ಚಿತ್ರ ವೆಂಕಟರಾಜು
ಚಿತ್ರರಂಗದಲ್ಲಿ ನಿರ್ದೇಶಕಿಯರು ಬಹಳ ಅಪರೂಪ ಅದರಲ್ಲೂ ಕನ್ನಡ ಚಿತ್ರರಂಗದಲ್ಲಂತೂ ಬೆರಳೆಣಿಕೆಯಷ್ಟು ಮಹಿಳೆಯರು ಚಿತ್ರ ನಿರ್ದೇಶನ ಮಾಡಿದ್ದಾರೆ, ಮಾಡುತ್ತಿದ್ದಾರೆ.
ಪ್ರೇಮಾ ಕಾರಂತ್, ರೂಪಾ ಅಯ್ಯರ್, ಸುಮನಾ ಕಿತ್ತೂರು, ವಿಜಯಲಕ್ಷ್ಮಿ ಸಿಂಗ್, ಚಂಪಾ ಶೆಟ್ಟಿ ಹೀಗೆ ಕೆಲವೊಂದಿಷ್ಟು ಮಹಿಳೆಯರು ಮಾತ್ರ ಸಿನಿಮಾ ನಿರ್ದೇಶನಕ್ಕೆ ತೊಡಗಿ ಯಶಸ್ವಿಯೂ ಆಗಿದ್ದಾರೆ. ನಟನೆ ಹಾಗೂ ನಿರ್ದೇಶನ ಎರಡರಲ್ಲೂ ತಮ್ಮದೇ ಛಾಪನ್ನು ಮೂಡಿಸುತ್ತಿದ್ದು, ಅದೇ ಹಾದಿಯಲ್ಲಿ ಸಾಗುತ್ತಿರುವ, ಕನ್ನಡದಲ್ಲಿ ನಟಿಯಾಗಿ ಗುರುತಿಸಿಕೊಂಡಿರುವ ಅಪೂರ್ವ ಭಾರದ್ವಾಜ್ ಕೂಡ ಈಗ ನಿರ್ದೇಶನವರನ್ನು ಮಾಡಿದ್ದಾರೆ.
‘ಮಿರ್ಚಿ ಮಂಡಕ್ಕಿ ಕಡಕ್ ಜಾಯ್’, ‘ಉಪ್ಪಿನ ಕಾಗದ’, “ನೋಡಿ ಸ್ವಾಮಿ ಇವನು ಇರೋದೆ ಹೀಗೆ ಸಿನಿಮಾಗಳಲ್ಲಿ ನಟಿಸಿದ್ದ ಅವೂರ್ವ ಭಾರದ್ವಾಜ್, ಇತ್ತೀಚೆಗೆ ತೆರೆ ಕಂಡ ‘ಬಿಟಿಎಸ್’ ಎಂಬ 5 ಕಿರುಚಿತ್ರಗಳ ಪೈಕಿ ಕನ್ನಡದಲ್ಲಿ ‘ಸುಮೋಹ’ ಎಂಬ ಕಿರುಚಿತ್ರವನ್ನು ಅಪೂರ್ವ ನಿದೇರ್ಶಿಸಿದ್ದಾರೆ.
ಸಿನಿಮಾಗಳಿಂದ ಪ್ರಭಾವಿತಗೊಂಡ ಪಾತ್ರಗಳ ಬದುಕನ್ನು “ಬಿಟಿಎಸ್’ನ ಐದೂ ಕಿರುಚಿತ್ರಗಳು ತೆರೆದಿಡುವ ಪ್ರಯತ್ನ ಮಾಡಿದ. ಇದರ ಶೂನೆಯ ಕಿರುಚಿತ್ರವೇ ‘ಸುಮೋಹ’ ಆಗಿದ್ದು, ಇದನ್ನು ಅಪೂರ್ವ ಭಾರದ್ವಾಜ್ ನಿರ್ದೇಶನ ಮಾಡಿದ್ದಾರೆ.
ಸಿನಿಮಾ ಎನ್ನುವುದು ಮಾಯಾಲೋಕ. ಅದರ ಸೆಳೆತಕ್ಕೆ ಒಳಗಾಗದವರೇ ಇಲ್ಲ, ತೆರೆಯ ಮೇಲೆ ಬರುವ ನಟರು ನಮ್ಮನ್ನು ಸೆಳೆಯುತ್ತಾರೆ, ಜನರು ಅವರನ್ನು ಆರಾಧಿಸುತ್ತಾರೆ, ಆದರೆ, ಚಿತ್ರವೊಂದರ ತಯಾರಿಯಲ್ಲಿ ನೂರಾರು ಜನ ದುಡಿದಿರುತ್ತಾರೆ. ಅವರೆಲ್ಲ ತೆರೆಯ ಹಿಂದೆಯೇ ಉಳಿದುಬಿಡುತ್ತಾರೆ. ಸಿನಿಮಾ ಒಂದು ಕತೆಯಾದರೆ ಅದರ ಸೆಳೆತಕ್ಕೆ ಒಳಗಾಗಿ ತಮ್ಮ ಊರುಗಳನ್ನು ಬಿಟ್ಟು ಬಂದಂತಹವರದ್ದು ಬೇರೆಯೇ ಕತೆ. ಸಿನಿಮಾ ಉದ್ಯಮವನ್ನೇ ನಂಬಿಕೊಂಡು ಬಂದಿರುವ ಸಾವಿರಾರು ಕಲಾವಿದರದ್ದು ಬೇರೆಯೇ ಕತೆ. ಅವರು ಪರದೆಯ ಮೇಲೆ ಕಾಣುವುದಿಲ್ಲ. ರೋಲಿಂಗ್ ಕ್ರೆಡಿಟ್ಸ್‌ನಲ್ಲಿ ಸಣ್ಣದಾಗಿ ಕಂಡೂ ಕಾಣದಂತೆ ಅವರ ಹೆಸರು ಬಂದಿರುತ್ತದೆ. ಅಂತಹ ಮೇಕಪ್ ಟಚಪ್ ಮಾಡುವ ವ್ಯಕ್ತಿಯ ಕತೆಯೇ ‘ಸುಮೋಹ’.
ಮದುವೆಯ ಮೊದಲ ರಾತ್ರಿ ಗಂಡ ತನ್ನ ಹೆಂಡತಿಗೆ ಶೂಟಿಂಗ್‌ನ ಫೋಟೋಗಳನ್ನು ತೋರಿಸುವ ದೃಶ್ಯದಿಂದ ಕಿರುಚಿತ್ರ ಆರಂಭವಾಗುತ್ತದೆ. ಹೆಂಡತಿ ಸುಶ್ಮಿತಾಗೆ ಸಿನಿಮಾ ಒಂದು ಭ್ರಾಮಕ ಜಗತ್ತಾದರೆ, ಅಲ್ಲಿ ಹೀರೋನ ‘ಟಚಪ್’ ಆರ್ಟಿಸ್ಟ್ ಮೋನಿಗೆ ಉಳಿದ ಕೆಲಸಗಳಂತೆ ಸಿನೆಮಾ ಕೂಡ ಒಂದು.
ಸುಶ್ಮಿತಾಗೆ ಮದುವೆಯ ಮೊದಮೊದಲು ಖುಷಿ ಕೊಡುತ್ತಿದ್ದ ಶೂಟಿಂಗ್ ಎನ್ನುವ ಪದ ಬರಬರುತ್ತಾ ಬೇಸರ ತರಿಸುತ್ತದೆ. ಒಮ್ಮೆಯಾದರೂ ಶೂಟಿಂಗ್ ನೋಡಬೇಕು ಅನ್ನುವ ಅವಳ ಆಸೆಯನ್ನು ಗಂಡ ಮುಂದೂಡುತ್ತಲೇ ಇರುತ್ತಾನೆ. ಸಿನಿಮಾ ಎಂಬ ಭ್ರಾಮಕ ಜಗತ್ತಿಗೂ ಅದು ತಯಾರಾಗುವಾಗ, ಇರುವ ವಾಸ್ತವಕ್ಕೂ ಸಂಬಂಧವೇ ಇಲ್ಲ ಎನ್ನುವುದು ಅವನಿಗೆ ಗೊತ್ತು. ಆದರೆ ಅದನ್ನು ಹೆಂಡತಿಗೆ ವಿವರಿಸಲಾರ. ಈ ಎಲ್ಲ ತೊಳಲಾಟಗಳನ್ನು ಸಿನಿಮಾದಲ್ಲಿ ಮನಸ್ಸಿಗೆ ತಾಕುವಂತೆ ಹೇಳಿದ್ದಾರೆ.
ಸಿನಿಮಾ ಸೆಟ್‌ನಿಂದ ತಂದ ಮೇಕಪ್ ಕಿಟ್ ನಿಂದ ಹೆಂಡತಿಗೆ ಮೇಕಪ್ ಮಾಡಿ ಅವರಿಬ್ಬರೂ ಸಂತಸ ಪಡುವ ದೃಶ್ಯ, ಸಿನಿಮಾ ಹೀರೋಯಿನ್‌ಗಾಗಿ ಗೋಡಂಬಿ ಹಾಕಿ ಮಾಡಿದ ತಿಂಡಿ, ಹೀಗ ಕೆಳ ಮಧ್ಯಮವರ್ಗದ ಸಣ್ಣ ಸಣ್ಣ ವಿಷಯಗಳೇ ಚಿತ್ರವನ್ನು ಜೀವಂತವಾಗಿರಿಸಿವೆ. ಕೆಳಮಧ್ಯಮ ವರ್ಗದ ಮನೆ, ಎಲೆಕ್ಟ್ರಿಕ್ ಸ್ಟೌವ್, ಕೆಟ್ಟು ಹೋಗುವ ಟಿ.ವಿ ಇಂತಹ ಸಣ್ಣ ಸಣ್ಣ ವಿಚಾರಗಳು ಸಿನಿಮಾವನ್ನು ಹೆಚ್ಚು ಆಪ್ತವಾಗಿಸುತ್ತವೆ.
ತಮ್ಮ ಮೊದಲ ಚಿತ್ರದಲ್ಲೇ ಪಾತ್ರಗಳಿಗೆ ಜೀವ ತುಂಬುವಲ್ಲಿ ನಿರ್ದೇಶಕಿ ಗೆದ್ದಿದ್ದಾರೆ. ಇವರಿಂದ ಇನ್ನೂ ಹೆಚ್ಚಿನ ಸಿನೆಮಾಗಳು ಬಂದರೆ ಹೊಸ ರೀತಿಯ ಕತೆಗಳನ್ನು ತೆರೆಯ ಮೇಲೆ ಕಾಣಬಹುದು. ನಿರ್ದೇಶಕಿಯಾಗಬೇಕು ಎಂದು ಕನಸು ಕಾಣುವ ಅದೆಷ್ಟೋ ಮಹಿಳೆಯರಿಗೆ ಸ್ಫೂರ್ತಿಯೂ ಆಗುತ್ತದೆ.
ಬೆಂಗಳೂರು: ಪ್ರಸಕ್ತ ವರ್ಷದಲ್ಲಿ ಚಳಿ ತುಂಬಾ ಜಾಸ್ತಿಯಿದ್ದು, ಶೀತಗಾಳಿ ಹೆಚ್ಚಾಗಲು ಕರಾವಳಿ ತೀರ ಪ್ರದೇಶದಲ್ಲಾದ ವಾತಾವರಣ ಬದಲಾವಣೆ ಕಾರಣ ಎಂದು…
ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ನಡೆಯುತ್ತಿರುವ 87ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರ ವಿತರಣೆ ಮಾಡಿರುವ ವಿಚಾರ ಭಾರೀ ವಿವಾದಕ್ಕೆ…
ಕುವೈತ್/ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಕಾಲ ಕುವೈತ್ ಪ್ರವಾಸದಲ್ಲಿದ್ದು, ಇಲ್ಲಿನ ರಾಜ ಶೇಕ್ ಮಿಶಾಲ್ ಅಲ್…
ಕಲಬುರ್ಗಿ: ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಒತ್ತು ನೀಡುತ್ತಿದ್ದು, 371 ಜೆ ಜಾರಿಯಾದ ದಶಮಾನೋತ್ಸವದ ಪ್ರಯುಕ್ತ 371 ಹಾಸಿಗೆಗಳ…
ಬೆಂಗಳೂರು: ವಿಧಾನ ಪರಿಷತ್ ಶಾಸಕ ಸಿ.ಟಿ.ರವಿ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೀಡಿರುವ ಹೇಳಿಕೆ ಅಮಿತ್…
ಮಂಡ್ಯ: ಹೆಣ್ಣು ಕಾನೂನು ಅರಿತಕೊಂಡಾಗಷ್ಟೇ, ಹೆಣ್ಣಿನ ಮೇಲಾಗುತ್ತಿರುವ ದೌರ್ಜನ್ಯ ಎದುರಿಸಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ…