ಅಮ್ಮ, ಅಣ್ಣ ಮಾತ್ರ ಮೊಬೈಲ್, ಯೂಟ್ಯೂಬ್ ನೋಡ್ತಾನೆ. ನಂಗೆ ನೀನು ಮೊಬೈಲೇ ಕೊಡಲ್ಲ. ನೀನು ಮೊಬೈಲ್ ಕೊಟ್ರೆ ಮಾತ್ರ ನಾನು ತಿಂಡಿ ತಿನ್ನೋದು, ಸ್ಕೂಲ್‌ಗೆ ಹೋಗೋದು, ಇಲ್ಲಾಂದ್ರೆ ತಿಂಡಿನೂ ತಿನ್ನಲ್ಲ, ಸ್ಕೂಲಿಗೂ ಹೋಗಲ್ಲ ಎಂದು ಈಗಷ್ಟೇ ಎಲ್‌ಕೆಜಿಗೆ ಹೋಗುತ್ತಿರುವ ಮಗು ಹಠ ಹಿಡಿದು ಕುಳಿತರೆ ಅಮ್ಮ ಏನು ಮಾಡಬೇಕು? ಇತ್ತ ಮಗನೂ ಮೊಬೈಲ್ ಬಿಡುತ್ತಿಲ್ಲ. ಮೊಬೈಲ್ ಕೊಡಲಿಲ್ಲ ಅಂದ್ರೆ ತಿಂಡಿನೇ ತಿನ್ನಲ್ಲ ಅನ್ನುವ ಪುಟ್ಟ ಮಗಳು, ಮೊಬೈಲ್ ಬಿಡೋ ಎಂದು ಮಗನಿಗೆ ಜೋರು ಧ್ವನಿಯಲ್ಲಿ ಬೈದಾಗ ಮೆಲ್ಲಗೆ ಮೊಬೈಲ್ ತೆಗೆದಿಟ್ಟ ಮಗ, ಆಂಡ್ರಾಯ್ಡ್ ಟಿವಿಗೆ ನೆಟ್ ಕನೆಕ್ಟ್ ಮಾಡಿಕೊಂಡು ಯೂಟ್ಯೂಬ್‌ನಲ್ಲಿ ತನಗಿಷ್ಟವಾದ ರೀಲ್ಸ್‌ಗಳ ತುಣುಕು ನೋಡಲು ಮುಂದಾ ದಾಗ… ಅಮ್ಮ, ಅಣ್ಣ ಮತ್ತೆ ಯೂಟ್ಯೂಬ್ ನೋಡ್ತಾ ಅವ್ನೆ ಎಂದು ಮಗಳಿಂದ ಮತ್ತೆ ದೂರು.
ಇಬ್ಬರನ್ನೂ ಸಂಭಾಳಿಸಿ ತಿಂಡಿ ತಿನ್ನಿಸಿ, ಮಧ್ಯಾಹ್ನದ ಊಟಕ್ಕೆ ಬಾಕ್ಸ್ ರೆಡಿ ಮಾಡಿ ಇಬ್ಬರನ್ನೂ ಸ್ಕೂಲ್‌ಗೆ ಕಳಿಸುವಷ್ಟರಲ್ಲಿ ಅಮ್ಮನಿಗೆ ಸಾಕು ಸಾಕಾಗಿರುತ್ತೆ. ಅದರಲ್ಲೂ ಉದ್ಯೋಗಸ್ತ ಮಹಿಳೆ ಆಗಿದ್ದರಂತೂ ಮುಗಿದೇ ಹೋಯಿತು. ಗಂಡ-ಮಕ್ಕಳನ್ನು ಸಂಭಾಳಿಸಿ ತಾನು ಕೆಲಸಕ್ಕೆ ಹೋಗಿ ಸಂಜೆ ಬಂದು ಗೃಹ ಕೃತ್ಯದಲ್ಲಿ ತೊಡಗಿರುವಾಗ ಓದುವ ಶಾಸ್ತ್ರ ಮುಗಿಸಿದ ಮಕ್ಕಳಿಬ್ಬರೂ ಮೊಬೈಲ್ ಗಾಗಿ ಕಿತ್ತಾಡತೊಡಗಿದಾಗ ಅಮ್ಮನ ಪರಿಸ್ಥಿತಿ ಏನಾಗಿರಬೇಡ.
ಮೊದಲೆಲ್ಲಾ ಮಕ್ಕಳು ಮನೆಯ ಹೊರಗೆ ಆಟ ಆಡಲು ಹೋಗುತ್ತಿದ್ದರು. ಆದರೆ ಈಗಿನ ಮಕ್ಕಳು ಆಟ-ಊಟ ಎಲ್ಲವನ್ನೂ ಬದಿಗಿಟ್ಟು ಮೊಬೈಲ್ನಲ್ಲಿ ಗೇಮ್ ಆಡುತ್ತಾ, ವಿಡಿಯೋ ನೋಡುತ್ತಾ ಕಾಲ ಕಳೆಯುತ್ತಾ, ತಮಗರಿವಿಲ್ಲದೇ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಮಕ್ಕಳ ಮೊಬೈಲ್ ಗೀಳನ್ನು ಹೇಗೆ ಬಿಡಿಸುವುದು ಎಂದು ಯೋಚಿಸುವ ಪೋಷಕರ ಸಂಖ್ಯೆ ಕೂಡ ದಿನೇ ದಿನೆ ಹೆಚ್ಚುತ್ತಿದೆ.
ಮಕ್ಕಳ ಸ್ಕ್ರೀನ್ ಟೈಮ್ ಸಂಬಂಧಿಸಿದ ಸಮಸ್ಯೆ ಯನ್ನು ಪರಿಹರಿಸುವುದು ಹೇಗೆ?, ಮಕ್ಕಳ ಯೋಗಕ್ಷೇಮವನ್ನು ಹೆಚ್ಚಿಸಲು ಮನೆಯಲ್ಲಿ ಯಾವ ರೀತಿಯ ಪರಿಣಾಮಕಾರಿ ತಂತ್ರಗಳನ್ನು ಬಳಸಬಹುದು ಎಂಬುದರ ಕುರಿತು ನಿಮ್ಹಾನ್ಸ್‌ನ ಫ್ರೀ ಪೇರೆಂಟ್ ಗ್ರೂಪ್ ಸೆಷನ್‌ನ ಆನ್‌ಲೈನ್ ಕಾರ್ಯಾಗಾರದಲ್ಲಿ ಪರಿಣಿತರು ತಿಳಿಸಿಕೊಡಲಿದ್ದಾರೆ.
ಗೇಮಿಂಗ್, ಯೂಟ್ಯೂಬ್, ಸೋಷಿಯಲ್ ಮೀಡಿಯಾ ಅಂತೆಲ್ಲಾ ಮೊಬೈಲ್‌ಗೆ ಅಡಿಕ್ಟ್ ಆಗಿರುವ ಮತ್ತು ದಿನದ ಬಹುಪಾಲು ಸಮಯವನ್ನು ಸ್ಕ್ರೀನ್ ಟೈಮ್‌ನಲ್ಲೇ ಕಳೆಯುವ ಯಾವುದೇ ವಯೋಮಾನದ ಮಕ್ಕಳ ಪೋಷಕರು ಈ ಉಚಿತ ಕಾರ್ಯಾಗಾರದಲ್ಲಿ ಭಾಗವಹಿಸಬಹುದು. ಮನೆಯಲ್ಲಿ ಮಕ್ಕಳನ್ನು ನಿಭಾಯಿಸುವುದು ಹೇಗೆ? ಮಕ್ಕಳೊಂದಿಗೆ ಯಾವ ರೀತಿ ವರ್ತಿಸಬೇಕು? ಇತ್ಯಾದಿ ಪರಿಣತಿ ಪಡೆಯಲು ಬಯಸುವ ಪೋಷಕರು ಈ ಕಾರ್ಯಾಗಾರದಲ್ಲಿ ಪಾಲ್ಗೊಳ್ಳಬಹುದು.
ಕಾರ್ಯಾಗಾರದ ದಿನಾಂಕ ಮತ್ತು ಸಮಯ: ಈ ಉಚಿತ ಆನ್‌ಲೈನ್ ಕಾರ್ಯಾಗಾರವು ರಜಾ ದಿನಗಳನ್ನು ಹೊರತುಪಡಿಸಿ ಪ್ರತಿ ಶನಿವಾರ ನಡೆಯಲಿದೆ. ಜೂ.೨೬, ಜು.೫ರಂದು ಬೆಳಿಗ್ಗೆ ೧೧ ರಿಂದ ಮಧ್ಯಾಹ್ನ ೧೨ ಗಂಟೆವರೆಗೆ ಜೂಮ್ ಮೀಟಿಂಗ್‌ನಲ್ಲಿ ಈ ಉಚಿತ ಕಾರ್ಯಾಗಾರ ನಡೆಯಲಿದೆ. ಫ್ರೀ ಪೇರೆಂಟ್ಸ್ ಗ್ರೂಪ್ ಸೆಷನ್‌ಗೆ ಕಿವಿಗೊಡಲು ಈ ಲಿಂಕ್ … NIMHANS
parent group registration form ಮೂಲಕ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಿ. ಅಥವಾ ದೂ.080- 26685948, ಮೊ. 080-26685948, ಮೊ. 94808 29670 ಸಂಪರ್ಕಿಸಿ. ಹೆಸರು ನೋಂದಾಯಿಸಿಕೊಂಡವರಿಗೆ ಜೂಮ್ ಮೀಟಿಂಗ್ ಲಿಂಕ್ ಕಳಿಸಲಾಗುತ್ತದೆ. ಮಕ್ಕಳ ಸ್ಕ್ರೀನ್ ಟೈಮ್ ಕಡಿಮೆ ಮಾಡುವ ಬಗ್ಗೆ ದೇಶದ ಪರಿಣಿತ ಮಾನಸಿಕ ಆರೋಗ್ಯ ತಜ್ಞರಿಂದ ಉಚಿತ ಮಾಹಿತಿ ಪಡೆಯಲು ಇದೊಂದು ಸುವರ್ಣಾವಕಾಶವಾಗಿದೆ.
” ಮಕ್ಕಳ ಮೊಬೈಲ್ ಗೀಳನ್ನು ಹೇಗೆ ಬಿಡಿಸುವುದಪ್ಪಾ ಎಂದು ತಲೆ ಮೇಲೆ ಕೈಹೊತ್ತು ಕುಳಿತಿರುವವರಿಗಾಗಿಯೇ ಬೆಂಗಳೂರಿನ ನಿಮ್ಹಾನ್ಸ್ ಫ್ರೀ ಪೇರೆಂಟ್ಸ್ ಗ್ರೂಪ್ ಸೆಷನ್ ಹೆಸರಲ್ಲಿ ಆನ್‌ಲೈನ್ ಕಾರ್ಯಾಗಾರ ಆಯೋಜಿಸುತ್ತಿದ್ದು, ನಿಮ್ಮ ಮಕ್ಕಳ ಸ್ಕ್ರೀನ್ ಟೈಮ್ ಕಡಿಮೆ ಮಾಡುವುದು ದೊಡ್ಡ ಸವಾಲಾಗಿದ್ದರೆ ನಿಮ್ಮ ಮಕ್ಕಳು ಕೂಡ ಹೆಚ್ಚು ಮೊಬೈಲ್ ನೋಡುತ್ತಿದ್ದರೆ?, ಮಕ್ಕಳ ಈ ಗೀಳನ್ನು ಹೇಗೆ ಬಿಡಿಸುವುದು ಎಂದು ನೀವು ಯೋಚಿಸುತ್ತಿದ್ದರೆ ನಿಮ್ಹಾನ್ಸ್‌ನ ಈ ಉಚಿತ ಕಾರ್ಯಾಗಾರದಲ್ಲಿ ಭಾಗವಹಿಸಿ ಸದುಪಯೋಗಪಡಿಸಿಕೊಳ್ಳಿ.”
– ಗಿರೀಶ್ ಹುಣಸೂರು
ಬೆಂಗಳೂರು : ರಾಜ್ಯದ ಎಲ್ಲಾ ರೀತಿಯ ಸಿವಿಲ್ ಹುದ್ದೆಗಳಿಗೆ 2027ರ ಡಿಸೆಂಬರ್ 31ರವರೆಗೆ ಹೊರಡಿಸುವ ನೇಮಕಾತಿ ಅಧಿಸೂಚನೆಗಳಿಗೆ ಸಂಬಂಧಿಸಿದಂತೆ ಎಲ್ಲಾ…
ಮಂಡ್ಯ : ಸಾರ್ವಜನಿಕರಿಗೆ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಸೆಸ್ಕ್)ವು ಜಿಲ್ಲೆಯಲ್ಲಿ…
ಮಂಡ್ಯ : ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿಯದ್ದು ಬರಿ ಡಬಲ್ ಸ್ಟ್ಯಾಂಡರ್ಡ್ ನಾಟಕವಾಗಿದೆ. ಜಾತ್ಯತೀತ ಜನತಾದಳವನ್ನು ಓಡಿಸುವುದಕ್ಕೆ ಅವರಿಗೆ ತಾಕತ್ತಿದೆಯೇ?.…
ನಾಗಮಂಗಲ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಜಮೀನು ಕಬಳಿಕೆ ಪ್ರಕರಣ ಮಂಡ್ಯ : ನಾಗಮಂಗಲ ತಾಲ್ಲೂಕಿನ ನಕಲಿ ದಾಖಲೆ ಸೃಷ್ಟಿ…
11 ಯೋಧರಿಗೆ ಗಂಭೀರ ಗಾಯ ಭದೇರ್ವಾ : ದೋಡಾ ಜಿಲ್ಲೆಯ ಥನಾಲಾದ ಮೇಲ್ಭಾಗದ ಪ್ರದೇಶದಲ್ಲಿನ ಭದೇರ್ವಾ-ಚಂಬಾ ರಸ್ತೆಯಲ್ಲಿ ಗುರುವಾರ ಸೇನಾ…
ಬೆಂಗಳೂರು : ಬಿಗ್ ಬಾಸ್ ಮುಗಿದ ಮೇಲೂ ಗಿಲ್ಲಿ ನಟನ ಕ್ರೇಜ್ ಕಮ್ಮಿಯಾಗಿಲ್ಲ. ಹೋದ ಕಡೆ, ಬಂದಕಡೆ ಅಭಿಮಾನಿಗಳು ಮುತ್ತಿಕೊಳ್ಳುತ್ತಿದ್ದು,…