ವಿಶ್ವ ಆರೋಗ್ಯಸಂಸ್ಥೆ, ಈ ಬಾರಿಯ ವಿಶ್ವ ಆರೋಗ್ಯದಿನವನ್ನು (ಏ.7) ಮಹಿಳೆಯರು ಹಾಗೂ ಶಿಶುಗಳ ಆರೋಗ್ಯಕ್ಕೆ ಸಂಬಂಧಿಸಿದಂತೆ ಆಚರಣೆ ಮಾಡುತ್ತಿದೆ. ಮಹಿಳೆಯರ ಆರೋಗ್ಯದ ಬಗ್ಗೆ ಕಾಳಜಿವಹಿಸುವಂತೆ ಜಗತ್ತಿನ ಎಲ್ಲ ರಾಷ್ಟ್ರಗಳಿಗೆ ಕರೆ ನೀಡಿರುವ ವಿಶ್ವ ಆರೋಗ್ಯ ಸಂಸ್ಥೆ ತನ್ನ ಸಲಹೆಗಳು
ಹಾಗೂ ಮಾರ್ಗಸೂಚಿಗಳನ್ನು ಪಾಲಿಸುವಂತೆ ಹೇಳಿದೆ.
ಏನಿದು ಮಾರ್ಗಸೂಚಿ? ಪ್ರತಿ ವರ್ಷ ಒಂದು ವಿಷಯವನ್ನು ಇಟ್ಟುಕೊಂಡು ವಿಶ್ವ ಆರೋಗ್ಯ ಸಂಸ್ಥೆ ಏ.7 ರಂದು ವಿಶ್ವ ಆರೋಗ್ಯ ದಿನವನ್ನು ಆಚರಣೆ ಮಾಡುತ್ತದೆ. ಈ ವರ್ಷ ‘ಆರೋಗ್ಯಕರ ಆರಂಭಗಳು- ಆಶಾದಾಯಕ ಭವಿಷ್ಯಗಳು’ ಧ್ಯೇಯದೊಂದಿಗೆ ತಾಯಂದಿರು ಮತ್ತು ನವಜಾತ ಶಿಶುಗಳ ಆರೋಗ್ಯದ ವಿಷಯಕ್ಕೆ ಸಂಬಂಧಿಸಿದಂತೆ ವಿಶ್ವ ಆರೋಗ್ಯ ದಿನವನ್ನು ಆಚರಣೆ ಮಾಡುತ್ತಿದೆ. ಈ ಮೂಲಕ ಮಹಿಳೆಯರು ಹಾಗೂ ಶಿಶುಗಳ ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡಿದೆ.
ಗರ್ಭಿಣಿಯರ ಆರೋಗ್ಯದ ಜತೆಗೆ ಅವರಿಗೆ ಹುಟ್ಟುವ ಮಕ್ಕಳ ಆರೋಗ್ಯ ಹಾಗೂ ಪೌಷ್ಟಿಕಾಂಶದ ಬಗ್ಗೆ ಹೆಚ್ಚಿನ ಕಾಳಜಿಯನ್ನು ಸರ್ಕಾರಗಳು ವಹಿಸಬೇಕು
ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಜಗತ್ತಿನಲ್ಲಿ ಗರ್ಭಿಣಿಯರು ಹಾಗೂ ಶಿಶುಗಳ ಸಾವು ಹೆಚ್ಚಾಗಿದೆ. ಕೆಲವೊಂದು ದೇಶಗಳಲ್ಲಿ ಈ ಕಾರಣದಿಂದಲೇ
ಜನಸಂಖ್ಯೆ ಕೂಡ ಕಡಿಮೆಯಾಗಿದೆ. ಕರ್ನಾಟಕದಲ್ಲೂ ಗರ್ಭಿಣಿಯರ ಸಾವಿನ ಸಂಖ್ಯೆ ಹೆಚ್ಚಾಗಿದೆ.
ಆಹಾರ ಕ್ರಮ ಹೇಗಿರಬೇಕು?
ಗರ್ಭಿಣಿಯರು ನಿತ್ಯ ತಮ್ಮ ಆಹಾರದಲ್ಲಿ ಕೆಲವು ನಿಯಮಗಳನ್ನು ಪಾಲಿಸಬೇಕು. ಅದಕ್ಕಾಗಿ ಪ್ರತಿದಿನ ಹೆಚ್ಚು ಊಟ ಮಾಡಬಾರದು. ಅಂದರೆ ಸ್ಥಿರವಾದ ಮಟ್ಟದಲ್ಲಿ ಆಹಾರ ಸೇವನೆ ಮಾಡುವುದು ಉತ್ತಮ. ಇದು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ.
ಫೈಬರ್‌ಯುತವಾದ ಆಹಾರ ಸೇವನೆ: ಫೈಬರ್ ಭರಿತ ಆಹಾರಗಳ ಸೇವನೆ ನಿಮ್ಮ ಆರೋಗ್ಯಕ್ಕೂ ಹಾಗೂ ಮಗುವಿನ ಬೆಳವಣಿಗೆಗೂ ಉತ್ತಮವಾಗಿರುತ್ತದೆ. ಅದಕ್ಕಾಗಿ ಧಾನ್ಯ, ದ್ವಿದಳಧಾನ್ಯ, ಹಣ್ಣುಗಳು ಹಾಗೂ ತರಕಾರಿಗಳನ್ನು ಸೇವನೆ ಮಾಡಬೇಕು. ಗರ್ಭಧಾರಣೆ ಸಮಯದಲ್ಲಿ ಇದು ಅಗತ್ಯವಾಗಿರುತ್ತದೆ. ಇದರ ಜತೆಗೆ ನಿಮ್ಮಲ್ಲಿ ಕಾಡುವ ಮಲಬದ್ಧತೆಯನ್ನು ತಡೆಯುತ್ತದೆ.
ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಸೇವನೆ: ಗರ್ಭಿಣಿಯರ ಮೂಳೆಗಳನ್ನು ಹಾಗೂ ಮಕ್ಕಳ ಬೆಳವಣಿಗೆಯನ್ನು ಆರೋಗ್ಯವಾಗಿಡಲು, ಡೇರಿ ಉತ್ಪನ್ನಗಳನ್ನು, ದ್ವಿದಳ ಧಾನ್ಯಗಳನ್ನು, ಮೊಟ್ಟೆಯಂತಹ ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಆಹಾರಗಳನ್ನು ಸೇವನೆ ಮಾಡಬೇಕು.
ನೀರು ಕುಡಿಯಿರಿ: ಗರ್ಭಿಣಿಯರು ಹೆಚ್ಚು ನೀರು ಕುಡಿದಷ್ಟೂ ನಿಮ್ಮ ದೇಹದಲ್ಲಿ ಸೇರಿರುವ ವಿಷಾಂಶಗಳನ್ನು ಹೊರಹಾಕುತ್ತದೆ. ಮೂತ್ರನಾಳದ ಸೋಂಕಿನಿಂದ ಅಪಾಯ ಕಡಿಮೆ ಮಾಡುತ್ತದೆ.
ನಿಮ್ಮ ದೇಹದ ಬಗ್ಗೆ ಗಮನವಿರಲಿ
ನಿಮ್ಮ ದೇಹದಲ್ಲಾಗುವ ಬದಲಾವಣೆಯನ್ನು ಗಮನಿಸಿ, ನೀವು ಸೇವನೆ ಮಾಡುವ ಆಹಾರದಿಂದ ಅಲರ್ಜಿ ಅಥವಾ ಅಸ್ವಸ್ಥತೆ ಉಂಟಾಗಬಹುದು. ಒಂದು ವೇಳೆ ಇಂತಹ ಸಮಸ್ಯೆ ಉಂಟಾದಲ್ಲಿ ತಕ್ಷಣ ನಿಮ್ಮ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ಜಂಕ್ ಫುಡ್‌ಗಳಿಂದ ದೂರವಿರಿ: ಗರ್ಭಿಣಿಯರಿಗೆ ಹೊರಗಿನ ಆಹಾರ ತಿನ್ನಬೇಕು ಎಂಬ ಆಸೆಗಳು ಹೆಚ್ಚಿರುತ್ತದೆ. ಆದರೆ, ಇದು ಅಪಾಯಕಾರಿ. ಜಂಕ್‌ಫುಡ್‌ಗಳಿಂದ ದೂರ ಇರಬೇಕು. ಎಣ್ಣೆಯುಕ್ತ, ಸಕ್ಕರೆ ಮತ್ತು ಖಾರದ ಆಹಾರಗಳಿಂದ ದೂರವಿರಿ. ಅತಿಯಾದ ಸಂಸ್ಕರಿಸಿದ ಆಹಾರಗಳು ಅನಗತ್ಯ ತೂಕ ಹೆಚ್ಚಿಸಬಹುದು.
ಬೆಂಗಳೂರು: ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ, ಉದ್ಯಮಿ ಡಾ.ಸಿ.ಜೆ.ರಾಯ್ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಬೆಚ್ಚಿಬೀಳಿಸುವ ಮಾಹಿತಿ ಹೊರಬಂದಿದೆ. ಮರಣೋತ್ತರ…
ಬೆಂಗಳೂರು: ರಾಜ್ಯದಲ್ಲಿ ರೈತರ ಬೇಡಿಕೆಗೆ ಅನುಗುಣವಾಗಿ ರಸಗೊಬ್ಬರ ಪೂರೈಸಲಾಗಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು. ಇಂದು ವಿಧಾನಪರಿಷತ್ತಿನ ಅಧಿವೇಶನದ…
ಬೆಂಗಳೂರು: ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರಿಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಬಳಿಕ…
ನಂಜನಗೂಡು: ಜಮೀನಿಗೆ ಬೈಕ್‌ನಲ್ಲಿ ಹೋಗುತ್ತಿದ್ದ ರೈತ ದಂಪತಿಗಳ ಮೇಲೆ ಚಿರತೆ ದಾಳಿ ನಡೆಸಿದ್ದು, ಮಗು ಸೇರಿದಂತೆ ಮೂವರಿಗೆ ಗಂಭೀರ ಗಾಯಗಳಾಗಿರುವ…
ನಂಜನಗೂಡು: ಮಹಾತ್ಮ ಗಾಂಧೀಯವರ ಸರ್ವೋದಯದ ದಿನದ ಅಂಗವಾಗಿ ಸ್ವಾತಂತ್ರ್ಯಹೋರಾಟಗಾರ ತಗಡೂರು ಗಾಂಧಿ ಎಂದೇ ಖ್ಯಾತರಾಗಿದ್ದ ರಾಮಚಂದ್ರರಾಯರಿಂದ ಸ್ಥಾಪಿತವಾದ ತಗಡೂರು ಖಾದಿ ಕೇಂದ್ರದಲ್ಲಿ…
ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ 21ನೇ ಘಟಿಕೋತ್ಸವದ ಸಂಭ್ರಮ ಮನೆಮಾಡಿದ್ದು, ಒಟ್ಟು 8 ಮಂದಿ ಗಣ್ಯರಿಗೆ ಗೌರವ ಡಾಕ್ಟರೇಟ್…