ಉಷಾ ಆಂಬ್ರೋಸ್
ಆ ಕಾಲದ ಕಂದಾಚಾರಗಳು, ಧಾರ್ಮಿಕ ಅಸಮಾನತೆಗಳು, ಬಹಿಷ್ಕಾರ, ಅನ್ಯಾಯಗಳನ್ನು ಕುರಿತು ಪ್ರಶ್ನಿಸಿದ್ದಕ್ಕಾಗಿ ಅಂದಿನ ವ್ಯವಸ್ಥೆ ಏಸುಕ್ರಿಸ್ತನನ್ನು ಮರಣದಂಡನೆಗೆ ಗುರಿಪಡಿಸುತ್ತದೆ.
ವಸಂತಕಾಲ ಆರಂಭವಾಗುತ್ತಿರುವಂತೆ ಪ್ರಕೃತಿ ನಳನಳಿಸಿ ಮಾವು ಚಿಗುರಿ ಬೇವು ಹೂಬಿಟ್ಟಾಗ ಯುಗಾದಿ ಬಂದಂತೆ, ಕೊಂದೆ ಹೂ (ಗೋಲ್ಡನ್ ಶವರ್) ಚಿನ್ನದ ಮಳೆಯಂತೆ ಆಕಾಶಧಾರೆಯಾಗಿ ಇಳಿಬೀಳತೊಡಗಿದಂತೆ ವಿಶು (ಬಿಸು ಪರ್ಬ) ಹತ್ತಿರ ಬಂದಂತೆ ಒಂದೊಂದು ದೇಶಕಾಲಕ್ಕೆ ಅದರದ್ದೇ ಆದ ಪ್ರಕೃತಿಯೊಂದಿಗಿನ ಒಡನಾಟ ಒಂದು ವಿಸ್ಮಯ. ಒಂದೊಂದು ಹಬ್ಬಕ್ಕೆ ಒಂದೊಂದು ಗುರುತು…
ಒಂದೊಂದು ಪರಿಮಳ… ಒಂದೊಂದು ನೆನಪು. ನನಗೆ ನೆನಪಿರುವಂತೆ, ನಾವು ಚಿಕ್ಕವರಾಗಿದ್ದಾಗ ನಮ್ಮ ಹಬ್ಬಗಳು ಎಲ್ಲರೂ ಕೂಡಿದ ಕುಟುಂಬವಾಗಿ ಅಜ್ಜನ ಮನೆಯಲ್ಲಿ ಆಗುತ್ತಿದ್ದವು. ಕ್ರಿಸ್ಮಸ್ ಮತ್ತು ಈಸ್ಟರ್ ಹಬ್ಬಗಳಲ್ಲಿ ನನ್ನ ಅಜ್ಜಿಗೆ ದೂರದ ಸಂಬಂಧದಲ್ಲಿ ಅಣ್ಣನಾಗಿದ್ದ ನಾವು ‘ಜಾನಿ ಅಜ್ಜ’ ಎಂದು ಕರೆಯುತ್ತಿದ್ದ ಅಜ್ಜ ಒಬ್ಬರು ಬರುತ್ತಿದ್ದರು. ನನ್ನ ಅಜ್ಜಮ್ಮ ಬಿಟ್ಟರೆ ಅವರಿಗೆ ಬೇರೆ ಸಂಬಂಧಿಕರು ಇದ್ದಂತೆ ಇರಲಿಲ್ಲ. ಕ್ರಿಸ್ಮಸ್ ಮತ್ತು ಈಸ್ಟರ್ ಹಬ್ಬಗಳಿಗೆ ಸಾಕಷ್ಟು ಮುಂಚಿತವಾಗಿ ಬರುತ್ತಿದ್ದ ಅವರು ನಮ್ಮೆಲ್ಲರ ಜೊತೆ ಖುಷಿಯಿಂದ ಇದ್ದು ಹಿಂದಿರುಗುತ್ತಿದ್ದರು. ‘ಜಾನಿ ಅಜ್ಜ’ ಸುಂದರವಾಗಿ ಮೌತ್ ಆರ್ಗನ್ ನುಡಿಸುತ್ತಿದ್ದರು. ಬಹುಶಃ ಅವರು ಮಿಶನ್ ಪ್ರೆಸ್‌ನಲ್ಲಿ ಉದ್ಯೋಗಿಯಾಗಿದ್ದರು. ಅಜ್ಜ ಮಕ್ಕಳೆಲ್ಲರಿಗೂ ಸಾಕಷ್ಟು ತಿನಿಸು ಮತ್ತು ಉಡುಗೊರೆಗಳನ್ನು ತರುತ್ತಿದ್ದರು.
ಅಮ್ಮ ಮತ್ತು ಚಿಕ್ಕಮ್ಮಂದಿರ ‘ಜಾನಿ ಮಾಮ’ ಕ್ರಿಸ್ಮಸ್ ತಾತನಂತೆ ವರ್ಷಕ್ಕೆ ಎರಡು ಸಲ ಬಂದು ನಮ್ಮನ್ನೆಲ್ಲ ಸಂತೋಷಪಡಿಸಿ ಹಿಂದಿರುಗುತ್ತಿದ್ದರು. ಅವರಿಲ್ಲದ ಹಬ್ಬ ಇರಲಿಲ್ಲ. ಅವರು ಬರುವುದನ್ನೇ ನಾವೆಲ್ಲ ಕಾಯುತ್ತಿದ್ದೆವು. ಬಹುಶಃ ನಮ್ಮೆಲ್ಲರ ಜೊತೆಗಿರಲು ಅವರೂ. ಈಸ್ಟರ್ ಹಬ್ಬದ ಕುರಿತು ‘ಗರಿಗಳ ಭಾನುವಾರ’ ಕಳೆಯುತ್ತಿದ್ದಂತೆ ಈಸ್ಟರ್ ಹಬ್ಬ ಬಂತೆಂದು ಲೆಕ್ಕ. ಜೆರುಸಲೆಮ್ ನಗರಕ್ಕೆ ರಾಜನಂತೆ ಪ್ರವೇಶಿಸಿದ ಯೇಸುಕ್ರಿಸ್ತನನ್ನು ಜನಸಮೂಹವು ಖರ್ಜೂರದ ಗರಿಗಳನ್ನು ಕೈಯಲ್ಲಿ ಹಿಡಿದು ಮಾರ್ಗದಲ್ಲಿ ಬಟ್ಟೆಗಳನ್ನು ಹಾಸಿ ಚಿಗುರನ್ನು ಚೆಲ್ಲಿ ಮಹಾ ಉತ್ಸಾಹದಿಂದ ಬರಮಾಡಿಕೊಳ್ಳುತ್ತಾರೆ. ಈ ನೆನಪಿಗಾಗಿ ಈಸ್ಟರ್ ಬಾನುವಾರದ ಹಿಂದಿನ ಭಾನುವಾರ ‘ಪಾಮ್ ಸಂಡೇ’ ಆಚರಿಸಲಾಗುತ್ತದೆ. ಕ್ರಿಸ್ತನ ಬಲಿ ಮರಣವನ್ನು ಧ್ಯಾನಿಸುವ ನಲ್ವತ್ತು ದಿನಗಳಲ್ಲಿ ಮುಂದಿನ ಒಂದು ವಾರ ಕಾಲ ಪವಿತ್ರ ವಾರವಾಗಿರುತ್ತದೆ. ಯೇಸುಕ್ರಿಸ್ತನು ಅನುಭವಿಸಿದ ಕ್ರೂರ ಹಿಂಸೆ ಹಾಗೂ ಮರಣದಂಡನೆಯನ್ನು ಧ್ಯಾನ ಮತ್ತು ಆರಾಧನೆಗಳ ಮೂಲಕ ನೆನಪಿಸಿಕೊಳ್ಳಲಾಗುತ್ತದೆ. ಕ್ರೈಸ್ತರು ಗರಿಗಳನ್ನು ಹಿಡಿದು ಮೆರವಣಿಗೆಯಲ್ಲಿ ಸಾಗಿ ಆರಾಧನೆಯಲ್ಲಿ ಪಾಲ್ಗೊಳ್ಳುತ್ತಾರೆ.
ತನಗೆ ದಂಡನೆ ಕಾದಿದೆ ಎಂಬುದು ತಿಳಿದಿದ್ದರೂ ಯೇಸು ಜೆರುಸಲೆಮ್ ನಗರವನ್ನು ರಾಜನಂತೆ ಪ್ರವೇಶಿಸುತ್ತಾನೆ. ತಾನು ನಡೆದು ತೋರಿದ ಹಾದಿಯಲ್ಲಿ ನಡೆಯುವಂತೆ ಜನಸಾಮಾನ್ಯರ ನಡುವೆ ಸೇವೆ ಮಾಡುವಂತೆ ತನ್ನ ಶಿಷ್ಯರಿಗೆ ಕರೆ ಕೊಡುತ್ತಾನೆ. ತನ್ನ ಶಿಷ್ಯರ ಸಂಗಡ ಕುಳಿತು ಕೊನೆಯ ಭೋಜನವನ್ನು ಮಾಡುತ್ತಾನೆ. ಭೋಜನಕ್ಕೆ ಕೂಡುವ ಮುನ್ನ ಶಿಷ್ಯರ ಪಾದಗಳನ್ನು ಕೈಯಲ್ಲಿ ತೆಗೆದುಕೊಂಡು ನೀರಿನಿಂದ ತೊಳೆದು ವಸ್ತ್ರದಿಂದ ಒರೆಸುವ ಮೂಲಕ ತನ್ನನ್ನು ನಿರಾಕರಿಸಿಕೊಂಡು ಅಧಿಕಾರ ಪದವಿಗಳನ್ನು ತೊರೆದು ದೀನತೆಯಿಂದ ಪ್ರೇಮ ಕರುಣೆಗಳಿಂದ ಸೇವೆ ಮಾಡುವುದು ಎಂದರೆ ಏನು ಎಂದು ತೋರಿಸಿಕೊಡುತ್ತಾನೆ. ತಾನು ನಂಬಿದ್ದ ಶಿಷ್ಯರಲ್ಲೊಬ್ಬನೇ ಆತನನ್ನು ಹಿಡಿದುಕೊಡುತ್ತಾನೆ. ಅಧಿಕಾರಿಗಳ ಮುಂದೆಯೂ ರಾಜರ ಮುಂದೆಯೂ ಹಿಡಿದು ತಂದು ನಿಲ್ಲಿಸಿದಾಗಲೂ ಧೈರ್ಯದಿಂದ ಸತ್ಯಕ್ಕೆ ಬದ್ಧನಾಗಿರುತ್ತಾನೆ. ಆತನನ್ನು ನಿಂದೆ, ಅಪಹಾಸ್ಯ, ಕ್ರೂರ ದಂಡನೆಗಳ ಮೂಲಕ ಶಿಲುಬೆಗೇರಿಸಲಾಗತ್ತದೆ. ಶಿಲುಬೆ ಮೇಲೆ ಮರಣ ಹೊಂದಿದ ಕ್ರಿಸ್ತನನ್ನು ಸಮಾಽಯಲ್ಲಿ ಹೂಳಲಾಗುತ್ತದೆ. ಮರಣವನ್ನು ಜಯಿಸಿದ ಕ್ರಿಸ್ತನು ಮೂರನೆಯ ದಿನದಲ್ಲಿ ಪುನರುತ್ಥಾನಗೊಳ್ಳುತ್ತಾನೆ. ಕ್ರಿಸ್ತನ ಪುನರುತ್ಥಾನದ ಈ ಭಾನುವಾರವನ್ನು ‘ಈಸ್ಟರ್ ಸಂಡೇ’ ಎಂದು ಜಗತ್ತಿನಾದ್ಯಂತ ಕ್ರೈಸ್ತ ವಿಶ್ವಾಸಿಗಳು ಶ್ರದ್ಧೆಯಿಂದ ಆಚರಿಸುತ್ತಾರೆ.
ಅಂದಿನ ಸಮಾಜದಲ್ಲಿದ್ದ ಕಂದಾಚಾರಗಳು, ಧಾರ್ಮಿಕ ಅಸಮಾನತೆಗಳು – ಬಹಿಷ್ಕಾರ – ಅನ್ಯಾಯಗಳ ನಡುವೆ ಸಾಮಾನ್ಯ ಜನರಿಗಾಗಿ, ಸ್ತ್ರೀಯರಿಗಾಗಿ, ಮಕ್ಕಳಿಗಾಗಿ, ದಿಕ್ಕಿಲ್ಲದವರಿಗಾಗಿ, ರೋಗಿಗಳಿಗಾಗಿ ಪ್ರೇಮ ಕರುಣೆಗಳಿಂದ ಮಿಡಿದ ಯೇಸುಕ್ರಿಸ್ತನನ್ನು, ಅನ್ಯಾಯವನ್ನು ಪ್ರಶ್ನಿಸಿದ್ದಕ್ಕಾಗಿ ಧಾರ್ಮಿಕ ಢಾಂಬಿಕತೆಯನ್ನು ರಾಜ್ಯಾಧಿಕಾರವನ್ನು ಪ್ರಶ್ನಿಸಿದ್ದಕ್ಕಾಗಿ ಅಂದಿನ ವ್ಯವಸ್ಥೆ ಮರಣದಂಡನೆಗೆ ಗುರಿಪಡಿಸುತ್ತದೆ. ಸರಳವಾದ ಹಲವು ಸಂದೇಶಗಳ ಮೂಲಕ ಸಾಮಾನ್ಯ ಜನಸಮೂಹದೊಂದಿಗೆ ಬೆರೆತು ಬೋಧಿಸಿದ ಯೇಸುಕ್ರಿಸ್ತನೇ ಹೇಳಿದಂತೆ ಗೋಧಿಯ ಕಾಳೊಂದು ಮಣ್ಣಿನಲ್ಲಿ ಹುದುಗಿ ಹೂಣಿಡಲ್ಪಡದಿದ್ದರೆ ಅದು ಸತ್ತು ಮೊಳೆಯುವುದಿಲ್ಲ. ಹೀಗೆ ಕೆಡುಕಿನ ಪಾಲಿಗೆ ಸತ್ತು ಮತ್ತೆ ಮೊಳೆತ ಗೋಧಿಯ ಕಾಳು ಪೈರಾಗಿ ಬೆಳೆದು ತನ್ನಲ್ಲಿ ತೆನೆಯಾಗಿ ಹೊತ್ತ ಒಳಿತಿನ ಬಹು ಫಲವನ್ನು ನೀಡುತ್ತದೆ.
ಬೆಂಗಳೂರು: ಕಾರಾಗೃಹ ಹಾಗೂ ಸುಧಾರಣಾ ಇಲಾಖೆಯ ಡಿಜಿಪಿಯಾಗಿ ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ರಾಜ್ಯದ…
ಬೆಳಗಾವಿ: ಬಿಜೆಪಿಯು ದ್ವೇಷ ರಾಜಕಾರಣದಲ್ಲಿ ತೊಡಗಿದ್ದು, ಕಾಂಗ್ರೆಸ್ ನಾಯಕರ ಮೇಲೆ ಸುಳ್ಳು ಕೇಸುಗಳನ್ನು ಹಾಕಿ ಅಪಪ್ರಚಾರ ಮಾಡುತ್ತಿದೆ. ಬಿಜೆಪಿಯ ಈ…
ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಎಸ್.ಎನ್.ಹೆಗ್ಡೆ ಅವರು ಇಂದು ಮೈಸೂರಿನಲ್ಲಿ ನಿಧನರಾಗಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು. ಪ್ರೊ.ಎಸ್.ಎನ್.ಹೆಗ್ಡೆ…
ಮೈಸೂರು: ಎರಡು ದಿನಗಳ ಹಿಂದೆ ಮೈಸೂರಿನ ಅಶೋಕ ಪುರಂ ರೈಲ್ವೆ ವರ್ಕ್ ಶಾಪ್ ಬಳಿ ಇರುವ ಮರದ ಕೊಂಬೆ ಮೇಲೊಂದು…
ಶಿವಮೊಗ್ಗ: ಜಿಲ್ಲೆಯಲ್ಲಿ ಮತ್ತೆ ಮಂಗನ ಕಾಯಿಲೆ ಕಾಣಿಸಿಕೊಂಡಿದ್ದು, ಮಲೆನಾಡು ಭಾಗದ ಕಾಡಂಚಿನ ಗ್ರಾಮಗಳಲ್ಲಿ ಆತಂಕ ಶುರುವಾಗಿದೆ. ಪಾಸಿಟಿವ್ ಕೇಸ್‌ಗಳು ಮತ್ತಷ್ಟು…
ಬೆಳಗಾವಿ: ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳ ಖಾತೆಗೆ ಕೆಲ ತಿಂಗಳಿಂದ ಹಣ ಜಮೆಯಾಗಿದಿರುವುದು ರಾಜ್ಯಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಇದನ್ನು ಓದಿ: ಗೃಹ…