ಗುರುಗಳ ಪಾತ್ರ ಪ್ರತಿೊಂಬ್ಬರ ಜೀವನದಲ್ಲೂ ಮಹತ್ತರವಾದುದು. ಅದರಲ್ಲೂ ಪ್ರಾಥಮಿಕ ಶಿಕ್ಷಕರು ನಮ್ಮ ಜೀವನದ ಸಾರಥಿಗಳೇ ಸರಿ. ನನ್ನ ಎಲ್ಲ ಗುರುಬಳಗವು ನನ್ನ ಬಾಳಿನ ದೀಪಜ್ಯೋತಿಗಳು. ನನ್ನ ಹುಟ್ಟೂರಾದ ಮಡಹಳ್ಳಿಯಲ್ಲಿ ನಾನು ಪ್ರಾಥಮಿಕ ಶಿಕ್ಷಣವನ್ನು ತುಂಬಾ ಸಂತಸದಿಂದ ಮುಗಿಸಿದೆ. ನನ್ನ ಹೆಮ್ಮೆಯ ನೆಚ್ಚಿನ ಗುರುಗಳಾದ ಸತ್ಯನಾರಾಯಣ ಸರ್ ಅವರನ್ನು ನಾನೆಂದೂ ಮನದಲ್ಲಿ ಪೂಜಿಸುತ್ತೇನೆ. ಗಣಿತ ವಿಷಯವನ್ನು ಬೋಧಿಸುತ್ತಿದ್ದ ಬಹಳ ಶಿಸ್ತಿನ ಗುರುಗಳಾಗಿದ್ದ ಅವರು ತುಂಬಾ ಸರಳ ಸ್ವಭಾವದವರು. ಅವರು ತೋರಿಸಿಕೊಟ್ಟ ಹಾದಿಯ ಪಯಣ ಇಂದು ನನಗೆ ಆದರ್ಶಪ್ರಾಯವಾಗಿದೆ. ನಾನೂ ಇಂದು ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಲು ಪ್ರೇರಣೆಯಾಗಿದೆ.
‘ನೀನು ಜಾಣೆ ಕಣಮ್ಮ, ಏನಾದ್ರೂ ಸಾಧನೆ ಮಾಡು’ ಎಂದು ಸದಾ ಹೇಳುತ್ತಿದ್ದ, ಈಗಲೂ ಸಿಕ್ಕಾಗ ಹೇಳುವ ನನ್ನ ಗುರುಗಳೆಂದರೆ ಈಗಲೂ ನನಗೆ ಗೌರವ, ಆತ್ಮೀಯತೆ. ನೈತಿಕ ಮೌಲ್ಯಗಳನ್ನು ಮೈಗೂಡಿಸಿದ ಉತ್ತಮ ಗುಣದವರು ನನ್ನ ಗುರುಗಳು. ಶಿಕ್ಷಕ ತರಬೇತಿ ಮುಗಿಸಿ ೩ ತಿಂಗಳ ತರಬೇತಿಗೆ ಮಡಹಳ್ಳಿ ಶಾಲೆಗೆ ನನ್ನನ್ನು ನಿೋಂಜಿಸಲಾದ ಸಂದರ್ಭದಲ್ಲಿ ಸತ್ಯನಾರಾಯಣ ಸರ್ ಅಲ್ಲೇ ಕಾರ್ಯನಿರ್ವಹಿಸುತ್ತಿದ್ದರು. ಆಗ ಶಿಕ್ಷಕ ವೃತ್ತಿಯಲ್ಲಿ ಮೌಲ್ಯ, ಗೌರವಗಳೆಲ್ಲವನ್ನೂಕಲಿಸಿಕೊಟ್ಟರು. ‘ಅನಿತಾ, ನಿನಗೆ ಪ್ರತಿೊಂಂದು ಕೆಲಸವೂ ಗೊತ್ತಿರಬೇಕು. ಬೇಗ ಕಲಿತಿಕೊ’ ಎಂದು ತಿಳಿಹೇಳಿ ಎಲ್ಲವನ್ನೂ ಕಲಿಸಿಕೊಟ್ಟು, ಇಂದು ನನ್ನ ಈ ಹೆಮ್ಮೆಯ ವೃತ್ತಿಯನ್ನು ಯಶಸ್ವಿಯಾಗಿ ನಿರ್ವಹಿಸಲು ದಾರಿ ತೋರಿದರು. ನಮ್ಮ ಸರ್ ಈಗ ನಿವೃತ್ತಿ ಜೀವನಕ್ಕೆ ಅಡಿಯಿಟ್ಟಿದ್ದು, ಅವರ ಮುಂದಿನ ದಿನಗಳು ಆರೋಗ್ಯದಾಯಕವಾಗಿ, ಸಂತಸದಾಯಕವಾಗಿರಲಿ.
– ಅನಿತ ಸಿ.
ಶಿಕ್ಷಕರು, ಗುಂಡ್ಲುಪೇಟೆ
ಹೊಸದಿಲ್ಲಿ : ಕಳೆದ ವಾರ ನಡೆದ ಷೇರುಪೇಟೆ ವಹಿವಾಟಿನಲ್ಲಿ ಸೂಚ್ಯಂಗಳು ಇಳಿಕೆ ಕಂಡಿದ್ದರಿಂದ ದೇಶದ ಪ್ರಮುಖ 10 ಕಂಪನಿಗಳ ಪೈಕಿ…
ಮುಂಬೈ : ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ಭಾಗಶಃ ಅನುಮತಿ ನೀಡಿದ ನಂತರ ಭಾರತ ಧ್ವಜ ಹೊತ್ತ ಎರಡು ಎಲ್‌ಪಿಜಿ (ದ್ರವೀಕೃತ…
ಮೇಲುಕೋಟೆ : ವೈಷ್ಣವ ಪರಂಪರೆಯ ಅತ್ಯಂತ ಪ್ರಸಿದ್ಧ ಮತ್ತು ವಿಶ್ವವಿಖ್ಯಾತ ವೈರಮುಡಿ ಬ್ರಹ್ಮೋತ್ಸವ ಶನಿವಾರ ರಾತ್ರಿಯಿಡಿ ಮೇಲುಕೋಟೆ ಶ್ರೀ ಚೆಲುವನಾರಾಯಣಸ್ವಾಮಿ…
ಗುವಾಹಟಿ : ಅಸ್ಸಾಂ ವಿಧಾನಸಭಾ ಚುನಾವಣೆಗೆ ರಾಜಕೀಯ ಕಾರ್ಯತಂತ್ರ ರೂಪಿಸಿರುವ ಕಾಂಗ್ರೆಸ್ ಪಕ್ಷವೂ ಪಂಚ ಗ್ಯಾರಂಟಿಗಳನ್ನು ಘೋಷಿಸಿದೆ. ಎಐಸಿಸಿ ಅಧ್ಯಕ್ಷ…
ಬೆಂಗಳೂರು : ಎಲ್ಲಾ ವಲಯಗಳಿಗೂ ಯಾವುದೇ ಅಡೆತಡೆ ಇಲ್ಲದೆ ಎಲ್.ಪಿ.ಜಿ ಸರಬರಾಜು ಮಾಡಲಾಗುತ್ತಿದೆ ಅಲ್ಲದೇ ವಿಶೇಷವಾಗಿ ಆಟೋ ಎಲ್.ಪಿ.ಜಿಗೆ ಯಾವುದೇ…
ಹನೂರು : ಶನಿವಾರ ಮಧ್ಯರಾತ್ರಿ ಎರಡು ಗಂಟೆ ವೇಳೆಯಲ್ಲಿ ಯಾರೋ ಆಸಾಮಿಗಳು ಮಾರಕಾಸ್ತ್ರಗಳನ್ನು ಹಿಡಿದು ಐದಾರು ಜನರು ಓಡಾಡುತ್ತಿರುವ ದೃಶ್ಯ…