• ಹನಿ ಉತ್ತಪ್ಪ
ರಾತ್ರಿ ಊಟ ಆದ ಮೇಲೆ ಹಾಸ್ಟೆಲ್‌ನ ಗೆಳತಿಯರೆಲ್ಲ ಮೆಟ್ಟಿಲು ಕೆಳಗೆ ಪಂಚಾಯಿತಿ ಸೇರಿ, ಹರಟೆ ಹೊಡೆಯದಿದ್ದರೆ ತಿಂದ ಅನ್ನ ಜೀರ್ಣ ಆಗುವುದಿಲ್ಲ ಅಂತ ಅನೇಕರು ತಮಾಷೆ ಮಾಡುತ್ತಾರೆ. ನಾವೆಲ್ಲ ಆ ವಿಷಯ ಕೇಳೇ ಇಲ್ಲ ಎನ್ನುವಂತೆ ಇರುತ್ತಿದ್ದೆವು. ಹೆಣ್ಣು ಮಕ್ಕಳು ತೊಡುವ ಬಟ್ಟೆಯ ವಿಷಯದಲ್ಲಿ ಕೆಲ ಹಾಸ್ಟೆಲ್ ಗಳಲ್ಲಿ ಒಂದಷ್ಟು ನಿಯಮ’ ರೂಪಿಸಿ, ಬಹಳಷ್ಟು ವರ್ಷಗಳೇ ಕಳೆದಿವೆ. ಆವತ್ತು ರಾತ್ರಿ ಸಿಕ್ಕಾಪಟ್ಟೆ ಸೆಕೆ. ನಾವೆಲ್ಲ ಸೆಕೆಗೆ ಅನುಗುಣವಾಗಿ ನಮಗೆ ಒಪ್ಪುವ ಬಟ್ಟೆಗಳನ್ನು ತೊಟ್ಟುಕೊಂಡಿದ್ದೆವು.
ಹಾಡಿನ ಆಟ ಇನ್ನೇನು ಆರಂಭಿಸುವ ಹೊತ್ತಿನಲ್ಲಿ ಶ್ವೇತಾ ನಿಧಾನಕ್ಕೆ ಬಂದಳು. ‘ಏ ನಂಗೊಂದು ಡೌಟು ಕಣೆ’, ಏನು ಎನ್ನುವ ಪ್ರತ್ಯೇಕ ಪ್ರಶ್ನೆ ಅವಳಿಗೆ ಬೇಕೇ ಇರಲಿಲ್ಲ. ‘ಅಲ್ಲಾ, ಬಿಗ್‌ಬಾಸ್ ನೋಡ್ತಿರಲ್ವಾ ನಮ್ಮನ್ನ?’ ವಿನೋದ ತಕ್ಷಣವೇ ‘ಯಾವ್ ಬಿಗ್‌ಬಾಸ್ ಮಗಾ!’ ಎಂದಳು. ಅದಕ್ಕಿವಳು ನಾಲ್ಕು ಕ್ಯಾಮೆರಾದೆಡೆಗೆ ಕೈ ತೋರಿಸಿದ್ದಷ್ಟೇ, ಏನೊ ಅಂದುಕೊಂಡಿದ್ದ ನಮ್ಮಲ್ಲಿ ‘ಇದೇನೆನೆ..’ ಎಂಬ ನೀರಸ ಭಾವ ಮುಡಿದ್ದಂತೂ ಹೌದು.
“ಅಲ್ಲಾ ಕಣೆ, ಬಸ್ಸಲ್ಲಿ, ಕಾಲೇಜಲ್ಲಿ ಬರೀ ಆ ಪೆನ್‌ಡೈವ್ ಕತೆನೇ! ಈ ಸೆಕೆಗೆ ನಾವೇನೊ ನಮಗೆ ಬೇಕಾದಾಗೆ ಇದ್ದೀವಿ. ಇವೇನಾದ್ರೂ ಫೋಟೊ ಗೀಟೊ ಅಂತ ತೆಗ್ಡೆ ನಮ್ ಕತೆ ಏನೇ?’ ಆವತ್ತು ನಗು ತರಿಸಿದ ಇದೇ ಪ್ರಶ್ನೆಯನ್ನು ಈಗ ಯೋಚಿಸಿದರೆ, ಗಂಭೀರ ಅನಿಸುತ್ತದೆ. ‘ಹೇ ನಮ್ಮನ್ಯಾರೂ ನೋಡಲ್ಲ ಕಣೆ. ಮತ್ತೆ ಈ ಹಾಸ್ಟೆಲ್‌ನಲ್ಲಿರುವ ಕ್ಯಾಮೆರಾ ಫುಟೇಜ್ ಬೇಕಂದ್ರೆ ಲೆಟರು, ಪರ್ಮಿಶನ್ನು ಅಂತೆಲ್ಲ ತಗೋಬೇಕು. ಅಷ್ಟು ಸುಲಭ ಅಲ್ಲ ಗೊತ್ತಾ’ ಏನೋ ಎಲ್ಲ ಬಲ್ಲವರಂತೆ ಮಾತಾಡಿದ್ದೆವು.
ಅಷ್ಟರಲ್ಲಿ ಇನ್ನೊಬ್ಬಳು, ‘ಹಾಂ.. ಹೀಗಂದೊಂಡೆ ಆ ವ್ಯಕ್ತಿ, ಆ ಎಲ್ಲ ಹೆಂಗಸು ಇದ್ದಿದ್ದು ಅಲ್ವಾ?’ ಅಂದುಬಿಡೋದಾ!
ಮುಂದುವರಿದು, ‘ಹುಡುಗಿಯರ ಹಾಸ್ಟೆಲ್‌ನಲ್ಲಿ ಗಂಡಸ್ರನ್ನ ಒಳ್ಗೆ ಬಿಡ್ಡೆ ಇರೋದು ಒಳ್ಳೇದೆ. ಆದ್ರೆ ಸಿಸಿ ಕ್ಯಾಮೆರಾ ನೋಡ್ಡಾರ್ದು ಅಂತೇನಿಲ್ವಲ್ಲಾ!’ ‘ಒಂದ್ ವೇಳೆ ನೋಡ್ಡಿದ್ರು ಅಂತಿಟ್ಕೊಳ್ಳಿ. ನೋಡಾದ್ಮೇಲಿನ್ ಕತೆ ಏನೇ! ಥೋ, ಹೆದ್ರಸ್ತೀರಪಾ?
‘ನಾವೇನ್ ಆ ವ್ಯಕ್ತಿ ಹಿಂದೆ ಹೋಗಿಲ್ವಲ್ಲಾ?’ “ತಾಯಿ ಮಹಾಮಾತೆ, ಯಾವ್ ಕಾಲದಲ್ ಇದೀಯಲ್ವಾ? ಈಗ ಮನೆಗೆ ಹೋಗೋಕಾಗಿಲ್ಲ. ರಶ್ಮಿಕಾ ಮಂದಣ್ಣನ್ ಮುಖ ಇಷ್ಟೊಂಡು ಡೀಪ್ ಫೇಕ್ ವಿಡಿಯೋ ಮಾಡಿರ್ಲಿಲ್ವಾ!’
‘ಕೋರ್ಟ್ ಅಂತೇನೊ ಪೇಪರ್ ಅಲ್ಲಿ ಬಂದಿತ್ತು ಅಲ್ವೇನೆ? ಅವ ಕತೆ ಏನಾಯ್ತು ಮತ್ತೆ?’
‘ಗೊತ್ತಿಲ್ಲ ಕಣೆ. ಆದ್ರೆ, ನಂಗೆ ಈಗೂ ಆ ಪೆನ್ ಡೈವ್ ಹಂಚಿದೋನು, ಡೀಪ್ ಫೇಕ್ ವಿಡಿಯೋ ಮಾಡೋನು ಸಿಕ್ಕಿದ್ರೆ ಕಪಾಲಕ್ಕೆ ಸರೀ ಬಾರ್ಸಣ ಅನ್ನತ್ತೆ ಕಣೆ”
‘ಸುಮ್ಮೆ ಹಂಗೇ ಯೋಚೆ ಮಾಡಿ, ನಾವೀಗ ನಮ್ ಪಾಡಿಗ್ ಇದೀವಿ. ನಮ್ಮನ್ನೂ ಆ ವಿಡಿಯೋದಲ್ಲಿ ಸೇರ್ಸಿದ್ರೆ ಹೇಗಿರತ್ತೆ?? ಅಂತೇನೊ ಪ್ರಶ್ನೆ ಕವಲೊಡೆಯುತ್ತಿರುವಾಗ, ‘ಒಂದೆ, ನಾವು ನಮ್ಮನ್ನು ಯಾರೂ ನೋಡಲ್ಲ ಅಂತ ಇದೇ ನಂಬಿಕೇಲಿ ನಮಗಿಷ್ಟ ಬಂದ ಹಾಗೇ ಇರ್ಬೇಕು. ಇಲ್ಲಾಂದ್ರೆ, ಮೈ ತುಂಬ ಬಟ್ಟೆ ಹಾಕ್ಕೊಂಡು ತೆಪ್ಪಗಿರ್ಬೇಕು ಕಣೆ’ ರೀನಾ, ಮಿಸ್ ಸೀನಿಯರ್ ಹೇಳಿದ ಮಾತು.
ಈಗಂತೂ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅಂತೆಲ್ಲ ಬಂದು ಅವಾಂತರ ಆಗಿಹೋಗುತ್ತಿರುವ ಕಾಲಕ್ಕೆ ಬಟ್ಟೆಯೊಂದು ವಿಷಯವೇ ಅಲ್ಲ ಎನಿಸುತ್ತದೆ. ಈ ಬಟ್ಟೆ, ನಾಚಿಕೆ, ಮಾನ ಅಂತೆಲ್ಲ ಇರುವುದು ಬರೀ ಹೆಣ್ಣಿಗಾ? ಅಥವಾ ಶತಮಾನಗಳಿಂದಲೂ ಮುಳ್ಳಿನಿಂದ ಹಾಳಾದ ಬಾಳೆಯ ರೂಪಕ ಬದಲಾಗಬಹುದಾ? ಹೀಗೆ ಆಡಿದ ಮಾತುಗಳೆಲ್ಲ ಪ್ರಶ್ನೆಯ ಸುತ್ತವೇ ಗಿರಕಿ ಹೊಡೆಯುತ್ತಿದೆ.
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…