ಮಹಿಳೆ ಸಬಲೆ

ಸಂಬಂಧಗಳಿಗೆ ಅಡ್ಡ ಬರುವ ಮೊಬೈಲ್ ಶನಿರಾಯ

ಮನೆಯ ಮೂಲೆಯೊಂದರಲ್ಲಿ ಕುಳಿತು ದಿನಕ್ಕೆ ಒಮ್ಮೆಯೋ, ಎರಡು ದಿನಗಳಿಗೊಮ್ಮೆಯೋ ರಿಂಗಣಿಸಿ ದೂರದ ಊರುಗಳ ಶುಭ-ಅಶುಭ ಸಮಾಚಾರಗಳನ್ನು ತಲುಪಿಸುವ ಸಾಧನವಾಗಿದ್ದ ಸ್ಥಿರ ದೂರವಾಣಿಗಳು ಮೂಲೆ ಸೇರಿ, ಎಲ್ಲರ ಕೈಗೆ ಮೊಬೈಲ್‌ಗಳು ಬಂದ ಹೊಸದರಲ್ಲಿ ಹಾಯ್, ಹಲೋಗೆ ಸೀಮಿತವಾಗಿದ್ದರೂ ದಿನಕಳೆದಂತೆ ಮೊಬೈಲ್ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಗಳಾಗಿ ಆಂಡ್ರಾಯ್ಡ್ ಮೊಬೈಲ್‌ಗಳು ಎಲ್ಲರ ಕೈ ಸೇರಿ ಜಗತ್ತಿನ ವಿದ್ಯಮಾನಗಳೆಲ್ಲವನ್ನೂ ಅಂಗೈಯಲ್ಲೇ ತೋರಿಸುವಂತಾದಾಗ, ಮೊಬೈಲ್ ಇಲ್ಲದೇ ದಿನಕಳೆಯುವುದು ಸಾಧ್ಯವೇ ಇಲ್ಲ ಎಂಬಂಥ ಚಡಪಡಿಕೆಗೆ ಸಿಲುಕಿದ್ದೇವೆ.

ಈ ಇಂಟರ್‌ನೆಟ್ ಯುಗದಲ್ಲಿ ಮೊಬೈಲ್ ಫೋನ್‌ಗಳು ಸಂಪರ್ಕ ಸಾಧನವಾಗಷ್ಟೇ ಉಳಿದಿಲ್ಲ. ಬದಲಿಗೆ ಬಹು ಆಯಾಮಗಳಲ್ಲಿ ಬಳಕೆಯಾಗುತ್ತಿವೆ. ಇತ್ತೀಚಿನ ದಿನಗಳಲ್ಲಂತೂ ಗಂಡ-ಹೆಂಡತಿ ಇಬ್ಬರೂ ಯಾವುದಾದರೂ ಒಂದು ಥೀಮ್ ಇಟ್ಟುಕೊಂಡು ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಆ ವಿಡಿಯೋ ಹರಿಬಿಟ್ಟು, ನಮ್ಮ ರೀಲ್ಸ್‌ಅನ್ನು ಎಷ್ಟು ಜನ ವೀಕ್ಷಿಸಿದರು, ಎಷ್ಟು ಜನ ಲೈಕ್ ಒತ್ತಿದರು ಎಂಬುದನ್ನು ಗೆಳೆಯ-ಗೆಳತಿಯರೊಂದಿಗೆ ಖುಷಿಯಿಂದ ಹಂಚಿಕೊಳ್ಳುವ ವಿಡಿಯೋಗಳು ಸಾಕಷ್ಟು ವೈರಲ್ ಆಗುತ್ತಿವೆ. ಗಂಡನಿಗೆ ಇಷ್ಟವಿದೆಯೋ, ಹೆಂಡತಿಗೆ ಇಷ್ಟವಿದೆಯೋ ಎಂಬುದನ್ನು ಲೆಕ್ಕಿಸದೆ ಮನೆಮಂದಿಯನ್ನೆಲ್ಲ ಮೊಬೈಲ್‌ನೊಳಗೆ ಎಳೆದು ತರುತ್ತಿದ್ದಾರೆ.

ಕೆಲವರು ರೀಲ್ಸ್ ಮಾಡಲು ಆಯ್ಕೆ ಮಾಡಿಕೊಂಡ ಥೀಮ್‌ಗೆ ಮೆಚ್ಚುಗೆ ಗಳಿಸಿದರೆ, ಮತ್ತೆ ಕೆಲವರು ನಗೆಪಾಟಲಿಗೀಡಾದರೂ ರೀಲ್ಸ್ ಮಾಡುವ ಹುಚ್ಚನ್ನು ಮಾತ್ರ ಬಿಡುತ್ತಿಲ್ಲ. ದಾಂಪತ್ಯ, ಪ್ರೇಮ ಸಂಬಂಧ ಆರೋಗ್ಯಕರವಾಗಿರಲು ಸಂಗಾತಿಗಳು ಒಟ್ಟಿಗೆ ಸಮಯ ಕಳೆಯುವಂತಹದ್ದು, ಒಬ್ಬರಿಗೊಬ್ಬರು ಉಡುಗೊರೆಗಳನ್ನು ಕೊಟ್ಟುಕೊಳ್ಳುವಂತಹದ್ದನ್ನು ಮಾಡುತ್ತಿರುತ್ತಾರೆ. ಮದುವೆಯಾದ ಹೊಸತರಲ್ಲಿ ಅಥವಾ ಪ್ರೀತಿ-ಪ್ರೇಮದ ಬಲೆಗೆ ಬಿದ್ದ ಹೊಸತರಲ್ಲಿ ಸಂಗಾತಿಗಳಿಬ್ಬರೂ ತುಂಬಾ ಖುಷಿಯಾಗಿರುತ್ತಾರೆ.

ನಂತರದ ದಿನಗಳಲ್ಲಿ ಈ ಸಂಬಂಧಗಳಿಗೆ ಈ ಮೊಬೈಲ್ ಎಂಬ ಮಾಯಾಜಾಲವೇ ಹುಳಿ ಹಿಂಡುವ ಸಾಧನವಾಗಿದೆ. ಎಷ್ಟು ಹೊತ್ತಿನಲ್ಲೂ ಮೊಬೈಲ್‌ನಲ್ಲಿ ಯಾರೊಂದಿಗೋ ಸಂಭಾಷಣೆಯಲ್ಲಿ, ಚಾಟಿಂಗ್, ವಿಡಿಯೋ ಕರೆಯಲ್ಲಿ ತೊಡಗಿರುತ್ತಾನೆ/ಳೆ ಎಂಬ ಅಪವಾದಗಳಿಂದಾಗಿ ಸಂಬಂಧಗಳು ಹಾಳಾಗುತ್ತಿರುವುದು ಹೊಸದೇನಲ್ಲ.

ಸಂಬಂಧಗಳಲ್ಲಿ ದಿನಕಳೆದಂತೆ ಮನಸ್ತಾಪ, ಜಗಳ, ಅಂತರ ಕಾಯ್ದುಕೊಳ್ಳುವಿಕೆ, ಕಡೆಗೊಮ್ಮೆ ಆತ್ಮಹತ್ಯೆಯೋ, ಕೊಲೆಯೋ, ವಿಚ್ಛೇದನವೋ ಆಗಿ ಸಂಬಂಧಗಳು ಅಂತ್ಯವಾಗುತ್ತಿವೆ. ಮನಃಶಾಸಜ್ಞರು ಹೇಳುವ ಪ್ರಕಾರ ಮೊಬೈಲ್ ಫೋನ್‌ಅನ್ನು ಇತಿಮಿತಿಯಲ್ಲಿ ಬಳಸುವ ಎಚ್ಚರಿಕೆಯಲ್ಲಿರುವವರ ಸಂಬಂಧ ಸದಾ ಕಾಲ ಖುಷಿಯಾಗಿರುತ್ತದೆ. ಉತ್ತಮ ಸಂಬಂಧದಲ್ಲಿರುವ ದಂಪತಿಗಳು ಯಾವಾಗಲೂ ಪರಸ್ಪರ ತಮ್ಮ ಸಂಬಂಧದ ಸ್ಥಿತಿಯ ಬಗ್ಗೆ ಮಾತನಾಡುತ್ತಾರಂತೆ. ನಿಜವಾಗಿಯೂ ನನ್ನ ಸಂಗಾತಿ ಸಂತೋಷ ವಾಗಿದ್ದಾಳೆಯೇ/ಸಂತೋಷವಾಗಿದ್ದಾನೆಯೇ ಎಂಬುದನ್ನು ಪರಿಶೀಲಿಸುತ್ತಾರಂತೆ. ಸಂಬಂಧದಲ್ಲಿ ಖುಷಿಯಾಗಿರುವ ಜೋಡಿಗಳು ಪರಸ್ಪರ ತಮ್ಮ ಸಂಗಾತಿಯ ಇಷ್ಟಕಷ್ಟಗಳನ್ನು ತಿಳಿದುಕೊಳ್ಳಲು ಬಯಸುತ್ತಾರೆ. ಇದಲ್ಲದೇ ಎಷ್ಟೇ ಕೆಲಸದ ಒತ್ತಡದಲ್ಲಿದ್ದರೂ ಪರಸ್ಪರ ಒಂದು ಕರೆ ಮಾಡಿಯೋ ಅಥವಾ ಮೆಸೇಜ್ ಮಾಡಿಯೋ ಒಬ್ಬರಿಗೊಬ್ಬರು ವಿಚಾರಿಸಿಕೊಳ್ಳುತ್ತಾರಂತೆ.

ಈ ರೀತಿಯ ದೈನಂದಿನ ಚೆಕ್-ಇನ್‌ಗಳು ಸಂಬಂಧವನ್ನು ಮತ್ತಷ್ಟು ಬಲಪಡಿಸುತ್ತದೆ. ಜೊತೆಗೆ ತಮ್ಮ ಮತ್ತು ಮಕ್ಕಳ ಭವಿಷ್ಯದ ಬಗ್ಗೆ ಕನಸುಗಳನ್ನು ಕಟ್ಟಲು-ಆ ಕನಸುಗಳನ್ನು ನನಸು ಮಾಡುವ ದಾರಿ ಕಂಡುಕೊಳ್ಳಲು ಪರಸ್ಪರ ಮುಕ್ತ ಮಾತುಕತೆ ಪರಿಣಾಮಕಾರಿ ಎನ್ನುತ್ತಾರೆ.

ಹೆಚ್ಚಿನವರು ತಮ್ಮ ಭಯ ಮತ್ತು ಒತ್ತಡಗಳ ಬಗ್ಗೆ ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ. ಆದರೆ ಸಂಬಂಧದಲ್ಲಿ ಸಂತೋಷವಾಗಿರುವ ಜೋಡಿಗಳು ತಮಗೆ ಕಾಡುವ ಆತಂಕದ ಬಗ್ಗೆ ತಮ್ಮ ಸಂಗಾತಿಯ ಬಳಿ ಮುಕ್ತವಾಗಿ ಹಂಚಿಕೊಳ್ಳುತ್ತಾರೆ ಮತ್ತು ಆ ಸಮಸ್ಯೆಗಳನ್ನು ಪರಿಹರಿಸಲು ಒಟ್ಟಿಗೇ ಪ್ರಯತ್ನಿಸುತ್ತಾರೆ. ಕೆಲಸದ ಸ್ಥಳದಲ್ಲಿ ಎದುರಾಗುವ ಸಮಸ್ಯೆಗಳಾಗಿರಬಹುದು, ಸಂಬಂಧದಲ್ಲಿ ಉಂಟಾಗುವ ಅಭದ್ರತೆಯ ಭಾವನೆ ಎಲ್ಲವನ್ನೂ ಹಂಚಿಕೊಳ್ಳುತ್ತಾರೆ.

ಈ ಮಾತುಕತೆಗಳು ಪರಸ್ಪರ ಸುರಕ್ಷತೆಯ ಭಾವನೆಯನ್ನು ಮೂಡಿಸುತ್ತವೆ. ತಮ್ಮ ಮನಸ್ಸಿನಲ್ಲಿ ಮೂಡುವ ಸಣ್ಣಪುಟ್ಟ ಆಲೋಚನೆಗಳು ಸಿಲ್ಲಿ, ವಿಚಿತ್ರ, ತಮಾಷೆಯಂತೆ ಕಾಣಬಹುದು. ಆದರೆ ಇಂತಹ ಮಾತುಕತೆಗಳು ಸಂಬಂಧವನ್ನು ಗಟ್ಟಿಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಹೀಗಾಗಿ ಮನೆಗಳಲ್ಲಿ ಮೊಬೈಲ್ ಫೋನ್ ಅನ್ನು ಬದಿಗಿಟ್ಟು ಮನೆಯವರೊಂದಿಗೆ ಹರಟೆ ಹೊಡೆಯಿರಿ, ಮನಸ್ಸು ಹಗುರಾಗಲಿದೆ.

ಆಂದೋಲನ ಡೆಸ್ಕ್

Recent Posts

ಮದ್ದೂರು |‌ ದೇವಾಲಯಗಳಲ್ಲಿ ಸರಣಿ ಕಳ್ಳತನ

ಮದ್ದೂರು: ದುಷ್ಕರ್ಮಿಗಳು ದೇವಾಲಯಗಳ ಬಾಗಿಲು ಮುರಿದು ಸರಣಿ ಕಳ್ಳತನ ಮಾಡಿರುವ ಘಟನೆ ತಾಲ್ಲೂಕಿನ ಕೆಸ್ತೂರು ಪೊಲೀಸ್ ಠಾಣೆ ವ್ಯಾಪ್ತಿಯ ಅಡಗನಹಳ್ಳಿ…

53 mins ago

ಎಚ್ಚೆತ್ತ ಪೊಲೀಸರು : ರಾಸಾಯನಿಕ ತಯಾರಿಕಾ ಘಟಕದ ಮೇಲೆ ದಾಳಿ,ಪರಿಶೀಲನೆ

ಮೈಸೂರು : ಎನ್‌ಸಿಬಿ ಪೊಲೀಸರು ನಗರದ ಹೆಬ್ಬಾಳು ಕೈಗಾರಿಕಾ ಪ್ರದೇಶದ ರಾಸಾಯನಿಕ ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿದ ನಂತರ…

2 hours ago

ರಾಜೀವ್‌ಗೌಡಗೆ ಜಾಮೀನು : ಪಟಾಕಿ ಸಿಡಿಸಿ ಸಂಭ್ರಮಿಸದಂತೆ ಕೋರ್ಟ್‌ ತಾಕೀತು

ಚಿಕ್ಕಬಳ್ಳಾಪುರ : ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾ ಗೌಡ ಅವರಿಗೆ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ಆರೋಪಿ ರಾಜೀವ್ ಗೌಡಗೆ ಜಾಮೀನು…

2 hours ago

ಉದ್ಯಮಿ ಸಿ.ಜೆ.ರಾಯ್‌ ಆತ್ಮಹತ್ಯೆ

ಬೆಂಗಳೂರು : ದಕ್ಷಿಣ ಭಾರತದ ಪ್ರಮುಖ ರಿಯಲ್ ಎಸ್ಟೇಟ್ ಕಂಪನಿ ಕಾನ್ಫಿಡೆಂಟ್ ಗ್ರೂಪ್‌ನ ಸ್ಥಾಪಕ ಮತ್ತು ಚೇರ್ಮನ್ ಡಾ.ಸಿ.ಜೆ. ರಾಯ್…

3 hours ago

ಸಿಎಂ,ಡಿಸಿಎಂ ವಿರುದ್ಧ ಮಾನಹಾನಿಕ ಪೋಸ್ಟ್‌ : ಬಿಜೆಪಿ ವಿರುದ್ಧ ದೂರು

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು ‘ಮಾನಹಾನಿಕರ’ ಪೋಸ್ಟ್‌ನ್ನು ಬಿಜೆಪಿಯ ‘ಎಕ್ಸ್’ ಖಾತೆಯಲ್ಲಿ…

3 hours ago

ಮಂಡ್ಯದಲ್ಲಿ ಶ್ರೀಪುರುಷ ಹೆಸರಿನಲ್ಲಿ “ಕನ್ನಡ ಭವನ”

ಮಂಡ್ಯ : ಸಕ್ಕರೆ ನಗರ ಮಂಡ್ಯದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ರಾಜ್ಯ, ರಾಷ್ಟ್ರ ಹಾಗೂ…

3 hours ago