• ಕೇಶವಮೂರ್ತಿ

ತೆಂಗಿನ ತೋಟದಲ್ಲಿ ‘ಯಾದ’ ಅಂದರೆ ಇಲಿಗಳು ಹಾಗೂ ಅಳಿಲುಗಳ ಕಾಟ ವಿಪರೀತವಾದಾಗ ಬೆಳೆ ಗಾರರು ಅವುಗಳಿಂದ ಬೆಳೆಗಳನ್ನು ರಕ್ಷಿಸಲು ವಿಧವಿಧವಾದ ತಂತ್ರಗಳನ್ನು ಬಳಸ್ತಾರೆ. ಇಲಿಗಳ ಹಾವಳಿಯನ್ನು ಹತೋಟಿಗೆ ತರಲು ಕೆಲ ಬಾರಿ ವಿಷ ಪ್ರಯೋಗ ಮಾಡುತ್ತಾರೆ. ಅಲ್ಲದೆ ಬೋನು ಇರಿಸಿ ಅವುಗಳನ್ನು ಸೆರೆ ಹಿಡಿಯುವುದೂ ಉಂಟು. ಇನ್ನು ಕೆಲ ಸಾವಯವ ಕೃಷಿಕರು ತೋಟಗಳಲ್ಲಿ ಬೆಕ್ಕುಗಳನ್ನು ಸಾಕುತ್ತಾರೆ ಅಥವಾ ಹಾವುಗಳನ್ನು ಸಾಯಿಸದೇ ತೋಟದಲ್ಲಿಯೇ ಇರುವಂತೆ ಮಾಡಿ ಅವುಗಳಿಂದ ಇಲಿಗಳ ಹಾವಳಿಯನ್ನು ಹತೋಟಿಗೆ ತರುವ ಪ್ರಯತ್ನ ಮಾಡುತ್ತಾರೆ. ಇಲಿಗಳು ಹಾಗೂ ಅಳಿಲುಗಳು ಮರಹತ್ತದಂತೆ ತೆಂಗಿನ ಮರದ ಮಧ್ಯದಲ್ಲಿ ಕಬ್ಬಿಣದ ತಗಡು ಶೀಟ್‌ಗಳನ್ನು ಹೊಡೆಯುವುದು ಮತ್ತೊಂದು ವಿಧಾನ. ಆದರೆ ಈ ಬುದ್ದಿವಂತ ಜೀವಿಗಳು ತಗಡಿನ ಮೇಲೆ ಹತ್ತುವುದನ್ನು ಹಾಗೂ ನೆಗೆಯುವುದನ್ನು ಕಂಡಾಗ ಬೆರಗಾದ ರೈತರು ಅದೇ ತಗಡನ್ನು ಉಲ್ಟಾ ಆಲಿಕೆಯ ರೀತಿಯಲ್ಲಿ ಕಟ್ಟಿ ‘ಯಾದ’ಗಳು ಮೇಲೆ ಹೋಗುವುದಕ್ಕೆ ಕಡಿವಾಣ ಹಾಕುತ್ತಾರೆ.

ಕೆಲ ಅನುಭವಿ ಕೃಷಿಕರ ಪ್ರಕಾರ, ‘ತೆಂಗಿನ ಮರಕ್ಕೆ ತಗಡು ಹೊಡೆಯುವ ಮೊದಲು, ಮರ ಹತ್ತಿ ಮರದಲ್ಲಿ ವಾಸವಾಗಿರುವ ಯಾದಗಳನ್ನು ಓಡಿಸಬೇಕು. ಇಲ್ಲದಿದ್ದರೆ ಅವು ಮರದ ಮೇಲೆಯೇ ಇದ್ದು ಗರಿ ಕೂಡಿರುವ ತೋಟದಲ್ಲಿ ಮರದಿಂದ ಮರಕ್ಕೆ ಸುಲಭವಾಗಿ ಓಡಾಡುತ್ತವೆ’. ಹೀಗೆಯೇ ತೆಂಗಿನ ಬೆಳೆಗಾರರನ್ನು ಕಾಡುವ ಇಲಿಗಳ ಹತೋಟಿಗೆ ತರತರಹದ ವಿಧಾನ ಅನುಸರಿಸಿದರೂ ಅವು ಮರ ಹತ್ತೋದು ಬಿಟ್ಟಿಲ್ಲ. ಏಕೆ? ಇದೇ ಪ್ರಶ್ನೆಯನ್ನು ರೈತರೊಬ್ಬರು ತುಂಬಿದ ಸಭೆಯಲ್ಲಿ ಕೇಳಿದ್ದರು. ಯಾರಿಂದಲೂ ಸಮರ್ಪಕ ವಾದ ಉತ್ತರ ಬರಲಿಲ್ಲ. ‘ನೀವು ಏನೆಲ್ಲಾ ವಿಧಾನಗಳನ್ನು ಅನುಸರಿಸಿದರೂ ಇಲಿಗಳನ್ನು ಮರ ಹತ್ತದಂತೆ ತಡೆಯುವುದಕ್ಕೆ ಆಗಲ್ಲ. ಅವು ಏಕೆ ಮರ ಹತ್ತುತ್ತವೆ? ಯಾರಾದ್ರೂ ಯೋಚನೆ ಮಾಡಿದ್ದೀರಾ? ಮುಂದುವರಿದು, ಆ ರೈತರೇ ಹೇಳಿದ್ದರು, ‘ನೋಡಿ ಇಲಿಗಳ ಆಹಾರ ಮರದಲ್ಲಿದೆ. ಆ ಆಹಾರ ಬಿಟ್ಟರೆ ಅವಕ್ಕೆ ಬೇರೆ ಆಹಾರವಿಲ್ಲ. ಹಾಗಾಗಿ ಅವು ಎಷ್ಟೇ ಕಷ್ಟಗಳು ಎದುರಾದರೂ ಮರ ಹತ್ತೇ ಹತ್ತುತ್ತವೆ. ಏಕೆ ಹೇಳಿ? ಅವಕ್ಕೆ ಆಹಾರ ಬೇಕು. ಅವೂ ಬದುಕಬೇಕು’, ತುಂಬಿದ ಸಭೆ ಶಾಂತವಾಯಿತು. ಮುಂದುವರಿದು ಹೇಳಿದರು, ‘ನೋಡಿ ಇಲಿಗಳು ಮರ ಹತ್ತುವುದು ತೆಂಗಿನ ಮರದಲ್ಲಿರೋ ಅದರ ಆಹಾರಕ್ಕಾಗಿ ಅಂದಮೇಲೆ, ಅದರ ಆಹಾರವನ್ನು ನಿಮ್ಮ ತೋಟದಲ್ಲಿ ಮರಗಳ ಬುಡದಲ್ಲೇ ಒದಗಿಸಿ. ಆಗ ಅದು ಕಷ್ಟ ಪಟ್ಟು ಮರವನ್ನಾದರೂ ಏಕೆ ಹತ್ತಬೇಕು. ಬುಡದಲ್ಲಿ ನೀವು ಒದಗಿಸಿರುವ ಆಹಾರವನ್ನೇ ತಿಂದುಕೊಂಡು ನೆಲದಲ್ಲಿಯೇ ಬಿಲವನ್ನು ತೋಡಿಕೊಂಡು ವಾಸಿಸುತ್ತವೆ. ಅವುಗಳು ನೆಲದಲ್ಲಿ ಬಿಲ ತೋಡುವುದರಿಂದ ಮಳೆ ನೀರು ಭೂಮಿಯಲ್ಲಿ ಸುಲಭವಾಗಿ ಇಂಗುತ್ತದೆ. ಅವುಗಳ ಮಲ ಮತ್ತು ಮೂತ್ರದ ಮೂಲಕ ಮಣ್ಣಿನ ಫಲವತ್ತತ್ತೆಯೂ ಹೆಚ್ಚಾಗುತ್ತದೆ. ಹಾಗೆಯೇ ಹರಿದಾಡುವ ಹಾವುಗಳಿಗೆ ಅವು ಆಹಾರವಾಗಿ, ನಿಮ್ಮ ತೋಟದಲ್ಲಿ ನಿಸರ್ಗವೇ ನಿಯಂತ್ರಣ ಮಾಡಲಿದೆ’.

ಯಾವ ಆಹಾರಗಳನ್ನು ನೀವು ತೋಟದಲ್ಲಿ ಇಲಿಗಳಿಗಾಗಿ ಬೆಳೆಯಬೇಕು ಎಂದರೆ, ಸಿಹಿ ಗೆಣಸು, ಆರಾರೋಟ್, ಕ್ಯಾರೆಟ್ ಹಾಗೂ ಇತರೆ ಗೆಡ್ಡೆ ಜಾತಿಯ ಬೆಳೆಗಳು. ಇವು ನೆಲಕ್ಕೆ ಹೊದಿಕೆಯಾಗಿ ತೇವ ಸಂರಕ್ಷಣೆಗೂ
ಸಹಕಾರಿಯಾಗಲಿದೆ. ನಿಸರ್ಗ ಪರಿಪೂರ್ಣವಾಗಿದೆ ಅನ್ನುವ ಮಾತಿದೆ. ಇಲ್ಲಿ ನಾವು ಮಾತ್ರ ಬದುಕಿ, ಇತರ ಪ್ರಾಣಿಪಕ್ಷಿಗಳು ಹಾಳಾಗಬೇಕು ಎನ್ನುವ ಭಾವನೆಯೇ ತಪ್ಪು. ನಾವೂ ಬದುಕಿ, ಇತರರಿಗೂ ಬದುಕಲು ಅವಕಾಶ ನೀಡಬೇಕು. ಆಗ ಸಾಮರಸ್ಯ ಸಾಧ್ಯ. ಕೋತಿಗಳ ಕಾಟ ತಪ್ಪಿಸಲು, ತೋಟದ ಸುತ್ತ ಅವುಗಳಿಗೆಂದೇ ನಾಟಿ ಮಾವು, ಹಲಸು, ನೇರಳೆ ಮರ ಹಾಕಿರುವ ರೈತರಿದ್ದಾರೆ. ಅಳಿಲು, ಇಲಿ, ಹಕ್ಕಿ ಪಕ್ಷಿಗಳಿಗಾಗಿ ಆಲ, ಅತ್ತಿ, ಗೋಣಿ ಮರಗಳನ್ನು ಬೆಳೆಸಿರೋ ಪುಣ್ಯಾತರಿದ್ದಾರೆ. ನಿಮ್ಮ ಆಹಾರ ನೀವು ತಿನ್ನಿ ನಮ್ಮ ಆಹಾರದ ಕಡೆ ಬರಬೇಡಿ ಅಂತಾ ಅವುಗಳಿಗೆ ಪರ್ಯಾಯ ಆಹಾರ ಒದಗಿಸಿದರೆ, ಅವುಗಳೇಕೆ ನಮ್ಮ ಆಹಾರದ ಬೆಳೆಗಳ ತಂಟೆಗೆ ಬರುತ್ತವೆ? ಅಷ್ಟಕ್ಕೂ ಅವೇನು ನಮ್ಮ ವೈರಿಗಳಾ?
ಆಲೋಚನೆ ಮಾಡಿ, (ಅಂಕಣಕಾರರು ಮೈಸೂರು ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕರು) keshavamurthy.n@gmail.com

andolana

Recent Posts

ಭಾನುವಾರವಾದರೂ ತಪ್ಪಿಸುವಂತಿಲ್ಲ: ನವೆಂಬರ್‌.1ರಂದು ಶಾಲೆಗಳಲ್ಲಿ ರಾಜ್ಯೋತ್ಸವ ಕಡ್ಡಾಯ

ಬೆಂಗಳೂರು: ನವೆಂಬರ್‌ 1ರಂದು ಭಾನುವಾರ ಬಂದರೂ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಕಡ್ಡಾಯ ಎಂದು ರಾಜ್ಯ ಸರ್ಕಾರ…

3 hours ago

ಗುಂಡ್ಲುಪೇಟೆ: ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ

ಗುಂಡ್ಲುಪೇಟೆ: ತಾಲ್ಲೂಕಿನ ವಡಯ್ಯನಪುರ ಹಾಗೂ ಬೊಮ್ಮಲಾಪುರ ಗ್ರಾಮಗಳಲ್ಲಿ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಕೊನೆಗೂ ಬೋನಿಗೆ ಬಿದ್ದಿದೆ. ಬೊಮ್ಮಲಾಪುರ…

4 hours ago

ದನ ಮೇಯಿಸಲು ಹೋದ ವ್ಯಕ್ತಿ ಮೇಲೆ ಚಿರತೆ ದಾಳಿ

ಹನೂರು: ತಾಲ್ಲೂಕಿನ ಗುಂಡಾಪುರ ಗ್ರಾಮದ ಸಮೀಪದ ಅರಣ್ಯ ಪ್ರದೇಶದಲ್ಲಿ ದನ-ಕುರಿ ಮೇಯಿಸಲು ಹೋಗಿದ್ದ ವ್ಯಕ್ತಿ ಮೇಲೆ ಚಿರತೆ ದಾಳಿ ನಡೆಸಿರುವ…

4 hours ago

ಮೈಸೂರು: ಬಾಲಕಿ ಮೇಲಿನ ಅತ್ಯಾಚಾರ–ಕೊಲೆ ಪ್ರಕರಣ: ಕಾಮುಕನಿಗೆ ಗಲ್ಲು ಶಿಕ್ಷೆ

ಮೈಸೂರು: ಮೈಸೂರಿನಲ್ಲಿ ಕಳೆದ ವರ್ಷದ ದಸರಾ ವೇಳೆ ನಡೆದಿದ್ದ ಬಾಲಕಿ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ನ್ಯಾಯಾಲಯ ತೀರ್ಪು…

5 hours ago

ಸಯ್ಯಾಜಿರಾವ್ ರಸ್ತೆಯಲ್ಲಿ ಕುಸಿದು ಬಿದ್ದ ಬೃಹತ್ ವಿದ್ಯುತ್ ದೀಪಾಲಂಕಾರದ ಕಂಬ ; ಕಾರು, ಆಟೋ ಜಖಂ

ಮೈಸೂರು: ದಸರಾ ದೀಪಾಲಂಕಾರದ ನಡುವೆ ಅವಘಡವೊಂದು ಸಂಭವಿಸಿದೆ. ನಗರದ ಸಯ್ಯಾಜಿರಾವ್ ರಸ್ತೆಯಲ್ಲಿ ಬೃಹತ್ ವಿದ್ಯುತ್ ದೀಪಾಲಂಕಾರದ ಕಂಬ ಕುಸಿದು ಬಿದ್ದಿದ್ದು,…

5 hours ago

ಓದುಗರ ಪತ್ರ: ನಿಷ್ಪಕ್ಷಪಾತ ತನಿಖೆ ನಡೆಯಲಿ

ಇತ್ತೀಚಿನ ದಿನಗಳಲ್ಲಿ ಹೆಚ್ಚು ಸದ್ದುಮಾಡುತ್ತಿರುವ ಸ್ಟ್ರಿಂಗ್ ಆಪರೇಷನ್ ಸುದ್ದಿ, ಅದರ ಸುತ್ತ ನಡೆಯುವ ಆರೋಪ-ಪ್ರತ್ಯಾರೋಪಗಳು ಹಾಗೂ ಸಿಡಿ/ಪೆನ್ ಡ್ರೈವ್‌ಗಳ ವಿಚಾರ…

9 hours ago