ಮಹಿಳೆ ಸಬಲೆ

ಮಾತಿಲ್ಲದವರ ಧ್ವನಿಯಾದ ಪುಷ್ಪಾವತಿ ಮೇಡಂ

ಕೀರ್ತಿ ಬೈಂದೂರು

ಒಂದು ಕಾಲದಲ್ಲಿ ತನ್ನ ಮಾತಿಲ್ಲದವರ ಧ್ವನಿಯಾದ ಕನಸುಗಳೆಲ್ಲ ಕರಗಿಹೋಯಿತು ಎನ್ನುವಾಗ ಡಾ.ಎಂ.ಪುಷ್ಪಾವತಿ ಅವರು ಇದ್ದ ಅನುಕೂಲಗಳನ್ನು ಸಮರ್ಥವಾಗಿ ಬಳಸಿಕೊಂಡು ಮುನ್ನಡೆದವರು.

ಮದುವೆಯಾದ ಮೇಲೆ ಹೆಣ್ಣಿನ ಬದುಕೆಲ್ಲ ಮುಗಿಯಿತು ಎನ್ನುವ ಮಾತು ಇವರಿಗೆ ಅತೀತವಾದದ್ದು. ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ನಿರ್ದೇಶಕಿಯಾಗಿ ಆರು ವರ್ಷಗಳನ್ನು ಪೂರೈಸಿದ ಹೆಮ್ಮೆ ಇವರದು.

ಗುಡ್ ಶೆಫರ್ಡ್ ಕಾನ್ವೆಂಟ್‌ನಲ್ಲಿ ಕನ್ನಡ ಮಾಧ್ಯಮದಲ್ಲಿ ಪುಷ್ಪಾವತಿ ಅವರ ಪ್ರಾಥಮಿಕ ಓದು ಆರಂಭವಾಯಿತು. ಎಂಟನೇ ತರಗತಿಗೆ ಬಂದ ಮೇಲೆ ಗೀತಾ ಟೀಚರ್ ಪರಿಚಯವಾದರು. ಪುಷ್ಪಾವತಿ ಅವರ ಅಗಾಧ ಪುಸ್ತಕ ಪ್ರೀತಿಗೆ ಅವರೇ ಕಾರಣ. ಕುವೆಂಪು, ತ.ರಾ.ಸು, ಗೊರೂರು, ತ್ರಿವೇಣಿ, ಸಾಯಿಸುತೆ ಹೀಗೆ ಅನೇಕರ ಕೃತಿಗಳನ್ನು ಓದುವ ಪಯಣಕ್ಕೆ ಗೀತಾ ಟೀಚರ್ ಜೊತೆಯಾಗಿದ್ದರು.

ಮನೆಯ ದೊಡ್ಡಮಗಳಾದ ಕಾರಣ, ಬಹುಬೇಗ ಇವರನ್ನು ಮದುವೆ ಮಾಡುವ ಹೊಣೆಗಾರಿಕೆ ಪೋಷಕರಿಗಿತ್ತು. ಅತ್ತ ಹತ್ತನೇ ತರಗತಿಯ ಪರೀಕ್ಷೆಯಲ್ಲಿ ಶಾಲೆಯ ಟಾಪರ್ ಆಗಿ ಮನೆಗೆ ಬಂದರೆ, ಇತ್ತ ತಂದೆ ಮದುವೆಯ ಮಾತುಕತೆ ಮುಗಿಸಿ, ವರನನ್ನು ಗೊತ್ತುಪಡಿಸಿದ್ದರು. ‘ನೀನಿಷ್ಟು ಓದಿದ್ರೆ ಹುಡುಗನನ್ನು ಎಲ್ಲಿಂದ ತರೋದು? ಸಾಕಮ್ಮಾ ಓದಿದ್ದು’ ಎಂದು ಹೇಳಿದ್ದ ತಂದೆ, ತೀರಿಹೋಗುವ ಮುನ್ನ ಇವರ ಸಾಧನೆ ಕಂಡು, ‘ನಾನು ನಿನ್ನನ್ನು ಕೆ.ಎ.ಎಸ್. ಪರೀಕ್ಷೆಗೆ ಓದಿಸಬೇಕಿತ್ತು’ ಎಂದಿದ್ದರು!

ಊಟಿಯ ಹತ್ತಿರವಿದ್ದ ಹುಡುಗನ ಮನೆ ತಂದೆಗೆ ಇಷ್ಟವಾಗದೆ, ಮಗಳಿಗೆ ಕಷ್ಟವಾಗುತ್ತದೆಂದು ಅರಿತಿದ್ದರಿಂದ ಮದುವೆಯ ಮಾತು ದೂರವೇ ಉಳಿಯಿತು. ಅಂದು ಇವರ ಮನಸ್ಸು ನಿರಾಳವಾಗಿತ್ತು! ತಮ್ಮಿಷ್ಟದಂತೆ ಮುಂದೆ ಪಿಯುಸಿ ಓದಿ, ಬಿಎಸ್ಸಿ ಪದವಿ ಪಡೆದರು.

ಬಿಎಸ್ಸಿ ಮುಗಿಯುತ್ತಿದ್ದಂತೆ ಮದುವೆ ನಿಶ್ಚಯವಾಯಿತು. ಮದುವೆ ನಂತರ ಮಡಿಕೇ ರಿಗೆ ಹೋದ ಮೇಲೆ, ಓದುವ ಕನಸು ಮತ್ತಷ್ಟು ಜಾಗೃತವಾಯಿತು. ಪುಸ್ತಕ, ಪೆನ್ನು ಕೈಬೀಸಿ ಕರೆ ಯಿತು. ಸಂದರ್ಭಕ್ಕೆ ಸೂಕ್ತವಾಗಿ, ಇವರಿದ್ದ ಮನೆಯ ಪಕ್ಕದಲ್ಲೇ ಗ್ರಂಥಾಲಯ. ಬೆಳಿಗ್ಗೆ ಮನೆಗೆಲಸ ಮುಗಿಸಿ ಗ್ರಂಥಾಲಯಕ್ಕೆ ಹೋಗು ವುದು ಇವರ ಅಭ್ಯಾಸವಾಯಿತು. ಏಳು ತಿಂಗಳು ಸತತವಾಗಿ ಪುಷ್ಪಾವತಿ ಅವರ ಓದುವ ಉತ್ಸಾಹವನ್ನು ಕಂಡು, ಓದಿಸಲೇಬೇಕೆಂದು ನಿರ್ಧರಿಸಿ ಪತಿ ಮತ್ತೆ ಮೈಸೂರಿಗೆ ಕರೆತಂದರು.

ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ ಬಿಎಸ್ಸಿ ಓದಿದ್ದ ಪುಷ್ಪಾವತಿ ಅವರು ಸ್ನಾತಕೋತ್ತರ ಶಿಕ್ಷಣವನ್ನು ಪಡೆಯಲು ಆಯ್ಕೆ ಮಾಡಿಕೊಂಡಿದ್ದು ಇದೇ ಸಂಸ್ಥೆಯನ್ನು. ಇಷ್ಟೆಲ್ಲ ಓದಿದ ಮೇಲೆ ಸುಮ್ಮನೆ ಕಾಲ ದೂಡುವುದಕ್ಕೆ ಮನಸ್ಸಾಗದೆ, ಒಂದಷ್ಟು ಮಕ್ಕಳಿಗೆ ಮನೆಯಲ್ಲಿ ನಿತ್ಯ ಥೆರಪಿ ಕೊಡುತ್ತಿದ್ದರು. ಇದಾಗಿ ಐದು ತಿಂಗಳು ಕಳೆದಿತ್ತು. ಕೆಲಸಕ್ಕಾಗಿ ಹುಡುಕಾಡುತ್ತಿದ್ದ ಬೆನ್ನಲ್ಲೇ, ಎಸ್.ಆರ್.ಸಾವಿತ್ರಿ ಅವರ ಮುಂದಾಳತ್ವದ ಪ್ರಾಜೆಕ್ಟ್ ಒಂದಕ್ಕೆ ರಿಸರ್ಚ್ ಆಫೀಸರ್ ಆಗಿ ನೇಮಕಗೊಂಡರು. ಆ ಮೂಲಕ ಓದಿದ ಸಂಸ್ಥೆಯಲ್ಲೇ ಕೆಲಸಕ್ಕೆ ಸೇರಿದರು.

ಎಂ.ಎಸ್ಸಿ.ಯಲ್ಲಿ ಸಾವಿತ್ರಿ ಮೇಡಂ ಅವರ ಪಾಠ ಕೇಳುತ್ತಿದ್ದರೇ ವಿನಾ ಇಷ್ಟದ ಮೇಡಂ ಆಗಿರಲಿಲ್ಲ. ಬಲವಂತವಾಗಿಯಾದರೂ ಕೆಲಸ ಮಾಡಲೇಬೇಕಾದ ಅನಿವಾರ್ಯತೆ ಇತ್ತು. ಆದರೆ, ಇವರ ಬದುಕಿನ ಗತಿಯನ್ನು ಬದಲಿಸಿದ ಕೆಲ ಗುರುಗಳಲ್ಲಿ ಸಾವಿತ್ರಿ ಮೇಡಂ ಕೂಡ ಒಬ್ಬರು. ಉಪನ್ಯಾಸಕರ ಹುದ್ದೆಯೊಂದು ಖಾಲಿ ಇದ್ದ ಬಗ್ಗೆ ಸಂಸ್ಥೆಯಿಂದ ಅಧಿಸೂಚನೆ ಹೊರಡಿಸಲಾಗಿತ್ತು. ಸಾವಿತ್ರಿ ಮೇಡಂ ಅರ್ಜಿ ಸಲ್ಲಿಸೆಂದು ಹೇಳಿದಾಗ, ಬೇಡವೆಂದು ನಿರಾಕರಿಸಿದ್ದರು. ಮಾರನೇ ದಿನ ಅವರೇ ಅರ್ಜಿಯನ್ನೆಲ್ಲ ಭರ್ತಿ ಮಾಡಿ ಇವರ ಸಹಿಗಾಗಿ ಕಾಯುತ್ತಿದ್ದರು. ಸಹಿ ಮಾಡದ ಹೊರತು ಬೇರಾವ ಮಾತಿಗೂ ಅವಕಾಶವಿರಲಿಲ್ಲ. ನಂತರ ದೆಹಲಿಯಲ್ಲಿ ನಡೆದ ಸಂದರ್ಶನದಲ್ಲಿ ಇವರು ಉಪನ್ಯಾಸಕಿ ಆಗಿ ಆಯ್ಕೆಯಾದರು. ಕಾಕತಾಳಿಯವೆಂದರೆ, ಮುಂದೆ ಸಂಸ್ಥೆಯ ನಿರ್ದೇಶಕರ ಹುದ್ದೆಗೆ ಪುಷ್ಪಾವತಿ ಅವರು ಅರ್ಜಿ ಸಲ್ಲಿಸಿದ್ದು, ಸಾವಿತ್ರಿ ಅವರಿಗೇ!

ಮಗ ಹುಟ್ಟಿದ ಖುಷಿ ಒಂದು ಕಡೆ, ಫೆಬ್ರವರಿ ತಿಂಗಳಲ್ಲಿ ಉಪನ್ಯಾಸಕ ಹುದ್ದೆಗೆ ಆಯ್ಕೆಯಾದ ಸಂಭ್ರಮ ಬೇರೆ. ಹೆಗಲು ತುಂಬಿದ ಎರಡೂ ಜವಾಬ್ದಾರಿಗಳನ್ನು ನಿರ್ವಹಿಸಲೇಬೇಕಿತ್ತು. ಮಗನನ್ನು ಅಪ್ಪ-ಅಮ್ಮ, ಅಣ್ಣ-ತಮ್ಮ, ತಂಗಿ ಯರ ಜೊತೆಗೊಪ್ಪಿಸಿ, ಉಪನ್ಯಾಸಕಿಯಾಗಿ ಕಾಲೇಜಿನಲ್ಲಿ ಕಾರ್ಯನಿರ್ವಹಿಸಲು ಹೊರ ಟರು. ಪುಷ್ಪಾವತಿ ಅವರ ತೇವಗೊಂಡ ಕಣ್ಣು ನೋವಿನ ದಿನಗಳನ್ನು ಮತ್ತೆ ನೆನೆಯುತ್ತಿತ್ತು. ಕೆಲಸಕ್ಕೆ ಸೇರಿ ತಿಂಗಳು ಕಳೆಯುತ್ತಿದ್ದಂತೆ ಹೆಚ್ಚುವರಿ ಜವಾಬ್ದಾರಿ ಸೇರಿಕೊಂಡವು. ತರಗತಿ, ದಾಖಲಾತಿಯಂತಹ ಅನೇಕ ವಿಭಾಗಗಳಲ್ಲಿ ಕಾರ್ಯನಿರ್ವಹಿಸಬೇಕಾಯಿತು. ಮನೆಗೆ ಬಂದ ಮೇಲಂತೂ ನಾಳಿನ ತರಗತಿಗಳಿಗೆ ನೋಟ್ ತಯಾರಿ ಮಾಡುವುದು. ಈ ನಡುವೆ ಮಗನ ಕಡೆಗೆ ಹೆಚ್ಚಿನ ಗಮನ ನೀಡಲಾಗಲಿಲ್ಲ ವೆಂದು ಬೇಸರದಲ್ಲೇ ಹೇಳುತ್ತಾರೆ.

2007ರ ಹೊತ್ತಿಗೆ ಪುಷ್ಪಾವತಿ ಅವರು ಚಿಕಿತ್ಸಾ ವಿಭಾಗದ ಮುಖ್ಯಸ್ಥರಾಗಬೇಕೆಂಬುದು ಅಂದಿನ ನಿರ್ದೇಶಕರಾಗಿದ್ದ ಡಾ.ವಿಜಯಲಕ್ಷ್ಮಿ ಬಸವರಾಜು ಅವರ ಒತ್ತಾಸೆಯಾಗಿತ್ತು. ‘ನನಗಿಂತ ಹಿರಿಯರು ಬಹಳಷ್ಟು ಮಂದಿ ಇದ್ದಾರೆ. ಅವರಿಗೆ ಕೊಡಿ’ ಎಂದು ಇವರು ಹೇಳಿದಾಗ, ವಿಶ್ವಕಪ್ ಕ್ರಿಕೆಟ್ ಪಂದ್ಯ ನಡೆಯುತ್ತಿತ್ತು. ಆಫೀಸಿನ ಪಕ್ಕದಲ್ಲಿದ್ದ ಟಿವಿಯಲ್ಲಿ ಪಂದ್ಯ ನೋಡುತ್ತಿರೆಂದು ಹೇಳಿ ತಮ್ಮ ಕೆಲಸದಲ್ಲಿ ನಿರತರಾದರು. ಸ್ವಲ್ಪ ಹೊತ್ತಾದ ಬಳಿಕ ಭಾರತ ತಂಡದ ನಾಯಕ ಯಾರು? ತಂಡದಲ್ಲಿ ಉಳಿದ ಹಿರಿಯ ಆಟಗಾರರ ಹೆಸರು ಕೇಳಿದರು. ಪುಷಾವತಿ ಅವರು ಉತ್ತರವೇನೋ ಕೊಟ್ಟರು. ತಂಡದಲ್ಲಿ ಹಿರಿಯ ಆಟಗಾರರಿದ್ದರೂ ಕಿರಿಯವನಾದವನನ್ನು ನಾಯಕನನ್ನಾಗಿ ಏಕೆ ಆಯ್ಕೆ ಮಾಡಿರಬಹುದು? ವಿಜಯಲಕ್ಷ್ಮಿ ಅವರು ಜವಾಬ್ದಾರಿಗಳನ್ನು ಸಮೀಕರಿಸಿದ ಬಗೆ ಭಿನ್ನವಾಗಿತ್ತು.

ಈಗ ನಿರ್ದೇಶಕಿಯಾಗಿ 6 ವರ್ಷಗಳಿಂದ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ಉಪನ್ಯಾಸಕ ಹುದ್ದೆಗೆಂದು ಸಂಸ್ಥೆಗೆ ಸೇರಿದವರು ರೀಡ‌ ಆಗಿ, ಮುಂದೆ ಡಾಕ್ಟರೇಟ್ ಪದವಿ ಪಡೆದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರಿಗೆ ‘Best outstanding officer’ ಎಂಬುದಾಗಿ ಗೌರವಿಸಿದೆ.

ಆಂದೋಲನ ಡೆಸ್ಕ್

Recent Posts

ರಾಮನಗರ: ಲಾರಿಗೆ ಕಾರು ಡಿಕ್ಕಿ: ಮೂವರು ದುರ್ಮರಣ

ರಾಮನಗರ: ಲಾರಿ ಹಾಗೂ ಕಾರಿನ ನಡುವೆ ಭೀಖರ ಅಪಘಾತ ಸಂಭವಿಸಿದ ಪರಿಣಾಮ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರು-ಕನಕಪುರ…

1 hour ago

ಕುವೈತ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಇರಾನ್‌ ದಾಳಿ

ಕುವೈತ್‌ ಅಂತಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಇರಾನ್‌ ದಾಳಿ ಮಾಡಿದೆ. ಕೊಲ್ಲಿಯಾದ್ಯಂತ ಇರಾನ್‌ ತನ್ನ ದಾಳಿಯನ್ನು ಹೆಚ್ಚಿಸುತ್ತಿದ್ದು, ಕುವೈತ್‌ ಅಂತರಾಷ್ಟ್ರೀಯ…

1 hour ago

ಪಕ್ಕದ ಊರಿಗೆ ಪೂಜೆಗೆ ಹೋಗಿದ್ದ ಅರ್ಚಕ ನಿಗೂಢವಾಗಿ ಶವವಾಗಿ ಪತ್ತೆ

ಮಂಡ್ಯ: ಪಕ್ಕದ ಊರಿಗೆ ಪೂಜೆಗೆಂದು ಹೋದ ಅರ್ಚಕ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ನಡೆದಿದೆ. ಶ್ರೀರಂಗಪಟ್ಟಣದ ಮರಳಗಾಲ ಗ್ರಾಮದಲ್ಲಿ…

2 hours ago

ಓದುಗರ ಪತ್ರ: ಬೀದಿ ನಾಯಿಗಳ ಹಾವಳಿ ತಪ್ಪಿಸಿ

ಮೈಸೂರು ನಗರದ ರಿಂಗ್ ರಸ್ತೆಯಲ್ಲಿರುವ ಹಂಚ್ಯಾ-ಸಾತಗಳ್ಳಿ ‘ಬಿ’ ವಲಯದಲ್ಲಿ (ವಿಟಿಯು ಕಾಲೇಜು ಬಳಿ) ಬೀದಿ ನಾಯಿಗಳ ಹಾವಳಿ ವಿಪರೀತವಾಗಿದ್ದು, ಸ್ಥಳೀಯ…

3 hours ago

ಓದುಗರ ಪತ್ರ: ತಾಣ..ಬಾಣ !

ತಾಣ..ಬಾಣ ! ಬೇಕಿದ್ದರೆ ಬಿಟ್ಟೇವು ಒಂದಲ್ಲ, ಎರಡು ದಿನ.. ಶಾಲಾ ತಾಣ! ಬಿಟ್ಟಿರುವುದು ಹೇಗೆ ? ಸಾಮಾಜಿಕ ಜಾಲತಾಣ ಎಂಬುದು…

3 hours ago

ಓದುಗರ ಪತ್ರ: ಬೋಗಾದಿ- ಗದ್ದಿಗೆ ಜೋಡಿ ರಸ್ತೆಯಲ್ಲಿ ಬ್ಯಾರಿಕೇಡ್ ಅಳವಡಿಸಿ

ಮೈಸೂರಿನ ಬೋಗಾದಿ -ಗದ್ದಿಗೆ ಜೋಡಿ ರಸ್ತೆಯಲ್ಲಿ ವಾಹನಗಳ ಸಂಚಾರ ಹೆಚ್ಚಾಗಿದ್ದರಿಂದ ದಾಸನಕೊಪ್ಪಲು ಬಸ್ ನಿಲ್ದಾಣದ ಬಳಿ ಎರಡು ಕಡೆಯೂ ಒಂದು…

3 hours ago