ದಶಕದಿಂದೀಚೆಗೆ ಹುಲಿ ಪ್ರವಾಸೋದ್ಯಮ ಅತೀ ಹೆಚ್ಚು ಪ್ರವಾಸಿಗರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ದೇಶದ ಬಹುತೇಕ ಅರಣ್ಯಗಳು ಇಂದು ಪ್ರಮುಖ ಪ್ರವಾಸಿ ಕೇಂದ್ರಗಳಾಗಿದ್ದು, ಹುಲಿ ಪ್ರವಾಸೋದ್ಯಮವು ಆದಾಯದಾಯಕವಾಗಿ ಮುಂದುವರಿಯಲು ಸಹಾಯಕವಾಗಿದೆ.
ಇತ್ತೀಚೆಗೆ ಕನ್ನಡ ಸಿನಿ ರಂಗವೂ ಈ ವನ್ಯಜೀವಿ ಛಾಯಾಗ್ರಹಣದತ್ತ ವಿಶೇಷ ಆಸಕ್ತಿ ತೋರಲು ಮುಂದಾಗಿದೆ. ದೇಶದ ವಿವಿಧ ಕಾಡುಗಳಲ್ಲಿ ಸಫಾರಿಗಳ ಮೂಲಕ ತಮ್ಮ ಬಿಡುವಿನ ಸಮಯವನ್ನು ಕಾಡಿನಲ್ಲಿಯೇ ಕಳೆಯಲು ಇಚ್ಛಿಸುತ್ತಿದ್ದಾರೆ. ಅದರಲ್ಲಿಯೂ ನಟ ದರ್ಶನ್ ತೂಗುದೀಪ ಅವರಿಗಂತೂ ಕಾಡೆಂದರೆ ಎಲ್ಲಿಲ್ಲದ ಪ್ರೀತಿ.
ಇದೇ ಕುತೂಹಲ ಈಗ ಕಿರುತೆರೆ ನಟ-ನಟಿಯರಲ್ಲೂ ಉಂಟಾಗಿದೆ. ಕ್ಯಾಮೆರಾಗಳನ್ನು ಹಿಡಿದು ಕನ್ನಡ ಕಿರುತೆರೆಯ ನಟನಟಿಯರು ವನ್ಯಜೀವಿ ಛಾಯಾಗ್ರಹಣದ ಕಡೆ ಆಸಕ್ತಿ ತೋರಿರುವುದು ವಿಶೇಷವಾಗಿದೆ. ಅದರಲ್ಲಿಯೂ ಕನ್ನಡದ ಕಿರುತೆರೆ ನಟಿ ಇಶಿತ ವರ್ಷ ಅವರು ಕಳೆದ ಕೆಲ ತಿಂಗಳುಗಳಿಂದ ವನ್ಯಜೀವಿ ಛಾಯಾಗ್ರಹಣದತ್ತ ಒಲವು ತೋರಿದ್ದು, ಬಿಡುವಿನ ಸಮಯವನ್ನು ಕಾಡಿನಲ್ಲಿ ಸಾಫಾರಿ ಮಾಡುವ ಮೂಲಕ ಕಳೆಯುತ್ತಿದ್ದಾರೆ.
ಕನ್ನಡದ ಅಗ್ನಿಸಾಕ್ಷಿ ಧಾರಾವಾಹಿ ಹಾಗೂ ಕೆಲ ರಿಯಾಲಿಟಿ ಶೋಗಳ ಮೂಲಕ ಮನೆ ಮಾತಾಗಿರುವ ಇಶಿತ ವರ್ಷ, ದೇಶದ ಕಾಡು ಗಳಲ್ಲದೆ ವಿದೇಶದ ಅನೇಕ ಕಾಡುಗಳಲ್ಲಿ ಸಫಾರಿ ಮಾಡಿದ್ದಾರೆ. ಇತ್ತೀಚೆಗೆ ಆಂದೋಲನ ದಿನಪತ್ರಿಕೆ’ ಯ ವರದಿಗಾರ ಹಾಗೂ ವನ್ಯಜೀವಿ ಛಾಯಾಗ್ರಹಕ ಅನಿಲ್ ಅಂತರಸಂತೆ ಅವರೊಂದಿಗೆ ತಮ್ಮ ವನ್ಯಜೀವಿ ಛಾಯಾಗ್ರಹಣದ ವಿಶಿಷ್ಟ ಅನುಭವವನ್ನು ಹಂಚಿಕೊಂಡಿದ್ದಾರೆ.
ಚಿತ್ರೀಕರಣದ ನಡುವೆಯೂ ಹವ್ಯಾಸಿ ಫೋಟೋಗ್ರಾಫಿಯಲ್ಲಿ ತೊಡಗಿರುವ ಇಶಿತ ವರ್ಷ ನಾಗರಹೊಳೆಯ ಕಬಿನಿ, ಮಹಾರಾಷ್ಟ್ರದ ತಡೋಬಾ, ಮಧ್ಯಪ್ರದೇಶದ ಕಾನ್ವಾ, ಪೆಂಚ್ ಹುಲಿ ಸಂರಕ್ಷಿತ ಪ್ರದೇಶಗಳು ಸೇರಿದಂತೆ ದೇಶದ ವಿವಿಧ ಅರಣ್ಯಗಳು ಹಾಗೂ ಆಫ್ರಿಕಾದ ಕಾಡುಗಳಲ್ಲೂ ಸಫಾರಿಯನ್ನು ಮಾಡಿ ಅಲ್ಲಿನ ವನ್ಯಜೀವಿಗಳ ಚಿತ್ರಗಳನ್ನು ಸೆರೆ ಹಿಡಿದಿದ್ದಾರೆ.
ನಾನು ಈ ಹಿಂದೆ ಪ್ರಾಣಿಗಳನ್ನು ಮೃಗಾಲಯಗಳಲ್ಲಿ ನೋಡಿ ಖುಷಿಪಡುತ್ತಿದೆ. ಆದರೆ ಈಗ ವನ್ಯಜೀವಿ ಛಾಯಾಗ್ರಹಣದ ಮೆಂಟರ್ ಆಗಿರುವ ಡಾ.ಶಶಾಂಕ್ ಅವರೊಂದಿಗೆ ದೇಶದ ಅನೇಕ ಅರಣ್ಯಗಳಲ್ಲಿ ಸಫಾರಿ ಮಾಡಿದ್ದೇನೆ. ಮೃಗಾಲಯಗಳಿಗಿಂತ ಕಾಡಿನಲ್ಲಿ ಪ್ರಾಣಿಗಳು ಎಷ್ಟು ನೆಮ್ಮದಿಯಾಗಿ ಬದುಕುತ್ತವೆ ಎಂಬುದನ್ನು ನೋಡಿ ಸಂತಸವಾಯಿತು ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಅನೇಕ ಅರಣ್ಯಗಳನ್ನು ಸುತ್ತಿದ ಬಳಿಕ ಕರ್ನಾಟಕದ ದಟ್ಟಾರಣ್ಯಗಳು ನನಗೆ ಅದ್ಭುತವೆನಿಸಿವೆ. ಅದರಲ್ಲಿಯೂ ನಾಗರಹೊಳೆಯ ಕಬಿನಿ ಭಾಗ ನನಗೆ ಅತ್ಯಂತ ಹೆಚ್ಚು ಪ್ರಿಯವಾದ ಸ್ಥಳ. ಇಲ್ಲಿ ಸಾಕಷ್ಟು ಬಾರಿ ಹುಲಿಗಳನ್ನು ನೋಡಿದ್ದೇನೆ. ಅದರಲ್ಲಿಯೂ ಬ್ಯಾಕ್ ವಾಟರ್ ಹೆಣ್ಣು ಹುಲಿ ನನ್ನ ನೆಚ್ಚಿನದಾಗಿತ್ತು. ಹುಲಿಗಳ ಹಾವಭಾವ ಹೇಗಿರುತ್ತದೆ, ಜೀವನ ಕ್ರಮವೇನು, ಹುಲಿಯ ಪಟ್ಟೆಗಳಲ್ಲಿನ ವ್ಯತ್ಯಾಸಗಳನ್ನು ಅರಣ್ಯದಲ್ಲೇ ನೋಡಿ ಹುಲಿಗಳ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಬೇಕು ಅನಿಸಿದೆ. ಇದಲ್ಲದೆ ಬಿಡುವಿನ ವೇಳೆಯಲ್ಲಿ ಓದುವ ಹವ್ಯಾಸವೂ ಇದೆ ಎನ್ನುತ್ತಾರೆ.
ಈ ಬಾರಿ ಹುಲಿಗಳ ಸಂಖ್ಯೆಯೂ ಹೆಚ್ಚಾಗಿರುವುದು ಉತ್ತಮ ಬೆಳವಣಿಗೆ, ದೇಶದ ಅರಣ್ಯಗಳಲ್ಲಿ ಅವುಗಳಿಗಿರುವ ಪೂರಕ ವಾತಾವರಣ ಮತ್ತು ರಕ್ಷಣೆಯ ಫಲವಾಗಿ ಇಂದು ಹುಲಿಗಳ ಸಂಖ್ಯೆ ವೃದ್ಧಿಯಾಗುತ್ತಿದೆ. ಯುವಜನತೆ ಬೇರೆ ಯಾವುದೋ ಅಭ್ಯಾಸಗಳಿಗೆ ಅಡಿಕ್ಟ್ ಆಗುವ ಬದಲು ನಿಸರ್ಗಕ್ಕೆ, ಪ್ರಕೃತಿಗೆ ಅಡಿಕ್ಟ್ ಆಗುವುದು ಉತ್ತಮ ಹವ್ಯಾಸ ಎಂಬುದು ಇಶಿತ ವರ್ಷರವರ ಮನದಾಳದ ಮಾತು.
ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರಾಣಿಗಳಿಗೆ ಕುಡಿಯುವ ನೀರಿನ ಸಮಸ್ಯೆಗೆ ಈಗ ಬ್ರೇಕ್ ಹಾಕಲಾಗಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಅರಣ್ಯಾಧಿಕಾರಿಗಳು…
ಬೆಂಗಳೂರು: ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಜೀವ ರಕ್ಷಕ ಔಷಧಿಗಳ ಕೊರತೆಯಿರುವುದು ನಿಜ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.…
ಬೆಂಗಳೂರು: ಚಿನ್ನ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ನಟಿ ರನ್ಯಾರಾವ್ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದು, ಡಿಐಆರ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದೇಗೆ ಎಂಬ…
ಹಾಸನ: ಕೌಟುಂಬಿಕ ಕಲಹದಿಂದ ಬೇಸತ್ತು ತಾಯಿ-ಮಗ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಕಬ್ಬಳ್ಳಿ…
ಬೆಂಗಳೂರು: ಗ್ರೇಟರ್ ಬೆಂಗಳೂರು ವಿಧೇಯಕಕ್ಕೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸಂಪೂರ್ಣ ವಿರೋಧ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಈ…
ಸಮತೋಲನದ ಬಜೆಟ್!... ಮೂಡಿ ಬಂದಿದೆ ಸರ್ವರ ಹಿತ ಏಳ್ಗೆಯ ಕರ್ನಾಟಕದ ಮಾದರಿ ಜನಪರ ಬಜೆಟ್! ಮುಖ್ಯಮಂತ್ರಿಗಳ ಅನುಭವದ ಮೂಸೆಯಲಿ ಸುಸ್ಥಿರ…