readers letter
ಡಾ. ಅಶ್ವಿನಿ
ಇದು ಒಬ್ಬರಿಂದ ಸಾಧ್ಯವಾಗುವ ಸಂಗತಿಯಲ್ಲ. ಎರಡು ಕೈ ಸೇರಿದರೇನೇ ಚಪ್ಪಾಳೆ. ಮನೆಯಲ್ಲಿ ಶಾಂತಿಯನ್ನು ಕಾಯ್ದುಕೊಳ್ಳುವುದು ಇಬ್ಬರ ಆಯ್ಕೆಯಾಗಿರಬೇಕು. ಕೆಲವು ಕುಟುಂಬಗಳಲ್ಲಿ ಒಬ್ಬರು ತೀರಾ ಮುಂಗೋಪಿಗಳಾ ಗಿಯೋ ಅಥವಾ ಮಾತು ಮಾತಿಗೂ ಜಗಳವಾಡುವ ಗುಣವನ್ನೋ ಹೊಂದಿರಬಹುದು. ಅಂತಹ ಸಂದರ್ಭಗಳಲ್ಲಿ ಉಳಿದವರು ಕನಿಷ್ಠ ಪಕ್ಷ ಮಕ್ಕಳ ಎದುರು ಮೌನವಾಗಿದ್ದು ಬಿಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಮತ್ತೆ ಗಂಡ-ಹೆಂಡತಿ ಇಬ್ಬರೇ ಇದ್ದಾಗ ಆಡಿದ ಮಾತುಗಳು ತಪ್ಪು ಎಂಬುದನ್ನು ಮನವರಿಕೆ ಮಾಡಿಕೊಡಬಹುದು.
ಸದಾ ಜಗಳವಾಡುವ ಅಪ್ಪ-ಅಮ್ಮನನ್ನು ಕಂಡ ಮಕ್ಕಳು ಸಂಬಂಧಗಳಲ್ಲಿನ ನಂಬಿಕೆಯನ್ನು ಕಳೆದುಕೊಂಡು ಬಿಡುತ್ತಾರೆ. ನಾಳೆ ನನ್ನ ಬದುಕು ಕೂಡ ಇದೆ ತರಹ ಆಗಿಬಿಡಬಹುದು ಎಂಬ ಭಯ ಮನಸ್ಸಿನಲ್ಲಿ ಮನೆ ಮಾಡಿಬಿಡುತ್ತದೆ.
ಅಪರೂಪದ ಸಂದರ್ಭಗಳಲ್ಲಿ ನಾನು ಈ ರೀತಿ ಆಗಬಾರದು ಎಂಬ ಪಕ್ವವಾದ ಮನಸ್ಥಿತಿಯನ್ನು ಸಹ ಬೆಳೆಸಿಕೊಳ್ಳಬಹುದು. ಆದರೆ ಅಂತಹ ಪ್ರಕರಣಗಳ ಸಂಖ್ಯೆ ಬಹಳ ಕಡಿಮೆ. ಒಬ್ಬರು ಮತ್ತೊಬ್ಬರನ್ನು ನಿಂದಿಸುತ್ತಿದ್ದರೆ,
ಅವಹೇಳನಕಾರಿ ಮಾತುಗಳನ್ನಾಡಿದರೆ, ಅಸಭ್ಯ ಭಾಷೆ ಬಳಸಿದರೆ, ಅಗೌರವವನ್ನು ತೋರಿಸಿದರೆ ಅದು ಮಕ್ಕಳ ಮಾನಸಿಕ ಬೆಳವಣಿಗೆಯ ಮೇಲೆ ಅತೀವ ಪರಿಣಾಮವನ್ನುಂಟು ಮಾಡುತ್ತದೆ. ಎಷ್ಟೋ ಮನೆಗಳಲ್ಲಿ ಪೋಷಕರು ಜೋರಾಗಿ ಜಗಳ ಆಡುವಾಗ ಮಕ್ಕಳು ದಿಕ್ಕು ಕಾಣದೆ ಅಳುತ್ತಾ ನಿಂತುಬಿಡುತ್ತವೆ. ದೈಹಿಕ ಶೋಷಣೆಯ ಪ್ರಕರಣಗಳು ಉಂಟುಮಾಡುವ ಕೆಟ್ಟ ಪರಿಣಾಮವನ್ನು ಅಲ್ಲಗಳೆಯಲು ಸಾಧ್ಯವೇ ಇಲ್ಲ. ಗಂಡು ಮಗು ತಂದೆಯನ್ನು ಗಮನಿಸಿ ನಾನೂ ಇದೇ ರೀತಿ ರೂಪುಗೊಳ್ಳ ಬೇಕು ಎಂದುಕೊಂಡರೆ,, ಹೆಣ್ಣು ಮಕ್ಕಳು ಅಮ್ಮನನ್ನು ಅನುಸರಿಸುತ್ತಾರೆ. ಈ ಕಾರಣಕ್ಕಾಗಿಯೇ ಸರಿಯಾದ ವ್ಯಕ್ತಿತ್ವವನ್ನು ಮಾದರಿಯಾಗಿ ರೂಪಿಸಿಕೊಡುವುದು ಪೋಷಕರ ಜವಾಬ್ದಾರಿ.
ಮಕ್ಕಳ ಎದುರು ಯಾವುದೇ ಕಾರಣಕ್ಕೂ ಗಂಡ ಹೆಂಡತಿಯನ್ನಾಗಲಿ ಅಥವಾ ಹೆಂಡತಿ ಗಂಡನನ್ನಾಗಲಿ ಅವಮಾನಿಸುವುದು ಸರಿಯಲ್ಲ. ತಮಾಷೆಗೆ ಒಬ್ಬರು ಮತ್ತೊಬ್ಬರ ಕಾಲು ಎಳೆಯುವುದು, ನಗೆ ಚಟಾಕಿ ಹಾರಿಸುವುದು ಆರೋಗ್ಯಕರ. ಆದರೆ ನಿರಂತರವಾಗಿ ಒಬ್ಬರು ಮತ್ತೊಬ್ಬರನ್ನು ಅವಮಾನಿಸುತ್ತಿದ್ದರೆ ಮಕ್ಕಳು ಪೋಷಕರ ಮೇಲಿನ ಗೌರವವನ್ನು ಕಳೆದುಕೊಳ್ಳುತ್ತಾರೆ. ಇದು ಸಂಬಂಧಗಳಲ್ಲಿ ಬಿರುಕು ಮೂಡಿಸುತ್ತದೆ.
ಕೂಗಾಡಿ, ಕಿರುಚಾಡಿ, ಕೈಗೆ ಸಿಕ್ಕ ವಸ್ತುಗಳನ್ನು ಬಿಸಾಡಿ ಒತ್ತಡದ ವಾತಾವರಣವನ್ನು ಸೃಷ್ಟಿಸಿ ಮಕ್ಕಳ ವಿದ್ಯೆ, ಆತ್ಮವಿಶ್ವಾಸ, ವ್ಯಕ್ತಿತ್ವ, ಮನೆಯ ಶಾಂತಿ, ಸಮಾಧಾನವನ್ನು ಬಲಿ ಕೊಡುವ ಬದಲು ಕಠಿಣ ಸಂದರ್ಭಗಳಲ್ಲಿ ಪೋಷಕರು ಜೊತೆಯಾಗಿ ಬದುಕಿನ ಏಳು-ಬೀಳುಗಳನ್ನು ಎದುರಿಸಲು ಸಾಧ್ಯ. ಅತಿ ಒತ್ತಡದ ವಾತಾವರಣದಲ್ಲಿ ಬೆಳೆದ ಮಕ್ಕಳು ಭಾವನಾತ್ಮಕವಾಗಿ ದುರ್ಬಲರಾಗುತ್ತಾರೆ.
ಇಂತಹ ಮಕ್ಕಳಲ್ಲಿ ಕಡಿಮೆ ನಿದ್ದೆ, ಕ್ಷೀಣಿಸಿದ ಉತ್ಸಾಹ, ಚಟುವಟಿಕೆ ಇಲ್ಲದ ಮತ್ತು ಗೊಂದಲದ ವ್ಯಕ್ತಿತ್ವ ಕಂಡುಬರಬಹುದು. ಎಂತಹ ಸಮಸ್ಯೆ ಇದ್ದರೂ ಪೋಷಕರು ಕೊಠಡಿಯ ಒಳಗೆ ಮಾತುಕತೆ, ವಾದವನ್ನು ಮುಗಿಸಿ ಪರಿಹಾರ ಕಂಡುಕೊಂಡು ಹೊರಗೆ ಬಂದರೆ ಮಕ್ಕಳು ಮುಂದೆ ಸಂಘರ್ಷ ಎದುರಾದಾಗ ಇದೇ ಕ್ರಮವನ್ನು ಪಾಲಿಸುತ್ತಾರೆ.
ಉತ್ತಮವಾದ ವಾಗ್ವಾದ, ಒಬ್ಬರು ತಪ್ಪು ಮಾಡಿದಾಗ ಮತ್ತೊಬ್ಬರು ತಿದ್ದುವುದು ಸಂಬಂಧದ ಮೇಲೆ ಧನಾತ್ಮಕ ಪರಿಣಾಮವನ್ನು ಉಂಟು ಮಾಡುತ್ತದೆ. ಪೋಷಕರು ಜಗಳ ಆಡುವುದು ತಪ್ಪಲ್ಲ. ಆದರೆ ಜಗಳವೇ ಬದುಕಾಗಿಬಿಡುವುದು ತಪ್ಪು. ಇದು ತಮ್ಮ ಮೇಲೆ ಅಷ್ಟೇ ಅಲ್ಲದೆ ಇಡೀ ಕುಟುಂಬದ ಮೇಲೆ, ಸುತ್ತ ಮುತ್ತಲಿನವರ ಮೇಲೆ ಅತೀವ ಪರಿಣಾಮ ಉಂಟು ಮಾಡುತ್ತದೆ. ಅಹಂ ಬಿಟ್ಟು ಮಕ್ಕಳ ಕುರಿತು ಚಿಂತಿಸಿ ಅವರ ಬದುಕು ರೂಪಿಸುವ ಕುರಿತು ಆಲೋಚಿಸುವುದು ಜಾಣತನ.
(ಲೇಖಕರು: ಪತ್ರಿಕೋದ್ಯಮ ಸಹ ಪ್ರಾಧ್ಯಾಪಕರು, ಮಹಾರಾಣಿ ಮಹಿಳಾ ಕಲಾ ಕಾಲೇಜು, ಮೈಸೂರು)
ಹನೂರು: ತಾಲೂಕಿನ ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯ ಮಲೆ ಮಹದೇಶ್ವರ ಅರಣ್ಯ ಪ್ರದೇಶ ವ್ಯಾಪ್ತಿಯ ಬಳಗುಡ್ಡ ಬಿಟ್ ವ್ಯಾಪ್ತಿಯಲ್ಲಿ ಏಕಕಾಲಕ್ಕೆ ಎರಡು…
ನವದೆಹಲಿ: ನಾಗರಿಕ ವಿಮಾನಯಾನ ಸಚಿವಾಲಯವು ಇಂಡಿಗೋದ ಬಾಕಿ ಇರುವ ಎಲ್ಲಾ ಪ್ರಯಾಣಿಕರ ಮರುಪಾವತಿಗಳನ್ನು ವಿಳಂಬವಿಲ್ಲದೇ ಪಾವತಿಸಲು ಆದೇಶಿಸಿದೆ. ರದ್ದಾದ ಅಥವಾ…
ತುಮಕೂರು: ರಾಜ್ಯದಲ್ಲಿ ಸಿಎಂ ಸ್ಥಾನ ಬದಲಾವಣೆ ಚರ್ಚೆ ಬೆನ್ನಲ್ಲೇ ಮಾಜಿ ಸಚಿವ ಕೆ.ಎನ್.ರಾಜಣ್ಣ ಮಹತ್ವದ ಹೇಳಿಕೆ ಕೊಟ್ಟಿದ್ದಾರೆ. ಈ ಕುರಿತು…
ಹಾಸನ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ದೆಹಲಿ ಪೊಲೀಸರು ನೋಟಿಸ್ ಕೊಟ್ಟ ವಿಚಾರಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು…
ಹಾಸನ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದು, ಕರ್ನಾಟಕದ ಇತಿಹಾಸದಲ್ಲಿಯೇ ಕಾಂಗ್ರೆಸ್…
ನಂಜನಗೂಡು: ಜಮೀನಿನಲ್ಲಿ ಭಾರೀ ಗಾತ್ರದ ಹೆಬ್ಬಾವು ಪತ್ತೆಯಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಬಿಟ್ಟಿದ್ದಾರೆ. ಜಿಲ್ಲೆಯ ನಂಜನಗೂಡು…