ಮಹಿಳೆಯರನ್ನು ಉದ್ಯಮಿಗಳನ್ನಾಗಿಸುವತ್ತ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಮಹತ್ತರ ಹೆಜ್ಜೆಯನ್ನಿಟ್ಟು, ಒಂದೂವರೆ ದಶಕಗಳೇ ಕಳೆದಿವೆ. ಅನೇಕ ಮಹಿಳೆಯರು ಉದ್ಯೋಗಿನಿ ಯೋಜನೆಯನ್ನು ಪಡೆದುಕೊಂಡು ಸ್ವಾವಲಂಬಿ ಬದುಕನ್ನು ಕಟ್ಟಿಕೊಂಡಿದ್ದಾರೆ.
ಬುಕ್ ಬೈಂಡಿಂಗ್ ಮತ್ತು ನೋಟ್‌ಬುಕ್‌ಗಳ ತಯಾರಿಕೆ, ಜಾಮ್, ಜೆಲ್ಲಿ, ಉಪ್ಪಿನಕಾಯಿ ತಯಾರಿಕೆ, ಹಪ್ಪಳ ತಯಾರಿಕೆ, ಸೀರೆ ಮತ್ತು ಕಸೂತಿ ಕೆಲಸ ಸೇರಿದಂತೆ ಹಲವಾರು ಉದ್ಯಮಗಳ ಕನಸನ್ನು ಸಾಕಾರಗೊಳಿಸಲು ಉದ್ಯೋಗಿನಿ ಯೋಜನೆ ನೆರವಾಗಿದೆ. ೧೯೯೭-೯೮ನೇ ಸಾಲಿನಲ್ಲಿ ಜಾರಿಯಾದ ಉದ್ಯೋಗಿನಿ ಯೋಜನೆಯಡಿಯಲ್ಲಿ ಅರ್ಹ ಮಹಿಳಾ ಉದ್ಯಮಿಗಳಿಗೆ ಉದ್ಯಮ ಸ್ಥಾಪಿಸಲು ಮತ್ತು ಆದಾಯೋತ್ಪನ್ನ ಚಟುವಟಿಕೆ ಕೈಗೊಳ್ಳಲು ಗರಿಷ್ಟ ಒಂದು ಲಕ್ಷ ರೂ. ಗಳವರೆಗೆ ಬ್ಯಾಂಕ್ ಮೂಲಕ ಸಾಲ ನೀಡುವ ಕಾರ್ಯಕ್ರಮ ರೂಪಿಸಿದೆ.
ಈ ಹಣಕಾಸು ಸಂಸ್ಥೆಗಳು ಮಂಜೂರು ಮಾಡುವ ಸಾಲದ ಮೊತ್ತಕ್ಕೆ ನಿಗಮದಿಂದ ಸಹಾಯಧನ ಮಂಜೂರು ಮಾಡಲು ಅವಕಾಶವಿದೆ. ಆಯಾ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಅರ್ಜಿಯನ್ನು ಪಡೆದು, ಭರ್ತಿ ಮಾಡಿ ಸಲ್ಲಿಸಬೇಕು. ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಶೇ. ೨೦ರಷ್ಟು ಅಥವಾ ಗರಿಷ್ಟ ಏಳೂವರೆ ಸಾವಿರ ರೂಪಾಯಿಗಳು ಮೀರದಂತೆ ಮತ್ತು ವಿಶೇಷ ವರ್ಗದವರಿಗೆ (ಅಂಗವಿಕಲರು/ವಿಧವೆ/ಸಂಕಷ್ಟಕ್ಕೊಳಗಾದ ಮಹಿಳೆಯರಿಗೆ) ಶೇ. ೩೦ರಷ್ಟು ಅಥವಾ ಗರಿಷ್ಟ ಹತ್ತು ಸಾವಿರ ರೂಪಾಯಿಗಳಂತೆ ಹಾಗೂ (ಪ. ಜಾತಿ/ಪ. ಪಂ)ದವರಿಗೆ ಶೇ. ೫೦ರಷ್ಟು ಅಥವಾ ಗರಿಷ್ಟ ರೂ. ೫೦,೦೦೦ಗಳಷ್ಟು ಸಹಾಯಧನವನ್ನು ಈ ಯೋಜನೆಯಿಂದ ಪಡೆಯಬಹುದಾಗಿದೆ.
ನವೀನ್ ಡಿಸೋಜ ಚಾರಣಿಗರ ಸುರಕ್ಷತೆ, ಪ್ರಕೃತಿ ಸಂಪತ್ತಿನ ಉಳಿವಿಗೆ ಹೊಸ ಮಾರ್ಗಸೂಚಿ ಸಹಕಾರಿ; ಪರಿಣಾಮಕಾರಿಯಾಗಿ ಜಾರಿಗೊಳಿಸಲು ಒತ್ತಾಯ ಮಡಿಕೇರಿ: ಅರಣ್ಯ…
ವರಹಳ್ಳಿ ಆನಂದ ನಂಜನಗೂಡು ತಾಲ್ಲೂಕಿನ ಚುಂಚನಹಳ್ಳಿ ಶಾಲೆಯಲ್ಲೀಗ ಕಲಿಯುತ್ತಿರುವುದು ಕೇವಲ ೩೯ ಮಕ್ಕಳು ಮೈಸೂರು: ನಂಜನಗೂಡು ತಾಲ್ಲೂಕಿನ ಚುಂಚನಹಳ್ಳಿ ಗ್ರಾಮದ…
ಭಾರತದ ಕುರಿತು ಟ್ರಂಪ್ ಅವಹೇಳನಕಾರಿ ಹೇಳಿಕೆಗೆ ಒಂದು ಪ್ರತಿಕ್ರಿಯೆ ನಾನು ಅಮೆರಿಕಕ್ಕೆ ಪ್ರಥಮ ಬಾರಿಗೆ ಕಾಲಿಟ್ಟಿದ್ದು ಮೂರೂವರೆ ದಶಕಗಳಿಗೂ ಹಿಂದೆ.…
ಭೇರ್ಯ ಮಹೇಶ್ ಬಿರುಬಿಸಿಲಿಗೆ ನದಿಯಲ್ಲಿ ಕಡಿಮೆಯಾದ ನೀರಿನ ಹರಿವು; ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಆತಂಕ ಕೆ.ಆರ್.ನಗರ: ಬಿರುಬಿಸಿಲಿನ ಝಳಕ್ಕೆ ಭತ್ತದ…
ಎಂ.ಆರ್.ಚಕ್ರಪಾಣಿ ಜಾತ್ರೆಯಲ್ಲಿ ಹಳ್ಳಿಕಾರ್ ಎತ್ತುಗಳು, ಟಗರುಗಳ ಆಕರ್ಷಣೆ; ಸ್ಥಳವಕಾಶದ ಕೊರತೆಗೆ ರೈತರು ಬೇಸರ ಮದ್ದೂರು: ಪಟ್ಟಣದ ಸರ್ಕಾರಿ ಕ್ರೀಡಾಂಗಣದಲ್ಲಿ ಶನಿವಾರ…