ಕೀರ್ತಿ ಬೈಂದೂರು

‘ಮುಂದೆ ಏನಾಗಬೇಕೆಂದು ಅಂದು ಕೊಂಡಿದ್ದೀಯಾ?’ ಎಂದು ಚಿಕ್ಕಂದಿನಲ್ಲಿ ಕೇಳುತ್ತಿದ್ದ ಪ್ರಶ್ನೆಗೆ ಭವತಾರಿಣಿ ಮಾತ್ರ ಟೀಚರ್ ಆಗುತ್ತೇನೆ ಎಂಬ ಒಂದೇ ಉತ್ತರವನ್ನು ಕೊಡುತ್ತಿದ್ದರು. ಇಪ್ಪತ್ತಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಸಂಗೀತ ಕಲಿಸುವ ಶಿಕ್ಷಕಿ, ಅನೇಕ ವೇದಿಕೆಗಳಲ್ಲಿ ಕೇಳಿಬರುವ ಮಧುರ ಕಂಠದ ಹಾಡುಗಾರ್ತಿ ಇವರು.

ಭವತಾರಿಣಿ ಕೆ.ಎಸ್.ಅವರ ತಾತ ಬಸವರಾಜು ಎಂಬುವರು ಅರಮನೆ ಬ್ಯಾಂಡ್ನಲ್ಲಿ ಕ್ಲಾರಿಯೋನೆಟ್, ಕೊಳಲು ವಾದಕರಾಗಿದ್ದರು. ತಂದೆ-ಪ್ರೊ.ಮೈಸೂರು ಕೃಷ್ಣಮೂರ್ತಿ, ತಾಯಿ-ಶಿವರಂಜಿನಿ. ತಂದೆ ವೃತ್ತಿಯಲ್ಲಿ ಕನ್ನಡ ಅಧ್ಯಾಪಕರಾಗಿದ್ದರೂ ಸಂಗೀತದೆಡೆಗೆ ವಿಶೇಷ ಒಲವು. ಅಂತೆಯೇ ಕೃಷ್ಣಮೂರ್ತಿ ಅವರು ಜಾನಪದ ವಿದ್ವಾಂಸರಾದ ಡಾ.ಪಿ.ಕೆ.ರಾಜಶೇಖರ್ ಅವರ ಗರಡಿಯಲ್ಲಿ ಬೆಳೆದವರು. ಅವರ ಹೊನ್ನಾರು ಕಲಾತಂಡದ ಗಾಯಕರಲ್ಲೊಬ್ಬರು. ಹಾಗಾಗಿ ಅಭ್ಯಾಸದ ವೇಳೆಯಲ್ಲಿ ತಂದೆ ಹಾಡುತ್ತಿದ್ದ ಜನಪದ ಹಾಡುಗಳು ಮಗಳ ಬಾಯಲ್ಲಿ ಗುನುಗುತ್ತಿದ್ದವು. ಈ ಆಸಕ್ತಿ ಶಾಸ್ತ್ರೀಯವಾಗಿ ಸಂಗೀತ ಕಲಿಯುವುದಕ್ಕೆ ಸೂಕ್ತ ಅಡಿಪಾಯವನ್ನೇ ಹಾಕಿತು.

ಭವತಾರಿಣಿ ಅವರಾಗ ಆರು ವರ್ಷದ ಹುಡುಗಿ. ವಿದುಷಿ ಕೃಷ್ಣವೇಣಿ ಅವರು ಸ್ವತಃ ಇವರ ಮನೆಗೇ ಬಂದು ಸಂಗೀತ ಕಲಿಸುತ್ತಿದ್ದರು. ಆರಂಭದ ಕಲಿಕೆ ಸುಸೂತ್ರವಾಗೇ ಸಾಗಿತು. ನಿಧಾನಕ್ಕೆ, ಮನಸ್ಸು ಆಟದ ಕಡೆಗೇ ತುಡಿಯುತ್ತಿತ್ತು. ಕೃಷ್ಣವೇಣಿ ಅವರು ಹೇಗಿದ್ದರೆಂದರೆ ಹೇಳಿಕೊಟ್ಟ ಪಾಠ ಹೃದ್ಯವಾಗಿಲ್ಲ ಎನಿಸಿದರೆ, ಪಾಠ ಮುಂದುವರೆಸುತ್ತಿರಲಿಲ್ಲ. ಹೀಗೊಮ್ಮೆ ಆಟದ ಗೋಜಿನಲ್ಲಿ ಸಂಗೀತಾಭ್ಯಾಸ ಮಾಡುವುದನ್ನು ಮರೆತ ಭವತಾ ರಿಣಿ ಅವರು ಬಾಸುಂಡೆ ಏಟು ತಿಂದಿದ್ದರು.

ಸಂಗೀತದ ಸಹವಾಸ ಬೇಡವೇ ಬೇಡ ಎಂದಾಗ ಮನೆಯವರು ಬಿಡದೇ ಒತ್ತಾಯಿಸಿ, ಅರ್ಥೈಸಿ ಕಲಿಕೆಗೆ ಕಳಿಸಿದ್ದರಿಂದ ಹಾಡು ಹಕ್ಕಿಯ ರೆಕ್ಕೆಗಳಿಗೆ ಬಲತುಂಬಿತು. ಓದಿನಲ್ಲೂ ಮುಂದಿದ್ದ ಭವತಾರಿಣಿ ಅವರ ಕಲಾಸಕ್ತಿಗೆ ಶಿಕ್ಷಕರ ಪ್ರೋತ್ಸಾಹವೂ ಅಪರಿಮಿತವಾಗಿ ಒದಗಿತು.

ಪ್ರತಿಭಾ ಕಾರಂಜಿಯಿಂದ ಹಿಡಿದು ಎಲ್ಲೇ ಸಂಗೀತ ಸ್ಪರ್ಧೆಗಳು ನಡೆಯುತ್ತಿದ್ದರೂ ಪೋಷಕರು ಇವರನ್ನು ಕಳುಹಿಸಿಕೊಡುತ್ತಿದ್ದರು. ಹಾಗಾಗಿ ಇವರಿಗೆ ಸಂಗೀತ ಮತ್ತು ಓದು ಭಿನ್ನವೆಂದೇನೂ ಅನಿಸಲೇ ಇಲ್ಲ. ರಾಜೇಶ್ವರಿ, ಶಂಭುಲಿಂಗಪ್ಪ, ಮಂಗಳ ಮುದ್ದು ಮಾದಪ್ಪ ಅವರೆಲ್ಲರೂ ಭವತಾರಿಣಿ ಅವರ ಸಂಗೀತದ ಒಲವನ್ನು ಒರತೆಯಂತೆ ಹರಿಯ ಬಿಟ್ಟವರು.

ಪ್ರೌಢಶಾಲೆಯಲ್ಲಿ ಓದುತ್ತಿದ್ದ ಸಮಯ. ಶಾಲಾ ವಾರ್ಷಿಕೋತ್ಸವಕ್ಕಾಗಿ ಭವತಾರಿಣಿ ಅವರು ಗುಂಪಿನಲ್ಲಿದ್ದ ಸಹಪಾಠಿಗಳಿಗೆಲ್ಲ ‘ಶಿವನೇ ನಿನ್ನಾಟ ಬಲ್ಲವರ‍್ಯಾರಾರೋ, ಗುರುವೇ ನಿನ್ನಾಟ ಬಲ್ಲವರ‍್ಯಾರಾರೊ’ ಹಾಡನ್ನು ಕಲಿಸಿದ್ದರು.

ಆ ಹೊತ್ತಿಗೆ ಗೀತೆ ಈಗಿನಷ್ಟೇನೂ ಪ್ರಸಿದ್ಧಿ ಪಡೆದಿರಲಿಲ್ಲ. ಕಲಾಮಂದಿರದ ವೇದಿಕೆ ಯಲ್ಲಿ ಭವತಾರಿಣಿ ಹಾಡು ಮುಗಿಸಿದ ಬಳಿಕ ನಾಲ್ಕೈದು ನಿಮಿಷಗಳವರೆಗೆ ನಿಲ್ಲದ ಕರತಾಡನ!

ದಸರಾ ಮಹೋತ್ಸವದಿಂದ ಹಿಡಿದು ನಾಡಿನಾದ್ಯಂತ ಅನೇಕ ವೇದಿಕೆಗಳಲ್ಲಿ ಹಾಡುತ್ತಲಿದ್ದಾರೆ. ಈ ಸಂದರ್ಭದಲ್ಲಿ ಇವರು ಸ್ಮರಿಸುವ ಹೆಸರು, ತಾತ ನಾರಾಯಣರದು. ‘ನಾನು ಹಾರ್ಮೋನಿಯಂ ನುಡಿಸುತ್ತೇನೆ, ನೀನು ಹಾಡು’ ಎನ್ನುತ್ತಾ, ಮಂತ್ರಾಲಯ, ಚಾಮುಂಡಿ ಬೆಟ್ಟ, ಶೃಂಗೇರಿ ಹೀಗೆ ಅನೇಕ ದೇವಸ್ಥಾನಗಳ ವೇದಿಕೆಗಳಲ್ಲಿ ಹಾಡಿಸಿದ್ದರು. ದೇವರಿಗೆ ಗೀತ ಸೇವೆಯನ್ನು ನೀಡಬೇ ಕೆಂದು ಅವಕಾಶ ಸಿಕ್ಕ ಕಡೆಗಳಲೆಲ್ಲ ಹಾಡಿ ಸಿದ, ತಾತನ ಕುರಿತು ಈ ಮೊಮ್ಮಗಳಿಗೆ ಅಕ್ಕರೆ.

ಅತ್ತ ಸಂಗೀತದಲ್ಲಿ ಜೂನಿಯರ್, ಸೀನಿಯರ್ ಪರೀಕ್ಷೆಗಳಲ್ಲಿ ಉತ್ತೀರ್ಣ ರಾಗಿದ್ದರು. ಅಂತೆಯೇ ಹೈಸ್ಕೂಲ್ ಮತ್ತು ಪಿಯುಸಿ ಓದಿನಲ್ಲಿ ವಿಶಿಷ್ಟ ಶ್ರೇಣಿ ಪಡೆದಿದ್ದರು. ಮುಂದೆ ಇಂಗ್ಲಿಷ್ ವಿಷಯದಲ್ಲಿ ಸ್ನಾತ ಕೋತ್ತರ ಪದವಿಯನ್ನೂ ಪಡೆದರು. ಶಿಕ್ಷಕಿ ಯಾಗಬೇಕೆಂದಿದ್ದ ಕನಸಿಗೆ ಜೀವ ತುಂಬುವ ಸಲುವಾಗಿ ಬಿ.ಇಡಿ ಪದವಿ ಯನ್ನೂ ಪಡೆದು, ಸಂಗೀತವನ್ನೇ ಧ್ಯಾನಿ ಸುತ್ತಾ, ವೃತ್ತಿ ಗಾಯಕಿಯಾಗಿ ಗುರುತಿಸಿ ಕೊಂಡಿದ್ದಾರೆ.

ಜನಪದ, ಶಾಸ್ತ್ರೀಯ ಸಂಗೀತ ಮಾತ್ರವಲ್ಲ, ಸುಗಮ ಸಂಗೀತದ ಗಾಯನಕ್ಕೆ ಅವಕಾಶ ನೀಡಿದ ಅನೇಕರಿ ದ್ದಾರೆ. ಸದ್ಯ ಪದ್ಮಪಾಣಿ ಅಕಾಡೆಮಿ ಟ್ರಸ್ಟ್‌ನ ಸದಸ್ಯರಾಗಿದ್ದಾರೆ. ಎರಡು ವರ್ಷಗಳ ಹಿಂದೆ ಮೈಸೂರಿನ ಮನು- ರಾಮ್ ಸ್ಟುಡಿಯೋ ವತಿಯಿಂದ ಇವರು ಹಾಡಿದ ಜೀಸಸ್‌ನ ಕುರಿತ ಗೀತೆ ಯೂಟ್ಯೂಬ್‌ನಲ್ಲಿ ಟ್ರೆಂಡ್ ಸೃಷ್ಟಿಸುತ್ತಿದೆ. ನಂತರ ಅರ್ಪಿತ ಸ್ಟುಡಿಯೋದ ಮಾದೇಶ್ವರನ ಹಾಡು ಗಳನ್ನೂ ಹಾಡಿದರು. ‘ಅಕ್ಷರದಮ್ಮ’ ಎನ್ನುವ ಕ್ಯಾಸೆಟ್‌ನಲ್ಲಿಯೂ ಇವರು ಹಾಡಿದ ಎರಡು ಹಾಡುಗಳಿವೆ.

ಗಮನಿಸಿದರೆ, ನಿರ್ದಿಷ್ಟವಾಗಿ ಯಾವ ಕಲಾ ತಂಡದೊಂದಿಗೂ ಭವತಾರಿಣಿ ಗುರುತಿಸಿಕೊಂಡಿಲ್ಲ. ತಾವೇ ಒಂದು ತಂಡವನ್ನು ಕಟ್ಟಬಾರದೇಕೆ? ಎಂಬುದಕ್ಕೆ ಅನುಭವ ಬೇಕೆಂಬುದು ಇವರ ನಿಲುವು. ‘ಸಂಗೀತವನ್ನು ಕಲಿತಿಲ್ಲವೆಂದಿದ್ದರೆ ನನ್ನ ಅಸ್ಮಿತೆಯೇ ಇರುತ್ತಿರಲಿಲ್ಲ. ಕಲಾವಿದೆ ಯಾಗಿರುವುದು ಬದುಕಿಗೊಲಿದ ಭಾಗ್ಯ’ ಎನ್ನುತ್ತಾರೆ ಭವತಾರಿಣಿ.

ಆಂದೋಲನ ಡೆಸ್ಕ್

Recent Posts

9 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ: ಕಾಮುಕನನ್ನು ಹಿಡಿದು ಥಳಿಸಿದ ಗ್ರಾಮಸ್ಥರು

ಮೈಸೂರು: 9 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಕಾಮುಕನನ್ನು ಗ್ರಾಮಸ್ಥರು ಹಿಡಿದು ಥಳಿಸಿರುವ ಘಟನೆ ನಡೆದಿದೆ. ಮೈಸೂರು ಜಿಲ್ಲೆಯ…

25 mins ago

ಓದುಗರ ಪತ್ರ: ಕೆ.ಕೆ.ಮಹಮದ್ ಅವರ ಹೇಳಿಕೆ ಪ್ರಬುದ್ಧ ನಡೆ

ಕೇರಳದ ಕೋಯಿಕ್ಕೋಡಿನಲ್ಲಿ ಸುದ್ದಿಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್‌ಐ) ಮಾಜಿ ಪ್ರಾದೇಶಿಕ ನಿರ್ದೇಶಕರಾದ ಕೆ.ಕೆ. ಮಹಮ್ಮದ್…

51 mins ago

ಓದುಗರ ಪತ್ರ: ಡಿಜಿಟಲ್ ಇ-ಸ್ಟ್ಯಾಂಪ್ ವ್ಯವಸ್ಥೆ ನಾಗರಿಕ ಸ್ನೇಹಿ

ಕಂದಾಯ ಇಲಾಖೆ ಡಿಜಿಟಲ್ ಇ-ಸ್ಟ್ಯಾಂಪ್ ವ್ಯವಸ್ಥೆ ಜಾರಿಗೆ ದಿಟ್ಟ ಹೆಜ್ಜೆ ಇಟ್ಟಿದೆ. ಇದು ನಾಗರಿಕ ಸ್ನೇಹಿಯೂ ಆಗಿದೆ. ಇಂದಿಗೂ ತಾಲ್ಲೂಕು…

54 mins ago

ಓದುಗರ ಪತ್ರ: ದ್ವೇಷ ಭಾಷಣಕ್ಕೆ  ಕಾನೂನು ಕಡಿವಾಣ ಸಾಗತಾರ್ಹ

ರಾಜ್ಯದಲ್ಲಿ ಇನ್ನು ಮುಂದೆ, ಜಾತಿ, ಧರ್ಮ ಭಾಷೆ, ಧಾರ್ಮಿಕ ಮತ್ತು ಜನಾಂಗೀಯ ನಿಂದನೆ, ಲೈಂಗಿಕ ದೃಷ್ಟಿಕೋನ ಮತ್ತು ಜನ್ಮ ಸ್ಥಳದ…

1 hour ago

ಡಾ.ಬಿ.ಆರ್.ಅಂಬೇಡ್ಕರ್ ಎಂಬ ಅಮರ ಜಗತ್ತು…

ಮಲ್ಕುಂಡಿ ಮಹದೇವಸ್ವಾಮಿ ವಿಕಲ್ಪಗಳ ಅಲೆಯ ಮೇಲೆ ಸದಾ ತೇಲಿ ಬರುವ ಸಂಕಲ್ಪ  ಬಾಬಾ ಸಾಹೇಬರ ಪಾರ್ಥಿವ ಶರೀರ ಪ್ರಕೃತಿಯಲ್ಲಿ ಲೀನವಾಗುವ…

1 hour ago

ರೈಲ್ವೆ ಮೇಲ್ಸೇತುವೆ; ಭೂ ದರ ಕಗ್ಗಂಟು ಬಗೆಹರಿಯುವುದೇ?

ಚಾಮರಾಜನಗರ: ಚಾ.ನಗರ-ನಂಜನಗೂಡು ಹೆದ್ದಾರಿಯಲ್ಲಿರುವ ಪಣ್ಯದಹುಂಡಿ ಬಳಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಸ್ವಾಧಿನಪಡಿಸಿಕೊಂಡಿರುವ ಭೂಮಿಯ ದರ ನಿಗದಿ ಕಗ್ಗಂಟಿನ ವಿಚಾರ ಅಂತಿಮ…

4 hours ago