ಆಂದೋಲನ ಪುರವಣಿ

ಯೋಗ ಕ್ಷೇಮ : ಹಲ್ಲು ಇಲ್ಲವೇ ; ಚಿಂತೆ ಬೇಡ

ಹಲ್ಲುಗಳ ಆರೋಗ್ಯದಲ್ಲಿ ಏರುಪೇರಾದರೆ ಅವರು ಉದುರುವುದು ಮಾಮೂಲು. ಆದರೆ ಅದಕ್ಕೆ ಬದಲಿಯಾಗಿ ಕೃತಕ ಹಲ್ಲುಗಳನ್ನು ಕಟ್ಟಿಸಿಕೊಳ್ಳಲು ಇಂದು ಹಲವಾರು ಚಿಕಿತ್ಸಾ ವಿಧಾನಗಳಿವೆ. ಅವುಗಳನ್ನು ಮಾಡಿಸಿಕೊಂಡರೆ ದಂತಪಂಕ್ತಿ ಸುರಕ್ಷಿತ ಮತ್ತು ಹಲ್ಲು ಕಾಣುವಂತೆ ಚೆಂದದ ನಗು ಬೀರಲು ಸಾಧ್ಯ.

ಅನುವಂಶೀಯ ಕಾರಣಗಳು, ಅಪಘಾತ, ಒಸಡು ರೋಗ, ದಂತಕುಳಿ ಅಥವಾ ಹಲ್ಲುಗಳನ್ನು ಸ್ವಚ್ಚವಾಗಿಡದೆ ಇರುವ ಕಾರಣಗಳಿಂದ ಹಲ್ಲು ಕಳೆದುಕೊಳ್ಳಬಹುದು. ಇದು ಆತ್ಮವಿಶ್ವಾಸಕ್ಕೆ ಧಕ್ಕೆ ಉಂಟು ಮಾಡುವುದಲ್ಲದೆ, ಇತರ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಬಹುದು. ಇದಕ್ಕಾಗಿ ಕೃತಕ ದಂತ ಪಂಕ್ತಿ (ಹಲ್ಲುಸೆಟ್), ಡೆಂಟಲ್ ಇಂಪ್ಲಾಂಟ್ಸ್ ಅಥವಾ ಫಿಕ್ಸ್ ಬ್ರಿಡ್ಜ್ ಮುಂತಾದ ಚಿಕಿತ್ಸಾ ವಿಧಾನಗಳಿವೆ.

ಹಲ್ಲು ಕಟ್ಟಿಸದೇ ಇದ್ದರೆ ಆಗುವ ತೊಂದರೆ

* ಹಲ್ಲು ಬಿದ್ದ ಜಾಗಕ್ಕೆ ಪಕ್ಕದ ಹಲ್ಲು ಜರುಗಿ ಹಲ್ಲುಗಳ ಮಧ್ಯೆ ಕಿಂಡಿ ಕಾಣಿಸಿಕೊಳ್ಳುತ್ತದೆ.

* ಹಲ್ಲುಗಳು ಜರುಗುತ್ತಾ ಹೋದಂತೆ ಹಲ್ಲಿನ ಬೇರಿಗೂ ತೊಂದರೆ.

* ದವಡೆಯ ಮೂಳೆಗಳಲ್ಲಿ ತೊಂದರೆ ಕಾಣಿಸಿಕೊಳ್ಳಬಹುದು.

* ಉಳಿದ ಹಲ್ಲುಗಳ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ.

* ಆಹಾರವನ್ನು ಅಗಿಯಲು ಕಷ್ಟ, ಜೀರ್ಣಕ್ರಿಯೆ ಮೇಲೆ ಪರಿಣಾಮ.

* ಮುಖದ ರಚನೆಯ ಮೇಲೆ ಪ್ರಭಾವ, ಸ್ನಾಯುಗಳು ಜೋತು ಬೀಳುತ್ತವೆ.

* ಮಾತುಗಳಲ್ಲಿ ತೊದಲು, ಸ್ವಾಭಾವಿಕವಾಗಿ ಮಾತನಾಡಲು ಸಮಸ್ಯೆ

ಹಲ್ಲನ್ನು ಕಟ್ಟಿಸಿಕೊಳ್ಳುವ ವಿವಿಧ ಆಯ್ಕೆಗಳು 

* ಡೆಂಟಲ್ ಇಂಪ್ಲಾಂಟ್ಸ್
ಒಂದು ಹಲ್ಲು ಇಲ್ಲದಿರುವಾಗ ಅದನ್ನು ಪುನಃ ಜೋಡಿಸಲು ಡೆಂಟಲ್ ಇಂಪ್ಲಾಂಟ್ ಒಳ್ಳೆಯ ಆ್ಂಕೆು. ಈ ವಿಧಾನದಲ್ಲಿ ಕೃತಕ ದಂತವನ್ನು ಒಸಡಿನಲ್ಲಿ ಶಾಶ್ವತವಾಗಿ ಜೋಡಣೆ ಮಾಡಲಾಗುತ್ತದೆ.

* ಕೃತಕ ದಂತಪಂಕ್ತಿ
ಕೆಲವು ಅಥವಾ ಸಂಪೂರ್ಣ ಹಲ್ಲುಗಳು ಇಲ್ಲದಿರುವಾಗ ಅದಕ್ಕೆ ಅನುಗುಣವಾಗಿ ಕೃತಕ ದಂತ ಪಂಕ್ತಿಗಳನ್ನು ಹಾಕಿಕೊಡಲಾಗುತ್ತದೆ. ಕೃತಕ ದಂತಪಂಕ್ತಿಗಳು ಎರಡು ರೀತಿಯಾಗಿರುತ್ತದೆ.

೧. ಸಂಪೂರ್ಣ ಹಲ್ಲುಗಳ ದಂತಪಂಕ್ತಿಯಲ್ಲಿ ಎಲ್ಲ ಹಲ್ಲುಗಳನ್ನು ಜೋಡಣೆ ಮಾಡುವುದು.

೨. ವಿಭಾಗೀಯ ದಂತ ಪಂಕ್ತಿಯಲ್ಲಿ ಒಂದು ಅಥವಾ ಕೆಲವು ಹಲ್ಲುಗಳನ್ನು ಜೋಡಣೆ.

* ಡೆಂಟಲ್ ಬ್ರಿಡ್ಜ್
ಒಂದು ಅಥವಾ ಎರಡು ಹಲ್ಲು ಇಲ್ಲದಿದ್ದಾಗ, ಅಕ್ಕ ಪಕ್ಕದ ಹಲ್ಲುಗಳನ್ನು ಆಧಾರವಾಗಿ ಬಳಸಿ ಡೆಂಟಲ್ ಬ್ರಿಡ್ಜ್ ಅನ್ನು ಮಾಡಬಹುದು. ಅದನ್ನು ಸಾಮಾನ್ಯವಾಗಿ ಕ್ಯಾಪ್ ಅಥವಾ ಕ್ರೌನ್ ಅನ್ನುತ್ತಾರೆ. ಇದನ್ನು ಡೆಂಟಲ್ ಸಿಮೆಂಟ್‌ನಿಂದ ಫಿಕ್ಸ್ ಮಾಡಲಾಗುತ್ತದೆ.

-ಡಾ. ಸಿ.ಪಿ. ಕಾತ್ಯಾಯಿನಿ, ಅಧ್ಯಾಪಕರು, ಹಲ್ಲು ನ್ಯೂನ ಪೂರಣ ಶಾಸ್ತ್ರ ವಿಭಾಗ, ಜೆಎಸ್‌ಎಸ್ ದಂತ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಮೈಸೂರು

andolana

Recent Posts

ತಮಿಳುನಾಡು ಚುನಾವಣೆ: ಎರಡು ಕ್ಷೇತ್ರಗಳಿಂದ ನಟ ವಿಜಯ್‌ ಸ್ಪರ್ಧೆ

ಚೆನ್ನೈ: ಏಪ್ರಿಲ್.23ರಂದು ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ಎರಡು ಕ್ಷೇತ್ರಗಳಿಂದ ಸ್ಪರ್ಧೆ ಮಾಡುವುದಾಗಿ ನಟ ವಿಜಯ್‌ ಘೋಷಣೆ ಮಾಡಿದ್ದಾರೆ. ಚೆನ್ನೈನ…

4 mins ago

ಹಳ್ಳಿಗಳಲ್ಲಿ ಗೃಹ ಬಳಕೆಯವರಿಗೆ 45 ದಿನಕ್ಕೆ ಒಂದು ಸಿಲಿಂಡರ್:‌ ಸಚಿವ ಮುನಿಯಪ್ಪ

ಬೆಂಗಳೂರು: ಹಳ್ಳಿಗಳಲ್ಲಿ ಗೃಹ ಬಳಕೆಯವರಿಗೆ 45 ದಿನಕ್ಕೆ ಒಂದು ಸಿಲಿಂಡರ್ ಪೂರೈಕೆ ಮಾಡಲಾಗುತ್ತದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು…

21 mins ago

ಹನೂರು| ಕಾಡಾನೆ ದಾಳಿ: ಆಟೋ ಜಖಂ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಮಂಚಾಪುರ ಗ್ರಾಮದಿಂದ ಒಡೆಯರ ಪಾಳ್ಯ ಗ್ರಾಮಕ್ಕೆ ವ್ಯಾಪಾರ ಮಾಡಲು…

2 hours ago

ಪಶ್ಚಿಮ ಏಷ್ಯಾದಲ್ಲಿ ಹೆಚ್ಚಾದ ಉದ್ವಿಗ್ನತೆ: ಮನ್‌ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿ ಹೇಳಿದ್ದಿಷ್ಟು.!

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವಂತೆ ಭಾರತೀಯ ನಾಗರಿಕರು ಒಗ್ಗಟ್ಟಾಗಿರುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಪ್ರಧಾನಿ ನರೇಂದ್ರ…

2 hours ago

ಆರೋಗ್ಯ ಕೇಂದ್ರದ ಮುಂಭಾಗವೇ ವಾಹನಗಳ ಪಾರ್ಕಿಂಗ್:‌ ಸಾರ್ವಜನಿಕರಿಗೆ ಕಿರಿಕಿರಿ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರದ…

2 hours ago

ಹನೂರು: ಸಮರ್ಪಕ ಕುಡಿಯುವ ನೀರು ಪೂರೈಸುವಂತೆ ನಿವಾಸಿಗಳಿಂದ ಪ್ರತಿಭಟನೆ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಹೂಗ್ಯಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭೋವಿ ಸಮುದಾಯದ ಕಾಲೋನಿಗೆ…

2 hours ago