ಮಹಿಳೆ ಸಬಲೆ

ಬದುಕಿನ ಸವಾಲು ಮೆಟ್ಟಿನಿಂತ ಎಳನೀರು ನಾಗರತ್ನಮ್ಮ

ಎನ್.ಪಿ.ಪರಶಿವಮೂರ್ತಿ, ನಂಜೀಪುರ

ಬದುಕಿನಲ್ಲಿ ಎದುರಾಗುವ ನೂರಾರು ಸವಾಲುಗಳು ಬದುಕನ್ನು ನರಕವಾಗಿಸಿಬಿಡುತ್ತವೆ. ಇಂತಹ ಸವಾಲುಗಳನ್ನು ದಿಟ್ಟತನದಿಂದ ಎದುರಿಸಿದಾಗ ಮಾತ್ರ ಸಮಸ್ಯೆಗಳ ಬದುಕಿನಲ್ಲಿ ಈಸಿ ಜಯಿಸಲು ಸಾಧ್ಯ. ಹೀಗೆ ಬದುಕಿನುದ್ದಕ್ಕೂ ಸವಾಲುಗಳನ್ನು ಮೆಟ್ಟಿನಿಂತು, ಎಂದಿಗೂ ತನ್ನ ಸ್ವಾಭಿಮಾನವನ್ನು ಬಿಟ್ಟುಕೊಡದೆ ದುಡಿದು ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ ಮೈಸೂರಿನ ನಾಗರತ್ನಮ್ಮ.

ನಾಗರತ್ನಮ್ಮ ಎಳನೀರು ವ್ಯಾಪಾರಿ. ತಮ್ಮ ಬದುಕಿನಲ್ಲಿ ಎದುರಾದ ಸಂಕಷ್ಟಗಳ ನಿವಾರಣೆಗಾಗಿ ಬೇರೆ ದಾರಿ ಇಲ್ಲದೆ ಎಳನೀರು ವ್ಯಾಪಾರಕ್ಕೆ ಇಳಿದರು. ಕುವೆಂಪುನಗರದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿರುವ ೫೦ ವರ್ಷ ಪ್ರಾಯದ ನಾಗರತ್ನಮ್ಮ ಅವರನ್ನು ಛಲಗಾತಿ ಎಂದೇ ಹೇಳಬೇಕು. ಮೂಲತಃ ಕೆ.ಆರ್.ಪೇಟೆಯವರಾದ ನಾಗರತ್ನಮ್ಮರಿಗೆ ೨೦ನೇ ವಯಸ್ಸಿನಲ್ಲಿ ಶ್ರೀನಿವಾಸ ಎಂಬುವರೊಂದಿಗೆ ವಿವಾಹವಾಗಿ ಮೈಸೂರಿಗೆಬಂದು ನೆಲೆಸಿದರು. ದಂಪತಿಗೆ ಇಬ್ಬರು ಹೆಣ್ಣುಮಕ್ಕಳು.

ಆರಂಭದಲ್ಲಿ ಸುಖವಾಗಿದ್ದ ಪುಟ್ಟ ಸಂಸಾರಕ್ಕೆ ಬರಸಿಡಿಲು ಬಡಿದಂತೆ ಕುಡಿತದ ಚಟಕ್ಕೆ ಬಲಿಯಾಗಿದ್ದ ನಾಗರತ್ನಮ್ಮಳ ಪತಿ ಶ್ರೀನಿವಾಸ್ ಬಹು ಅಂಗಾಗ ವೈಫಲ್ಯದಿಂದ ಬಳಲುತ್ತಿದ್ದಾಗ ಅವರ ಚಿಕಿತ್ಸೆಗೆ ನಾಗರತ್ನಮ್ಮ ಸಾಲ ಮಾಡಿ ೩೫ ಲಕ್ಷ ರೂ.ಗಳನ್ನು ಖರ್ಚು ಮಾಡಿದರೂ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಇದರಿಂದಾಗಿ ಸಾಲದ ಸುಳಿಗೆ ಸಿಲುಕಿದ ನಾಗರತ್ನಮ್ಮ ಸಾಲದ ಭಾರ ಹೊರುವ ಜತೆಗೆ ಇಬ್ಬರು ಹೆಣ್ಣುಮಕ್ಕಳ ಜವಾಬ್ದಾರಿಯನ್ನೂ ಹೊರಬೇಕಾಯಿತು. ಇದಕ್ಕಾಗಿ ಅವರು ಎಳನೀರು ವ್ಯಾಪಾರ ಆರಂಭಿಸಿದರು. ಮೈಸೂರಿನ ಕುವೆಂಪುನಗರದ ಆದಿಚುಂಚನಗಿರಿ ರಸ್ತೆಯ ದಕ್ಷಿಣ ಇಎಸ್‌ಐಸಿ ಚಿಕಿತ್ಸಾಲಯದ ಮುಂಭಾಗದಲ್ಲಿ ಇವರು ಕಳೆದ ಇಪ್ಪತ್ತೈದು ವರ್ಷಗಳಿಂದ ಎಳೆನೀರು ವ್ಯಾಪಾರ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಸಾಲ ತೀರಿಸುವ ಜತೆಗೆ ಇಬ್ಬರು ಹೆಣ್ಣುಮಕ್ಕಳ ಪೋಷಣೆ ಮತ್ತು ಅವರ ವಿವಾಹ ಮಾಡುವ ಜವಾಬ್ದಾರಿಯೂ ಇವರ ಹೆಗಲ ಮೇಲೆ ಬಿತ್ತು. ಇಂತಹ ಸಂಕಷ್ಟದಲ್ಲಿ ಎದೆಗುಂದದೆ ಬದುಕನ್ನು ಸವಾಲಾಗಿ ಸ್ವೀಕರಿಸಿ ಎಳನೀರು ಮಾರುತ್ತಾ ಜೀವನ ಸಾಗಿಸುತ್ತಿದ್ದಾರೆ.

ಆರಂಭದಲ್ಲಿ ಮಹಿಳೆಯಾಗಿ ಮಚ್ಚು ಹಿಡಿದು ಎಳನೀರು ಕೊಚ್ಚುವುದು ಹೇಗೆ ಸಾಧ್ಯ? ಎಂದು ಎಲ್ಲರೂ ಟೀಕೆ ಮಾಡಿ ಹೀಯಾಳಿಸಿದರು. ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ನಾಗರತ್ನಮ್ಮ ತಮ್ಮ ವೃತ್ತಿಯನ್ನು ಮುಂದುವರಿಸಿದ್ದಾರೆ.

ಸದ್ಯ ಗಂಡನ ಚಿಕಿತ್ಸೆಗಾಗಿ ಮಾಡಿದ ಸಾಲವನ್ನು ಹಂತಹಂತವಾಗಿ ತೀರಿಸಿದ್ದಾರೆ. ತಮ್ಮ ಕಷ್ಟದ ದಿನಗಳಲ್ಲಿ ತಮ್ಮ ಕುಟುಂಬಸ್ಥರ‍್ಯಾರು ಸ್ಪಂದಿಸಲಿಲ್ಲ ಎಂಬ ಕೊರಗು ಇವರನ್ನು ಸದಾ ಕಾಡುತ್ತಿದೆ. ಕಷ್ಟದಲ್ಲಿಯೇ ಜೀವನ ಆರಂಭಿಸಿದ ನಾಗರತ್ನಮ್ಮ ಎಳನೀರು ಮಾರಿಯೇ ತಮ್ಮ ಇಬ್ಬರು ಹೆಣ್ಣುಮಕ್ಕಳ ವಿವಾಹ ಮಾಡಿ, ಅವರ ಬದುಕನ್ನೂ ರೂಪಿಸಿದ್ದಾರೆ. ಬಂದ ಲಾಭದಲ್ಲಿ ಅಲ್ಪ ಹಣವನ್ನು ಉಳಿತಾಯ ಮಾಡಿ ಆಟೋ ರಿಕ್ಷಾವೊಂದನ್ನೂ ಖರೀದಿಸಿದ್ದಾರೆ. ರೈತರ ಜಮೀನಿಗೆ ಹೋಗಿ ತಾವೇ ಎಳನೀರು ಖರೀದಿ ಮಾಡಿ ಸಾಗಾಣಿಕೆ ಮಾಡಲು ಇದನ್ನು ಬಳಕೆ ಮಾಡುತ್ತಿದ್ದಾರೆ.

‘ಸುಖ ಮತ್ತು ಹಣ ಇದ್ದಾಗ ಊರೆಲ್ಲಾ ನೆಂಟರು, ಕಷ್ಟದಲ್ಲಿ ಯಾರೂ ಬರುವುದಿಲ್ಲ‘ ಎಂಬುದು ಇವರ ಬದುಕಿನ ಅನುಭವದ ಮಾತು. ಸುಖವಾಗಿ ದಾಂಪತ್ಯ ಜೀವನ ನಡೆಸಬೇಕಾದವರು ವಿವಾಹವಾದ ಕೇವಲ ೫ ವರ್ಷಗಳಲ್ಲಿಯೇ ಗಂಡನನ್ನು ಕಳೆದುಕೊಂಡು ಒಬ್ಬಂಟಿ ಮಹಿಳೆಯಾಗಿ ಕಣ್ಣೀರಿನಲ್ಲಿ ಕೈ ತೊಳೆದ ನಾಗರತ್ನಮ್ಮ ಅವರ ಹೋರಾಟದ ಬದುಕು ಇತರರಿಗೆ ಮಾದರಿಯಾಗಿದೆ.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ನಾಗನಹಳ್ಳಿಗೆ ಸಮರ್ಪಕ ಬಸ್ ಸೌಲಭ್ಯ ಕಲ್ಪಿಸಿ

ಮೈಸೂರು ತಾಲ್ಲೂಕಿನ ನಾಗನಹಳ್ಳಿಯಿಂದ ಪ್ರತಿನಿತ್ಯ ಸಾರ್ವಜನಿಕರು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು ಮೈಸೂರು ನಗರಕ್ಕೆ ತೆರಳುತ್ತಾರೆ. ಆದರೆ ನಾಗನಹಳ್ಳಿಯಿಂದ ಮೈಸೂರಿಗೆ…

3 hours ago

ಓದುಗರ ಪತ್ರ: ತಾಲ್ಲೂಕು ಕಚೇರಿ ಆವರಣದಲ್ಲಿ ಕಸ ತೆರವುಗೊಳಿಸಿ

ಮೈಸೂರಿನಲ್ಲಿ ಪಾರಂಪರಿಕತೆ ಹಾಗೂ ಆಧುನಿಕತೆಯನ್ನು ಸಮ್ಮಿಳಿಸಿಕೊಂಡು ನಿರ್ಮಿಸಲಾಗಿರುವ ತಾಲ್ಲೂಕು ಕಚೇರಿಯ ಕಟ್ಟಡದ ಆವರಣದಲ್ಲೇ ಕಸ ಸಂಗ್ರಹವಾಗಿದ್ದು, ಕೆಲಸ ಕಾರ್ಯಗಳಿಗಾಗಿ ಪ್ರತಿ…

3 hours ago

ಓದುಗರ ಪತ್ರ: ಜನಪ್ರತಿನಿಧಿಗಳು ಪ್ರಜಾಪ್ರಭುತ್ವದ ಮೌಲ್ಯವನ್ನು ಉಳಿಸಲಿ

ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ ಶಾಸಕ, ಹುಬ್ಬಳ್ಳಿಯ ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ…

3 hours ago

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ: ಶಿವರಾಜಕುಮಾರ್-‘ಆನಂದ್’೪೦ರ ವೇಳೆ-ಆ ದಿನಗಳ ನೆನಪು

ಕಳೆದವಾರ, ಫೆಬ್ರವರಿ ೧೯, ಶಿವರಾಜಕುಮಾರ್ ಅಭಿನಯದ ‘ಆನಂದ್’ ಚಿತ್ರ ಸೆಟ್ಟೇರಿ ೪೦ ವರ್ಷ. ಅಭಿಮಾನಿಗಳು ಈ ನೆನಪಿನ ಸಂಭ್ರಮವನ್ನು ಆಚರಿಸಿದರು.…

3 hours ago

ಸಫಾರಿ ಪುನಾರಂಭಕ್ಕೆ ಸಾರ್ವಜನಿಕರ ಮಿಶ್ರ ಪ್ರತಿಕ್ರಿಯೆ

ಮಾನವ-ವನ್ಯಜೀವಿ ಸಂಘರ್ಷ ತಾರಕಕ್ಕೇರಿದ ಹಿನ್ನೆಲೆಯಲ್ಲಿ ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಕಳೆದ ನವೆಂಬರ್ ತಿಂಗಳಲ್ಲಿ ತಾತ್ಕಾಲಿಕವಾಗಿ…

3 hours ago

ಕುಶಾಲನಗರ: ಕೆಎಸ್‌ಆರ್‌ಟಿಸಿ ಡಿಪೋ ಕಾಮಗಾರಿ ಚುರುಕು

ಪುನೀತ್ ಮಡಿಕೇರಿ ಒಟ್ಟು ೮ ಕೋಟಿ ರೂ. ಮೊತ್ತದ ಯೋಜನೆ; ಸಾರಿಗೆ ಸಮಸ್ಯೆಗಳಿಗೆ ಸಿಗಲಿದೆ ಪರಿಹಾರ  ಮಡಿಕೇರಿ: ಕುಶಾಲನಗರದ ಬಹು…

4 hours ago