ಆಂದೋಲನ ಪುರವಣಿ

ಮುಂಚೂಣಿಯಲ್ಲಿ ಮೈಸೂರು; ನಿರೀಕ್ಷೆ ಹೆಚ್ಚಿಸಿದ ‘ದಿ ಬಿಗ್ ಟೆಕ್ ಶೋ’

ಐಟಿ-ಬಿಟಿ ಉದ್ದಿಮೆಗಳ ಸ್ಥಾಪನೆಗೆ ಮೈಸೂರು ಪೂರಕ; ಬಂಡವಾಳ ಹೂಡಲು ಮುಂದಾಗಿರುವ ಜಾಗತಿಕ ಕಂಪನಿಗಳು

ಕೆ.ಬಿ.ರಮೇಶನಾಯಕ

ಎಲೆಕ್ಟ್ರಾನಿಕ್ ಉತ್ಪನ್ನಗಳು, ಮೈಕ್ರೋ ಚಿಪ್, ಅತ್ಯಾಧುನಿಕ ಸೆಮಿ ಕಂಡಕ್ಟರ್ ಘಟಕಗಳನ್ನು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸ್ಥಾಪಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರ ಪ್ರಕಟಿಸುತ್ತಿದ್ದಂತೆಯೇ ಬದಲಾವಣೆಯ ಗಾಳಿ ಬೀಸಲು ಆರಂಭಿಸಿದೆ. ಅದರ ಪ್ರಾರಂಭಿಕ ಹಂತವೇ ‘ದಿ ಬಿಗ್ ಟೆಕ್ ಶೋ-2022’.

ಭವಿಷ್ಯದಲ್ಲಿ ಬೆಂಗಳೂರಿನ ನಂತರ ಮೈಸೂರು ಪ್ರಮುಖ ಐಟಿ ಹಬ್ ಆಗಲಿದೆ. ಈ ನಿಟ್ಟಿನಲ್ಲಿ ಈಗಾಗಲೇ ಅಡಿಪಾಯವನ್ನು ಹಾಕಲಾಗುತ್ತಿದೆ. ಪ್ರಮುಖ ಐಟಿ-ಬಿಟಿ ಉದ್ದಿಮೆಗಳು ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ, ಆತ್ಮನಿರ್ಭರ ಭಾರತ ಯೋಜನೆಗಳ ನೆರವಿನಿಂದ ಇಲ್ಲಿ ಬಂಡವಾಳ ಹೂಡಲು ಜಾಗತಿಕ ಮುಂದೆ ಬರುತ್ತಿವೆ. ಇದಕ್ಕೆ ಪೂರಕವಾಗಿ ಕರ್ನಾಟಕದ ಸೈಬರ್ ಸೆಕ್ಯುರಿಟಿ ಮತ್ತು ಇಎಸ್‌ಡಿಎಂ ಕಮ್ಯೂನಿಟಿ ಸ್ಟಾರ್ಟ್ ಆಪ್‌ಗಳು ಮೈಸೂರಿನಲ್ಲಿ ಈಗಾಗಲೇ ಕಾರ್ಯನಿರ್ವಹಿಸಲು ಸಜ್ಜಾಗಿವೆ.

ಎರಡು ದಿನಗಳ ಕಾಲ ಟೆಕ್ ಶೋ

ನಗರದಲ್ಲಿ ಬುಧವಾರ (ಅ.19) ಮತ್ತು ಗುರುವಾರ (ಅ.20) ಎರಡು ದಿನಗಳ ಕಾಲ ದಿ ಬಿಗ್ ಟೆಕ್ ಶೋ-2022ರ ಎರಡನೇ ಆವೃತ್ತಿ ಆಯೋಜನೆಗೊಂಡಿದೆ. ಅಲ್ಲಿ ಕೈಗಾರಿಕೆ, ಕೃಷಿ, ತಂತ್ರಜ್ಞಾನ ಕ್ಷೇತ್ರದಲ್ಲಿ ಸುಧಾರಣೆ ತರುವ ಹೊಸ ಆವಿಷ್ಕಾರಗಳಿಗೆ ಮುಕ್ತ ಅವಕಾಶ ನೀಡಲಾಗಿದೆ. ಯುವಕರು, ಸಂಶೋಧಕರು ತಮ್ಮ ಪ್ರತಿಭೆಯನ್ನು ಅನಾವರಣ ಮಾಡಲು ಇಲ್ಲಿ ವೇದಿಕೆ ಕಲ್ಪಿಸಲಾಗಿದೆ.

10 ಸಾವಿರ ಕೋಟಿ ರೂ. ಗುರಿ

ಸದ್ಯ ಮೈಸೂರಿನಲ್ಲಿ ಐಟಿ ವಾರ್ಷಿಕ ವಹಿವಾಟು 5 ಸಾವಿರ ಕೋಟಿ ರೂ.ಗಳಷ್ಟು ಇದ್ದು, ಇದನ್ನು ಮುಂದಿನ ನಾಲ್ಕು ವರ್ಷಕ್ಕೆ ಅಂದರೆ, 2026ಕ್ಕೆ 10 ಸಾವಿರ ಕೋಟಿ ರೂ.ಗೆ ಹೆಚ್ಚಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಅದಕ್ಕೆ ಬೇಕಾದ ಅಗತ್ಯ ಸಿದ್ಧತೆಗಳ ಬಗ್ಗೆ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಮತ್ತು ಟಿಐಇ ಹೂಡಿಕೆದಾರರೊಂದಿಗೆ ಚರ್ಚೆ ನಡೆಯಲಿದೆ. ಹೂಡಿಕೆದಾರರಿಗೆ ತಮ್ಮ ಉತ್ಪನ್ನಗಳು ಮತ್ತು ಸೇವೆಗಳನ್ನು ಪ್ರದರ್ಶಿಸಲು ಹಾಗೂ ಅವುಗಳಿಗೆ ನೆರವು ನೀಡುವ ಗುರಿಯನ್ನೂ ಬಿಗ್ ಟೆಕ್ ಶೋ ಹೊಂದಿದೆ.

ಏನೇನು ಅವಕಾಶಗಳು

ಮೈಸೂರು ನಗರ ವಿಶಾಲವಾಗಿ ಬೆಳೆದಿರುವ ಜತೆಗೆ ಮೈಸೂರು-ಬೆಂಗಳೂರು ನಡುವೆ ದಶಪಥ ಮಾರ್ಗ, ವಿಮಾನ ನಿಲ್ದಾಣ, ರೈಲು ಸಂಪರ್ಕದ ಜೊತೆಗೆ ಪ್ರಮುಖ ಅವಳಿ ಜಲಾಶಯಗಳೂ ಇವೆ. ಇದರಿಂದ ಮೂಲ ಸೌಕರ್ಯಗಳಿಗೆ ಕೊರತೆ ಇಲ್ಲ. ಅದರಲ್ಲೂ ಮುಖ್ಯವಾಗಿ ಮೈಸೂರು-ನಂಜನಗೂಡು, ಮೈಸೂರು-ತಿ.ನರಸೀಪುರ ಭಾಗದಲ್ಲಿ ಸಾವಿರಾರು ಎಕರೆ ಪ್ರದೇಶದ ಭೂಮಿ ಲಭ್ಯವಿರುವ ಕಾರಣ ಉದ್ದಿಮೆಗಳ ಸ್ಥಾಪನೆಗೆ ಪೂರಕ ವಾತಾವರಣ ಇದೆ.

ಸೆಮಿ ಕಂಡಕ್ಟರ್ ಘಟಕವನ್ನು ಈಗಾಗಲೇ ನಂಜನಗೂಡು ಕೈಗಾರಿಕಾ ಪ್ರದೇಶದಲ್ಲಿ ಸ್ಥಾಪಿಸಲು ಜಾಗ ಗುರುತಿಸಲಾಗಿದೆ. ಶಿಕ್ಷಣ, ಹೆಲ್ತ್‌ಕೇರ್, ಲಾಜಿಸ್ಟಿಕ್ಸ್, ಕೃಷಿ, ಕೈಗಾರಿಕೆ, ಗ್ರಾಹಕ, ಚಿಲ್ಲರೆ ವ್ಯಾಪಾರ ಮತ್ತು ಐಒಟಿ, ಎಡ್ಜ್ ಕಂಪ್ಯೂಟಿಂಗ್, ಎಆರ್, ವಿಆರ್-ಎಂಆರ್, ಕಂಪ್ಯೂಟರ್ ವಿಷನ್, ವೆಬ್‌ತ್ರೀ, ಕ್ವಾಂಟಮ್, ಎಐ, ೫ಜಿ, ಸೈಬರ್ ಸೆಕ್ಯುರಿಟಿ ಮುಂತಾದ ಕ್ಷೇತ್ರಗಳಲ್ಲಿ ಸ್ಟಾರ್ಟ್ ಅಪ್‌ಗಳಿಗೂ ಇಲ್ಲಿ ಅತ್ಯುತ್ತಮ ಅವಕಾಶವಿದೆ.

ಬಂಡವಾಳ ತೊಡಗಿಸಲು ಆಹ್ವಾನ

ಎರಡು ದಿನಗಳ ಕಾಲ ನಡೆಯುವ ಬಿಗ್ ಟೆಕ್‌ನ ಮೊದಲ ದಿನದಂದು ಉದ್ಯಮಿಗಳಿಗೆ ಬಂಡವಾಳ ಹೂಡುವಂತೆ ಆಹ್ವಾನಿಸುವ ಕುರಿತು ಸಮಾಲೋಚನೆ ನಡೆಸಲಾಗುತ್ತದೆ. 26ಕ್ಕೂ ಹೆಚ್ಚು ಸ್ಟಾರ್ಟ್ ಅಪ್‌ಗಳು ತಮ್ಮ ತಂತ್ರಜ್ಞಾನ, ಐಪಿ, ಸೇವೆಗಳು, ಉತ್ಪನ್ನಗಳನ್ನು ಪ್ರದರ್ಶಿಸಲಿವೆ. ಮಧ್ಯಾಹ್ನ ಪ್ರಮುಖ ಕಂಪೆನಿಗಳ ಉದ್ಯಮಿಗಳ ಸಿಇಓಗಳ ಜತೆಗೆ ಮುಕ್ತ ಚರ್ಚೆ ನಡೆಯಲಿದೆ. ಸಂಜೆ, ಕೇಂದ್ರ ಸಚಿವರೊಂದಿಗೆ ಮುಖಾಮುಖಿ ಚರ್ಚೆ ನಡೆಯಲಿದೆ. ಎರಡನೇ ದಿನದಂದು ವಾಕಥಾನ್ ನಡೆದರೆ, ನಂತರ ಉದ್ಯಮಿಗಳ ಸಮಾರಂಭ ನಡೆಯಲಿದೆ. ಈ ಟೆಕ್‌ಶೋನಲ್ಲಿ 500ಕ್ಕೂ ಅಧಿಕ ಪ್ರತಿನಿಧಿಗಳು, 2000ಕ್ಕೂ ಅಧಿಕ ವಾಕಥಾನ್ ಸ್ಪರ್ಧಿಗಳು, 50ಕ್ಕೂ ಅಧಿಕ ಸ್ಟಾರ್ಟ್ ಅಪ್, 25ಕ್ಕೂ ಅಧಿಕ ಹೂಡಿಕೆದಾರರು, 500ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗಿಯಾಗಲಿದ್ದಾರೆ.

ಸ್ಥಳೀಯ ಇಂಜಿನಿಯರ್ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ

ಹಿಂದೆಲ್ಲಾ ಇಂಜಿನಿಯರಿಂಗ್ ಮುಗಿಸಿ ಬೆಂಗಳೂರಿನ ಕಡೆಗೆ ಉದ್ಯೋಗ ಹರಸಿ ಹೋಗಬೇಕಿತ್ತು. ಆದರೆ ಈಗ ಸ್ಥಳೀಯವಾಗಿಯೇ ಉದ್ಯೋಗ ಸಿಗುವುದರ ಜೊತೆಗೆ ಬೇರೆ ಕಡೆಗಳಿಂದಲೂ ಮೈಸೂರಿನ ಕಡೆಗೆ ಉದ್ಯೋಗ ಅರಸಿ ಬರುವ ಸಕಾಲ ಬಂದಿದೆ. ಬಿಗ್ ಟೆಕ್ ಶೋ ನಲ್ಲಿ ವಿದ್ಯಾರ್ಥಿಗಳಿಗೆ ತಮ್ಮ ನೂತನ ಆವಿಷ್ಕಾರ, ಸ್ಟಾರ್ಟ್ ಅಪ್‌ಗಳ ಬಗೆಗಿನ ಹೊಸ ಚಿಂತನೆಗಳಿಗೆ ಮುಕ್ತ ಅವಕಾಶ ನೀಡಲಾಗಿದೆ. ಇದರಿಂದ ಹೊಸ ಉದ್ಯಮಗಳು, ಉದ್ಯೋಗ ಸೃಷ್ಟಿಗೆ ಇದು ಸಹಕಾರಿಯಾಗಲಿದೆ. ಆ ಮೂಲಕ ಬೇರೆಬೇರೆ ದೇಶಗಳಿಗೆ ಐಟಿ ಉತ್ಪನ್ನಗಳನ್ನು ರಫ್ತು ಮಾಡುವ ನಿಟ್ಟಿನಲ್ಲಿ ಬಿಗ್ ಟೆಕ್ ಸಹಕಾರಿಯಾಗಲಿದೆ.

ಉಚಿತ ನೋಂದಣಿ

ಬಿಹ್ಯಾಂಡ್ ಬೆಂಗಳೂರು ಎನ್ನುವ ಪರಿಕಲ್ಪನೆಯಡಿಯಲ್ಲಿ ಮೈಸೂರನ್ನು ತಂತ್ರಜ್ಞಾನ ಕ್ಷೇತ್ರದಲ್ಲಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಬಿಗ್ ಟೆಕ್ ಶೋ ೨೦೨೨ಕ್ಕೆ ಆಸಕ್ತರಿಗೆ ಉಚಿತ ನೋಂದಣಿ ವ್ಯವಸ್ಥೆ ಮಾಡಲಾಗಿದೆ. https://karnatakadigital.in/ ವೆಬ್‌ಸೈಟ್‌ಗೆ ಭೇಟಿ ನೀಡಿ ಅಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಇದರಿಂದ ನಿಮ್ಮ ಹೊಸ ಐಡಿಯಾಗಳಿಗೂ ಶೋ ವೇದಿಕೆಯಾಗಲಿದೆ. ಅಲ್ಲದೇ ನಿಮಗೂ ಹೊಸ ಹೊಸ ಐಡಿಯಾಗಳ ಬಗ್ಗೆ ತಿಳಿಯಲಿದೆ.

  • ಇದರ ಜೊತೆಗೆ ಹೊಸ ಸ್ಟಾರ್ಟ್‌ಅಪ್‌ಗಳನ್ನು ಆರಂಭಿಸುವ ಬಗೆ
  • ಸಂಪನ್ಮೂಲ ಕ್ರೋಢೀಕರಣ, ಸಾಲ ಸೌಲಭ್ಯಗಳು
  • ಸರ್ಕಾರದಿಂದ ಸಿಗುವ ಸಹಾಯಧನ, ವಿವಿಧ ಯೋಜನೆಗಳು
  • ದೊಡ್ಡ ದೊಡ್ಡ ಕಂಪೆನಿಗಳ ಅಗತ್ಯತೆಗಳು, ಉದ್ಯೋಗ ಸೃಷ್ಟಿಯ ಬಗ್ಗೆ ಮಾಹಿತಿ ದೊರೆಯಲಿದೆ.
andolana

Recent Posts

ಮದ್ದೂರು ಬಳಿಯ ವಳೆಗೆರೆಹಳ್ಳಿಯಲ್ಲಿ ಮಳೆರಾಯನಿಗಾಗಿ ಪೂಜೆ

ಮದ್ದೂರು: ಹುಯ್ಯೋ ಹುಯ್ಯೋ ಮಳೆರಾಯ ತೆಂಗಿನ ತೋಟಕೆ ನೀರಿಲ್ಲ, ಬಾರೋ ಬಾರೋ ಮಳೆರಾಯ ಬಾಳೆಯ ತೋಟಕೆ ನೀರಿಲ್ಲ, ಬಾರಪ್ಪ ಮಳೆರಾಯ…

7 hours ago

ಸಮರ್ಥವಾಗಿ ಕಾರ್ಯನಿರ್ವಹಿಸದ ಸಚಿವರನ್ನು ಬದಲಾಯಿಸಿ: ಶಾಸಕ ರವಿಕುಮಾರ್‌ ಗಣಿಗ

ಮಂಡ್ಯ: ಹಲವು ಶಾಸಕರು ಸಚಿವರಾಗುವ ಆಸೆ ಹೊಂದಿದ್ದು, ಮೂರು-ನಾಲ್ಕು ಬಾರಿ ಗೆದ್ದಿರುವ ಹಿರಿಯ ಶಾಸಕರು ಸಹ ಮಂತ್ರಿಗಿರಿಗಾಗಿ ದೆಹಲಿಗೆ ತೆರಳುತ್ತಿದ್ದಾರೆ.…

7 hours ago

ಕೊಡಗಿನಲ್ಲಿ ಭೀಕರ ರಸ್ತೆ ಅಪಘಾತ: ಚಿತ್ರನಟ ಹರೀಶ್ ಸ್ಥಳದಲ್ಲೇ ಸಾವು

ಮಡಿಕೇರಿ: ತಡರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಚಲನಚಿತ್ರ ಹಾಗೂ ಕಿರುತೆರೆ ಸಹ ಕಲಾವಿದ ಹರೀಶ್‌ ಧಾರುಣವಾಗಿ ಸಾವನ್ನಪ್ಪಿದ್ದಾರೆ. ಜಿಲ್ಲೆಯ…

7 hours ago

ಹಾಸನ: ಮಗಳ ಸಾವಿನಲ್ಲೂ ಸಾರ್ಥಕತೆ ಮೆರೆದ ಪೋಷಕರು

ಹಾಸನ: ಅಪಘಾತದಿಂದ ಮೆದುಳು ನಿಷ್ಕ್ರಿಯವಾಗಿದ್ದ ಮಗಳ ಅಂಗಾಂಗ ದಾನ ಮಾಡಿ ಪೋಷಕರು ಸಾವಿನಲ್ಲೂ ಸಾರ್ಥಕತೆ ಮೆರೆದಿರುವ ಘಟನೆ ಹಾಸನ ಜಿಲ್ಲೆಯಲ್ಲಿ…

7 hours ago

ಶಿವಮೊಗ್ಗ: ಪಶುವೈದ್ಯೆ ಕೊಂದಿದ್ದ ನೀರಾನೆಗೆ ಬಹು ಅಂಗಾಂಗ ವೈಫಲ್ಯ

ಶಿವಮೊಗ್ಗ: ತ್ಯಾವರಕೊಪ್ಪದ ಮೃಗಾಲಯದಲ್ಲಿ ಪಶುವೈದ್ಯೆ ಸಮೀಕ್ಷಾ ಅವರ ಮೇಲೆ ದಾಳಿ ಮಾಡಿ ಕೊಂದಿದ್ದ ನೀರಾನೆ ಹಂಸಿನಿಯ ಮರಿ ಗರ್ಭದಲ್ಲೇ ಸಾವನ್ನಪ್ಪಿದೆ.…

7 hours ago

ಪಾಕ್‌ ಜನತೆಗೆ ಮತ್ತೊಂದು ಶಾಕ್:‌ ವಿದ್ಯುತ್‌ ದರ ದುಪ್ಪಟ್ಟು ಹೆಚ್ಚಳ

ಇಸ್ಲಾಮಾಬಾದ್:‌ ಇಂಧನ ಬೆಲೆ ಏರಿಕೆ ನಂತರ ಪಾಕಿಸ್ತಾನ ಈಗ ವಿದ್ಯುತ್‌ ದರವನ್ನು ದುಪ್ಪಟ್ಟು ಹೆಚ್ಚಿಸಿದೆ. ಮಾಸಿಕ ಇಂಧನ ವೆಚ್ಚ ಹೊಂದಾಣಿಕೆಯ…

7 hours ago