ಮಹಿಳೆ ಸಬಲೆ

ಮಹಿಳೆಯಲ್ಲಿ ಕ್ಯಾಲ್ಸಿಯಂ ಕೊರತೆ

ಡಾ.ಚೈತ್ರ ಸುಖೇಶ್

ಸಾಮಾನ್ಯವಾಗಿ ಮಹಿಳೆಯಲ್ಲಿ ಋತುಬಂಧದ ಸಮಯ ಮತ್ತು ನಂತರ ಕ್ಯಾಲ್ಸಿಯಂ ಕೊರತೆಯ ಸಮಸ್ಯೆ ಉಂಟಾಗುತ್ತದೆ. ಕ್ಯಾಲ್ಸಿಯಂನ ಕೊರತೆಯಿಂದ ಮೂಳೆ ಸವೆತ ಮತ್ತು ಮೂಳೆ ಸಾಂದ್ರತೆಯ ಸಮಸ್ಯೆಗಳು ಉಂಟಾಗುತ್ತವೆ. ಇವುಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಮಹಿಳೆಯರು ಪ್ರತಿನಿತ್ಯ 1000ಎಂಜಿಯಿಂದ 1200 ಎಂಜಿಗಳಷ್ಟು ಕ್ಯಾಲ್ಸಿಯಂ ಅನ್ನು ಸೇವಿಸುವುದು ಅತ್ಯಗತ್ಯವಾಗಿರುತ್ತದೆ.

ನಮ್ಮ ದೇಹದಲ್ಲಿ ಕ್ಯಾಲ್ಸಿಯಂ ಅಂಶ ಹೆಚ್ಚಾದಷ್ಟು ಮೊಳೆಗಳ ಬೆಳವಣೆಗೆಯೂ ಉತ್ತಮವಾಗಿರುತ್ತದೆ. ಇದಕ್ಕಾಗಿ ನಾವು ಕೆಲ ಆಹಾರ ಪದಾರ್ಥಗಳನ್ನು ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.

ಹಸುವಿನ ಹಾಲು, ಮಜ್ಜಿಗೆ, ತುಪ್ಪಗಳ ಸೇವನೆಯ ಜತೆಗೆ ಒಣಹಣ್ಣುಗಳಾದ ಅಂಜೂರ, ಖರ್ಜೂರ, ಬಾದಾಮಿ ಜತೆಗೆ ಬೆಂಡೆಕಾಯಿ, ನೆಲ್ಲಿಕಾಯಿ, ನುಗ್ಗೆಸೊಪ್ಪ, ಬಸಳೆ ಸೊಪ್ಪುಗಳನ್ನೂ ಹೆಚ್ಚಾಗಿ ಸೇವಿಸಬೇಕು. ಇದರೊಂದಿಗೆ ಎಲೆಕೋಸು, ಗೆಡ್ಡೆಕೊಸು ಮತ್ತು ಎಲ್ಲ ಹಸಿರು ಸೊಪ್ಪುಗಳು, ಸೋಯಾ ಬೀನ್ಸ್, ಕಿಡ್ನಿ ಬೀನ್ಸ್, ಅಗಸೇ ಜೀಜಗಳ ಸೇವನೆಯಿಂದ ನಮ್ಮ ದೇಹದಲ್ಲಿ ಕ್ಯಾಲ್ಸಿಯಂ ಅಂಶವನ್ನು ವೃದ್ಧಿಸಿಕೊಳ್ಳಬಹುದು.

ವಿಟಮಿನ್ ‘ಡಿ’ಯು ನಮ್ಮ ದೇಹ ಹೆಚ್ಚು ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಮೂಳೆಗಳ ಬೆಳವಣಿಗೆಗೂ ಉತ್ತಮವಾಗಿದೆ. “ವಿಟಮಿನ್ ಡಿ’ ಪ್ರಮುಖ ವಾಗಿ ಸೂರ್ಯನ ಶಾಖ, ಮೀನು ಹಾಗೂ ಮೀನಿನ ಎಣ್ಣೆಯಿಂದ ಸಿಗಲಿದೆ. ಆದ್ದರಿಂದ ದಿನದ ಸ್ವಲ್ಪ ಸಮಯವಾದರೂ ಸೂರ್ಯನ ಎಳೆ ಬಿಸಿಲಿಗೆ ದೇಹವನ್ನು ಒಡ್ಡಿಕೊಳ್ಳಬೇಕು. ಇದರೊಂದಿಗೆ ನಿಯಮಿತವಾದ ವ್ಯಾಯಾಮ, ಯೋಗ ಮೂಳೆಯ ಸಾಂದ್ರತೆಯ ನಷ್ಟವನ್ನು ತಡೆಯಲು
ಸಹಾಯ ಮಾಡುತ್ತದೆ. ಅಲ್ಲದೆ 7ರಿಂದ 8 ಗಂಟೆಗಳ ನಿದ್ದೆ ಆರೋಗ್ಯಕ್ಕೆ ಒಳ್ಳೆಯದು.

ಇವುಗಳ ಸೇವನೆ ಬಿಡಬೇಕು

ದೇಹದಲ್ಲಿ ಕ್ಯಾಲ್ಸಿಯಂ ಅಂಶ ಹೆಚ್ಚಾಗಬೇಕು ಎಂದರೆ ನಾವು ಅತಿಯಾದ ಕೆಫೀನ್, ಸೀಡಾಗಳು ಹಾಗೂ ಪ್ಯಾಕೇಜ್ ಆಹಾರ ಪದಾರ್ಥಗಳನ್ನು ತಿನ್ನುವುದನ್ನು ಬಿಡಬೇಕು. ಜತೆಗೆ ಧೂಮಪಾನ, ಮದ್ಯಪಾನ, ಅತಿಯಾದ ಉಪ್ಪುಗಳನ್ನು ಸೇವನೆ ಮಾಡುವುದರಿಂದ ದೇಹದಲ್ಲಿ ಹಾಗೂ ಮೂಳೆಗಳಿಂದ ಕ್ಯಾಲ್ಸಿಯಂ ಹೆಚ್ಚಿನ ಪ್ರಮಾಣದಲ್ಲಿ ಹೊರಹೋಗುತ್ತದೆ. ನಿಧಾನವಾಗಿ ಇದರಿಂದ ಮೂಳೆ ಮತ್ತು ಕೀಲುಗಳ ನೋವು, ಊತ ಮುಂತಾದ ಸಮಸ್ಯೆಗಳು ಉಂಟಾಗುತ್ತವೆ.

ಕೊರತೆಗೆ ಕಾರಣಗಳು

1. ಹಸಿವಾದಾಗ ಆಹಾರವನ್ನು ಸೇವಿಸದೇ ಇರುವುದು ಜತೆಗೆ ಅತೀ ಕಡಿಮೆ ಆಹಾರ ಸೇವಿಸುವುದು ಮೂಳೆಗಳ ಬೆಳವಣಿಗೆಗೆ ಬೇಕಾದ ಕ್ಯಾಲ್ಸಿಯಂ ಮತ್ತು ಇತರೆ ಪೋಷಕಾಂಶಗಳನ್ನು ಕಡಿಮೆ ಮಾಡುತ್ತದೆ.

2. ತೂಕವನ್ನು ಕಡಿಮೆ ಮಾಡಿಕೊಳ್ಳುವ ಭರದಲ್ಲಿ ಕ್ರಮಬದ್ಧವಲ್ಲದ ಆಹಾರಕ್ರಮ, ವ್ಯಾಯಾಮದ ವಿಧಾನಗಳನ್ನು ಅಳವಡಿಸಿಕೊಳ್ಳುವುದರಿಂದ ಕ್ಯಾಲ್ಸಿಯಂ ಪ್ರಮಾಣ ಕಡಿಮೆಯಾಗಲಿದೆ.

3. ಜಿಡ್ಡು ಅಥವಾ ಜಿಡ್ಡಿನಂಶವು ಹೃದಯಕ್ಕೆ ತೊಂದರೆ ಎಂಬ ಭ್ರಮಯಲ್ಲಿ ಸಂಪೂರ್ಣ ಜಿಡ್ಡನ್ನು ತ್ಯಜಿಸುತ್ತಾರೆ. ಇದರಿಂದ ಮೂಳೆ ಮತ್ತು ಸಂಧಿಗಳ ಚಲನೆಯಲ್ಲಿ ಕುಂಠಿಯವಾಗಿ, ಕ್ಯಾಲ್ಸಿಯಂ ಕೊರತೆ ಹೆಚ್ಚಾಗುತ್ತದೆ. ಇದರಿಂದ ಮೂಳೆ ನೋವು ಕಾಣಿಸಿಕೊಳ್ಳುತ್ತದೆ.

4. ಅತಿ ಕಡಿಮೆ ನಿದ್ದೆ, ಹಗಲಿನಲ್ಲಿ ಅತಿಯಾದ ನಿದ್ದೆ, ರಾತ್ರಿ ಕೆಲಸ ಇವೆಲ್ಲವೂ ವಾತದೋಷವನ್ನು ಪ್ರಕೋಪಿಸಿ ದೇಹದಲ್ಲಿ ಪೋಷಕಾಂಶಗಳು ಸರಿಯಾಗಿ ಹೀರಿಕೊಳ್ಳದಂತೆ ತಡೆಯುತ್ತವೆ.

ಇದಕ್ಕೆ ಪರಿಹಾರಗಳೇನು?

1. ದೇಶದಲ್ಲಿ ಕ್ಯಾಲ್ಸಿಯಂ ಅಂಶವನ್ನು ವೃದ್ಧಿಸಿಕೊಳ್ಳಲು ಶತಾವರಿಪುಡಿ, ಅಶ್ವಗಂಧದ ಪುಡಿ, ಅರಿಶಿನ, ಶುದ್ಧ ಗಗ್ಗುಲು ಅಶೋಕ ಚೂರ್ಣ, ಗಿಡ ಮೂಲಿಕೆಗಳನ್ನು ನಿತ್ಯದ ಆಹಾರದಲ್ಲಿ ಸೇವಿಸಿಕೊಳ್ಳಬೇಕು.

2. ಪ್ರತಿದಿನ ಮುಂಜಾನೆ ಒಂದು ಲೋಟ ನೀರಿಗೆ 1 ಸ್ಪೂನ್ ನಷ್ಟು ಎಳ್ಳನ್ನು ಸೇರಿಸಿ ಸೇವಿಸಬೇಕು.

3. ಹರಳೆಣ್ಣೆ, ಕೊಬ್ಬರಿಎಣ್ಣೆಗೆ ಜಮ ಅಥವಾ ಜೀರಿಗೆಯನ್ನು ಸೇರಿಸಿ ಕುದಿಸಿ, ಸಂಧಿಗಳಿಗೆ ನಿತ್ಯ ಅಭ್ಯಂಗ ಮಾಡಬೇಕು.

4. ಇದರಿಂದ ಮೂಳೆ ನೋವು ದೇಹದ ತೂಕ ಹೆಚ್ಚಾಗದಂತೆ ನೋಡಿಕೊಳ್ಳಬೇಕು.

5. ಆಯುರ್ವೇದ ಮೆಡಿಕಲ್‌ಗಳಲ್ಲಿ ಸಿಗುವ ಬಲಾಅಶ್ವಗಂಧ ತೈಲ, ಕ್ಷೀರ ಬಲಾ ತೈಲಗಳ ನಿತ್ಯ ಅಭ್ಯಂಗದಿಂದಲೂ ಕ್ಯಾಲ್ಸಿಯಂ ಕೊರತೆ ಕಡಿಮೆಗೊಳಿಸಿ ಮೂಳೆಗಳ ಸದೃಢತೆಯನ್ನು ಹೆಚ್ಚಿಸಿಕೊಳ್ಳಬಹುದು.

andolana

Recent Posts

ಚಾಮರಾಜನಗರದಲ್ಲಿ ಮತ್ತೊಂದು ಹುಲಿ ಸೆರೆ

ಚಾಮರಾಜನಗರ: ಚಾಮರಾಜನಗರ ತಾಲ್ಲೂಕಿನ ಕಲ್ಪುರ ಭಾಗದಲ್ಲಿ ಸಂಚಾರ ಮಾಡುತ್ತಿದ್ದ ಮತ್ತೊಂದು ಹುಲಿಯನ್ನು ಅರವಳಿಕೆ ಚುಚ್ಚುಮದ್ದು ನೀಡಿ ಸೆರೆ ಹಿಡಿಯಲಾಗಿದೆ. ಕಳೆದ…

6 mins ago

ಓದುಗರ ಪತ್ರ: ಇಸ್ಕಾನ್ ಕೃಷ್ಣ ದೇವಾಲಯದ ಬಳಿಯಿದ್ದ ಕಸ ತೆರವು

ಮೈಸೂರಿನ ಜಯನಗರದಲ್ಲಿರುವ ಇಸ್ಕಾನ್ ದೇವಾಲಯದ ಪಕ್ಕದಲ್ಲಿದ್ದ ಕಸದ ರಾಶಿಯನ್ನು ಮೈಸೂರು ಮಹಾನಗರಪಾಲಿಕೆಯಿಂದ ಮಂಗಳವಾರ ತೆರವುಗೊಳಿಸಲಾಗಿದೆ. ಆಂದೋಲನ ದಿನಪತ್ರಿಕೆಯ ಓದುಗರ ಪತ್ರ…

3 hours ago

ಓದುಗರ ಪತ್ರ: ಪ್ರಮುಖ ವೃತ್ತಗಳಲ್ಲಿ ಭಿಕ್ಷುಕರ ಹಾವಳಿ ನಿಯಂತ್ರಿಸಿ

ಮೈಸೂರಿನ ಪ್ರಮುಖ ವೃತ್ತಗಳಾದ ಸಿದ್ದಪ್ಪ ಸ್ಕ್ವೇರ್, ಸಂಸ್ಕೃತ ಪಾಠಶಾಲೆ, ವಿ.ವಿ.ಪುರಂ, ತಾತಯ್ಯ ವೃತ್ತ ಮೊದಲಾದ ಕಡೆಗಳಲ್ಲಿ ಭಿಕ್ಷುಕರು, ಅಂಗವಿಕಲರು ಪ್ರತಿನಿತ್ಯ…

3 hours ago

ಓದುಗರ ಪತ್ರ: ರಸ್ತೆಗೆ ಡಾಂಬರೀಕರಣ ಮಾಡಿ, ಯುಜಿಡಿ ಪೈಪ್ ಬದಲಿಸಿ

ಮೈಸೂರಿನ ವೀಣೆ ಶಾಮಣ್ಣ ರಸ್ತೆ ಅವ್ಯವಸ್ಥೆಯ ಆಗರವಾಗಿದೆ. ಒಳಚರಂಡಿ ನೀರು ರಸ್ತೆಯ ಮೇಲೆ ಹರಿಯುತ್ತಿದ್ದು, ಪ್ರತಿದಿನವೂ ನಿವಾಸಿಗಳು ಹೊಲಸು ನೀರನ್ನು…

3 hours ago

ಓದುಗರ ಪತ್ರ: ಹೊಸ ವರ್ಷದ ಸಂಕಲ್ಪ

ಹೊಸ ವರ್ಷದ ಆಗಮನವೆಂದರೆ ಬಣ್ಣಬಣ್ಣದ ದೀಪಗಳ ಅಲಂಕಾರ, ಸಿಹಿ ವಿತರಣೆ ಅಥವಾ ಮಧ್ಯರಾತ್ರಿಯ ಸಂಭ್ರಮಾಚರಣೆಯಷ್ಟೇ ಅಲ್ಲ. ಅದು ಕಾಲ ಚಕ್ರದ…

3 hours ago

ಪಂಜುಗಂಗೊಳ್ಳಿ ಅವರ ವಾರದ ಅಂಕಣ: ಎಚ್‌ಐವಿ ಮಕ್ಕಳಿಗಾಗಿ ಉದ್ಯೋಗ ಬಿಟ್ಟ ದತ್ತಾ-ಸಂಧ್ಯಾ ದಂಪತಿ

ಪಂಜುಗಂಗೊಳ್ಳಿ  ಸಮಾಜದಿಂದ ಪರಿತ್ಯಕ್ತರಾದ ಮಕ್ಕಳ ಬಾಳಲ್ಲಿ ಬೆಳಕು ಮೂಡಿಸಿದ ಆನಂದ ಗ್ರಾಮ ಮಹಾರಾಷ್ಟ್ರದ ಬೀಡ್‌ನ ಜಿಲ್ಲಾ ಆಸ್ಪತ್ರೆಯ ರಕ್ತದ ಬ್ಯಾಂಕಿನಲ್ಲಿ…

3 hours ago