ಮೊಡವೆಗಳು ದೇಹದ ಹಾರ್ಮೋನುಗಳ ಏರಿಳಿತಗಳಿಗೆ ಸಂಬಂಧಿಸಿವೆ. ಇವು ಹಾರ್ಮೋನುಗಳ ಬದಲಾವಣೆಗಳಿಗೆ ಪ್ರತಿಕ್ರಿಯೆಯಾಗಿ ಕಾಣಿಸಿಕೊಳ್ಳುತ್ತದೆ. ವಿಶೇಷವಾಗಿ ಟೆಸ್ಟೋಸ್ಟೆರಾನ್‌ನಂತಹ ಆಂಡ್ರೋಜಿನ್‌ಗಳ ಹೆಚ್ಚಳದಿಂದಾಗಿ ಮೊಡವೆಗಳು ಉಂಟಾಗಿ ನೋವಿನಿಂದ ಕೂಡಿರುತ್ತದೆ.
ಈ ಮೊಡವೆಗಳನ್ನು ನಿಯಂತ್ರಿಸುವುದು ಹೇಗೆ ಅಂತೀರಾ? ಅದಕ್ಕಾಗಿ ನೀವು ಚರ್ಮದ ಆರೈಕೆಯನ್ನು ದಿನಚರಿಯನ್ನಾಗಿ ಅನುಸರಿಸಬೇಕಾಗುತ್ತದೆ. ಇದು ಮೊಡವೆಗಳನ್ನು ನಿಯಂತ್ರಿಸಲು ಉತ್ತಮ ಮಾರ್ಗವಾಗಿದೆ.
ನಿಮ್ಮ ಮುಖವನ್ನು ದಿನಕ್ಕೆ ಎರಡು ಬಾರಿ ಅಂದರೆ ಬೆಳಿಗ್ಗೆ ಮತ್ತು ಸಂಜೆ ತೊಳೆಯಬೇಕು. ಅತಿಯಾಗಿ ತೊಳೆಯುವುದೂ ಮೊಡವೆಗಳಿಗೆ ಒಳ್ಳೆಯದಲ್ಲ. ಮುಖವನ್ನು ಸ್ವಚ್ಛಗೊಳಿಸಲು ಸೌಮ್ಯವಾದ ಕ್ಲೆನ್ಸರ್ ಬಳಸಬೇಕು. ಅದೂ ಕೂಡ ಅತಿಯಾಗಬಾರದು. ಸ್ವಚ್ಛಗೊಳಿಸಲು ಬೆಚ್ಚಗಿನ ನೀರು ಉತ್ತಮ.
ಆದಷ್ಟೂ ಸೌಂದರ್ಯ ವರ್ಧಕಗಳನ್ನು ಕಡಿಮೆ ಮಾಡುವುದು ಉತ್ತಮ.
ಚರ್ಮವನ್ನು ನೈಸರ್ಗಿಕವಾಗಿ ಇಟ್ಟುಕೊಳ್ಳಬೇಕು. ಮೊಡವೆಗಳಿಗೆ ಸ್ವಯಂ ಆರೈಕೆಯೇ ಮುಖ್ಯವಾದ ಚಿಕಿತ್ಸೆಯಾಗಿದ್ದು, ನಿಮ್ಮ ಮುಖದ ಚರ್ಮವನ್ನು ಸರಿಯಾಗಿ ನೋಡಿಕೊಂಡರೆ ಸಾಕು ಅದಕ್ಕೆ ಯಾವುದೇ ಔಷಧಿ ಅಗತ್ಯವಿರುವುದಿಲ್ಲ.
ಇವುಗಳೊಂದಿಗೆ ಆರೋಗ್ಯಕರ ಡಯಟ್ ತುಂಬಾ ಮುಖ್ಯ. ನಿಮ್ಮ ಆಹಾರ ಕ್ರಮವು ನಿಮ್ಮ ಮೊಡವೆ ಸ್ಥಿತಿಯೊಂದಿಗೆ ನೇರ ಸಂಪರ್ಕವನ್ನು ಹೊಂದಿರುವುದರಿಂದ ಆಹಾರದಲ್ಲಿನ ಕೊಬ್ಬಿನಾಂಶ ಮತ್ತು ಕಾರ್ಬೋ ಹೈಡ್ರೆಟ್‌ಗಳು ನಿಮ್ಮ ಮೇದೋಗ್ರಂಥಿಗಳ ಸ್ರಾವ ಉತ್ಪಾದನೆಯನ್ನು ಹೆಚ್ಚಿಸಬಹುದು. ಅದು ಮೊಡವೆಗೆ ಕಾರಣವಾಗಬಹುದು. ಆದ್ದರಿಂದ ಧಾನ್ಯಗಳು, ಸಿಹಿಕಾರಕಗಳು, ಹಾಲು ಮತ್ತು ಚೀಸ್ ಸೇರಿದಂತೆ ಡೈರಿ ಉತ್ಪನ್ನಗಳು, ಕರಿದ ಆಹಾರಗಳು ಮತ್ತು ಕೇಕ್‌ಗಳನ್ನು ಆದಷ್ಟು ಕಡಿಮೆ ಮಾಡಬೇಕು. ಹೀಗೆ ಮನೆಯಲ್ಲಿಯೇ ಚರ್ಮದ ಕಾಳಜಿ ವಹಿಸಿದರೆ ಮೊಡವೆಗಳ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.
13 ವರ್ಷದ ವೈಭವ್ ಸೂರ್ಯವಂಶಿ ಐಪಿಎಲ್ ಹರಾಜಿನಲ್ಲಿ 1.10 ಕೋಟಿಗೆ ರಾಜಸ್ಥಾನ ತಂಡಕ್ಕೆ ಹರಾಜಾಗುವ ಮೂಲಕ ಕಿರಿಯ ವಯಸ್ಸಿಗೆ ಐಪಿಎಲ್‌ಗೆ…
ಕುವೈತ್: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಕುವೈತ್ ಪ್ರವಾಸ ಕೈಗೊಂಡಿದ್ದು, ಅಲ್ಲಿನ ರಾಜ ಶೇಕ್ ಮಿಶಾಲ್…
ಉತ್ತರ ಪ್ರದೇಶ: ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಶ್ರೀಮಂತರು ಹಾಗೂ ಬಡವರ ನಡುವಿನ ಆರ್ಥಿಕತೆ, ಅಸಮಾನ ಆಸ್ತಿಗೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದ…
ಬೆಂಗಳೂರು: ಪ್ರಸಕ್ತ ವರ್ಷದಲ್ಲಿ ಚಳಿ ತುಂಬಾ ಜಾಸ್ತಿಯಿದ್ದು, ಶೀತಗಾಳಿ ಹೆಚ್ಚಾಗಲು ಕರಾವಳಿ ತೀರ ಪ್ರದೇಶದಲ್ಲಾದ ವಾತಾವರಣ ಬದಲಾವಣೆ ಕಾರಣ ಎಂದು…
ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ನಡೆಯುತ್ತಿರುವ 87ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರ ವಿತರಣೆ ಮಾಡಿರುವ ವಿಚಾರ ಭಾರೀ ವಿವಾದಕ್ಕೆ…
ಕುವೈತ್/ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಕಾಲ ಕುವೈತ್ ಪ್ರವಾಸದಲ್ಲಿದ್ದು, ಇಲ್ಲಿನ ರಾಜ ಶೇಕ್ ಮಿಶಾಲ್ ಅಲ್…