ಕೆಲವು ವರ್ಷಗಳಿಂದೀಚೆಗೆ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತಿರುವ ಸಮಸ್ಯೆ ಹರ್ಪಿಸ್ ಜನೈಟಾಲಿಸ್. ಹರ್ಪಿಸ್ ಸಿಂಪ್ಲೆಕ್ಸ್ ವೈರಾಣುವಿನಿಂದ ಈ ರೋಗಬರುತ್ತದೆ. ಶರವೇಗದಲ್ಲಿ ಜಗತ್ತಿನಲ್ಲೆಲ್ಲಾ ಹರಡುತ್ತಿರುವ ಈ ಸಮಸ್ಯೆ ಒಮ್ಮೆ ಬಂದರೆ ದೀರ್ಘಕಾಲದವರೆಗೆ ರೋಗಿಯನ್ನು ಕಾಡುತ್ತದೆ.
ಇದು ವ್ಯಭಿಚಾರಿಗಳು, ಅಸುರಕ್ಷಿತ ಲೈಂಗಿಕ ಕ್ರಿಯೆಯಲ್ಲಿ ತೊಡಗುವವರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ರೋಗಾಣು ಲೈಂಗಿಕಾಂಗಗಳನ್ನು ಪ್ರವೇಶಿಸಿದ ೩ರಿಂದ ೬ದಿನಗಳ ಒಳಗೆ ಕಾಯಿಲೆಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
ರೋಗದ ಲಕ್ಷಣಗಳು
* ಮೊದಲಿಗೆ ಜನನಾಂಗದ ಸುತ್ತಲೂ ಚುಚ್ಚಿದಂತೆ, ಉರಿದಂತಹ ಅನುಭವ
* ಕೆಂಪನೆಯ ಗುಳ್ಳೆಗಳು, ನೀರು ಗುಳ್ಳೆಗಳು ಕಾಣಿಸಿಕೊಳ್ಳುವುದು.
* ಸಣ್ಣ ಗುಳ್ಳೆಗಳು ಗುಂಪಾಗಿ ನಂತರ ಕೀವು ಗುಳ್ಳೆಗಳಾಗಿ ಬದಲಾಗುವುದು.
* ಮೊದಲ ಬಾರಿಗೆ ಸೋಂಕು ಕಾಣಿಸಿಕೊಂಡಾಗ ಜ್ವರ ಬರುವುದು.
ಪುರುಷರಲ್ಲಿ ಜನನಾಂಗದ ಸುತ್ತಮುತ್ತ ಕಾಣಿಸಿಕೊಳ್ಳುವ ಗುಳ್ಳೆಗಳು ನಂತರ ತೊಡೆಯ ಭಾಗವನ್ನೂ ವ್ಯಾಪಿಸಿಕೊಳ್ಳುತ್ತವೆ. ಮಹಿಳೆಯರಲ್ಲಿ ಜನನಾಂಗದ ಒಳಭಾಗ, ಗರ್ಭಕೋಶದ ನಾಳಗಳಿಗೂ ಪ್ರವೇಶ ಮಾಡಬಹುದು. ಇದರಿಂದ ಭವಿಷ್ಯದಲ್ಲಿ ಕ್ಯಾನ್ಸರ್ ಸಹ ಬರಬಹುದು. ಒಂದು ವೇಳೆ ಮಹಿಳೆ ಗರ್ಭವತಿಯಾಗಿದ್ದರೆ ಹುಟ್ಟುವ ಮಗುವಿನ ಮೇಲೆಯೂ ಈ ವೈರಾಣು ಪ್ರಭಾವ ಬೀರುತ್ತದೆ. ಈ ವೇಳೆ ಸಿಸೇರಿಯನ್ ಮೂಲಕ ಮಗು ಹೊರಗೆ ತೆಗೆಯುವುದು ಅನಿವಾರ್ಯ. ಇದು ವಾಸಿಯಾಗಬಹುದಾದ ಕಾಯಿಲೆಯಾಗಿದ್ದು, ನಿಗದಿತವಾಗಿ ಔಷಧ ತೆಗೆದುಕೊಳ್ಳಬೇಕಾಗುತ್ತದೆ. ಎಸೈಕ್ಲೊವೀರ್ ಮುಂತಾದ ಔಷಧಗಳನ್ನು ತೆಗೆದುಕೊಳ್ಳಬಹುದು.
ಬೆಂಗಳೂರು : ನಾಳೆಯಿಂದ ಐಪಿಎಲ್ ಪಂದ್ಯಾವಳಿಗಳು ಆರಂಭವಾಗಲಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಸಂಬಂಧಪಟ್ಟ…
ಮದ್ದೂರು : ಖಾಸಗಿ ಶಾಲೆ ಬಸ್ ಮತ್ತು ಖಾಸಗಿ ಬಸ್ ನಡುವೆ ಅಪಘಾತ ಸಂಭವಿಸಿ, 14 ವಿದ್ಯಾರ್ಥಿಗಳ ಜತೆಗೆ 6…
ಹನೂರು : ತಾಲ್ಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಬುಧವಾರ ನಡೆದ ಹುಂಡಿ ಹಣ ಎಣಿಕೆಯಲ್ಲಿ ಈ ಬಾರಿ…
ಎಚ್.ಡಿ.ಕೋಟೆ : ರಾಜ್ಯದಲ್ಲಿ ಜಾತ್ಯತೀತ ಜನತಾದಳ-ಬಿಜೆಪಿಯ ಮೈತ್ರಿಯ ಸರ್ಕಾರ ಅಧಿಕಾರಕ್ಕೆ ಬಂದು ಜನಪರ ಆಡಳಿತ ನೀಡುವ ದಿನಗಳು ಹತ್ತಿರವಾಗುತ್ತಿವೆ ಎಂದು…
ಬೆಂಗಳೂರು : ದಾವಣಗೆರೆ ಉಪಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಸಾದಿಕ್ ಪೈಲ್ವಾನ್ ತಾವು ಕಣದಿಂದ ಹಿಂದೆ ಸರಿದಿರುವುದಾಗಿ ಘೋಷಿಸಿದ್ದಾರೆ.…
ಬೆಂಗಳೂರು : ಕರ್ನಾಟಕದ ಶೈಕ್ಷಣಿಕ ಇತಿಹಾಸದಲ್ಲಿ ರಾಜ್ಯ ಸರ್ಕಾರವು ಅತ್ಯಂತ ಮಹತ್ವದ ತೀರ್ಮಾನವೊಂದನ್ನು ಕೈಗೊಂಡಿದ್ದು, ಎಸ್‌ಎಸ್‌ಎಲ್‌ಸಿ ಪರೀಕ್ಷಾ ಪದ್ಧತಿಯಲ್ಲಿ ಆಮೂಲಾಗ್ರ…