• ಡಾ.ಚೈತ್ರ ಸುಖೇಶ್
ಬೇಸಿಗೆ ಆರಂಭವಾಗಿದೆ. ಈ ಬಾರಿಯ ಬಿಸಿಲು ಹೆಚ್ಚಾಗಿದ್ದು, ಬಿಸಿಲಿನ ಬೇಗೆ ಅಧಿಕಗೊಂಡಿದೆ. ಇದರಿಂದಾಗಿ ನಾವು ಹೊರಗೆ ಹೋದಾಗ ಸೂರ್ಯನ ಕಿರಣಗಳು ವಾರದ ಮುಖದ ಮೇಲೆ ಮಹಿಳಾ ಬಿದ್ದು, ಚರ್ಮದಲ್ಲಿ ಹಲವು ವ್ಯತ್ಯಾಸಗಳು ಉಂಟಾಗುತ್ತಿವೆ.
ಬೇಸಿಗೆಯ ಸಂದರ್ಭದಲ್ಲಿ ನಾವು ನಮ್ಮ ಚರ್ಮದ ಬಗ್ಗೆ ಹೆಚ್ಚಿನ ಕಾಳಜಿಯನ್ನು ಹೊಂದಿರ ಬೇಕಾಗುತ್ತದೆ. ಅದರಲ್ಲಿಯೂ ಮುಖದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಅತ್ಯಗತ್ಯ. ಇದಕ್ಕಾಗಿ ನಾವು ಮನೆಯಲ್ಲಿಯೇ ಒಂದಿಷ್ಟು ಫೇಸ್ ಮಾಸ್ಕ್‌ಗಳನ್ನು ತಯಾರಿಸಿಕೊಂಡು ಬಳಸಬಹುದು. ನಾವು ಸರಳವಾಗಿ ಸಾಕಷ್ಟು ಆಯುರ್ವೇದದ ಫೇಸ್ ಮಾಸ್ಕ್ ಗಳನ್ನು ಬಳಸುವುದು ಹೆಚ್ಚು ಸೂಕ್ತ. ಈ ಮಾಸ್ಕ್‌ಗಳನ್ನು ವಾರದಲ್ಲಿ 2 ರಿಂದ 3 ಬಾರಿ ಬಳಸುವುದು ಉತ್ತಮ.
ಈ ಫೇಸ್ ಪ್ಯಾಕ್‌ಗಳನ್ನು ನಿಯಮಿತವಾಗಿ ಬಳಸುವುದರಿಂದ ಬಿಸಿಲಿನಿಂದ ಆಗುವ ಸ್ಕಿನ್ ಟ್ಯಾನ್, ಕಪ್ಪು ಕಲೆಗಳು, ತುರಿಕೆ, ಗಂಧೆ, ಚರ್ಮ ಕೆಂಪಾಗುವುದು, ಹೆಚ್ಚುವರಿ ಕಲೆಗಳು, ಬ್ಲಾಕ್ ಹೆಡ್ಸ್‌ಗಳು ಕಡಿಮೆಯಾಗಿ, ರಕ್ತಪರಿಚಲನೆ ಹೆಚ್ಚಾಗುತ್ತದೆ. ಅಲ್ಲದೆ ತ್ವಚೆಯ ಕಾಂತಿಯನ್ನೂ ಹೆಚ್ಚಿಸುತ್ತದೆ.
ನೈಸರ್ಗಿಕ ಅಥವಾ ಆಯುರ್ವೇದ ಸನ್‌ಸ್ಟೀಮ್ ಲೋಷನ್ ಆಲೋವೆರ ನಮ್ಮ ಮುಖದ ಚರ್ಮದ ರಕ್ಷಣೆಗೆ ಅತ್ಯಂತ ಹೆಚ್ಚು ಪರಿಣಾಮಕಾರಿ, ಆಲೋವರ ಗಿಡದ ಲೋಳೆಯನ್ನು (ಜೆಲ್) ಒಂದು ಕಡೆ ಸಂಗ್ರಹಿಸಿಕೊಂಡು ಇದಕ್ಕೆ ಸ್ವಲ್ಪ
ಎಳ್ಳೆಣ್ಣೆಯನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಬೇಕು. ಹೀಗೆ ಮಾಡಿದ ಮಿಶ್ರಣವನ್ನು ಮಿಶ್ರಣವನ್ನು ದಿನಲೂ ಮುಖಕ್ಕೆ ಹಚ್ಚಿ 10-15 ನಿಮಿಷ ಬಿಟ್ಟು ಮುಖವನ್ನು ತೊಳೆದುಕೊಳ್ಳಬೇಕು. ಇದು ಮುಖಕ್ಕೆ ನೈಸರ್ಗಿಕ ಸನ್‌ಸ್ಟೀಮ್ ಲೋಷನ್
ಆಗಿ ಕಾರ್ಯನಿರ್ವಹಿಸಲಿದೆ.
chaitrasukesh18@gmail.com
1. ಅರ್ಧ ಚಮಚ ಅರಿಶಿಣ ಮತ್ತು 4 ಚಮಚ ಕಡ್ಲೆಹಿಟ್ಟನ್ನು ಹಾಲು ಅಥವಾ ಬೆಚ್ಚಗಿನ ನೀರಿನೊಂದಿಗೆ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ 15-20 ನಿಮಿಷಗಳ ಕಾಲ ಹಾಗೆಯೇ ಬಿಟ್ಟು ನಂತರ ಮುಖವನ್ನು ತೊಳೆದುಕೊಳ್ಳಬೇಕು. ಇದು ಮುಖದ ಕಾಂತಿಯನ್ನು ಹೆಚ್ಚಿಸುವ ಜೊತೆಗೆ ಮುಖದಲ್ಲಿರುವ ಕಲೆಯನ್ನೂ ದೂರ ಮಾಡುತ್ತದೆ.
2. ಗುಲಾಬಿ ಎಸಳು, ಮಲ್ಲಿಗೆ ಹೂ, ಸೇವಂತಿಗೆ ಹೂಗಳನ್ನು ಸಮಪ್ರಮಾಣದಲ್ಲಿ ರುಬ್ಬಿಕೊಂಡು ಪೇಸ್ಟ್ ರೀತಿಯಲ್ಲಿ ತಯಾರಿಸಿಕೊಳ್ಳಬೇಕು. ಇದಕ್ಕೆ ಸ್ವಲ್ಪ ಜೇನುತುಪ್ಪ ಮತ್ತು ಹಾಲನ್ನು ಸೇರಿಸಿ ಮುಖಕ್ಕೆ ಹಚ್ಚಿಕೊಳ್ಳಬೇಕು. ಇದರಿಂದ ಮುಖದಲ್ಲಿ ಮೊಡವೆಗಳು ಹಾಗೂ ಅದರ ಕಲೆಗಳು ದೂರವಾಗುತ್ತವೆ.
3. ಚಂದನದ ಪುಡಿ ಮತ್ತು ಹಾಲನ್ನು ಸೇರಿಸಿ ಮಿಶ್ರಣ ಮಾಡಿಕೊಂಡು ನಂತರ ಅದನ್ನು ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಮುಖದ ಚರ್ಮವು ಮೃದುವಾಗಿರಲು ಸಹಕಾರಿಯಾಗಲಿದೆ.
4. ಬೇವಿನ ಎಲೆ, ತುಳಸಿ ಪೇಸ್ಟ್ ತಯಾರಿಸಿ ಅದಕ್ಕೆ ಅರಿಶಿನ ಮತ್ತು ಶುದ್ಧವಾದ ನೀರನ್ನು ಮಿಶ್ರಣ ಮಾಡಬೇಕು. ನಂತರ ಅದನ್ನು ಮುಖಕ್ಕೆ ಹಚ್ಚಿ ಕೆಲ ಸಮಯದ ನಂತರ ಮುಖವನ್ನು ತೊಳೆದರೆ ಮುಖದಲ್ಲಿನ ಸುಕ್ಕು ಕಡಿಮೆಯಾಗುತ್ತದೆ.
5. ಸಕ್ಕರೆ ಪುಡಿಗೆ ತೆಂಗಿನೆಣ್ಣೆಯನ್ನು ಮಿಶ್ರಣ ಮಾಡಿ ಸಬ್ ರೀತಿಯಲ್ಲಿ ಬಳಸುವುದರಿಂದ ಮುಖದಲ್ಲಿ ಬ್ಲಾಕ್ ಹೆಡ್ ಮತ್ತು ಕಲೆಗಳು ಕಡಿಮೆಯಾಗಲಿವೆ.
6. ಟಮೊಟೋ ಜ್ಯೂಸ್ ತಯಾರಿಸಿಕೊಂಡು ಅದಕ್ಕೆ ಮಲ್ತಾನಿಮಿಟ್ಟಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಅದನ್ನು ಚರ್ಮಕ್ಕೆ ಹಚ್ಚುವುದರಿಂದ ಮುಖದಲ್ಲಿ ಡೆಡ್ ಸೆಲ್ಸ್ಗಳು ಕಡಿಮೆಯಾಗಿ ಮುಖ ಸ್ವಚ್ಛವಾಗಲಿದೆ.
7 ಆಹಿಟ್ಟು, ಹಾಲು, ಅರಿಶಿನವನ್ನು ಚೆನ್ನಾಗಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚುವುದರಿಂದ ಮುಖದ ಬಣ್ಣ ತಿಳಿಯಾಗಲಿದೆ.
ಕೊಳ್ಳೇಗಾಲ: ಹಣ ದ್ವಿಗುಣಗೊಳಿಸಿಕೊಡುವುದಾಗಿ ಆಮಿಷ ಒಡ್ಡಿ, ಒಟ್ಟು ೨೮.೮೮ ಲಕ್ಷ ರೂ.ಗಳನ್ನು ವಂಚಿಸಿರುವ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಮಮತಾ…
ಯಳಂದೂರು:ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿರುವ ಸುವರ್ಣಾವತಿ ನದಿ ದಡಲ್ಲಿರುವ ಐತಿಹಾಸಿಕ ಚಾಮುಂಡೇಶ್ವರಿ ದೇಗುದಲ್ಲಿ ಗುರುವಾರ ರಾತ್ರಿ ಕಳ್ಳತನ ನಡೆದಿದ್ದು, ಲಕ್ಷಾಂತರ ರೂ.…
ನವದೆಹಲಿ: ದೇಶಾದ್ಯಂತ ಇಂಡಿಗೋ ವಿಮಾನದ ಹಾರಾಟದಲ್ಲಿ ಭಾರೀ ವ್ಯತ್ಯಯ ಉಂಟಾದ ಬೆನ್ನಲ್ಲೇ ಕೇಂದ್ರ ನಾಗರಿಕ ವಿಮಾನಯಾನ ನಿರ್ದೇಶನಾಲಯ ಪೈಲಟ್‌ಗಳ ರಜಾ…
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆಯಾಗಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ…
ನವದೆಹಲಿ: ಕಾಲಾತೀತ, ಮೌಲ್ಯಾಧರಿತ ಆದರ್ಶಗಳನ್ನು ಒಳಗೊಂಡಿರುವ ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು…
ನಂಜನಗೂಡು: ಸೋಲು, ಗೆಲುವಿಗಿಂತ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ಹೇಳಿದರು. ನಂಜನಗೂಡು ನಗರದ ಕಾಲೇಜೊಂದರಲ್ಲಿ ಆಯೋಜಿಸಿದ್ದ…