ಮೈಸೂರು ಲಿಟರೇಚರ್ ಫೆಸ್ಟಿವಲ್ ೨೦೧೭ರಿಂದ ಆರಂಭವಾಗಿ ಜೈಪುರ, ಹೈದರಾಬಾದ್, ಬೆಂಗಳೂರಿನಲ್ಲಿ ನಡೆಯುವ ಲಿಟರೇಚರ್ ಫೆಸ್ಟಿವಲ್‌ಗಳಿಗೆ ಸಮಾನವಾಗಿ ಮುನ್ನಡೆಯುತ್ತಿದೆ. ಆ ಮೂಲಕ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗುತ್ತಿದೆ.
ಮೈಸೂರು ಸೀಮೆ ಸಾಹಿತ್ಯದ ತವರು. ಇಲ್ಲಿನ ಜನ, ಮನದಲ್ಲಿ ಸಾಹಿತ್ಯ ಸದಾ ಜೀವಂತವಾಗಿ ಹರಿಯುತ್ತಲೇ ಇದೆ. ಆಡು ಮಾತಿಗೂ ಚೆಂದದ ಚೌಕಟ್ಟು ನಿರ್ಮಿಸಿ ಅದಕ್ಕೊಂದು ಸೊಬಗು ತಂದುಕೊಡುವ ಛಾತಿ ಈ ಮಣ್ಣಿಗೆ ಇದೆ. ಇದಕ್ಕೆ ಇಲ್ಲಿನ ಜಾನಪದ, ಸಾಹಿತಿಗಳ ಸಂಖ್ಯೆ, ಸಾಹಿತ್ಯದ ಒಟ್ಟು ಮೊತ್ತವೇ ಸಾಕ್ಷಿ. ಇಲ್ಲಿ ನಡೆಯುವ ಸಾಹಿತ್ಯ ಸಂಬಂಧಿ ಚರ್ಚೆ, ಸಂವಾದ, ಏರ್ಪಡುವ ಕಾರ್ಯಕ್ರಮಗಳ ಬಗ್ಗೆ ಲೆಕ್ಕ ಇಡಲು ಅಸಾಧ್ಯ. ಆದರೂ ಗಮನಾರ್ಹವಾಗಿ, ನಿರಂತರವಾಗಿ ನಡೆಯುವ ಕಾರ್ಯಕ್ರಮಗಳು ಅನೇಕ. ಅವುಗಳಲ್ಲಿ ‘ಮೈಸೂರು ಲಿಟರೇಚರ್ ಫೆಸ್ಟಿವಲ್’ ಕೂಡ ಒಂದು.
ಮೈಸೂರು ಲಿಟರೇಚರ್ ಫೋರಂ ಚಾರಿಟಬಲ್ ಟ್ರಸ್ಟ್, ಮೈಸೂರು ಬುಕ್ ಕ್ಲಬ್ಸ್ ವತಿಯಿಂದ ಇಂದು, ನಾಳೆ (ಜು.೨೩, ೨೪) ಹೋಟೆಲ್ ಸದರನ್ ಸ್ಟಾರ್‌ನಲ್ಲಿ ಆಯೋಜನೆ ಮಾಡಿರುವ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಸಂಘಟಿಸಿದ್ದಾರೆ ಟ್ರಸ್ಟ್ ಸ್ಥಾಪಕಿ ಶುಭಾ ಸಂಜಯ್ ಅರಸ್.
೨೦೧೭ರಲ್ಲಿ ಆರಂಭವಾಗಿ ಮೂರು ವರ್ಷಗಳ ಕಾಲ ಆಫ್‌ಲೈನ್‌ನಲ್ಲಿ ನಡೆದ ಸಾಹಿತ್ಯ ಸಂಭ್ರಮ ೨೦೨೦,೨೧ರಲ್ಲಿ ಕೋವಿಡ್ ಕಾರಣದಿಂದ ಆನ್‌ಲೈನ್‌ಗೆ ಸೀಮಿತವಾಗಿತ್ತು. ಆದರೆ ಈಗ ರಾಷ್ಟ್ರ ಮಟ್ಟದ ಸಾಹಿತಿಗಳು, ಹಲವಾರು ಅಂಶಗಳನ್ನು ಒಳಗೊಂಡು ನಡೆಯುತ್ತಿದ್ದು, ಈ ಬಗ್ಗೆ ಶುಭಾ ಸಂಜಯ್ ಅರಸ್ ಅವರು ಹೇಳುವುದು ಹೀಗೆ.
‘ಮೈಸೂರಿನಲ್ಲಿ ಈ ರೀತಿಯ ಕಾರ್ಯಕ್ರಮ ನಡೆಯಬೇಕು ಎನ್ನುವ ಆಸೆಯಿಂದ ೨೦೧೭ರಲ್ಲಿ ನಮ್ಮದೇ ಮೈಸೂರು ಲಿಟರೇಚರ್ ಫೋರಂ ಚಾರಿಟಬಲ್ ಟ್ರಸ್ಟ್, ಮೈಸೂರು ಬುಕ್ ಕ್ಲಬ್ಸ್ ವತಿಯಿಂದ ಕಾರ್ಯಕ್ರಮ ಆಯೋಜನೆ ಮಾಡದೆವು. ನಮ್ಮ ಮುಖ್ಯ ಉದ್ದೇಶ ಮಕ್ಕಳು, ಯುವಕರು, ಹಿರಿಯರೆಲ್ಲರಿಗೂ ಇದು ವೇದಿಕೆ ಕಲ್ಪಿಸಬೇಕು ಎನ್ನುವುದು. ಅದರಂತೆಯೇ ಕಾರ್ಯಕ್ರಮದ ರೂಪುರೇಷೆ ಸಿದ್ಧ ಮಾಡಿಕೊಂಡು ಬಂದಿದ್ದೇವೆ. ಈಗೀಗ ನಮ್ಮ ಕಾರ್ಯಕ್ರಮ ಹೆಚ್ಚು ಹೆಚ್ಚು ಜನರಿಗೆ ಗೊತ್ತಾಗುತ್ತಿದೆ. ಕಾರ್ಯಕ್ರಮ ವೈವಿಧ್ಯ ಇರುವುದರಿಂದ ಎಲ್ಲ ವಯೋಮಾನದವರೂ ಭಾಗಿಯಾಗುವ ನಿರೀಕ್ಷೆ ಇದೆ’ ಎನ್ನುತ್ತಾರೆ ಶುಭಾ.
ಕಾರ್ಯಕ್ರಮದ ಆಕರ್ಷಣೆ
* ಜು.೨೩ರಂದು ಮಧ್ಯಾಹ್ನ ೧ ಗಂಟೆಗೆ ಪ್ರಮೋದಾದೇವಿ ಒಡೆಯರ್‌ರಿಂದ ಉದ್ಘಾಟನೆ
* ಮುಖ್ಯ ಅತಿಥಿಗಳಾಗಿ ಬುಕರ್ ಪ್ರಶಸ್ತಿ ಪುರಸ್ಕೃತರಾದ ಗೀತಾಂಜಲಿ ಶ್ರೀ, ಗ್ರ್ಯಾಮಿ ಪ್ರಶಸ್ತಿ ಪುರಸ್ಕೃತರಾದ ಸಂಗೀತ ನಿರ್ದೇಶಕ ರಿಕಿ ಕೇಜ್ ಭಾಗಿ
* ಲೇಖಕ ಅರೂನ್ ರಾಮನ್‌ರಿಂದ ‘ದಿ ಬುಕ್ ಲೀಫ್’ ಮಾಹಿತಿ ಪುಸ್ತಕ ಬಿಡುಗಡೆ
* ಮಧ್ಯಾಹ್ನ ೨ರಿಂದ ೩ರವರೆಗೆ ಸಂವಾದ; ಸಂಜೆ ೭ ಗಂಟೆಗೆ ರಿಕಿ ಕೇಜ್‌ರಿಂದ ಸಂಗೀತ ಸಂಜೆ
ಗೋಷ್ಠಿಗಳು
ಜು.23ರಂದು
* ಮಧ್ಯಾಹ್ನ ೨ ಗಂಟೆಗೆ ಗೀತಾಂಜಲಿ ಶ್ರೀ ಅವರನ್ನು ಸೀತಾ ಭಾಸ್ಕರ್ ಮಾತನಾಡಿಸುವರು. ಮಧ್ಯಾಹ್ನ ೩ರ ಸಂವಾದದಲ್ಲಿ ‘ಕ್ರಿಕೆಟ್ ಒಂದು ಪ್ರಜಾಸತ್ತಾತ್ಮಕ ಕ್ರಿಯೆ’ ಕುರಿತು ಪತ್ರಕರ್ತ ರಾಜ್‌ದೀಪ್ ಸರ್ದೇಸಾಯಿ, ಚಾರು ಶರ್ಮ ಚರ್ಚೆ
* ಮಧ್ಯಾಹ್ನ ೪ರ ಗೋಷ್ಠಿಯಲ್ಲಿ ನಿಧಿನಿ ಓಲಿಕಾರ, ಡಾ.ಎನ್.ಎಸ್.ವಿಶ್ವನಾಥ್, ಅನಿರುದ್ಧ ಕಣಿಶೆಟ್ಟಿ, ಡಾ.ಎಚ್.ಎಸ್.ಚಂಪಾ ಚರ್ಚೆ
* ಮಧ್ಯಾಹ್ನ ೩.೩೦ಕ್ಕೆ ಯಕ್ಷಗಾನ ಪ್ರದರ್ಶನ.
ಜು.24ರಂದು
* ಬೆಳಿಗ್ಗೆ ೧೦ರ ಗೋಷ್ಠಿಯಲ್ಲಿ ‘೧೯೮೩ರ ವಿಶ್ವಕಪ್ ಗೆಲಿವಿನಿಂದ ಜೀವನ ಪಾಠ’ ಕುರಿತು ಮಾಜಿ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್ ಅಭಿಪ್ರಾಯ ಹಂಚಿಕೆ.
* ಬೆಳಿಗ್ಗೆ ೧೧ರ ಗೋಷ್ಠಿಯಲ್ಲಿ ನೆನಪು ಅನಂತ ಕೃತಿ ಕುರಿತು ಎಸ್ತರ್ ಅನಂತಮೂರ್ತಿ, ಪ್ರೊ.ವಿ.ಕೆ.ನಟರಾಜ್ ಭಾಗಿ.
* ಬೆಳಿಗ್ಗೆ ೧೧.೩೦ರ ಗೋಷ್ಠಿಯಲ್ಲಿ ‘ಹೇಳಿ ಪ್ರಧಾನಮಂತ್ರಿ’ ಗೋಷ್ಠಿಯಲ್ಲಿ ಸಾಗರಿಕ ಘೋಷ್, ಸುಗತ ಶ್ರೀನಿವಾಸರಾಜು, ರವಿಜೋಷಿ ಭಾಗಿ
* ಬೆಳಿಗ್ಗೆ ೧೧.೩೦ರ ಸಮಾನಾಂತರ ಗೋಷ್ಠಿಯಲ್ಲಿ ‘ಕಿರುತೆರೆಯಲ್ಲಿ ಕನ್ನಡದ ಕಂಪು ಮಾಧ್ಯಮಗಳಲ್ಲಿ ಭಾಷಾಭಿಮಾನ’ ಕುರಿತು ಧರ್ಮೇಂದ್ರಕುಮಾರ್, ಕುಸುಮ ಆಯರಹಳ್ಳಿ, ರಂಜನಿ ರಾಘವನ್ ಚರ್ಚೆ.
* ಮಧ್ಯಾಹ್ನ ೧೨.೩೦ರ ಗೋಷ್ಠಿಯಲ್ಲಿ ನಳಿನಿ ಚಂದರ್, ಮೈಥಿಲಿ ರಾವ್, ಪ್ರೀತಿ ಮರೋಳಿ ಭಾಗಿ.
ಸಮಾನಾಂತರ ವೇದಿಕೆಯಲ್ಲಿ ಮಧ್ಯಾಹ್ನ ೧೨.೩೦ರ ‘ರೆಕ್ಕೆ ಬಡಿಯುವ ಹಕ್ಕು ನಾವು ನಮ್ಮಂತೆ ಇರಲು ಬೇಕೆ’ ಕುರಿತು ಡಾ.ಅಕೈ ಪದ್ಮಶಾಲಿ, ಭಾರತ್ ದಿವಾಕರ್, ಮೋಹು ಚಿನ್ನಪ್ಪ, ವಸುಧೇಂದ್ರ ಸಂವಾದ.
ಮಧ್ಯಾಹ್ನ ೧.೩೦ರ ಗೋಷ್ಠಿಯಲ್ಲಿ ‘ಪರಿಸರದೊಂದಿಗೆ ಸೌಹಾರ್ದತೆ’ ಕುರಿತು ಡಾ.ಸಂಜಯ್ ಗುಬ್ಬಿ, ಮೇವಾ ಸಿಂಗ್, ಪಮೇಲಾ ಗಾಲೆ ಮಲ್ಹೋತ್ರಾ ಚರ್ಚೆ.
೧.೩೦ರ ಮತ್ತೊಂದು ಗೋಷ್ಠಿಯಲ್ಲಿ ‘ಕನ್ನಡ ಸಾಹಿತ್ಯದಲ್ಲಿ ವಿಜ್ಞಾನ ಮತ್ತು ನಿಗೂಢ ವೀರಪ್ಪನ್’ ಕುರಿತು ಡಾ.ಡಿ.ವಿ.ಗುರುಪ್ರಸಾದ್, ಪ್ರೊ.ಪ್ರಸನ್ನ ಸಂತೇಕಡೂರು, ಡಾ.ಸಿ.ನಾಗಣ್ಣ ಭಾಗಿ.
ಮಧ್ಯಾಹ್ನ ೨.೩೦ರ ಗೋಷ್ಠಿಯಲ್ಲಿ ‘ಮಾತೃ ದೇವೋ ಭವ’ ಕುರಿತು ಮೈಥಿಲಿ ರಾವ್, ಜಯಶ್ರೀ ಜಗನ್ನಾಥ್, ರಿಂಕಿ ರಾಯ್ ಭಟ್ಟಾಚಾರ್ಯ, ಸೀತಾ ಭಾಸ್ಕರ್ ಉಪಸ್ಥಿತಿ.
೨.೩೦ರ ಮತ್ತೊಂದು ಗೋಷ್ಠಿಯಲ್ಲಿ ‘ಇನ್ನಷ್ಟು ಬೇಕೆನ್ನ ಹೃದಯಕೆ ರಾಮ’ ಕುರಿತ ಗೋಷ್ಠಿಯಲ್ಲಿ ಗಜಾನನ ಶರ್ಮ, ದೀಪಾ ರವಿಶಂಕರ್ ಭಾಗಿ.
ಮಧ್ಯಾಹ್ನ ೩.೩೦ರ ಗೋಷ್ಠಿಯಲ್ಲಿ ‘ಕಥೆ ಹೇಳುವಲ್ಲಿನ ಸಾಹಸ’ ಕುರಿತು ಶಂಕರ್ ಬೇಲೂರು, ಡಾ.ಕೃಷ್ಣರಾವ್, ಆರ್.ಚಂದ್ರಶೇಖರ್, ಅನುಜ ಚೌಹಾಣ್ ಸಂವಾದ.
ಮಧ್ಯಾಹ್ನ ೩.೩೦ರ ಮತ್ತೊಂದು ಗೋಷ್ಠಿಯಲ್ಲಿ ‘ಶಿಕ್ಷಣ-ಧನಾತ್ಮಕ’ ಕುರಿತು ಡಾ. ಗುರುರಾಜ ಕರ್ಜಗಿ ಚರ್ಚೆ.
ಸಂಜೆ ೪.೩೦ರ ಗೋಷ್ಠಿಯಲ್ಲಿ ರುಕ್ಮಿಣಿ ಪ್ರಭಾಕರ್, ಭಾರತಿ ಘನಶ್ಯಾಮ್, ಪದ್ಮಾವತಿ ರಾವ್, ಮತ್ತೊಂದು ಗೋಷ್ಠಿಯಲ್ಲಿ ಸೂಫಿ ಸಂಗೀತದ ಬಗ್ಗೆ ಅಪರ್ಯಾಪ್ತ ಭಾಗಿ.
ಸಂಜೆ ೫.೧೫ರ ಗೋಷ್ಠಿಯಲ್ಲಿ ಡಾ.ಆರ್.ಬಾಲಸುಬ್ರಹ್ಮಣ್ಯಂ, ಯಮುನಾ ಹರಿ ಸಿಂಗ್ ಭಾಗವಹಿಸುವರು.
ಮಕ್ಕಳಿಗಾಗಿ ಸಾಹಿತ್ಯ ಗೋಷ್ಠಿ:
ಜು.೨೪ರಂದು ಸಂಜೆ ೫ರ ಗೋಷ್ಠಿಯಲ್ಲಿ ರೂಪ ಪೈ, ಸಂಜೆ ೫.೪೫ರ ಗೋಷ್ಠಿಯಲ್ಲಿ ಯೋಗ ಕುರಿತು ಯಾಮಿನಿ ಮುತ್ತಣ್ಣ, ಮನಿಷ ದಾಸಪ್ಪ, ಸಂಜೆ ೬.೩೦ರ ಗೋಷ್ಠಿಯಲ್ಲಿ ಪ್ರಾಣಿಸಂಕುಲ ಫಲಾನುಭೂತಿ ಕುರಿತು ಸ್ನೇಕ್ ಶ್ಯಾಮ್ ಅಭಿಪ್ರಾಯ ಮಂಡನೆ.
ಈ ಸಂಭ್ರಮ ಇಂದಿನ ಅಗತ್ಯ
ಕನ್ನಡ ಸಾಹಿತ್ಯ ಪರಿಷತ್ತು ಎನ್ನುವ ಉದ್ಧಾತ್ತ ಸಂಸ್ಥೆಯನ್ನು ನಮ್ಮ ಮೈಸೂರಿನ ಮಹಾರಾಜರಾದ ನಾಲ್ವಡಿ ಪ್ರಭುಗಳು ಸ್ಥಾಪಿಸಿದರು. ಆ ಮೂಲಕ ಸಾಹಿತ್ಯವನ್ನು ಪೋಷಿಸಿದರು. ಇಂತಹ ಸಾಹಿತ್ಯದ ಕಂಪು ಇರುವ ಮೈಸೂರಿನಲ್ಲಿ ಈ ರೀತಿಯ ಕಾರ್ಯಕ್ರಮದ ಅಗತ್ಯ ಇತ್ತು. ದೊಡ್ಡ ದೊಡ್ಡವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಈ ಮೂಲಕ ಭಾರತದಾದ್ಯಂತ ಈ ಕಾರ್ಯಕ್ರಮದ ಬಗ್ಗೆ ಚರ್ಚೆ ಆಗುತ್ತದೆ. ‘ಲಾರ್ಡ್ ಆಫ್ ದಿ ಡೆಕ್ಕನ್’ ಎನ್ನುವ ಕೃತಿಯ ಕರ್ತೃ ಅನಿರುದ್ಧ್ ಖಾನಿ ಶೆಟ್ಟಿ ರೀತಿಯ ದೊಡ್ಡ ಸಾಹಿತಿಗಳು ಬರುತ್ತಿದ್ದಾರೆ. ಇದೊಂದು ರೀತಿಯ ಅಪೂರ್ವ ಸಂಗಮ. ಇದು ಮೈಸೂರಿನಲ್ಲಿ ನಡೆಯುತ್ತಿರುವುದು ಸಂತೋಷದ ಸಂಗತಿ. ಇದರಲ್ಲಿ ಎಲ್ಲರೂ ಭಾಗಿಯಾಗಬೇಕು, ಇದರ ಅನುಕೂಲವನ್ನು ಪಡೆದುಕೊಳ್ಳಬೇಕು. – ಧರ್ಮೇಂದ್ರ ಕುಮಾರ್,
ಲಿಟರೇಚರ್ ಫೆಸ್ಟಿವಲ್ ಅಂದರೆ ನಮ್ಮ ಸಾಹಿತ್ಯ ಸಮ್ಮೇಳನಗಳ ಹಾಗಲ್ಲ. ಅವುಗಳ ಸ್ವರೂಪ ಒಂತರಾ ಬೇರೆಯಾಗಿರತ್ತೆ. ಸಾಹಿತ್ಯ ಸಮ್ಮೇಳನಗಳು ಜಾತ್ರೆಗಳ ಹಾಗಿದ್ದರೆ, ಈ ತರದ ಫೆಸ್ಟಿವಲ್ ಗಳು ಎಕ್ಸಿಬಿಷನ್ ಹಾಗೆ. ಇಂತಹ ಕಾರ್ಯಕ್ರಮಗಳ ಬಗ್ಗೆ ಕೇಳಿ, ದೂರದಿಂದ ನೋಡಿ ಗೊತ್ತಿತ್ತು. ಇದೇ ಮೊದಲ ಬಾರಿಗೆ ಭಾಗವಹಿಸುತ್ತಿದ್ದೇನೆ. ಖುಷಿ ಅಂದರೆ ಇಂತವು ದೂರದೂರುಗಳಲ್ಲಿ, ದೇಶದ ಮಹಾನಗರಗಳಲ್ಲಿ ನಡೆಯುತ್ತಿದ್ದವು. ಇದೀಗ ಮೈಸೂರಿನಲ್ಲೂ ಆಗುತ್ತಿವೆ. ಮೈಸೂರಿನ ಹೆಮ್ಮೆಗಳ ಸಾಲಿಗೆ ಇದೊಂದು ಹೊಸ ಸೇರ್ಪಡೆ. – ಕುಸುಮಾ ಆಯರಹಳ್ಳಿ
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…