ಫಾತಿಮಾ ರಲಿಯಾ
imraliya101@gmail.com
ನಾನು ಓದುತ್ತಿದ್ದ ನಮ್ಮೂರಿನ ಸರ್ಕಾರಿ ಶಾಲೆಯಲ್ಲಿ ಸಾಂಸ್ಕೃತಿಕ ಕಾರ್ಯ ಕ್ರಮಗಳಲ್ಲಿ ಮಕ್ಕಳು ಭಾಗವಹಿಸುವಂತೆ ಆಗಲೇ ವಿಶಿಷ್ಟ ಆಸ್ಥೆ ವಹಿಸಲಾಗುತ್ತಿತ್ತು. ಹಾಗೆಂದೇ ನಮ್ಮಲ್ಲಿ ಕೆಲವರನ್ನು ಆಯ್ಕೆ ಮಾಡಿ ನಮ್ಮ ಮೇಷ್ಟ್ರು ಅಂತರ್ ಶಾಲೆ ನಾಟಕ ಸ್ಪರ್ಧೆಗೆ ತಯಾರಿ ನಡೆಸುತ್ತಿದ್ದರು. ನನಗೂ ಒಂದು ಪಾತ್ರ ಕೊಟ್ಟಿದ್ದರು, ತುಂಬಾ ಒಳ್ಳೆಯ ಪಾತ್ರವೇ. ಆಡಿಷನ್ ತರ ಮಾಡಿ ಪಾತ್ರಧಾರಿಗಳನ್ನು ಆಯ್ಕೆ ಮಾಡಿದ್ದರಿಂದ ತಲೆಯಲ್ಲಿ ನಾವೇನೋ ದೊಡ್ಡ ಸಾಧನೆ ಮಾಡುತ್ತಿದ್ದೇವೆ ಎನ್ನುವ ಭಾವ.
ಹೋದಲ್ಲಿ ಬಂದಲೆಲ್ಲಾ ನಾಟಕದ್ದೇ ಧ್ಯಾನ. ಜೊತೆಗೆ ಸ್ಪರ್ಧೆಗೆ ಆಯ್ಕೆಯಾಗದವರ ಎದೆಯಲ್ಲಿ ಒಂದು ಸಣ್ಣ ಈರ್ಷ್ಯೆಯ ಭಾವ. ಆ ಟೀಚರ್‌ಗೆ ಅವರಿಷ್ಟ, ಈ ಟೀಚರ್‌ಗೆ ಇವರಿಷ್ಟ ಹಾಗಾಗಿಯೇ ಆಯ್ಕೆಯಾಗಿದ್ದಾರೆ ಎನ್ನುವ ಮಾತುಗಳೂ ನಮ್ಮ ನಡುವಿಂದಲೇ ಕೇಳಿ ಬರುತ್ತಿತ್ತು. ಆದ್ರೆ ಹೊರಗಡೆ ಮಾತ್ರ ಇದ್ಯಾವುದೂ ಗೊತ್ತೇ ಇಲ್ಲ ಎನ್ನುವಂತೆ ವರ್ತಿಸುತ್ತಿದ್ದೆವು.
ಆದರೆ ನನ್ನ ಸಂಭ್ರಮ, ಸಣ್ಣ ಅಹಂ ಮುರಿಯಲು ಮನೆಯವರ ಒಂದು ನಿರಾಕರಣೆ ಸಾಕಾಯ್ತು. ಸ್ಪರ್ಧೆಗೆ ಅಂತ ಹೋದವರು ಅಲ್ಲೇ ಒಂದು ದಿನ ತಂಗಬೇಕು ಎನ್ನುವ ಷರತ್ತಿಗೆ ನನ್ನ ಮನೆುಂವರು ಒಪ್ಪಲೇ ಇಲ್ಲ. ‘‘ಬೇಕಿದ್ದರೆ ಸ್ಪರ್ಧೆಗೆ ಹೋಗು, ಭಾಗವಹಿಸು, ಸಂಜೆಯ ಹೊತ್ತಿಗೆ ವಾಪಾಸು ಬಾ. ಮರುದಿನ ಬೆಳಿಗ್ಗೆ ನಾವೇ ನಿನ್ನ ಕರೆದುಕೊಂಡು ಹೋಗಿ ಸ್ಪರ್ಧೆ ನಡೆಯುವಲ್ಲಿಗೆ ಬಿಡುತ್ತೇವೆ’’ ಎಂದು ಬಿಟ್ಟರು ಮಾವ.
ನಾನು ವಾದಕ್ಕಿಳಿದೆ, ಜಗಳ ವಾಡಿದೆ, ಉಪವಾಸ ಸತ್ಯಾಗ್ರಹ ಮಾಡುತ್ತೇನೆಂದು ಬೆದರಿಕೆ ಹಾಕಿದೆ, ಮನೆಯೊಳಗೆ ಬರುವುದಿಲ್ಲ ಎಂದು ಗಂಟೆಗಟ್ಟಲೆ ಮನೆಯ ಗೇಟಿನ ಹೊರಗೆ ನಿಂತೆ… ಊಹೂಂ, ಇವ್ಯಾವುವೂ ಅವರ ನಿರ್ಧಾರವನ್ನು ಬದಲಿಸಲಿಲ್ಲ. ಮಾವ ‘‘ಸಂಜೆ ಮರಳಿ ಬಾ, ಮರುದಿನ ಬೆಳಿಗ್ಗೆ ಮತ್ತೆ ಹೋಗುವಿಯಂತೆ‘ ಎಂದು ಪದೇ ಪದೇ ಹೇಳಿದರು, ನನ್ನನ್ನು ಸಮಾಧಾನಪಡಿಸಲು ಯತ್ನಿಸಿದರು. ‘‘ನಾನೇ ನಿನ್ನ ಕರೆದುಕೊಂಡು ಹೋಗಿ ನಿಗದಿತ ಸಮಯಕ್ಕಿಂತ ಅರ್ಧಗಂಟೆ ಮೊದಲೇ ಬಿಡುತ್ತೇನೆ’’ ಎಂದು ಭರವಸೆ ಕೊಟ್ಟರು.
ಆದರೆ ಅಂತಹ ಯಾವುದೇ ‘ಷರತ್ತು ಬದ್ಧ ಭರವಸೆ’ಗಳನ್ನು ಒಪ್ಪಲು ನಾನು ತಯಾರಿರಲಿಲ್ಲ. ಫ್ರೆಂಡ್ಸ್ ಜೊತೆ ರಾತ್ರಿ ತಂಗುವ ಅಪರೂಪದ ಅವಕಾಶವನ್ನು ಯಾವ ಕಾರಣಕ್ಕೂ ತಪ್ಪಿಸಿಕೊಳ್ಳಲು ನನಗೆ ಮನಸ್ಸಿರಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ನಾನೊಬ್ಬಳೇ ಸಂಜೆ ವಾಪಾಸು ಬರುವುದು, ಮರುದಿನ ಮತ್ತೆ ಅವರೆಲ್ಲರನ್ನು ಸೇರಿಕೊಳ್ಳುವುದು ನನಗೆ ಅವಮಾನಕರ ಅನ್ನಿಸುತ್ತಿತ್ತು. ನನ್ನ ಯಾವ ಪ್ರತಿಭಟನೆಗಳೂ ಫಲ ಕಾಣದಿದ್ದಾಗ ಸ್ಪರ್ಧೆಯಲ್ಲಿ ಭಾಗವಹಿಸುವುದೇ ಬೇಡ ಎಂದು ತೀರ್ಮಾನಿಸಿದೆ.
ಆದರೆ, ಅದರ ನಿಜವಾದ ಸಂಕಟ ಏನೆಂದು ಅರಿವಿಗೆ ಬಂದದ್ದು ನನ್ನ ಸಹಪಾಠಿಗಳೆಲ್ಲಾ ಸ್ಪರ್ಧೆಗೆಂದು ಹೊರಟು ನಿಂತಾಗ. ಸ್ಪರ್ಧಿಗಳ ಆಯ್ಕೆ, ಆಮೇಲಿನ ಅಭ್ಯಾಸ, ಮನೆಯಲ್ಲಿ ಒಪ್ಪಿಗೆ ಸಿಗದೇ ಇದ್ದದ್ದು ಎಲ್ಲಾ ಸೇರಿ ಆವತ್ತು ನನ್ನೊಳಗೆ ಒಂದು ಅಸಹಾಯಕ ಭಾವವನ್ನು ಸೃಷ್ಟಿಸಿತ್ತಾ ಗೊತ್ತಿಲ್ಲ, ಪ್ರತಿಭಟನಾತ್ಮಕವಾಗಿ ‘ನಾನೊಂದು ಬೋನ್ಸಾಯಿ ಗಿಡ’ ಎಂಬ ಕವಿತೆ ಬರೆದೆ. ನಾನು ಬರೆದ ಮೊದಲ ಸೃಜನಶೀಲ ಬರವಣಿಗೆಯದು. ಅದಕ್ಕಿಂತ ಮೊದಲು ‘ಪರಿಸರ ಸಂರಕ್ಷಣೆ’ ಎನ್ನುವ ವಿಷಯದ ಮೇಲೆ ಪ್ರಬಂಧ ಬರೆದಿದ್ದರೂ ಅದು ಸೃಜನಶೀಲ ಬರವಣಿಗೆಯಾಗಿರಲಿಲ್ಲ. ಈ ಘಟನೆ ನಡೆದ ಮರುವರ್ಷವೇ ‘ಗೈಡ್ಸ್’ ದಳದ ಭಾಗವಾಗಿ ರ‍್ಯಾಲಿಗೆ ಹೋದವಳು ಮೂರು ದಿನಗಳ ಕಾಲ ಬೇರೆ ಶಾಲೆಯಲ್ಲಿ ತಂಗಬೇಕಾಗಿ ಬಂದಿತ್ತು. ಆಗ ನಮ್ಮನೆಯಲ್ಲಿ ಯಾವ ವಿರೋಧವೂ ಬರಲಿಲ್ಲ. ಆದರೆ ಅಷ್ಟು ಹೊತ್ತಿಗಾಗುವಾಗಲೇ ಬರವಣಿಗೆಯ ರುಚಿ ನನಗೆ ಹತ್ತಿತ್ತು. ಡೈರಿ ಬರೆಯಲು, ಸಣ್ಣ ಪುಟ್ಟ ಕವಿತೆ ಬರೆಯಲು ಪ್ರಾರಂಭಿಸಿದ್ದೆ. ಆದರೆ ಅದನ್ನು ಯಾರಿಗೂ ತೋರಿಸುವ ಧೈರ್ಯ ಮಾತ್ರ ಇರಲಿಲ್ಲ.
ಬೆಂಗಳೂರು: 2026ರ ಐಪಿಎಲ್‌ಗೆ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಘೋಷಣೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ಕೆಎಸ್‌ಸಿಎ ಚುನಾವಣೆ ಮತದಾನದ ವೇಳೆ…
ನವದೆಹಲಿ: ಇಂಡಿಗೋ ವಿಮಾನದ ಅಧ್ವಾನ ಆರನೇ ದಿನವೂ ಮುಂದುವರಿದಿದೆ. ರಾಷ್ಟ್ರ ರಾಜಧಾನಿ ದೆಹಲಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ನೂರಕ್ಕೂ…
ರಾಮನಗರ: ದೇವರ ದರ್ಶನಕ್ಕೆಂದು ರೇವಣಸಿದ್ದೇಶ್ವರ ಬೆಟ್ಟ ಹತ್ತುವಾಗಲೇ ವ್ಯಕ್ತಿಯೋರ್ವರು ಕಾಲು ಜಾರಿ ಬಿದ್ದು ಮೃತಪಟ್ಟಿರುವ ಘಟನೆ ರಾಮನಗರದಲ್ಲಿ ನಡೆದಿದೆ. ಕೆಂಪನಹಳ್ಳಿ…
ಬೆಂಗಳೂರು: ದೆಹಲಿ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ಇಂದಿನಿಂದ ಆರಂಭವಾಗುವ ಬೆಳಗಾವಿಯ ಚಳಿಗಾಲದ ಅಧಿವೇಶನಕ್ಕೆ ಬಿಗಿ ಭದ್ರತೆ ಆಯೋಜಿಸಲಾಗಿದೆ. ಸುಮಾರು ಆರು…
ನವದೆಹಲಿ: ಉತ್ತರ ಗೋವಾದ ಬಾಗಾ ಬೀಚ್ ಬಳಿಯ ಅರ್ಪೊರಾದ ನೈಟ್‌ಕ್ಲಬ್ ಬೀರ್ಚ್ ಬೈ ರೋಮಿಯೋ ಲೇನ್‌ನಲ್ಲಿ ಶನಿವಾರ ತಡರಾತ್ರಿ ಸಂಭವಿಸಿದ…
ಮೈಸೂರು: ಕಣ್ಣಿಗೆ ಕಾರದಪುಡಿ ಎರಚಿ ವ್ಯಕ್ತಿಯೊಬ್ಬನಿಗೆ ಹಲ್ಲೆ ನಡೆಸಿ ಅಪಹರಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ವಿಜಯನಗರ ಮೂರನೇ ಹಂತದಲ್ಲಿ ಈ…