ್ಬುತ ಬದುಕಿನ ನಡುವೆ ನಡೆಯುವ ಕಥೆ. ಹಾಗಾಗಿ, ‘ಉತ್ತರಕಾಂಡ’ ಎಂಬ ಹೆಸರು ಇಡಲಾಗಿದೆ. ಇದೊಂದು ಮಾಸ್ ಮನರಂಜನೆಯ ಸಿನಿಮಾ ಆಗಲಿದೆ. ಚಿತ್ರ ಸಂಪೂರ್ಣ ಉತ್ತರ ಕರ್ನಾಟಕದ ಸೊಗಡಲ್ಲಿ, ಆ ಭಾಷೆಯಲ್ಲಿಯೇ ಇರಲಿದೆ. ಆ ಭಾಗದಲ್ಲಿಯೇ ಚಿತ್ರೀಕರಣವಾಗಲಿದೆ.

ಕಥೆ ಬಗ್ಗೆ ಏನಾದ್ರೂ ಹೇಳ್ಬಹುದಾ? ರಮ್ಯಾ ಪಾತ್ರದ ವಿಶೇಷವೇನು?
ಇದೊಂದು ಗ್ಯಾಂಗ್‌ಸ್ಟರ್ ಡ್ರಾಮಾ. ಈ ಚಿತ್ರ ಮನುಷ್ಯನ ವಿಲಕ್ಷಣ ಮನಸ್ಸಿನ ಹೋರಾಟವನ್ನು ತೆರೆದಿಡುತ್ತದೆ. ಸರಿ-ತಪ್ಪುಗಳ ಸಿದ್ಧಾಂತ, ಅಹಂಕಾರಗಳ ಗುದ್ದಾಟ ಹೀಗೆ… ವಿಭಿನ್ನ ಮತ್ತು ಪ್ರಯೋಗಾತ್ಮಕವಾಗಿ ಸಿನಿಮಾ ಮಾಡಲಾಗುತ್ತಿದೆ. ಉತ್ತರ ಕರ್ನಾಟಕ ಭಾಗದ ಗ್ರಾಮೀಣ ಮಹಿಳೆಯ ಪಾತ್ರದಲ್ಲಿ ರಮ್ಯಾ ಕಾಣಿಸಿಕೊಳ್ಳಲಿದ್ದಾರೆ ಇದಕ್ಕಾಗಿ, ಭಾಷೆ, ಉಡುಗೆ-ತೊಡುಗೆ ಎಲ್ಲದರ ಮೇಲೆ ಗಂಭೀರವಾಗಿ ರಮ್ಯಾ ಅವರು ಕಸರತ್ತು ನಡೆಸುತ್ತಿದ್ದಾರೆ.

ಕಥೆಯ ತಯಾರಿ ಹೇಗಿತ್ತು? ಚಿತ್ರೀಕರಣ ಸಿದ್ಧತೆ ಹೇಗಿರಲಿದೆ?
‘ರತ್ನನ್ ಪ್ರಪಂಚ’ ಸಿನಿಮಾದ ನಂತರ ‘ಉತ್ತರಕಾಂಡ’ ಕಥೆ ತಯಾರಿಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದೆ. ಉತ್ತರ ಕರ್ನಾಟಕದ ಬದುಕಿನ ಕಥೆ ಹೇಳುತ್ತಿರುವುದು ನನಗೆ ದೊಡ್ಡ ಸವಾಲು. ಈಗಾಗಲೇ ಚಿತ್ರದ ಮೂಹೂರ್ತವಾಗಿದ್ದು, ಜನವರಿಯಿಂದ ಚಿತ್ರೀಕರಣ ಆರಂಭವಾಗಲಿದೆ.

‘ಉತ್ತರಕಾಂಡ’ ತಂಡ, ತಾರಾಬಳಗದಲ್ಲಿ ಯಾರೆಲ್ಲ ಇದ್ದಾರೆ?
ಡಾಲಿ ಧನಂಜಯ ಸಕ್ಕತ್ ಸುಕ್ಕಾ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಇದೊಂದು ಮಲ್ಟಿಸ್ಟಾರ್ ಸಿನಿಮಾ ಆಗುತ್ತಿರುವುದರಿಂದ ಉಳಿದ ಕಲಾವಿದರ ಬಗ್ಗೆ ಸದ್ಯಕ್ಕೆ ಹೇಳುವುದಿಲ್ಲ. ದೊಡ್ಡ ತಾರಾಬಳಗ ಮತ್ತು ದೊಡ್ಡ ಬಜೆಟ್ ಸಿನಿಮಾ ಇದಾಗಿದೆ. ಈ ಚಿತ್ರವನ್ನು ವಿಜಯ್ ಕಿರಂಗದೂರು ಅರ್ಪಿಸುತ್ತಿದ್ದು, ಕೆ.ಆರ್.ಜಿ ಸಂಸ್ಥೆ ಯಡಿ ಕಾರ್ತಿಕ್ ಮತ್ತು ಯೋಗಿ ಜಿ.ರಾಜ್ ನಿರ್ಮಿಸುತ್ತಿದ್ದಾರೆ. ಚರಣ್ ರಾಜ್ ಸಂಗೀತ ಸಂಯೋಜನೆ, ಅರವಿಂದ ಕಶ್ಯಪ್ ಕ್ಯಾಮರಾ ನಿರ್ವಹಣೆ ಇರಲಿದೆ.

andolana

Recent Posts

ಕನ್ನಡಿಗರಿಗೆ ಉದ್ಯೋಗ ನೀಡದ ಸಾಹಿತ್ಯ ಸಮ್ಮೇಳನ: ವಾಟಲ್‌ ನಾಗರಾಜ್‌ ಆಕ್ರೋಶ

ಮೈಸೂರು: ಸಕ್ಕರೆ ನಾಡು ಮಂಡ್ಯದಲ್ಲಿ ಇಂದಿನಿಂದ (ಡಿ.20) 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಶುರುವಾಗಿದೆ. ಆದರೆ ಈ ಸಮ್ಮೇಳನವನ್ನು ಯಾವ…

5 hours ago

ಹಾಸ್ಯ ಸಾಹಿತ್ಯ ಆಧುನಿಕ ಬದುಕಿಗೆ ಔಷಧಿ: ಪ್ರೊ.ಕರಿಯಪ್ಪ

ಮಂಡ್ಯ: ಹಾಸ್ಯ ಸಾಹಿತ್ಯ ಆಧುನಿಕ ಬದುಕಿನಗೆ ಔಷಧಿಯಾಗಿದೆ ಎಂದು ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಹೇಳಿದರು. 87ಅಖಿಲ ಭಾರತ ಕನ್ನಡ ಸಾಹಿತ್ಯ…

5 hours ago

ಸಿ & ಡಿ ಲ್ಯಾಂಡ್ ಸಮಸ್ಯೆ ಪರಿಹಾರಕ್ಕೆ ಉನ್ನತ ಮಟ್ಟದ ಸಮಿತಿ: ಯು.ಟಿ. ಖಾದರ್

ಮಡಿಕೇರಿ: ಸಿ ಮತ್ತು ಡಿ ಭೂಮಿಗೆ ಸಂಬಂಧಿಸಿದಂತೆ ಕಂದಾಯ ಸಚಿವರು ಉನ್ನತ ಮಟ್ಟದ ಸಮಿತಿ ರಚನೆಗೆ ಮುಂದಾಗಿದ್ದು, ಸಮಸ್ಯೆ ಪರಿಹಾರವಾಗಲಿ…

6 hours ago

ಸಿ.ಟಿ ರವಿ ಕೊಲೆಗೆ ಪೊಲೀಸರ ಸಂಚು: ಅಶೋಕ್‌ ಆರೋಪ

ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಕ್ಷೇಪಾರ್ಹ ಪದ ಬಳಸಿದ್ದಾರೆ ಎಂಬ ಆರೋಪದ ಮೇಲೆ ಎಂಎಲ್‌ಸಿ ಸಿ.ಟಿ.ರವಿಯವರನ್ನು ಪೊಲೀಸರೇ ಕೊಲೆ…

6 hours ago

ವಿರಾಜಪೇಟೆ | ಬಿಟ್ಟಂಗಾಲದಲ್ಲಿ ಚಿರತೆ ಬೆಕ್ಕು ಸಾವು

ವಿರಾಜಪೇಟೆ: ಗೋಣಿಕೊಪ್ಪ-ಕೇರಳ ಹೆದ್ದಾರಿಯ ಬಿಟ್ಟಂಗಾಲ ಆಟೋ ನಿಲ್ದಾಣದ ಬಳಿ ಚಿರತೆ ಬೆಕ್ಕೊಂದು ಅಪಘಾತಕೀಡಾಗಿ ಸಾವನಪ್ಪಿದ ಘಟನೆ ಶುಕ್ರವಾರ ರಾತ್ರಿ 9…

6 hours ago

ಮೈಸೂರಿನ ಫಾರ್ಮ್‌ಹೌಸ್‌ನಲ್ಲಿ ನಟ ದರ್ಶನ್‌ ವಾಸ್ತವ್ಯ

ಮೈಸೂರು: ನಟ ದರ್ಶನ್‌ ಅವರು ಮೈಸೂರಿನ ತಿ.ನರಸೀಪುರ ಮುಖ್ಯರಸ್ತೆಯಲ್ಲಿರುವ ಕೆಂಪಯ್ಯನಹುಂಡಿ ಬಳಿಯ ತಮ್ಮ ಫಾರ್ಮ್‌ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಶುಕ್ರವಾರ ಇಲ್ಲಿಗ…

6 hours ago