ಆಂದೋಲನ ಪುರವಣಿ

ರೂಪಾಯಿ ಮೌಲ್ಯ ಕುಸಿಯುತ್ತಿಲ್ಲವೇ?

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆಗೆ ಪರ-ವಿರೋಧ ಚರ್ಚೆ

ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್ ಕೊಟ್ಟ ಉತ್ತರ ದೇಶಾದ್ಯಂತ ಚರ್ಚೆಯಾಗುತ್ತಿದೆ. ರೂಪಾಯಿ ಮೌಲ್ಯದ ಬಗ್ಗೆ ಎತ್ತಿದ್ದ ಪ್ರಶ್ನೆಗೆ ‘ರೂಪಾಯಿ ಕುಸಿಯುತ್ತಿಲ್ಲ; ಡಾಲರ್ ಬಲಗೊಳ್ಳುತ್ತಿದೆ’ ಎಂಬಂತಹ ಹೇಳಿಕೆ ಕೊಟ್ಟು ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿದ್ದರು. ಇದಕ್ಕೆ ಪರ-ವಿರೋಧ ಚರ್ಚೆಗಳು ಆರಂಭವಾಗಿವೆ. ಈ ಬಗೆಗಿನ ಸ್ಥಳೀಯರ ಅಭಿಪ್ರಾಯ ಇಲ್ಲಿದೆ.

ರೂಪಾಯಿ ಹೆಚ್ಚು ಕುಸಿದಿಲ್ಲ

ಯಾರೇ ಏನೇ ಹೇಳಿಕೆ ಕೊಟ್ಟರೂ ಅದರ ಪೂರ್ವಾಪರ ವಿಚಾರ ಮಾಡಬೇಕು. ನಿರ್ಮಲಾ ಸೀತಾರಾಮನ್ ಅವರ ಹೇಳಿಕೆ ಸರಿಯಾಗಿದೆ. ಜಾಗತಿಕ ಮಟ್ಟದ ಎಲ್ಲ ಕರೆನ್ಸಿಗಳನ್ನೂ ತುಲನೆ ಮಾಡಿದಾಗ ಡಾಲರ್ ಎದುರು ಅವು ಶೇ. ೧೦ ರಿಂದ ೨೦ರಷ್ಟು ಕುಸಿತ ಕಂಡಿವೆ. ಆದರೆ ರೂಪಾಯಿ ಹೆಚ್ಚಿನ ಕುಸಿತ ಕಂಡಿಲ್ಲ. ಈ ಹಿನ್ನೆಲೆಯಲ್ಲಿ ಅವರ ಹೇಳಿಕೆ ಸರಿಯಾಗಿದೆ.

ಆದರೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗುತ್ತಿರುವುದು ಸತ್ಯ. ಇದರ ಹಿಂದೆ ನಾವು ಎದುರಿಸಿದ ಕೋವಿಡ್ ಸಂಕಷ್ಟ ಇದೆ ಎಂದು ನನಗೆ ಅನ್ನಿಸುತ್ತದೆ. ದುಡಿಮೆ ಹೆಚ್ಚು ಮಾಡಿಕೊಳ್ಳುವುದು, ಸಣ್ಣ ಪ್ರಮಾಣದಲ್ಲಿ ಉದ್ಯಮಗಳನ್ನು ನಡೆಸುವುದು, ಆದಾಯ ಹೆಚ್ಚಿಸಿಕೊಳ್ಳುವುದು ಈಗಿನ ಅನಿವಾರ್ಯ. -ಸುಧಾ ಪಣೀಶ್, ಗೃಹಿಣಿ, ಸಮರ್ಪಣಾ ಶಿಕ್ಷಣ ಸಂಸ್ಥೆ ತಲಕಾಡು, ಕಾರ್ಯದರ್ಶಿ

 

ದೇಶದ ಆರ್ಥಿಕತೆ ಚೆನ್ನಾಗಿಯೇ ಇದೆ

ಕೊರೊನಾ ಬಂದದ್ದರಿಂದ ನಮ್ಮ ಆರ್ಥಿಕತೆ ಇಷ್ಟು ಕುಸಿತ ಕಂಡಿದೆ ಎನ್ನಿಸುತ್ತದೆ ನನಗೆ. ಹೀಗಾಗಿ ನಿರ್ಮಲಾ ಸೀತಾರಾಮನ್ ಅವರ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವುದು, ಖಂಡಿಸುವುದು ಸುಲಭವಲ್ಲ. ಖಾಸಗಿ ಕ್ಷೇತ್ರದ ಉದ್ಯೋಗಿಗಳು, ಸಣ್ಣ ಸಣ್ಣ ಉದ್ದಿಮೆ ನಡೆಸುತ್ತಿದ್ದವರಿಗೆ ಹೊಡೆತ ಬಿದ್ದಿದೆ. ಆದರೆ ನಿಧಾನವಾಗಿ ಎಲ್ಲವೂ ಮತ್ತೆ ಚೇತರಿಕೆ ಕಾಣುತ್ತಿವೆ. ಬೇರೆ ದೇಶಗಳಿಗೆ ಹೋಲಿಕೆ ಮಾಡಿದರೆ ನಾವು ಆರ್ಥಿಕವಾಗಿ ಸಬಲರಾಗಿಯೇ ಇದ್ದೇವೆ. ಅಮೆರಿಕಾದ ಎಕಾನಮಿ ಚೆನ್ನಾಗಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಹೀಗಿರುವಾಗ ಡಾಲರ್ ಬಲಗೊಳ್ಳುತ್ತಿದೆ ಎಂದು ಹೇಳಲು ಆಗುವುದಿಲ್ಲ. ಅದೇ ರೀತಿ ನಮ್ಮ ರೂಪಾಯಿ ಮೌಲ್ಯ ಚೆನ್ನಾಗಿಯೇ ಇದೆ. ನಮ್ಮ ಶೋ ರೂಂನಲ್ಲಿ ಕಾರುಗಳ ಮಾರಾಟದ ಪ್ರಮಾಣ ಚೆನ್ನಾಗಿಯೇ ಇದೆ. – ಶ್ರೀವತ್ಸ, ಈವೆಂಟ್ ಮ್ಯಾನೆಜರ್, ಮಾಂಡೋವಿ ಮೋಟರ್ಸ್‌, ಮೈಸೂರು

 

ಅಳಿಯ ಅಲ್ಲ; ಮಗಳ ಗಂಡ

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಭಿಪ್ರಾಯ ನೋಡಿದರೆ ಅವರು ತಮ್ಮ ಸರ್ಕಾರವನ್ನು ಸಮರ್ಥನೆ ಮಾಡಿಕೊಳ್ಳುವುದಕ್ಕೆ ಮಾತ್ರ ಆ ರೀತಿ ಹೇಳಿದ್ದಾರೆ ಎನ್ನಿಸುತ್ತದೆ. ನಾವು ಹಿಂದೆಂದೂ ಇಷ್ಟೊಂದು ಬೆಲೆ ಏರಿಕೆ ಕಂಡಿರಲಿಲ್ಲ. ನೋಡಿರಲಿಲ್ಲ. ಜಿಎಸ್‌ಟಿ ಬಂದ ಮೇಲೆ ಭಾರೀ ಬದಲಾವಣೆ ಆಗುತ್ತದೆ ಎನ್ನುವ ನಿರೀಕ್ಷೆ ಹುಸಿಯಾಯಿತು. ತೆರಿಗೆ ಹೆಚ್ಚಿತು, ಆದಾಯ ಕುಸಿಯಿತು.

ರೂಪಾಯಿ ಕುಸಿಯುತ್ತಿಲ್ಲ, ಡಾಲರ್ ಶಕ್ತಿ ವೃದ್ಧಿಸಿಕೊಳ್ಳುತ್ತಿದೆ ಎನ್ನುವುದು ಅಳಿಯ ಅಲ್ಲ ಮಗಳ ಗಂಡ ಎನ್ನುವ ಹಾಗೆ ಇದೆ. ನಮ್ಮ ತಪ್ಪು ಆರ್ಥಿಕ ನಿರ್ಧಾರಗಳಿಂದಾಗಿ ಈ ಸ್ಥಿತಿಗೆ ಬಂದಿದ್ದೇವೆ ಎನ್ನಿಸುತ್ತದೆ. ಇದನ್ನು ಮರೆ ಮಾಚಿ ಅವರು ಈ ರೀತಿ ಹೇಳಿರುವುದು ಸರಿಯಲ್ಲ.

– ವಿದ್ಯಾಶ್ರೀ ಎನ್.ಎನ್. ಪ್ರಾಧ್ಯಾಪಕಿ, ಕಾಮರ್ಸ್ ವಿದ್ಯಾರ್ಥಿ

andolana

Recent Posts

ಸಾಂಪ್ರದಾಯಿಕ ಸೊಗಡು ಸಾಕ್ಷೀಕರಿಸಿದ ಕೂತಿನಾಡು ಸುಗ್ಗಿ ಉತ್ಸವ

ಲಕ್ಷ್ಮೀಕಾಂತ್ ಕೋಮಾರಪ್ಪ ಗ್ರಾಮದೇವತೆ ಸಬ್ಬಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಮಳೆ, ಬೆಳೆಗಾಗಿ ಪ್ರಾರ್ಥನೆ ಸೋಮವಾರಪೇಟೆ: ಗ್ರಾಮೀಣ ಭಾಗದ ಆಚರಣೆಗಳಲ್ಲಿ…

1 hour ago

ಇಂದು ಚಿಕ್ಕರಸಿನಕೆರೆ ಕಾಲಭೈರವೇಶ್ವರ ಬಸವ ರಥೋತ್ಸವ

ಅಣ್ಣೂರುಸತೀಶ್ ಶ್ರೀಆದಿಚುಂಚನಗಿರಿ ಮಠದ ನೇತೃತದಲ್ಲಿ ಅದ್ಧೂರಿ ಜಾತ್ರೆ ಭಾರತೀನಗರ: ಚಿಕ್ಕರಸಿನಕೆರೆ ಶ್ರೀ ಕಾಲಭೈರವೇಶ್ವರಸ್ವಾಮಿ ಪುಣ್ಯಕ್ಷೇತ್ರವು ದಕ್ಷಿಣ ಕಾಶಿಯೆಂದೇ ಪರಿಚಿತವಾಗಿ ಹಲವಾರು…

2 hours ago

ಕರಿಯಮ್ಮ ದೊಡ್ಡಮ್ಮ ದೇವಿ ಜಾತ್ರೋತ್ಸವಕ್ಕೆ ಭೇರ್ಯ ಸಜ್ಜು

ಭೇರ್ಯ ಮಹೇಶ್ ಇಂದು ಭೇರ್ಯದಲ್ಲಿ ಕರಿಯಮ್ಮ ದೊಡ್ಡಮ್ಮ ದೇವಿ ಸಿಡಿ ಉತ್ಸವ, ನಾಳೆ ಜಾತ್ರಾ ಮಹೋತ್ಸವ  ಭೇರ್ಯ: ಭೇರ್ಯ ಗ್ರಾಮದ…

2 hours ago

ಜಾತಿವಾದಿ ಮನಸ್ಸುಗಳಿಗೆ ಸಮಾನತೆಯ ದರ್ಶನ

ಸಮಾಜ ಕಲ್ಯಾಣ ಇಲಾಖೆ ನೌಕರರಿಂದ ‘ಮುಟ್ಟಿಸಿಕೊಂಡವನು’ ನಾಟಕ; ಪಿ.ಲಂಕೇಶ್ ರಚನೆಯ ಕಥೆ ಮೈಸೂರು: ಮುಟ್ಟಬಾರದ ಜಾತಿಯವರು ಎನಿಸಿಕೊಂಡವರೊಬ್ಬರಿಂದ ಮುಟ್ಟಿಸಿಕೊಂಡ ಜಾತಿ…

2 hours ago

ಹುಣಸೂರಿನಲ್ಲಿ ಡ್ರಗ್ಸ್ ಪತ್ತೆಯಾಗಿದ್ದ ಪ್ರಕರಣ: ಮೂವರ ಬಂಧನ

ಮೈಸೂರು: ಹುಣಸೂರು ಬಳಿಯ ತೋಟದ ಮನೆಯೊಂದ ರಲ್ಲಿ ಕೋಟ್ಯಂತರ ರೂ. ಮೌಲ್ಯದ ಮಾದಕ ವಸ್ತಗಳನ್ನು ವಶಕ್ಕೆ ಪಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ…

2 hours ago