ಹೆಣ್ಣು ಮಕ್ಕಳು ನಿರ್ದಿಷ್ಟ ವಯಸ್ಸಿಗೂ ಮುನ್ನ ಮುಟ್ಟಾಗುವುದು ಪ್ರಸ್ತುತ ದಿನಗಳಲ್ಲಿ ಸಾಮಾನ್ಯ ಸಂಗತಿಯಾಗಿದೆ.
ಇದಕ್ಕೆ ಆಹಾರ, ಜೀವನಶೈಲಿಯೂ ಕಾರಣವೆಂಬುದು ಅನೇಕರ ಅಭಿಪ್ರಾಯ. ದುರಂತವೆಂದರೆ ೨೬ ಮಿಲಿಯನ್‌ನಷ್ಟು ಹೆಣ್ಣು ಮಕ್ಕಳು ಮುಟ್ಟಾಗುತ್ತಿದ್ದಂತೆಯೇ ತಮ್ಮ ಶಿಕ್ಷಣದಿಂದಲೂ ವಂಚಿತರಾಗುತ್ತಿದ್ದಾರೆ.
‘ಮುಟ್ಟು’ ಎನ್ನುವ ಪದ ಬಳಕೆಯನ್ನು ಎಲ್ಲರೆದುರು ಮಾತನಾಡದ ಕಾಲವೊಂದಿತ್ತು. ವರ್ಷ ಕಳೆದಂತೆ ಹೆಣ್ಣು ಮಕ್ಕಳಿಗೆ ಮನೆಯಿಂದಲೂ ಶಾಲೆಯಿಂದಲೂ ಈ ಕುರಿತು ಅರಿವು ದೊರಕುತ್ತಿದೆ. ಹೆಣ್ಣು ಮಕ್ಕಳು ಬಹುಬೇಗ ಮುಟ್ಟಾಗುತ್ತಿರುವ ಸನ್ನಿವೇಶವನ್ನು ಆಧರಿಸಿದ ಸ್ಯಾನಿಟರಿ ನ್ಯಾಪ್‌ಕಿನ್ ಜಾಹೀರಾತು ಜಾಲತಾಣದಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಆ ಜಾಹೀರಾತಿನಲ್ಲಿ ಸ್ನೇಹಿತೆಯ ಯೂನಿಫಾರಂನಲ್ಲಿ ರಕ್ತದ ಕಲೆಯನ್ನು ಕಂಡ ಇಬ್ಬರು ಹೆಣ್ಣು ಮಕ್ಕಳು ಅದನ್ನು ಕಂಡದ್ದೇ ಮೊದಲು ಸಮಾಧಾನದಿಂದ ‘ರಕ್ತ ಒಸರುವುದು ನಿಂತ ಮೇಲೆ ಮತ್ತೆ ಶಾಲೆಗೆ ಬಾ’ ಎನ್ನುತ್ತಾರೆ. ಈಕೆ ಮತ್ತೆ ತೋರಿದಾಗ, ‘ಹಾಗಾದ್ರೆ ನೀನು ಶಾಲೆಗೆ ಬರೋ ಹಾಗೇ ಇಲ್ವಾ? ನಿಂಗೇನಾದ್ರೂ ಕಾಯಿಲೆ ಬಂದಿದ್ಯಾ?’ ಎಂದು ಒಬ್ಬಳು ಮುಗ್ಧವಾಗಿ ಕೇಳುತ್ತಾಳೆ. ಕಂಗಾಲಾದ ಹುಡುಗಿ ಶಾಲಾ ಶಿಕ್ಷಕಿ ಎದುರಾದಾಗ ಅತ್ತುಬಿಡುತ್ತಾಳೆ. ವಿಷಯ ಅರ್ಥವಾದ ಹೊತ್ತಿಗೆ ಶಿಕ್ಷಕಿ ತರಗತಿಗೆ ಹೊರಟು ನಿಂತಾಗ, ‘ಈ ವಿಷಯ ವನ್ನು ಮಕ್ಕಳಿಗೆ ಮೊದಲೇ ಹೇಳಬಹುದೇ?’
ಮತ್ತೊಬ್ಬ ಶಿಕ್ಷಕಿ ಕೇಳಿದ ಮಾತಿಗೆ ಮೊದಲೆ ‘ಮುಟ್ಟು ಆಗುವಾಗ, ಅದಕ್ಕೆ ಪೂರ್ವ ತಯಾರಿಯನ್ನು ಮೊದಲೇ ಮಾಡಿಕೊಳ್ಳಬೇಕು’ ಎನ್ನುತ್ತಾ ಮುಂದೆ ಸಾಗುತ್ತಾಳೆ. ಇಂಥ ಸನ್ನಿವೇಶ ಧುತ್ತೆಂದು ಎದುರಾದಾಗ ಗಾಬರಿ ಯಾಗಿ, ದಿನವಿಡೀ ಯೋಚಿಸುವುದಕ್ಕಿಂತ ಮಗಳು ಚಿಕ್ಕವಳಿದ್ದಾಗಲೇ ಮೊದಲ ಮುಟ್ಟಿನ ಕುರಿತು ತಾಯಿಯು ಅರಿವು ಮೂಡಿಸುವುದು ಸೂಕ್ತ.
ಸುಂಟಿಕೊಪ್ಪದಲ್ಲಿ ೧೮ ಲಕ್ಷ ರೂ. ವೆಚ್ಚದ ಮಂಟಪ ನಿರ್ಮಾಣ ೩ ದಿನಗಳ ಧಾರ್ಮಿಕ ಕಾರ್ಯಕ್ರಮ ಸುಂಟಿಕೊಪ್ಪ: ಇಲ್ಲಿನ ಶ್ರೀ ಪುರಂ…
ಪಿರಿಯಾಪಟ್ಟಣ: ದೇಸಿ ಬೀಜಗಳನ್ನು ಉಳಿಸಿದರೆ ಮಾತ್ರ ಮುಂದಿನ ಯುವ ಜನಾಂಗಕ್ಕೆ ವಿಷಮುಕ್ತ ಆಹಾರ ನೀಡಲು ಸಾಧ್ಯ ಎಂದು ಸಾವಯವ ರೈತ…
ಮೈಸೂರು: ಕ್ರಿಸ್‌ಮಸ್ ಆಚರಣೆಗೆ ಕ್ಷಣಗಣನೆ ಶುರುವಾಗಿದ್ದು, ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರಾಗಿದ್ದರೆ, ಚರ್ಚ್‌ಗಳ ಅಂಗಳವನ್ನು ವಿದ್ಯುತ್ ದೀಪಗಳಿಂದ ಸಿಂಗರಿಸುವ ಕಾರ್ಯ…
ಕೆ.ಬಿ.ರಮೇಶನಾಯಕ ಟಿಎಚ್‌ಒ ಹುದ್ದೆಗೆ ಡಿಎಚ್‌ಒ ವರ್ಗಾವಣೆ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆ ಮೈಸೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ…
ಮಂಡ್ಯ: ಆಸ್ತಿಗಾಗಿ ತಂದೆಯನ್ನೇ ಪಾಪಿ ಮಗನೋರ್ವ ಕೊಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ದಳವಾಯಿಕೋಡಿಯಲ್ಲಿ ನಡೆದಿದೆ. ಗ್ರಾಮದ…